35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಅಹಮದಾಬಾದ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿಯಾದ ಗ್ರೀನ್ ವೋಲ್ಟ್ ಮೊಬಿಲಿಟಿ ಕಂಪನಿಯು ಕಳೆದ ಮೂರು ವರ್ಷಗಳಿಂದ ಸುಲಭವಾದ, ಕಡಿಮೆ ವೆಚ್ಚದ ನಗರ ಪ್ರದೇಶಕ್ಕೆ ಹೊಂದಿಕೊಳ್ಳುವ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಗ್ರೀನ್ ವೋಲ್ಟ್ ಕಂಪನಿಯ ಮೊದಲ ವಾಹನವಾದ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್, ಎ‍ಆರ್‍ಎ‍ಐನಿಂದ 2018ರ ಮಧ್ಯಭಾಗದಲ್ಲಿ ಪ್ರಮಾಣ ಪತ್ರವನ್ನು ಪಡೆದಿತ್ತು. ಈಗ ಈ ಎಲೆಕ್ಟ್ರಿಕ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

ಮೊದಲಿಗೆ ಈ ಎಲೆಕ್ಟ್ರಿಕ್ ಬೈಕ್ ಅನ್ನು ಅಹಮದಾಬಾದ್‍‍ನಲ್ಲಿ ಬಿಡುಗಡೆಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಬೈಕ್ ಅನ್ನು ದೇಶದ ಪ್ರಮುಖ ನಗರಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಮ್ಯಾಂಟಿಸ್ ಬೈಕ್ ಪ್ರೀಮಿಯಂ ಸೈಕಲ್ ಹಾಗೂ ಮೊಪೆಡ್‍‍ಗಳ ಮಿಶ್ರಣದಂತಿದೆ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಈ ಎಲೆಕ್ಟ್ರಿಕ್ ಬೈಕ್ ಯಾವುದೇ ಬಾಡಿ ವರ್ಕ್ ಅನ್ನು ಹೊಂದಿಲ್ಲ, ಆದರೆ ಸಾಮಾನ್ಯ ಮಾದರಿಯ ಸೈಕಲ್‍‍ಗಳಿಗಿಂತ ಹೆಚ್ಚಿನ ಆರಾಮದಾಯಕ ಅನುಭವವನ್ನು ನೀಡಲಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಎಲೆಕ್ಟ್ರಿಕ್ ಬೈಕಿಗೆ ಯಾವುದೇ ರಿಜಿಸ್ಟ್ರೇಷನ್, ಡ್ರೈವಿಂಗ್ ಲೈಸೆನ್ಸ್ ಅಥವಾ ಹೆಲ್ಮೆಟ್‍‍ನ ಅವಶ್ಯಕತೆಯಿಲ್ಲ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಆದರೆ ನಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಬಳಸುವುದು ಕ್ಷೇಮ. ಈ ಎಲೆಕ್ಟ್ರಿಕ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಕಂಪನಿಯ ಪ್ರಕಾರ ಈ ಎಲೆಕ್ಟ್ರಿಕ್ ಬೈಕಿನಲ್ಲಿ 250 ವ್ಯಾಟ್‍‍ನ ಮೋಟರ್ ಅಳವಡಿಸಲಾಗಿದೆ. ಈ ಮೋಟರ್ ಅನ್ನು ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲಾಗಿದೆ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ತೆಗೆದು ಹಾಕಬಹುದಾದ 48 ವೋಲ್ಟ್ ನ 14.5 ಲಿ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಬ್ಯಾಟರಿಯನ್ನು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 50 ಕಿ.ಮೀ ದೂರ ಚಲಿಸಬಹುದು. ಈ ಬ್ಯಾಟರಿಯನ್ನು ಎರಡೂವರೆ ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಮ್ಯಾಂಟಿಸ್ 100 ಕೆ.ಜಿ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕಿನಲ್ಲಿರುವ ಬಿಡಿಭಾಗಗಳು ವಾಟರ್ ಪ್ರೂಫ್‍‍ಗಳಾಗಿವೆ. ಗ್ರೀನ್ ವೋಲ್ಟ್ ಕಂಪನಿಯು ಈ ಎಲೆಕ್ಟ್ರಿಕ್ ಬೈಕಿನಲ್ಲಿರುವ ಮೋಟರ್‍‍ಗೆ ಲೈಫ್ ಟೈಮ್ ವಾರಂಟಿ ಹಾಗೂ ಬ್ಯಾಟರಿಗಳಿಗೆ 2 ವರ್ಷಗಳ ವಾರಂಟಿ ನೀಡುತ್ತದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಈ ಬೈಕಿನಲ್ಲಿ ಪ್ರೀಮಿಯಂ ಸೈಕಲ್‍‍ಗಳಲ್ಲಿರುವಂತಹ ಮುಂಭಾಗದ ಹಾಗೂ ಹಿಂಭಾಗದ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಮಿನಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್ ಹಾಗೂ ಎಲ್‍ಇ‍‍ಡಿ ಲೈಟ್‍‍ನಂತಹ ಫೀಚರ್‍‍ಗಳನ್ನು ನೀಡಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ರೂ.35,000 ಬೆಲೆ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್ ನಗರ ವಾಸಿಗಳನ್ನು ಆಕರ್ಷಿಸುವ ಸಾಧ್ಯತೆಗಳಿವೆ. ನಗರದಲ್ಲಿ ಆರಾಮದಾಯಕ ಪ್ರಯಾಣ ಮಾಡಬಯಸುವ ಗ್ರಾಹಕರು ಈ ಎಲೆಕ್ಟ್ರಿಕ್ ಬೈಕುಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಈ ಎಲೆಕ್ಟ್ರಿಕ್ ಬೈಕುಗಳನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲದ ಕಾರಣಕ್ಕೆ ಯಾವ ವಯಸ್ಸಿನವರು ಬೇಕಾದರೂ ಈ ಬೈಕ್ ಅನ್ನು ಖರೀದಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಬಹುತೇಕ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್‌ ಕಂಪನಿಗಳು ಪ್ರೀಮಿಯಂ ಸ್ಕೂಟರ್ ಹಾಗೂ ಬೈಕ್ ಸೆಗ್‍‍ಮೆಂಟ್‍‍ಗಳನ್ನು ಗುರಿಯಾಗಿಸಿಕೊಂಡು ವಾಹನಗಳನ್ನು ಬಿಡುಗಡೆಗೊಳಿಸಿದರೆ, ಗ್ರೀನ್‌ವೋಲ್ಟ್ ಮೊಬಿಲಿಟಿ ಹೊಸ ಸೆಗ್‍‍ಮೆಂಟಿನಲ್ಲಿ ಬೈಕ್ ಅನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಲು ಬಯಸಿದೆ. ಕಂಪನಿಯು ಬಲಶಾಲಿಯಾದ 5 ಕ್ಕೂ ಹೆಚ್ಚು ಮೂಲಮಾದರಿಗಳನ್ನು ನಿರ್ಮಿಸಿರುವುದಾಗಿ ಹೇಳಿಕೊಂಡೀದೆ. ಈ ಮಾದರಿಗಳ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 100 ಕಿ.ಮೀ ಆಗಿರಲಿದ್ದು, 100 ಕಿ.ಮೀ.ಗಿಂತ ಹೆಚ್ಚಿನ ದೂರವನ್ನು ಕ್ರಮಿಸಬಲ್ಲವು.

Source: Electric Vehicles/YouTube

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಇನ್ನು ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಇಂಧನ ಆಧಾರಿತ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚುವರಿ ಶುಲ್ಕಗಳಿಂದಾಗಿ ಬಹುತೇಕ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಪೊಲಾರಿಟಿ ಸಂಸ್ಥೆಯು ಅತ್ಯುತ್ತಮ ಬೆಲೆಗಳಲ್ಲಿ ಸ್ಮಾರ್ಟ್ ಎಲೆಕ್ಟ್ರಿಕ್ ಬೈಕ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಪುಣೆ ಮೂಲದ ಪೊಲಾರಿಟಿ ಸಂಸ್ಥೆಯು ತನ್ನ ಮೊದಲ ಪ್ರಯತ್ನದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 6 ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್‌ಗಳ ಬೆಲೆಯು ರೂ.38 ಸಾವಿರದಿಂದ ಹೈ ಎಂಡ್ ಮಾದರಿಯು 1.10 ಲಕ್ಷ ಬೆಲೆ ಪಡೆದುಕೊಂಡಿವೆ. ಬಿಡುಗಡೆ ಮಾಡಲಾದ ಬೈಕ್‌ಗಳು ಸ್ಪೋರ್ಟ್ಸ್ ಮತ್ತು ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಖರೀದಿಗೆ ಲಭ್ಯವಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ.

ಸ್ಪೋರ್ಟ್ಸ್ ವರ್ಷನ್‌ನಲ್ಲಿ ಎಸ್1ಕೆ, ಎಸ್2ಕೆ ಮತ್ತು ಎಸ್3ಕೆ ಎನ್ನುವ ಎಲೆಕ್ಟ್ರಿಕ್ ಬೈಕ್‌ಗಳು ಬಿಡುಗಡೆಯಾಗಿದ್ದು, ಇವುಗಳ ಬೆಲೆಯು ಆರಂಭಿಕವಾಗಿ ರೂ.38 ಸಾವಿರದಿಂದ ಹೈ ಎಂಡ್ ಮಾದರಿಯು ರೂ.1.05 ಲಕ್ಷ ಬೆಲೆ ಹೊಂದಿದೆ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಹಾಗೆಯೇ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಇ1ಕೆ, ಇ2ಕೆ ಮತ್ತು ಇ3ಕೆ ಎನ್ನುವ ಮೂರು ಎಲೆಕ್ಟ್ರಿಕ್ ಬೈಕ್‌ಗಳು ಖರೀದಿಗೆ ಲಭ್ಯವಿದ್ದು, ಇವುಗಳ ಬೆಲೆಯು ಆರಂಭಿಕವಾಗಿ ರೂ.40 ಸಾವಿರದಿಂದ ಹೈ ಎಂಡ್ ಮಾದರಿಯು ರೂ.1.10 ಲಕ್ಷ ಬೆಲೆ ಪಡೆದುಕೊಂಡಿವೆ.

ಪೊಲಾರಿಟಿ ಇ-ಬೈಕ್‌ಗಳು ನೋಡಲು ಸೈಕಲ್ ವಿನ್ಯಾಸವನ್ನೇ ಹೊಂದಿದ್ದರೂ ಸಹ ವಿಭಿನ್ನ ತಂತ್ರಜ್ಞಾನ ಪ್ರೇರಣೆಯೊಂದಿಗೆ ಗರಿಷ್ಠ ಮೈಲೇಜ್ ಮತ್ತು ವೇಗವನ್ನು ಪಡೆದುಕೊಂಡಿದ್ದು, ಹೊಸ ಬೈಕ್‌ಗಳು 1kW, 2kW, 3kW ಸಾಮಾರ್ಥ್ಯದ ಬಿಎಲ್‌ಡಿಸಿ ಮೋಟಾರ್ ಜೋಡಣೆ ಹೊಂದಿವೆ. ಜೊತೆಗೆ 1 ಸಾವಿರ ಬಾರಿ ರೀಚಾರ್ಜ್ ಮಾಡಬಲ್ಲ ಲೀಥಿಯಂ ಅಯಾನ್ ಬ್ಯಾಟರಿ ಒದಗಿಸಲಾಗಿದ್ದು, ಬ್ಯಾಟರಿ ಮೇಲೆ ಗರಿಷ್ಠ ಮೂರು ವರ್ಷಗಳ ವಾರಂಟಿ ಘೋಷಿಸಲಾಗಿದೆ.

35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಮೈಲೇಜ್ ಮತ್ತು ಟಾಪ್ ಸ್ಪೀಡ್ ಪೊಲಾರಿಟಿ ಎಲೆಕ್ಟ್ರಿಕ್ ಬೈಕ್‌ಗಳು ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆ ಹೊಂದಿದ್ದು, ಎಂಟ್ರಿ ಲೆವೆಲ್ ಮಾದರಿಯಾದ ಇ1ಕೆ ಬೈಕ್ ಆವೃತ್ತಿಯು ಪ್ರತಿ ಗಂಟೆಗೆ 40 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದರೆ ಎಸ್3ಕೆ ಟಾಪ್ ಎಂಡ್ ಆವೃತ್ತಿಯು ಪ್ರತಿ ಗಂಟೆಗೆ 100ಕಿ.ಮಿ ಟಾಪ್ ಸ್ಪೀಡ್ ಸಾಧಿಸಬಲ್ಲದು.

ಇಲ್ಲದೇ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಚಾರ್ಜಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆಯ್ಕೆ ರೂಪದಲ್ಲಿ ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ನೀಡಲಾಗಿದ್ದು, ಆಸಕ್ತ ಗ್ರಾಹಕರು ರೂ.1 ಸಾವಿರ ಮುಗಂಡದೊಂದಿಗೆ ಪೊಲಾರಿಟಿ ಇ-ಬೈಕ್‌ಗಳಿಗೆ ಬುಕ್ಕಿಂಗ್ ತೆರೆಯಲಾಗಿದೆ.

ಸದ್ಯಕ್ಕೆ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಪ್ರದರ್ಶನ ಮಾಡಿ ಬೆಲೆ ಮಾಹಿತಿ ಹಂಚಿಕೊಂಡಿರುವ ಪೊಲಾರಿಟಿ ಸಂಸ್ಥೆಯು ಮುಂಬರುವ ಜನವರಿ ಹೊತ್ತಿಗೆ ಹೊಸ ಬೈಕ್ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ಮೊದಲ 70 ಸಾವಿರ ಮಹಾರಾಷ್ಟ್ರದಲ್ಲಿನ ಗ್ರಾಹಕರಿಗೆ ರಾಜ್ಯ ಜಿಎಸ್‌ಟಿ ದರವನ್ನು ಬಿಟ್ಟುಕೊಡುವುದಾಗಿ ಹೇಳಿದೆ.

Most Read Articles

Kannada
English summary
Mantis electric bike launch price Rs 35k – The No Challan Bike - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X