ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಬಜಾಜ್ ಆಟೋ, ಚೇತಕ್ ಎಲೆಕ್ಟ್ರಿಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈಗಾಗಲೇ ಅನಾವರಣಗೊಂಡಿರುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು, 2020ರ ಜನವರಿಯಿಂದ ಭಾರತದಲ್ಲಿ ಮಾರಾಟ ಮಾಡಲಾಗುವುದು.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಬಿಡುಗಡೆಗೂ ಮುನ್ನ, ಬಜಾಜ್ ಆಟೋ ಕಂಪನಿಯು ಭಾರತದ ಉತ್ತರ ಭಾಗಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಯಾತ್ರೆ ಎಂಬ ಹೆಸರಿನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರಿನ 3000 ಕಿ.ಮೀ ಪ್ರಯಾಣವನ್ನು ಆರಂಭಿಸಿತ್ತು. ಈ ಯಾತ್ರೆಯು ಬಜಾಜ್ ಕಂಪನಿಯ ಪುಣೆ ಘಟಕದಲ್ಲಿ ಮುಕ್ತಾಯವಾಯಿತು.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಈ ಘಟಕದಲ್ಲಿಯೇ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಅನಾವರಣಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಬಜಾಜ್ ಕಂಪನಿಯು, ಎಲೆಕ್ಟ್ರಿಕ್ ಚೇತಕ್ ಆಧಾರದ ಮೇಲೆ ಇನ್ನೂ ಹೆಚ್ಚು ಶಕ್ತಿಶಾಲಿಯಾದ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ತಯಾರಿಸುವುದಾಗಿ ಘೋಷಿಸಿತು.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಹೊಸ ಸ್ಕೂಟರ್ ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಎಂದು ಹೇಳಲಾಗಿದ್ದು, 2020ರ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಆದರೆ, ಬಲಶಾಲಿಯಾದ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಜಾಜ್ ಕಂಪನಿಯಡಿಯಲ್ಲಿ ಮಾರಾಟ ಮಾಡಲಾಗುವುದಿಲ್ಲ.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಬದಲಿಗೆ, ಬಜಾಜ್ ಕಂಪನಿಯು ಈ ಸ್ಕೂಟರ್ ಅನ್ನು ಕೆಟಿಎಂ ಅಥವಾ ಹಸ್ಕ್ ವರ್ನಾ ಹೆಸರಿನಲ್ಲಿ ಬಿಡುಗಡೆಗೊಳಿಸಲು ಬಯಸಿದೆ. ಕೆಟಿಎಂ ಹಾಗೂ ಹಸ್ಕ್ ವರ್ನಾ ಎರಡೂ ಪರ್ಫಾಮೆನ್ಸ್ ಆಧಾರಿತ ಉತ್ಪನ್ನಗಳಿಗೆ ಹೆಸರುವಾಸಿಯಾಗಿವೆ.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಈ ಕಾರಣಕ್ಕಾಗಿ ಅಭಿವೃದ್ಧಿಯಾಗಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅದೇ ಥೀಮ್ ಅನ್ನು ಮುಂದುವರೆಸುವ ಸಾಧ್ಯತೆಗಳಿವೆ. ಹೆಚ್ಚು ಪವರ್, ವಿಸ್ತೃತ ಶ್ರೇಣಿ ಹಾಗೂ ಹೆಚ್ಚುವರಿ ಫೀಚರ್‍‍ಗಳನ್ನು ಹೊಂದಿರಲಿದೆ.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಈ ಹೊಸ ಎಲೆಕ್ಟ್ರಿಕ್ ವಾಹನವು ಹೊಸ ಮಾದರಿಯಾಗಿರಲಿದೆ. ಹೊಸ ಹೆಸರು ಹಾಗೂ ಹೆಚ್ಚು ಪ್ರೀಮಿಯಂ ಬೆಲೆಯನ್ನು ಹೊಂದಿರುತ್ತದೆ. ಆದರೆ, ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನಂತೆಯೇ ಅದೇ ಪ್ಲಾಟ್‍‍ಫಾರಂನಲ್ಲಿ ಮುಂದುವರೆಯುವುದಾಗಿ ಬಜಾಜ್ ಕಂಪನಿಯು ತಿಳಿಸಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಇನ್ನು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ. ಸಾಕಷ್ಟು ಜನರು ಈ ಸ್ಕೂಟರಿನ ವಿನ್ಯಾಸವನ್ನು ವೆಸ್ಪಾ ಸ್ಕೂಟರಿನ ವಿನ್ಯಾಸಕ್ಕೆ ಹೋಲಿಸಿದ್ದಾರೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಇತ್ತೀಚೆಗಷ್ಟೇ, ಟಾಟಾ ಮೋಟಾರ್ಸ್‌ನ ಡಿಸೈನ್ ಹೆಡ್, ಪ್ರತಾಪ್ ಬೋಸ್ ಕೂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಸ್ಟೈಲಿಂಗ್ ಅನ್ನು ಟೀಕಿಸಿದ್ದರು. ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಅನ್ನು ಐಪಿ -67 ವಾಟರ್ ರೆಸಿಸ್ಟೆನ್ಸ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‍‍ನೊಂದಿಗೆ ಮಾರಾಟ ಮಾಡಲಾಗುವ ಬಗ್ಗೆ ಮಾತ್ರ ಮಾಹಿತಿಯನ್ನು ನೀಡಲಾಗಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಎಲೆಕ್ಟ್ರಿಕ್ ಮೋಟರಿಗೆ ಜೋಡಿಸಲಾಗುವುದು.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಈ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 90 ಕಿ.ಮೀವರೆಗೂ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಪೋರ್ಟ್ ಹಾಗೂ ಇಕೊ ಎಂಬ ಎರಡು ರೈಡಿಂಗ್ ಮೋಡ್‍‍ಗಳಲ್ಲಿ ಮಾರಾಟ ಮಾಡಲಾಗುವುದು.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಕಂಪನಿಯು ಸದ್ಯಕ್ಕೆ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವತ್ತ ಗಮನ ಹರಿಸಿದೆ. ಹೊಸ ಹಾಗೂ ಹೆಚ್ಚು ಬಲಶಾಲಿಯಾದ ಎಲೆಕ್ಟ್ರಿಕ್ ಸ್ಕೂಟರ್ ಇನ್ನೂ ಅಭಿವೃದ್ಧಿಯ ಆರಂಭಿಕ ಹಂತದಲ್ಲಿದೆ.

ಬಲಿಷ್ಟ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಿದೆ ಬಜಾಜ್

ಈ ಹೊಸ ಸ್ಕೂಟರ್ ಅನ್ನು ಪ್ರದರ್ಶಿಸಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಆದರೆ, ಹೆಚ್ಚು ಹೆಚ್ಚು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿರುವುದರಿಂದ, ಇದು ಸರಿಯಾದ ಬೆಳವಣಿಗೆಯಾಗಿದೆ.

Most Read Articles

Kannada
English summary
New electric scooter from bajaj more powerful than chetak - Read in Kannada
Story first published: Monday, November 18, 2019, 10:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X