ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಪ್ಯೂಜೊ ಮೋಟಾರ್‍‍ಸೈಕಲ್‍ ಕಂಪನಿಯ ಶೇ.100ರಷ್ಟು ಷೇರುಗಳನ್ನು ಪಡೆಯಲಾಗಿದೆ ಎಂದು ಮಹೀಂದ್ರಾ ಟೂ ವ್ಹೀಲರ್ ಯೂರೋಪ್ ಹೇಳಿದೆ. ಯುರೋಪಿಯನ್ ದ್ವಿ‍ಚಕ್ರ ವಾಹನಾ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯುವ ಸಲುವಾಗಿ ಕಂಪನಿಯು 2015ರಲ್ಲಿ ಪ್ಯೂಜೊ ಕಂಪನಿಯ ಶೇ.51 ರಷ್ಟು ಷೇರು ಪಡೆದುಕೊಂಡಿತು.

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಫ್ರೆಂಚ್ ವಾಹನ ತಯಾರಕ ಗ್ರೂಪ್ ಪಿಎಸ್ಎ ಒಡೆತನದಿಂದ ಪಡೆದ ಷೇರುಗಳಿಗೆ 13 ಮಿಲಿಯನ್ ಪೌಂ‍‍ಡಗಳನ್ನು(ರೂ.109 ಕೋಟಿ) ಹೂಡಿಕೆ ಮಾಡುವುದರ ಜೊತೆಗೆ ಮಹೀಂದ್ರಾ ಕಂಪನಿಯು ಪ್ಯೂಜೊ ಉತ್ಪನ್ನ ಅಭಿವೃದ್ದಿ ಇಲಾಖೆಗಳಿಗೆ 15 ಮಿಲಿಯನ್ ಪೌಂಡಗಳನ್ನು(ರೂ.136 ಕೋಟಿ ) ಹೂಡಿಕೆ ಮಾಡಿದೆ.

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಆರಂಭಿಕ ಹೂಡಿಕೆಯ ನಂತರ ಪ್ಯೂಜೊ ಮೋಟಾರ್‍‍ಸೈಕಲ್ಲಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು ಎಂದು ಮಹೀಂದ್ರಾ ಕಂಪನಿ ಹೇಳಿದೆ. ಬ್ರ್ಯಾಂಡ್‍‍ನ 50 ಸಿಸಿ ಮೊಪೆಡ್, ಕಿಸ್ಪೀ, ಯುರೋಪಿನಲ್ಲಿ ತನ್ನ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ.

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಇದರ ಜೊತೆಯಲ್ಲಿ ಕಂಪನಿಯ ಪ್ರಮುಖ ತ್ರಿಚಕ್ರ ಸ್ಕೂಟರ್, ಮೆಟ್ರೋಪೊಲಿಸ್, ಚೀನಾದ ದೇಶಿಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಿದೆ. ಇತ್ತೀಚಿಗೆ ಬಿಡುಗಡೆಯಾದ ಪ್ಯೂಜೊ ಅರ್ಬನ್ ಜಿಟಿ ಮ್ಯಾಕ್ಸಿ-ಸ್ಕೂಟರ್ ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ.

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಯುರೋಪ್ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿ ಮತ್ತಷ್ಟು ವಿಸ್ತರಣೆಯನ್ನು ಮಾಡಲು ಬಯಸಿದೆ. ಮೊದಲೇ ಫ್ರೆಂಚ್ ಸ್ಕೂಟರ್ ಬ್ರ್ಯಾಂಡ್‍‍‍‍ನಲ್ಲಿ ಶೇ.100ರಷ್ಟು ಷೇರನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಿತ್ತು. ಪ್ಯೂಜೊ 2021ರ ವೇಳೆಗೆ ಏಳು ಹೊಸ ಮಾದರಿಗಳನ್ನು ಬಿಗಡೆಗೊಳಿಸಲಿದೆ ಎಂದು ಕಂಪನಿ ಹೇಳಿದೆ.

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಪರವಾನಗಿ ಒಪ್ಪಂದದ ಭಾಗವಾಗಿ ಮಹೀಂದ್ರಾ ಸ್ಕೂಟರ್‍‍ಗಳಲ್ಲಿ ಪ್ಯೂಜೊ ಬ್ರ್ಯಾಂಡಿಂಗ್ ಬಳಕೆಯನ್ನು ಮುಂದುವರೆಸಲಿದೆ. ಪ್ಯೂಜೊ ವಿನ್ಯಾಸ ತಂಡವು ದ್ವಿ‍‍ಚಕ್ರ ವಾಹನಗಳ ವಿನ್ಯಾಸದಲ್ಲಿ ಭಾಗಿಯಾಗಲಿದೆ.

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಕಿಕ್ಕಿರಿದ ನಗರವನ್ನು ತೆರವುಗೊಳಿಸಲು ಯುರೋಪ್ ಸರಿಯಾದ ಪರಿಹಾರವನ್ನು ಹುಡುಕುತ್ತಿದೆ ಮತ್ತು ನಗರದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸ್ಥಿರವಾಗಿ ದ್ವಿಚಕ್ರ ವಾಹನಗಳ ಮೊರೆ ಹೋಗುತ್ತಿದ್ದಾರೆ. ಪ್ಯೂಜೊ ಬೈಕ್‍‍ಗಳಲ್ಲಿ ಮಹೀಂದ್ರಾ ಹೊಸ ಹೊಡಿಕೆಯು ಮಹೀಂದ್ರಾ ಬ್ರ್ಯಾಂಡ್ ಅನ್ನು ಯುರೋಪಿನಲ್ಲಿ ವಿಸ್ತರಿಸಲು ಸಹಾಯ ಮಾಡಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಮಹೀಂದ್ರಾ ಕಂಪನಿಯು ಪ್ಯೂಜೊ ಸ್ಕೂಟರ್ ಮತ್ತು ಬೈಕ್‍‍ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತದೆ, ಅಲ್ಲದೇ ಯಾವುದೇ ವಿರೋಧವಿಲ್ಲದೆ ಹೊಸ ಕಾರ್ಯತಂತ್ರವನ್ನು ರೂಪಿಸಬಹುದು. ಕಂಪನಿಯು ಕೆಲವು ಪ್ಯೂಜೊ ಮಾದರಿಗಳ ಉತ್ಪಾದನೆಯನ್ನು ಅದರ ಪಿಥಾಂಪುರ್ ಸ್ಥಾವರಕ್ಕೆ ಸ್ಥಳಾಂತರಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಪ್ಯೂಜೊ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲಿದೆ ಮಹೀಂದ್ರಾ

ಭಾರತದಲ್ಲಿ ಈ ಸ್ಕೂಟರ್ ಅಥವಾ ಬೈಕ್‍‍ಗಳನ್ನು ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ಭಾರತದಲ್ಲಿ ಪ್ಯೂಜೊ ಮಾದರಿಗಳು ಬಿಡುಗಡೆಯಾದ ಬಳಿಕ ಏಪ್ರಿಲಿಯಾ ಬ್ರ್ಯಾಂಡ್‍‍ನ ಯಶಸ್ಸು ಮಹೀಂದ್ರಾ ಪ್ಯೂಜೊ ಪಡೆದುಕೊಳ್ಳಬಹುದು. ದೆಹಲಿ ಆಟೋ ಎಕ್ಸ್ ಪೋದಲ್ಲಿ ಕೆಲವು ಪ್ಯೂಜೊ ಸ್ಕೂಟರ್‍‍ಗಳು ಮತ್ತು ಬೈಕ್‍‍ಗಳನ್ನು ಪ್ರದರ್ಶಿಸಬಹುದು ಎಂದು ನಿರೀಕ್ಷಿಸಲಾಗಿದೆ.

Most Read Articles

Kannada
English summary
Mahindra Two Wheelers Acquires 100 Percent Stake In Peugeot Motocycles - Read in Kannada
Story first published: Wednesday, October 30, 2019, 15:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X