ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ಲಗ್ಷುರಿ ಮೋಟಾರ್‌ಸೈಕಲ್ ಕಂಪನಿಯಾದ ಡುಕಾಟಿ ನವದೆಹಲಿಯಲ್ಲಿ ಹೊಸ ಶೋರೂಂ ತೆರೆದಿದ್ದು, ದೇಶಾದ್ಯಂತ ತನ್ನ ಡೀಲರ್‍‍ಶಿಪ್ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ತಿಳಿಸಿದೆ. ಇದಕ್ಕಾಗಿ ಇಟಲಿ ಮೂಲದ ಕಂಪನಿಯು ನಾರ್ಥ್ ಸ್ಟಾರ್ ಆಟೋಮೋಟಿವ್‌ ಜೊತೆಗೆ ಹೊಸ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ನಾರ್ಥ್ ಸ್ಟಾರ್ ಆಟೋಮೋಟಿವ್, ಗುರಗಾಂವ್‌ನಲ್ಲಿರುವ ದೆಹಲಿ ಎನ್‌ಸಿಆರ್ ಶೋರೂಂನಲ್ಲಿ ಕಾರ್ಯಾಚರಣೆ ನಡೆಸುವುದರ ಜೊತೆಗೆ ಹೊಸ ಡೀಲರ್‍‍ಶಿಪ್‍‍ಗಳನ್ನು ತೆರೆಯಲಿದೆ.

ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ಡುಕಾಟಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಸೆರ್ಗಿ ಕಾನೊವಾಸ್‍‍ರವರು ಮಾತನಾಡಿ ದೆಹಲಿ ಎನ್‌ಸಿಆರ್‌ನಲ್ಲಿರುವ ಡುಕಾಟಿಯ ಅಧಿಕೃತ ಮಾರಾಟಗಾರರಿಗಾಗಿ ನಾರ್ಥ್ ಸ್ಟಾರ್ ಆಟೋಮೋಟಿವ್‌ನೊಂದಿಗೆ ಪಾಲುದಾರರಾಗಲು ನಾವು ತುಂಬಾ ಉತ್ಸುಕರಾಗಿದ್ದೇವೆ. ನಾರ್ಥ್ ಸ್ಟಾರ್ ಆಟೋಮೋಟಿವ್‌ನ ತಂಡವು ಐಷಾರಾಮಿ ಮೋಟಾರ್‌ಸೈಕಲ್ ಉದ್ಯಮ ಮತ್ತು ರೇಸಿಂಗ್‌ನಿಂದ ಸರಿಸಾಟಿಯಿಲ್ಲದ ಅನುಭವವನ್ನು ನೀಡಲಿದೆ.

ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ಡುಕಾಟಿ ಎಂಬುದು ಉತ್ಸಾಹದ ಸಮಾನಾರ್ಥಕ ಕಂಪನಿಯಾಗಿದ್ದು, ದೆಹಲಿ ಎನ್‌ಸಿಆರ್ ರೈಡರ್ ಸರ್ಕ್ಯೂಟ್‌ನಲ್ಲಿ ಅತ್ಯಂತ ಉತ್ಸಾಹಭರಿತ ಹಾಗೂ ಗೌರವಾನ್ವಿತ ಮೋಟರ್ ಸೈಕ್ಲಿಸ್ಟ್‌ಗಳೊಂದಿಗೆ ನವದೆಹಲಿಯಲ್ಲಿ ಮಾರಾಟಗಾರರನ್ನು ಪ್ರಾರಂಭಿಸಲು ಉತ್ತಮ ಮಾರ್ಗವಾಗಿದೆ ಎಂದು ತಿಳಿಸಿದರು. ದೆಹಲಿಯಲ್ಲಿರುವ ಕಂಪನಿಯ ಹೊಸ ಡೀಲರ್‍‍ಶಿಪ್‍‍ನಲ್ಲಿ - ಸೇಲ್ಸ್, ಸರ್ವಿಸ್ ಹಾಗೂ ಸ್ಪೇರ್ಸ್ ಎಂಬ ಮೂರು ಎಸ್ ಸೌಲಭ್ಯಗಳನ್ನು ನೀಡಲಾಗುವುದು.

ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ಇದು ಪೊರ್ಟ್‍‍ಫೊಲಿಯೊದಾದ್ಯಂತವಿರುವ ಎಲ್ಲಾ ಮೂವತ್ತೆರಡು ಮಾದರಿಗಳನ್ನು ಒಳಗೊಂಡಿರುವ ಡುಕಾಟಿ ಬೈಕುಗಳ ಸಂಪೂರ್ಣ ಸರಣಿಯನ್ನು ಸಹ ಪೂರೈಸಲಿದೆ. ಇಡೀ ಸರಣಿಯು ಐಕಾನಿಕ್ ಮಾನ್‍‍‍ಸ್ಟರ್, ಡಯಾವೆಲ್ಸ್, ಮಲ್ಟಿಸ್ಟ್ರಾಡಾ ಹಾಗೂ ಹೈಪರ್‌ಮೊಟಾರ್ಡ್ ಫ್ಯಾಮಿಲಿ, ಸ್ಪೋರ್ಟ್ ರೋಡ್ ಸೂಪರ್‌ಸ್ಪೋರ್ಟ್ ಹಾಗೂ ಪ್ಯಾನಿಗಲೆ ವಿ4, ವಿ4ಆರ್ ಸೇರಿದಂತೆ ಅತ್ಯಂತ ಬಲಶಾಲಿ ಪ್ಯಾನಿಗಲೆ ಸೂಪರ್‌ಬೈಕ್‌ಗಳಿಂದ ಪ್ರಾರಂಭವಾಗಲಿದೆ.

ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ನಾರ್ಥ್ ಸ್ಟಾರ್ ಆಟೋಮೋಟಿವ್‌ನ ಡೀಲರ್ ಪಾರ್ಟ್‍‍ನರ್ ಆರ್. ಸಂಜೀವ್ ಒಬೆರಾಯ್‍‍ರವರು ಮಾತನಾಡಿ, ಡುಕಾಟಿಯೊಂದಿಗೆ ಸಹಭಾಗಿತ್ವವನ್ನು ಹೊಂದುವುದರೊಂದಿಗೆ ನಮ್ಮ ಕನಸು ನಿಜವಾಗಿದೆ. ನಾರ್ಥ್ ಸ್ಟಾರ್ ಆಟೋಮೋಟಿವ್, ಡುಕಾಟಿ ಬ್ರಾಂಡ್ ಅನ್ನು ಅರ್ಥಮಾಡಿಕೊಳ್ಳುವ ತಂಡವನ್ನು ಒಳಗೊಂಡಿದೆ. ಬೈಕುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿದೆ. ಡುಕಾಟಿಯ ಭಾಗವಾಗಿರುವ ರೇಸಿಂಗ್ ಬಗ್ಗೆ ಸಹ ಉತ್ಸಾಹ ಹೊಂದಿದೆ.

ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ದೆಹಲಿ ಎನ್‌ಸಿಆರ್ ಪ್ರದೇಶದ ಎಲ್ಲಾ ಸವಾರರಿಗೆ ವಿಶ್ವ ದರ್ಜೆಯ ಡುಕಾಟಿ ಅನುಭವವನ್ನು ತಲುಪಿಸಲು ಹಾಗೂ ಉತ್ಸಾಹವನ್ನು ಹಂಚಿಕೊಳ್ಳಲು ನಾವೆಲ್ಲ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಡುಕಾಟಿ ಕಂಪನಿಯು ಸದ್ಯಕ್ಕೆ ಭಾರತದಾದ್ಯಂತ ಎಂಟು ಡೀಲರ್‍‍ಶಿಪ್‍‍ಗಳನ್ನು ಹೊಂದಿದೆ. ಇನ್ನು ಡುಕಾಟಿ ಸರಣಿಯ ಬೈಕುಗಳ ಬೆಲೆ ಬಗ್ಗೆ ಹೇಳುವುದಾದರೆ, ಸ್ಕ್ರಾಂಬ್ಲರ್ ಐಕಾನ್‌ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7,89,000ಗಳೊಂದಿಗೆ ಪ್ರಾರಂಭವಾಗುತ್ತದೆ.

ನಾರ್ಥ್ ಸ್ಟಾರ್ ಆಟೋಮೋಟಿವ್ ಜೊತೆ ಕೈಜೋಡಿಸಿದ ಡುಕಾಟಿ

ಪ್ಯಾನಿಗಲೆ ವಿ4 916 ಬೈಕಿನ 25ನೇ ವಾರ್ಷಿಕೋತ್ಸವದ ಆವೃತ್ತಿಯ ಬೆಲೆಯನ್ನು ಭಾರತದ ಎಕ್ಸ್ ಶೋರೂಂ ದರದಂತೆ ರೂ.54,90,000ಗಳೆಂದು ನಿಗದಿಪಡಿಸಲಾಗಿದೆ. ಡುಕಾಟಿಗೆ ಈಗಾಗಲೇ ನಮ್ಮ ದೇಶದಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಬಹಳಷ್ಟು ಜನ ಈ ಬೈಕುಗಳನ್ನು ಖರೀದಿಸುತ್ತಾರೆ. ಈ ಹೊಸ ಡೀಲರ್‍‍ಗಳೊಂದಿಗೆ, ಡುಕಾಟಿ ಹೊಂದಿರುವ ಜನರು ತಮ್ಮ ಬೈಕ್ ಅನ್ನು ಒಂದೇ ಸೂರಿನಡಿ ಪರೀಕ್ಷಿಸಿ ಸರ್ವಿಸ್ ಮಾಡಿಸಿಕೊಳ್ಳ ಬಹುದಾಗಿದೆ.

Most Read Articles

Kannada
Read more on ಡುಕಾಟಿ ducati
English summary
Ducati Partners With North Star Automotive — Aiming Maximum Presence In India - Read in kannada
Story first published: Thursday, July 18, 2019, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X