ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಬಜಾಜ್ ಆಟೋ, ತನ್ನ ಸರಣಿಯಲ್ಲಿರುವ ಪಲ್ಸರ್ 220 ಎಫ್ ಬೈಕ್ ಅನ್ನು ವೊಲ್ಕನಿಕ್ ರೆಡ್ ಎಂಬ ಹೊಸ ಬಣ್ಣದಲ್ಲಿ ಬಿಡುಗಡೆಗೊಳಿಸಿದೆ. ವೊಲ್ಕನಿಕ್ ರೆಡ್ ಬಣ್ಣದಲ್ಲಿರುವ ಹೊಸ ಬಜಾಜ್ ಪಲ್ಸರ್‍‍ನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.07 ಲಕ್ಷಗಳಾಗಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಹೊಸ ಬಣ್ಣದಲ್ಲಿರುವ ಬೈಕಿನ ಸೈಡ್ ಫೇರಿಂಗ್‍‍ನಲ್ಲಿ ಬ್ಲಾಕ್ ಹಾಗೂ ಆರೆಂಜ್ ಬಣ್ಣದ ಡೆಕಾಲ್‍‍ಗಳಿರಲಿವೆ. ಇದರ ಜೊತೆಗೆ ಬೆಲ್ಲಿ ಪ್ಯಾನ್, ಫ್ರಂಟ್ ಫೆಂಡರ್ ಹಾಗೂ ಟೇಲ್ ಸೆಕ್ಷನ್‍‍ಗಳಿರಲಿವೆ. ಇದರ ಜೊತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಚಿಕ್ಕ ಆರೆಂಜ್ ಸ್ಟ್ರಿಪ್‍‍ಗಳಿರಲಿವೆ. ಹೆಚ್ಚುವರಿಯಾಗಿ ಬಣ್ಣದಲ್ಲಿ ಬದಲಾವಣೆ ಮಾಡಿರುವುದನ್ನು ಬಿಟ್ಟರೆ, ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಮೆಕಾನಿಕಲ್ ಅಂಶಗಳು ಮೊದಲಿನಂತೆಯೇ ಮುಂದುವರೆಯಲಿವೆ. ವೊಲ್ಕನಿಕ್ ರೆಡ್ ಬಣ್ಣದ ಜೊತೆಗೆ ಬಜಾಜ್ ಪಲ್ಸರ್ 220 ಎಫ್ ಬೈಕ್, ಬ್ಲಾಕ್-ಬ್ಲೂ ಹಾಗೂ ಬ್ಲಾಕ್-ರೆಡ್ ಎಂಬ ಎರಡು ಡ್ಯೂಯಲ್ ಟೋನ್ ಬಣ್ಣಗಳಲ್ಲಿ ದೊರೆಯಲಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಬಜಾಜ್ ಪಲ್ಸರ್ 220 ಎಫ್ 220 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 21 ಬಿ‍‍ಹೆಚ್‍‍ಪಿ ಪವರ್ ಹಾಗೂ 19 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಪಲ್ಸರ್ 220 ಎಫ್‌ ಬೈಕಿನಲ್ಲಿನ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‍‍ಗಳಿವೆ. ಬ್ರೇಕಿಂಗ್‍‍ಗಾಗಿ ಎರಡೂ ಬದಿಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕಿಂಗ್‍‍‍ಗಳಿವೆ.

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಇವುಗಳಿಗೆ ಬೆಂಬಲವಾಗಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಪಲ್ಸರ್ 220 ಎಫ್‌ ಬೈಕ್ ಅನ್ನು ಹೊಸ ಬಣ್ಣದಲ್ಲಿ ನೀಡುತ್ತಿರುವುದರ ಜೊತೆಗೆ, ಈ ಬೈಕಿನಲ್ಲಿರುವ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಬಜಾಜ್ ಪಲ್ಸರ್ ಸರಣಿಯಲ್ಲಿರುವ ಹಲವಾರು ಬೈಕುಗಳನ್ನು ಬಿಎಸ್6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಅಭಿವೃದ್ಧಿಪಡಿಸಿ ಹಲವು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಬಜಾಜ್ ಕಂಪನಿಯು ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿರುವ ಪಲ್ಸರ್ 150 ಬೈಕುಗಳನ್ನು ಮೊದಲು ಬಿಡುಗಡೆಗೊಳಿಸಿ, ನಂತರ ಉಳಿದ ಬೈಕುಗಳನ್ನು ಬಿಡುಗಡೆಗೊಳಿಸಲಿದೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಎಂಟ್ರಿ ಲೆವೆಲ್‍‍ನ ಪಲ್ಸರ್ 125 ಬೈಕ್ ಅನ್ನು ಸಹ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. ಹೊಸ ಬಜಾಜ್ ಪಲ್ಸರ್ ಎನ್ಎಸ್ 125 ಬೈಕ್ ಅನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಹೊಸ ಪಲ್ಸರ್ ಎನ್ಎಸ್ 125 ಬೈಕ್ ಅನ್ನು ಈ ಹಿಂದೆ ಮಾರುಕಟ್ಟೆಯಲ್ಲಿದ್ದ 125 ಎಲ್ಎಸ್ ಬೈಕಿಗೆ ಬದಲಿಯಾಗಿ ಬಿಡುಗಡೆಗೊಳಿಸಲಾಗುತ್ತಿದೆ. 125ಎಲ್‍ಎಸ್ ಬೈಕ್ ಅನ್ನು ಕೆಲವು ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.

MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಹೊಸ ಬಣ್ಣದಲ್ಲಿ ಬಿಡುಗಡೆಯಾದ ಪಲ್ಸರ್ 220 ಎಫ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವೊಲ್ಕನಿಕ್ ರೆಡ್, ಬಜಾಜ್ ಕಂಪನಿಯು ತನ್ನ ಜನಪ್ರಿಯ 220 ಸಿಸಿ ಸೆಗ್‍‍ಮೆಂಟಿನಲ್ಲಿ ನೀಡುತ್ತಿರುವ ಹೊಸ ಬಣ್ಣವಾಗಿದೆ. ಹೊಸ ಬಜಾಜ್ ಪಲ್ಸರ್ 220 ಎಫ್ ವೊಲ್ಕನಿಕ್ ರೆಡ್ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 250, ಹೋಂಡಾ ಸಿಬಿಆರ್ 250 ಆರ್, ಕೆಟಿಎಂ ಡ್ಯೂಕ್ 200 ಹಾಗೂ ಯಮಹಾ ಎಫ್‌ಜೆಡ್ 25 ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Bajaj Pulsar 220F Launched In Volcanic Red Paint Scheme - Read in kannada
Story first published: Tuesday, August 6, 2019, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X