ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಬಿಎಂಡಬ್ಲ್ಯು ಮೋಟೊರಾಡ್ ಫೆಬ್ರವರಿ 2019ರಲ್ಲಿ ತನ್ನ ಇಂಡಿಯಾ ಸ್ಪೆಸಿಫಿಕ್ ಸೋಷಿಯಲ್ ಮೀಡಿಯಾ ಪೇಜ್‍‍ಗಳಲ್ಲಿ 2019ರ ಎಸ್1000‍ಆರ್‍ಆರ್ ಬೈಕಿನ ಟೀಸರ್ ಬಿಡುಗಡೆ ಮಾಡಿತ್ತು. ಆ ಸಮಯದಲ್ಲಿ ಲೀಟರ್ ಕ್ಲಾಸಿನ ಸೂಪರ್ ಸ್ಪೋರ್ಟ್ ಬೈಕ್ ಜೂನ್ 2019ರ ಸುಮಾರಿಗೆ ಭಾರತಕ್ಕೆ ಕಾಲಿಡುವ ಸುಳಿವು ಸಿಕ್ಕಿತ್ತು.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಈ ಮೋಟಾರ್‍‍ಸೈಕಲ್ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದು, 2019ರ ಜೂನ್ 25ರಂದು ಬಿಡುಗಡೆಯಾಗಲಿದೆ. ಇನ್ನೂ ಒಂದು ತಿಂಗಳಿನಲ್ಲಿ ಎಸ್1000‍ಆರ್‍ಆರ್ ಬೈಕ್ ಬಿಡುಗಡೆಯಾಗಲಿದ್ದು, 2009 ರಲ್ಲಿ ಬಿಡುಗಡೆಯಾಗಿದ್ದ ಹಿಂದಿನ ತಲೆಮಾರಿನ ಬೈಕಿನ ಬದಲು ರಸ್ತೆಗಿಳಿಯಲಿದೆ. ಆಟೋ ಕಾರ್ ಇಂಡಿಯಾ ವರದಿಗಳ ಪ್ರಕಾರ, ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬೈಕಿನಲ್ಲಿಯೂ 999 ಸಿಸಿಯ ನಾಲ್ಕು ಸಿಲಿಂಡರ್‍‍ಗಳಿರಲಿವೆ, ಆದರೆ ಈ ಬೈಕಿನಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಇದರಲ್ಲಿರುವ ಎಂಜಿನ್ 207 ಬಿ‍‍ಹೆಚ್‍‍ಪಿ ಯನ್ನು 13,500 ಆರ್‍‍ಪಿ‍ಎಂ ನಲ್ಲಿ ಮತ್ತು 113 ಎನ್‍ಎಂ ಟಾರ್ಕ್ ಅನ್ನು 11,000 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಲಿದೆ. 2018ರ ಮಾದರಿಯ ವಾಹನಕ್ಕಿಂತ 8 ಹೆಚ್‍‍ಪಿ ಹೆಚ್ಚು ಉತ್ಪಾದಿಸುತ್ತದೆ, ಟಾರ್ಕ್ ಉತ್ಪಾದನೆ ಹಿಂದಿನ ಬೈಕಿನಲ್ಲಿದ್ದಷ್ಟೆ ಇರಲಿದೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಈ ಎಂಜಿನ್‍‍ನಲ್ಲಿ ಬಿ‍ಎಂ‍ಡಬ್ಲ್ಯು ವಿನ ಶಿಫ್ಟ್ ಕ್ಯಾಮ್ ಟೆಕ್ನಾಲಜಿ ಇರಲಿದೆ, ಅದು ವೆರಿಯಬಲ್ ವಾಲ್ವ್ ಟೈಮಿಂಗ್‍‍ಗೆ ನೆರವಾಗಲಿದೆ. ಈ ಟೆಕ್ನಾಲಜಿ ರೆವ್ ಸರಣಿಯಲ್ಲಿ ಹೆಚ್ಚು ಪರ್ಫಾರ್ಮೆನ್ಸ್ ನೀಡಲಿದೆ. ಈ ಎಂಜಿನ್‍ 6 ಸ್ಪೀಡಿನ ಕ್ವಿಕ್ ಶಿಫ್ಟ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಬಿ‍ಎಂ‍ಡಬ್ಲ್ಯು ಮೋಟೊರಾಡ್, ಈ ಬೈಕಿನಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಪ್ ಡೇಟ್ ಮಾಡಿದೆ. ಹೊಸ ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬೈಕಿನಲ್ಲಿ ಸಿಕ್ಸ್ ಆಕ್ಸಿಸ್ ಐ‍ಎಂ‍‍ಯು ಇದ್ದು, ಕಾರ್ನರ್ ನಲ್ಲಿರುವ ಎ‍‍ಬಿ‍ಎಸ್ ಮತ್ತು ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ ಗಳಿಗೆ ಸಹಕಾರಿಯಾಗಲಿದೆ. ಈ ಬೈಕ್ - ರೈನ್, ರೋಡ್, ಡೈನಾಮಿಕ್ ಹಾಗೂ ರೇಸ್ - ಎಂಬ ನಾಲ್ಕು ರೈಡಿಂಗ್ ಮೋಡ್‍‍ಗಳನ್ನು ಒಳಗೊಂಡಿದೆ. ಈ ಎಲ್ಲಾ ಮೋಡ್‍‍ಗಳನ್ನು 6.5 ಇಂಚಿನ ಟಿ‍ಎಫ್‍‍ಟಿ ಡಿಸ್‍‍ಪ್ಲೇ ನಲ್ಲಿ ಕಾಣಬಹುದಾಗಿದೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

2019ರ ಹೊಸ ಬೈಕಿನಲ್ಲಿ ಬ್ರೆಂಬೋ ಬ್ರೇಕ್‍‍ಗಳ ಬದಲು ಹೇಯ್ಸ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ. ಸಾಚ್ ಸಸ್ಪೆಂಷನ್‍‍ಗಳ ಬದಲು ಮಾರ್ಜೊಚಿ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: 20 ವರ್ಷಗಳಲ್ಲಿ 100 ಕಾರುಗಳನ್ನು ಕದ್ದಿದ್ದ ಖದೀಮರು ಕೊನೆಗೆ ಸಿಕ್ಕಿ ಬಿದ್ದಿದ್ದೇ ರೋಚಕ..!

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬೈಕಿನಲ್ಲಿ ರಿ-ಡಿಸೈನ್ ಮಾಡಿರುವ ಚಾಸೀಸ್ ಇದ್ದು ಅದನ್ನು ಹಗುರವಾದ ಕಾಂಪೋನೆಂಟ್‍‍ಗಳಿಂದ ತಯಾರಿಸಲಾಗಿದೆ. ಈ ಬೈಕಿನಲ್ಲಿ ವರ್ಲ್ಡ್ ಸೂಪರ್‍‍ಬೈಕ್ ಚಾಂಪಿಯನ್‍‍ಶಿಪ್‍‍ನಿಂದ ಪ್ರೇರಣೆಗೊಂಡಿರುವ ಸ್ವಿಂಗ್ ಆರ್ಮ್ ಅಳವಡಿಸಲಾಗಿದೆ. ಇದರಿಂದ ಹೊಸ ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ನಲ್ಲಿ ಹಗುರವಾದ ಫ್ರೇಂ, ಹಗುರವಾದ ಎಂಜಿನ್ ಗಳಿವೆ. ಈ ಕಾರಣದಿಂದ ಬೈಕಿನ ತೂಕವು, ಈಗಿರುವ ಬೈಕಿಗಿಂತ 11 ಕೆ.ಜಿ ಕಡಿಮೆಯಾಗಿ, ಒಟ್ಟಾರೆ ತೂಕವು 197 ಕೆ.ಜಿಗಳಾಗಿದೆ. ಟಾಪ್ ಮಾದರಿಯ ಎಂ ಪ್ಯಾಕೇಜಿನ ಬೈಕಿನ ತೂಕವು 193.5 ಕೆ.ಜಿ ಗಳಿದೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

2019ರ ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬೈಕನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ- ಸ್ಟಾಂಡರ್ಡ್, ಎಸ್1000 ಆರ್‍ಆರ್ ಮತ್ತು ಎಂ ಪ್ಯಾಕೇಜ್ ಹೊಂದಿರುವ ಎಸ್1000 ಆರ್‍ಆರ್ - ಎಂಬ ಮೂರು ವಿಧಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಈಗಿರುವ ಮಾದರಿಗಿಂತ ಸ್ಟಾಂಡರ್ಡ್ ಮಾದರಿಯ ಬೆಲೆಯು ಹೆಚ್ಚಾಗುವ ಸಾಧ್ಯತೆಗಳಿವೆ. ಈಗಿರುವ ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ದರಗಳು ಭಾರತದ ಎಕ್ಸ್ ಶೋರೂಂ ಬೆಲೆಗಳಂತೆ ರೂ.18.05 ಲಕ್ಷಗಳಾಗಿವೆ. ಬಿಡುಗಡೆಯ ನಂತರ ಹೈ ಸ್ಪೆಕ್‍‍ನ ಸ್ಪೋರ್ಟ್ ವೆರಿಯಂಟ್‍‍ನ ಬೆಲೆಯು ರೂ.21 ಲಕ್ಷಗಳಾಗಲಿದ್ದು, ಎಂ ಪ್ಯಾಕೇಜ್ ಬೆಲೆಯು ರೂ.25 ಲಕ್ಷಗಳಾಗಲಿವೆ. ಈ ಎಲ್ಲಾ ದರಗಳು ಭಾರತದ ಎಕ್ಸ್ ಶೋರೂಂ ಬೆಲೆಗಳಾಗಿವೆ.

ಬಹಿರಂಗವಾಯಿತು ಬಿ‍ಎಂ‍ಡಬ್ಲ್ಯು ಎಸ್1000 ಆರ್‍ಆರ್ ಬಿಡುಗಡೆಯ ದಿನಾಂಕ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಿ‍ಎಂ‍ಡಬ್ಲ್ಯು ಮೋಟಾರ್‍‍ಸೈಕಲ್‍‍ಗಳು ನೀಡುವಂತಹ ಎಂಜಿನ್‍‍ಗಳ ಗುಣಮಟ್ಟವು ಸರ್ವ ಶ್ರೇಷ್ಟವಾಗಿದ್ದು, ಬೇರೆ ಯಾವುದೇ ಕಂಪನಿಯ ಬೈಕುಗಳು ಇಂತಹ ಎಂಜಿನ್‍‍ಗಳನ್ನು ನೀಡುವುದಿಲ್ಲ. ಬಿ‍ಎಂ‍ಡಬ್ಲ್ಯು ಕಂಪನಿಯ ಬೈಕುಗಳು ವೇಗಕ್ಕೆ ಮತ್ತು ಪವರ್‍‍ಗೆ ಹೆಸರುವಾಸಿಯಾಗಿವೆ.

Most Read Articles

Kannada
English summary
2019 BMW S 1000 RR India-Launch Date Revealed — Quiet, Confident & Outrageous!- Read in kannada
Story first published: Friday, May 17, 2019, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X