ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಹೋಂಡಾ ಮೋಟಾರ್‍‍ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ತಮ್ಮ ಭಾರತ್ ಸ್ಟೇಜ್ VI (BS6) ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿದ್ದು, ಇದೇ ತಿಂಗಳ ಅಂದರೆ ಜೂನ್ 12 ರಂದು ಮಾರುಕಟ್ಟೆಗೆ ಪರಿಚಯಿಸಲಿದೆ.

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಆಟೋ ಎನ್‍ಡಿಟಿವಿ ವರದಿ ಪ್ರಕಾರ ಆದ್ರೆ ನವೀಕರಣಗೊಂಡು ಬಿಡುಗಡೆಗೊಳ್ಳುತ್ತಿರುವ ಹೊಸ ಹೋಂಡಾ ಆಕ್ಟೀವಾ ಸ್ಕೂಟರ್ ದೇಶದಲ್ಲಿ ಲಭ್ಯವಿರಲಿರುವ ಮೊದಲನೆಯ ಬಿಎಸ್-6 ಎಂಜಿನ್ ಆಧಾರಿತ ವಾಹನವೇ ಎಂದು ಇನ್ನು ನಿಖರವಾದ ಮಾಹಿತಿಯು ತಿಳಿದು ಬಂದಿಲ್ಲ. ಆದರೆ ಆರನೆಯ ತಲೆಮಾರಿನ ಹೊಸ ಹೋಂಡಾ ಆಕ್ಟಿವಾ ಸ್ಕೂಟರ್ ದೇಶದಲ್ಲಿನ ಮೊದಲ ಬಿಎಸ್-6 ಎಂಜಿನ್ ಆಧಾರಿತ ಸ್ಕೂಟರ್ ಎಂದು ಊಹಿಸಿಕೊಳ್ಳಬಹುದಾಗಿದೆ.

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಇನ್ನು ಕೆಲವು ದಿನಗಳ ಹಿಂದೆಯೆ ಚಿತ್ರದ ವಿಷಯಕ್ಕೆ ಬಂದರೆ ಹೊಸ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಆಕ್ಟೀವಾ 110ಸಿಸಿ ಸ್ಕೂಟರ್‍‍ನಿಂದ ಪಡೆದ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಅನ್ನು ನೀಡಲಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಎದುರಾಳಿಯಾದ ಟಿವಿಎಸ್ ಜುಪಿಟರ್ ಸ್ಕೀಟರ್‍‍ಗೆ ಟಾಂಗ್ ನೀಡಲು ಸಿದ್ಧವಾಗುವ ಹಾಗೆ ಕಾಣಿಸುತ್ತದೆ.

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಆದರೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್‍‍‍ನಲ್ಲಿ ಈ ಬಾರಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ನೀಡಲಾಗಿದ್ದು, ಈ ಅಪ್ಡೇಟ್ ಅನ್ನು ಆಕ್ಟೀವಾ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದರು ಎಂದರೆ ತಪ್ಪಾಗುವುದಿಲ್ಲ. ಈ ಅಪ್ಡೇಟ್ ಕಳಪೆ ರಸ್ತೆಯಲ್ಲಿ ಹಾಗು ಬ್ರೇಕಿಂಗ್ ಸಿಸ್ಟಂಗಾಗಿ ಉತ್ತಮವೆಂದು ಹೇಳಬಹುದು.

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸ್ಕೂಟರ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಸಿಕ್ಕ ಮಾಹಿತಿಗಳ ಪ್ರಕಾರ ಈ ಬಾರಿ ಎಲ್ಇಡಿ ಲೈಟ್ಸ್ ಮತ್ತು ಎಲ್ಇಡಿ ಡಿಆರ್‍ಎಲ್, ಮುಂಭಾಗದಲ್ಲಿ ಡಿಸ್ಕ್ ಬ್ರೆಕ್, ಹಿಂಭಾಗದಲ್ಲಿ ಡ್ರಂ ಬ್ರೇಕ್ ಮತ್ತು ಸಿಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಹೊಸದಾಗಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಒದಗಿಸಲಾಗಿದ್ದು, ಇದರಲ್ಲಿನ ದೊಡ್ಡ ಗಾತ್ರದ ಎಲ್‍ಸಿಡಿ ಡಿಜಿಟಲ್ ಡಿಸ್ಪ್ಲೇಯಲ್ಲಿ ಪ್ಯುಯಲ್ ಲೆವೆಲ್, ಟ್ರಿಪ್ ಮೀಟರ್ ಮತ್ತು ಚಾಲಕನಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀವಿಲ್ಲಿ ಹೊಸ ಆಕ್ಟೀವಾ 6ಜಿ ಸ್ಕೂಟರ್ ಪಡೆದುಕೊಂಡಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಇದೀಗ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೊಸ ನಿಯಮವನ್ನು ಅನುಷ್ಠಾನ ತರಲು ಮುಂದಾಗುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಏಪ್ರಿಲ್ 1, 2019ರಿಂದ ಅನ್ವಯವಾಗುವಂತೆ ಬಿಎಸ್-4 ಎಂಜಿನ್‌ಗಳನ್ನು ಸಹ ನಿಷೇಧಗೊಳಿಸಿ ಸುಧಾರಿತ ಮಾದರಿಯ ಬಿಎಸ್-6 ಎಂಜಿನ್ ಜಾರಿಗೆ ತರಲು ಸಜ್ಜಾಗುತ್ತಿದೆ. ಹೀಗಾಗಿ ಹೊಸ ನಿಯಮಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಭವಿಷ್ಯದ ವಾಹನಗಳನ್ನು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸುತ್ತಿವೆ.

MOST READ: ಫಾಸ್ಟ್‌‌ಟ್ಯಾಗ್ ಖರೀದಿಸಲು ಹೊಸ ವ್ಯವಸ್ಥೆ ತೆರೆದ ಹೈವೇ ಅಥಾರಿಟಿ

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಹೋಂಡಾ ಇಂಡಿಯಾ ಸಹ ಇದೇ ನಿಟ್ಟಿನಲ್ಲಿ ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಟಿವಾ ಮಾದರಿಗಳನ್ನು ಉನ್ನತಿಕರಣ ಮಾಡುತ್ತಿದ್ದು, ಮುಂಬರುವ 2019ರ ವೇಳೆಗೆ ಬಿಡುಗಡೆಯಾಗಲಿರುವ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಬಿಎಸ್-6 ಪ್ರೇರಿತ ಫ್ಯೂಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಜ್ಜುಗೊಳಿಸಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಜೂನ್ 12ರಂದು ಬಿಡುಗಡೆಯಾಗಲಿದೆ ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟೀವಾ

ಇದರಿಂದ ಹೊಸ ಸ್ಕೂಟರ್ ಮೈಲೇಜ್ ಮತ್ತು ಎಂಜಿನ್ ಕಾರ್ಯಕ್ಷಮತೆ ಸಾಕಷ್ಟು ಸುಧಾರಣೆಯಾಗಿದ್ದು, ಮೂಲಗಳ ಪ್ರಕಾರ ಹೊಸ ಎಂಜಿನ್ ಜೋಡಣೆಯಿಂದಾಗಿ ಆಕ್ಟಿವಾ 6ಜಿ ಸ್ಕೂಟರ್ ಮೈಲೇಜ್ ಪ್ರಮಾಣವು ಆಕ್ಟಿವಾ 5ಜಿ ಸ್ಕೂಟರ್ ಮೈಲೇಜ್‌ಗಿಂತಲೂ ಶೇ.10ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.

Most Read Articles

Kannada
English summary
New Honda Activa BS-VI Launch Details Revealed. Read In Kannada
Story first published: Saturday, June 1, 2019, 9:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X