ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್, ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಯಮಹಾ ಮೋಟಾರ್ಸ್ ತನ್ನ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳನ್ನು ನವೀಕರಿಸಿ ಬಿಎಸ್-6 ಆವೃತ್ತಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮುಂದಿನ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಎಸ್-6 ನವೀಕರಿಸಲಾದ ಬಿಎಸ್-6 ಎಂಜಿನ್ ಹೊಂದಿರುವ ಆವೃತ್ತಿಗಳನ್ನು ಬಿಡುಗೊಳಿಸುವುದಾಗಿ ಕಂಪನಿ ಘೋಷಿಸಿದೆ.

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಬಿಎಸ್-6 ಎಂಜಿನ್ ಹೊಂದಿರುವ ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್ ಎಂಜಿನ್ ಸ್ಪೆಕ್ ಸಂಬಂಧಿಸಿದ ಮಾಹಿತಿಯನ್ನು ಐ‍ಎ‍ಬಿ ಸೋರಿಕೆ ಮಾಡಿದೆ. ದೇಶಿಯ ಮಾರುಕಟ್ಟೆಗೆ ಮುಂಬರುವ ಬಿಎಸ್-6 ಎಂಜಿನ್‍‍ನ ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಮಾದರಿಗಳ ಎಂಜಿನ್‍‍ಗಳ ಪ್ರಮುಖ ಮಾಹಿತಿಗಳನ್ನು ಒಳಗೊಂಡ ದಾಖಲೆ ಸೋರಿಕೆಯಾಗಿದೆ.

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಸೋರಿಕೆಯಾದ ದಾಖಲೆಯ ಮಾಹಿತಿ ಪ್ರಕಾರ ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳು ಒಂದೇ ಮಾದರಿಯ 149 ಸಿಸಿ ಸಿಂಗಲ್ ಸಿಲಿಂಡರ್ ಬಿಎಸ್-6 ಎಂಜಿನ್‍ ಅನ್ನು ಹೊಂದಿರಲಿವೆ. ಈ ಎಂಜಿನ್ 7,250 ಆರ್‍‍ಪಿಎಂನಲ್ಲಿ 12.1 ಬಿ‍ಎಚ್‍ಪಿ ಪವರ್ ಉತ್ಪಾದಿಸುತ್ತದೆ. ಎರಡು ಬೈಕ್‍‍ಗಳಲ್ಲಿನ ಪ್ರಸ್ತುತ ಬಿಎಸ್-4 ಎಂಜಿನ್‍ ಪವರ್‍‍ಗಿಂತ 1 ಬಿಎಚ್‍ಪಿ ಕಡಿಮೆಯಾಗಿರಲಿದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಸೋರಿಕೆಯಾದ ದಾಖಲೆಯಲ್ಲಿ ಎರಡು ಬೈಕ್‍‍ಗಳ ಟಾರ್ಕ್ ಉತ್ಪಾದನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಸ್ತುತ ಎಂಜಿ‍‍ನ್‍‍ನ ಟಾರ್ಕ್ ಉತ್ಪಾದನೆ ಅಷ್ಟೇ ಇರಬಹುದು, ಬದಲಾವಣೆಯನ್ನು ಮಾಡಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ. ಹೊಸ ಎಂಜಿನ್‍ ಬದಲಾವಣೆ ಅಲ್ಲದೇ ಇತರ ಬದಲಾವಣೆಗಳು ಯಾವುದೇ ಮಾಡಲಾಗಿಲ್ಲ.

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಸೋರಿಕೆಯಾದ ದಾಖಲೆಯ ಮಾಹಿತಿಯ ಪ್ರಕಾರ ಎರಡು ಬೈ‍ಕ್‍ಗಳು ಎಂಜಿನ್ ಬದಲಾವಣೆ ಅಲ್ಲದೇ ಇತರ ಯಾವುದೇ ಬದಲಾವಣೆಗಳಿಲ್ಲದೆ ಅದೇ ರೀತಿಯಲ್ಲಿ ಮುಂದುವರೆಯಲಿವೆ. ಈ ಬೈಕ್‍‍ಗಳು 1990 ಎಂಎಂ ಉದ್ದ, 780 ಎಂಎಂ ಅಗಲ ಮತ್ತು 1080 ಎಂಎಂ ಎತ್ತರವನ್ನು ಹೊಂದಿದೆ. ಈ ಬೈಕ್‍‍ಗಳು 1330 ಎಂಎಂ ಒಂದೇ ರೀತಿಯ ವೀಲ್‍‍ಬೇಸ್ ಅನ್ನು ಸಹ ಒಳಗೊಂಡಿವೆ.

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳು ಅದೇ ವೈಶಿಷ್ಟ್ಯಗಳಲ್ಲಿ ಮುಂದುವರೆಯಲಿವೆ. ಪ್ರಸ್ತುತ ಮಾದರಿಯಲ್ಲಿ ಎಲ್‍ಇಡಿ ಹೆಡ್‍‍ಲ್ಯಾಂಪ್, ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಸಿಂಗಲ್ ಪೀಸ್ ಸ್ಪ್ಲಿಟ್ ಸೀಟ್ ಅನ್ನು ಹೊಂದಿದೆ. ಯಮಹಾ ಎಫ್‍‍ಜೆಡ್-ಎಸ್ ಮತ್ತಷ್ಟು ಕ್ರೋಮ್‍ ಹೈಲೈಟ್ಸ್ ಮತ್ತು ಹೆಚ್ಚುವರಿ ಬಾಡಿ ಪ್ಯಾನೆಲ್ ಅನ್ನು ಹೊಂದಿರಲಿದೆ.

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಬಿಎಸ್-6 ಪ್ರೇರಿತ ಎಂಜಿನ್ ಯಮಹಾ ಎಫ್‍‍ಜೆಡ್ ಮತ್ತು ಎಫ್‍‍‍ಜೆಡ್-ಎಸ್ ಪ್ರಸ್ತುತ ಮೆಕಾನಿಕಲ್ ವೈಶಿಷ್ಟ್ಯಗಳೊಂದಿಗೆ ಮುಂದುವರೆಯಲಿದೆ. ಬೈಕ್ ಮುಂಭಾಗದಲ್ಲಿ ಟಿ‍‍ಲಿ‍ಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಅನ್ನು ಅನ್ನು ಅಳವಡಿಸಿದ್ದಾರೆ. ಹೊಸ ಯಮಹಾ ಎಫ್‍‍ಜೆಡ್ ಮತ್ತು ಎಫ್‍ಜೆಡ್-ಎಸ್ ಸಹ ಒಂದೇ ಟಯರ್ ಫ್ರೋಫೈಲ್ ಅನ್ನು ಹೊಂದಿದೆ. ಇದರಲ್ಲಿ 17 ಇಂಚಿನ ವ್ಹೀಲ್‍‍ಗಳು 100/80 ಮತ್ತು 140/60 ಯು‍‍ನಿ‍‍ಟ್‍‍ಗಳನ್ನು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಒಳಗೊಂಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಹಿರಂಗವಾಯ್ತು ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳ ಮಾಹಿತಿ

ಹೊಸ ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳು ಎಂಜಿನ್‍ ಅನ್ನು ಮಾತ್ರ ನವೀಕರಿಸಿದೆ, ವೈಶಿಷ್ಟ್ಯಗಳಲ್ಲಿ ಅಥವಾ ಇತರ ಯಾವುದೇ ವಿಭಾಗದಲ್ಲಿ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್‍‍ಗಳು ಮುಂದಿನ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ಮಾದರಿಯ ಬೆಲೆಕ್ಕಿಂತ ಕಡಿಮೆ ಬೆಲೆಯನ್ನು ಹೊಂದಲಿದೆ. ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್-ಎಸ್ ಬೈಕ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 160 ಎನ್ಎಸ್, ಕೆಟಿಎಂ ಡ್ಯೂಕ್ 125, ಸುಜುಕಿ ಗಿಕ್ಸ್‌ಸರ್ 155 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಬೈಕ್‍‍ಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
Read more on ಯಮಹಾ yamaha
English summary
New BS6 Yamaha FZ and FZ-S Motorcycle Specs Leaked: India Launch Expected By End-2019 - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X