ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಹೀರೋ ಮೋಟೊಕಾರ್ಪ್ ವಿಶ್ವದ ಅತಿದೊಡ್ಡ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್ ಹೀರೋ ಮೋಟೊಕಾರ್ಪ್ ಕಂಪನಿಯ ಅತ್ಯಂತ ಜನಪ್ರಿಯವಾದ ಹಾಗೂ ಹೆಚ್ಚು ಮಾರಾಟವಾಗುವ ಬೈಕುಗಳಲ್ಲಿ ಒಂದಾಗಿದೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಹೀರೋ ಸ್ಪ್ಲೆಂಡರ್ ಬೈಕ್ ಪ್ರತಿ ತಿಂಗಳ ಬೈಕು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಆದರೆ ನಾವು ಈ ಲೇಖನದಲ್ಲಿ ಹೇಳಲಿರುವ ಎರಡು ಸ್ಪ್ಲೆಂಡರ್ ಬೈಕ್‌ಗಳು ಮೂಲ ಸ್ಪ್ಲೆಂಡರ್‌ ಬೈಕಿಗಿಂತ ಭಿನ್ನವಾಗಿವೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ವಾಸ್ತವವಾಗಿ, ಈ ಎರಡು ಸ್ಪ್ಲೆಂಡರ್ ಬೈಕ್‌ಗಳನ್ನು ಸುಮಾರು ರೂ.2 ಲಕ್ಷ ಖರ್ಚು ಮಾಡಿ ಮಾಡಿಫೈಗೊಳಿಸಲಾಗಿದೆ. ಮಾಡಿಫೈಗೊಂಡ ನಂತರ, ಈ ಎರಡು ಬೈಕುಗಳನ್ನು ಸ್ಪ್ಲೆಂಡರ್ ಬೈಕುಗಳೆಂದು ಕಂಡುಹಿಡಿಯುವುದು ಕಷ್ಟಕರವಾಯಿತು.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಬೈಕಿನ ಫ್ರೇಂ ಅನ್ನು ಕಡಿಮೆ ಮಾಡಲಾಗಿದೆ. ಹಿಂಬದಿ ಸವಾರನ ಸೀಟ್ ಅನ್ನು ತೆಗೆದುಹಾಕುವುದರ ಮೂಲಕ ಬೈಕಿನ ಫ್ರೇಂ ಅನ್ನು ಕಡಿಮೆಗೊಳಿಸಲಾಗಿದೆ. ಇಡೀ ಫ್ರೇಮ್ ಅನ್ನು ಬೈಕಿನ ಹೆಡ್‌ಲ್ಯಾಂಪ್‌ನಿಂದ ಟೇಲ್‌ಲೈಟಿಗೆ ಬದಲಿಸಲಾಗಿದೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಈ ಬೈಕ್ ಅನ್ನು ಸಂಪೂರ್ಣವಾಗಿ ಮಾಡಿಫೈಗೊಳಿಲಾಗಿದೆ. ಕೆಲವು ಭಾಗಗಳನ್ನು ಪ್ರತ್ಯೇಕವಾಗಿ ಸೇರಿಸಲಾಗಿದೆ. ಬೈಕಿನಲ್ಲಿ ಬಜಾಜ್ ಪಲ್ಸರ್‌ನ ಫ್ಯೂಯಲ್ ಟ್ಯಾಂಕ್ ಹಾಗೂ ಸೈಡ್ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಮಾಡಿಫೈಗೊಳಿಸಲಾದ ಈ ಬೈಕುಗಳಲ್ಲಿ ಹೊಸ ಅಲಾಯ್ ವ್ಹೀಲ್, ಟಯರ್, ಮಡ್‌ಗಾರ್ಡ್‌ ಹಾಗೂ ಸಂಪೂರ್ಣವಾಗಿ ವಿಭಿನ್ನವಾದ ಸ್ಕೆಲೆಟನ್ ಹೆಡ್‌ಲೈಟ್‍‍ಗಳಿವೆ. ಮೂಲ ಬೈಕಿಗಿಂತ ವಿಭಿನ್ನವಾಗಿಸಲು ಬೈಕಿನ ಎಕ್ಸಾಸ್ಟ್ ಅನ್ನು ಸಹ ಬದಲಿಸಲಾಗಿದೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಬೈಕಿನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೂಲ ಸ್ಪ್ಲೆಂಡರ್‌ ಬೈಕಿನಲ್ಲಿದ್ದ ಅದೇ 100 ಸಿಸಿ ಎಂಜಿನ್ ಅನ್ನು ಮುಂದುವರೆಸಲಾಗಿದ್ದು, ಅದೇ ಪವರ್ ಉತ್ಪಾದಿಸುತ್ತದೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಈ ಬೈಕ್ ಅನ್ನು ಖರೀದಿಸಿದವರು ಬೈಕಿನ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಹೇಳಿದ್ದಾರೆ. ಮಾಡಿಫೈಗೊಂಡ ಈ ಎರಡೂ ಬೈಕ್‌ಗಳು ಈಗ ಕೆಟಿಎಂ ಡ್ಯೂಕ್‌ನಂತೆ ಕಾಣುತ್ತವೆ. ಈ ಬೈಕುಗಳನ್ನು ಮಾಡಿಫೈ ಮಾಡಲು ಸುಮಾರು ರೂ.2 ಲಕ್ಷ ಖರ್ಚು ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ದೇಶದಲ್ಲಿರುವ ಅನೇಕ ಬೈಕ್ ಪ್ರಿಯರು ತಮ್ಮ ಬೈಕ್‌ಗಳನ್ನು ಮಾರ್ಪಡಿಸಿ ಅವುಗಳಿಗೆ ವಿಭಿನ್ನ ಲುಕ್ ನೀಡುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ದೇಶದಲ್ಲಿ ಕಾರು ಹಾಗೂ ಬೈಕುಗಳನ್ನು ಮಾಡಿಫೈಗೊಳಿಸುವ ಹಲವಾರು ಮಾಡಿಫೈ ಶಾಪ್‍‍ಗಳಿವೆ.

ಹೊಸ ಬೈಕಿಗಿಂತ ದುಬಾರಿ ಈ ಮಾಡಿಫೈ ಬೈಕುಗಳ ಬೆಲೆ..!

ಈ ಮಾಡಿಫೈ ಶಾಪ್‍‍ಗಳಲ್ಲಿ ಬೈಕುಗಳನ್ನು ಗ್ರಾಹಕರು ಇಷ್ಟ ಪಡುವ ರೀತಿಯಲ್ಲಿ ಮಾಡಿಫೈಗೊಳಿಸಲಾಗುತ್ತದೆ. ಭಾರತೀಯ ಮೋಟಾರು ವಾಹನ ನಿಯಮಗಳ ಪ್ರಕಾರ, ಬೈಕ್‌ ಅನ್ನು ತಪ್ಪಾಗಿ ಮಾಡಿಫೈಗೊಳಿಸುವುದು ಕಾನೂನುಬಾಹಿರವಾಗಿದ್ದು, ಮಾಡಿಫೈಗೊಂಡ ವಾಹನಗಳ ಮೇಲೆ ದಂಡ ವಿಧಿಸಲಾಗುತ್ತದೆ.

Source: Master Butter/YouTube

Most Read Articles

Kannada
English summary
Modified hero splendor images of most unique hero splendor - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X