ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಬಜಾಜ್ ಕಂಪನಿಯ ಹೊಸ ತಲೆಮಾರಿನ ಡೋಮಿನಾರ್ ಬೈಕ್ ಮತಷ್ಟು ದುಬಾರಿಯಾಗಿದೆ. ಈ ಬೈಕ್‍ ಬಿಡುಗಡೆಗೊಳಿಸಿದಾಗ ಬೈಕಿನ ಬೆಲೆಯು ರೂ.1.74 ಲಕ್ಷಗಳಾಗಿತ್ತು. ನಂತರ ಈ ಬೈಕಿನ ಬೆಲೆಯನ್ನು ರೂ.6,000ದಷ್ಟು ಏರಿಸಲಾಯಿತು. ಈಗ ಮತ್ತೊಮ್ಮೆ ರೂ.10,000 ಏರಿಸಲಾಗಿದೆ. ಈ ಮೂಲಕ ಬಜಾಜ್ ಕಂಪನಿಯು ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದಾರೆ.

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ದೇಶಿಯ ಮಾರುಕಟ್ಟೆಗೆ ಹೊಸ ತಲೆಮಾರಿನ ಡೋಮಿನಾರ್ ಪ್ರವೇಶಿಸುವಾಗ ರೂ. 1.74 ಲಕ್ಷ ದರವನ್ನು ಹೊಂದಿತ್ತು. ಬಳಿಕ ಬಜಾಜ್ ಕಂಪನಿಯು ಮೊದಲ ಬಾರಿಗೆ ಈ ಬೈಕಿನ ಬೆಲೆಯನ್ನು ರೂ. 6,000 ಸಾವಿರದವರೆಗೆ ಹೆಚ್ಚಿಸಿದಾಗ ರೂ. 1.80 ಲಕ್ಷ ದರಕ್ಕೆ ಏರಿತು. ಆದರೆ ಈಗ ಅಶ್ಚರ್ಯಕರವಾಗಿ ಸುಮಾರು ರೂ. 10,000 ಸಾವಿರದವರೆಗೆ ದರ ಹೆಚ್ಚಿಸಿದೆ. ಕಂಪನಿಯು ದರ ಹೆಚ್ಚಿಸಿರುವುದರ ಬಗ್ಗೆ ಸ್ಪಷ್ಟವಾದ ಕಾರಣ ನೀಡಿಲ್ಲ.

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಹೊಸ ತಲೆಮಾರಿನ ಬಜಾಜ್ ಡೋಮಿನಾರ್ 400 ಬೈಕ್‍ ಹಿಂದಿನ ಮಾದರಿಗಿಂತ ದೊಡ್ಡ ಮಟ್ಟದ ಸುಧಾರಣೆಯನ್ನು ಮಾಡಿದ್ದಾರೆ. ಎಂಜಿನ್ ದಕ್ಷತೆಯನ್ನು ಮತ್ತು ವೈಶಿಷ್ಟ್ಯಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ಇದೆ ಕಾರಣಕ್ಕಾಗಿ ಬಜಾಜ್ ಕಂಪನಿಯು ಹೊಸ ತಲೆಮಾರಿನ ಬಜಾಜ್ ಡೋಮಿನಾರ್ 400 ಬೈಕಿನ ಬೆಲೆಯನ್ನು ಹೆಚ್ಚಿಸಬಹುದು ಎಂಬ ವಾದವಿದೆ.

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಈ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾದ ಹೊಸ ತಲೆಮಾರಿನ ಬಜಾಜ್ ಡೋಮಿನಾರ್ 400 ಬೈಕ್ 373.3 ಸಿಸಿ ಲಿಕ್ವಿಡ್ ಕೂಲಿಂಗ್ ಅದೇ ಹಿಂದಿನ ಎಂಜಿನ್ ಅನ್ನು ಹೊಂದಿದೆ ಆದರೆ ಡಿ‍ಒ‍ಎಚ್‍‍ಸಿ ಸೆಟ್‍ಪ್ ಸೇರಿಸಲಾಗಿದೆ. ಈ ಎಂಜಿನ್ ಗರಿಷ್ಠ 39.4 ಬಿ‍ಎಚ್‍‍ಪಿ ಮತ್ತು 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಡೋಮಿನಾರ್ 400 ಹಳೇ ಮಾದರಿ ಬೈಕ್‍‍ನಲ್ಲಿ 373ಸಿಸಿ ಸಿಂಗಲ್ ಸಿಲೆಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 34.5 ಬಿಹೆಚ್‍‍ಪಿ ಮತ್ತು 35ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಹೊಸ ಡೋಮಿನಾರ್ 400 ಬೈಕ್‍‍ನಲ್ಲಿ ಮುಂಭಾಗದ ಟೈರ್‍‍ನಲ್ಲಿ ರೇಡಿಯಲ್ ಕ್ಯಾಲಿಪರ್ ಹೊಂದಿರುವ 320 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಟೈರ್‍‍ನಲ್ಲಿ ಸಿಂಗಲ್ ಪಾಡ್ ಕ್ಯಾಲಪರ್ ಹೊಂದಿರುವ 240 ಎಂ‍ಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಸ್ಟ್ಯಾಂಡರ್ಡ್ ಎಬಿ‍ಎಸ್ ಡ್ಯುಯಲ್ ಚಾನೆಲ್ ಅನ್ನು ಅನ್ನು ಅಳವಡಿಸಿದ್ದಾರೆ.

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಡೋಮಿನಾರ್ ಬೈಕ್‍ ಆರೋರಾ ಗ್ರೀನ್ ಮತ್ತು ವೈನ್‍‍ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಡೊಮಿನಾರ್ ಅನ್ನು ಮುಂದಿನ ದಿನಗಳಲ್ಲಿ ಬಿ‍ಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್‍‍ಡೇಟ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ಡೊಮಿನಾರ್ 400 ಬೈಕ್ ದೇಶಿಯ ಮಾರುಕಟ್ಟೆಯಲ್ಲಿ 927 ಯುನಿ‍‍ಟ್‍‍ಗಳು ಮಾರಾಟವಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ. 17 ರಷ್ಟು ಕುಸಿತ ಕಂಡಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಆಟೊಬೈಲ್ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಕುಸಿತವನ್ನು ಕಂಡಿರುವ ಸಮಯದಲ್ಲಿ, ಹೆಚ್ಚಿನ ವಾಹನ ಉತ್ಪಾದಕರು ತಮ್ಮ ವಾಹನದ ಬೆಲೆಯನ್ನು ಕಡಿಮೆಗೊಳಿಸಿದೆ. ಆದರೆ ಬಜಾಜ್ ಕಂಪನಿಯು ತಮ್ಮ ಬೆಲೆಯನ್ನು ಮತಷ್ಟು ಏರಿಕೆ ಮಾಡಿರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮತಷ್ಟು ದುಬಾರಿಯಾಗಲಿದೆ ಬಜಾಜ್ ಡೋಮಿನಾರ್ 400

ಡೋಮಿನಾರ್ ಬೈಕ್‍ ಅನ್ನು ಬಜಾಜ್ ಆಟೋ ಮಾರಕಟ್ಟೆಯಲ್ಲಿನ ಅತ್ಯಮೂಲ್ಯ ಮಾದರಿ ಎಂದು ಪರಿಗಣಿಸಲಾಗಿದೆ. ಇದೇ ಕಾರಣದಿಂದ ಯಾವುದರ ಬಗ್ಗೆಯೂ ಚಿಂತಿಸಿದ ಬಜಾಜ್ ಆಟೋ ಡೋಮಿನಾರ್ 400 ಬೆಲೆಯನ್ನು ಹೆಚ್ಚಿಸಿದೆ. ಆದರೆ ಆಟೋ‍‍ಮೊಬೈಲ್ ಕ್ಷೇತ್ರ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಿಸಿರುವುದು ಮಾರಾಟದಲ್ಲಿ ಪರಿಣಾಮ ಬೀರುತ್ತಾ ಕಾದು ನೋಡಬೇಕು.

Most Read Articles

Kannada
English summary
Bajaj Dominar 400 price hiked by Rs 10,000 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more