ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಬಿಡುಗಡೆಗೊಂಡು ಸುಮಾರು 8 ತಿಂಗಳ ನಂತರ ಇತ್ತೀಚೆಗಷ್ಟೇ ಜಾವಾ ಹೊಸ ಬೈಕ್‌ಗಳ ವಿತರಣೆಯು ವೇಗ ಪಡೆದುಕೊಂಡಿದ್ದು, ಹೊಸ ಬೈಕ್‌ಗಳನ್ನು ಖರೀದಿ ಮಾಡುತ್ತಿರುವ ಗ್ರಾಹಕರು ಖುಷಿಯಾಗಿರುವುದಕ್ಕಿಂತ ಹೆಚ್ಚು ಜಾವಾ ಸಂಸ್ಥೆಯ ಮೇಲೆ ಅಸಮಾಧಾನಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಹೌದು, ಜಾವಾ ಹೊಸ ಬೈಕ್‌ಗಳ ಬಿಡುಗಡೆಯ ದಿನದಿಂದಲೂ ಇದುವರೆಗೂ ಕಂಪನಿ ಮತ್ತು ಗ್ರಾಹಕರ ನಡುವೆ ಕೆಲವು ಕಾರಣಾಂತರಗಳಿಂದ ಅಸಮಾಧಾನ ಹೆಚ್ಚಾಗುತ್ತಲೇ ಇದ್ದು, ಇದೀಗ ಬೈಕ್ ವಿತರಣೆ ಪಡೆದಿರುವ ಗ್ರಾಹಕರು ಮತ್ತೆ ಸಿಡಿದ್ದೆದ್ದಿದ್ದಾರೆ. ಇಷ್ಟು ದಿನಗಳ ಕಾಲ ಬೈಕ್ ವಿತರಣೆ ಯಾವಾಗ ಎಂದು ಕೇಳುತ್ತಿದ್ದ ಗ್ರಾಹಕರು ಇದೀಗ ಕಳಪೆ ಗುಣಮಟ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಜಾವಾ ಸಂಸ್ಥೆಗೆ ಮುಜುಗರ ಉಂಟುಮಾಡಿದೆ.

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಜಾವಾ 42 ಬೈಕ್ ವಿತರಣೆ ಪಡೆದುಕೊಂಡಿರುವ ಗ್ರಾಹಕರೊಬ್ಬರು ಹೊಸ ಬೈಕಿನ ಗುಣಮಟ್ಟದ ಬಗ್ಗೆ ಚಕಾರವೆತ್ತಿದ್ದು, ಬೈಕ್ ಖರೀದಿಸಿ ಕೇವಲ 20 ದಿನಗಳಲ್ಲಿ ಬೀಡಿಭಾಗಗಳು ತುಕ್ಕು ಹಿಡಿಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಈ ಕುರಿತು ಫೇಸ್‌ಬುಕ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಾವಾ ಬೈಕ್ ಮಾಲೀಕರೊಬ್ಬರು, ಕಳೆದ 20 ದಿನಗಳ ಹಿಂದೆ ಖರೀದಿ ಮಾಡಲಾದ ಜಾವಾ 42 ಬೈಕಿನ ಬೀಡಿಭಾಗಗಳು ತುಕ್ಕು ಹಿಡಿಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಕಂಪನಿ ವಿರುದ್ಧ ಯಾವ ಕ್ರಮಕೈಗೊಳ್ಳಬೇಕೆಂಬ ಪ್ರಶ್ನೆ ಮಾಡಿದ್ದಾರೆ.

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಹೊಸ ಬೈಕಿನ ಹ್ಯಾಂಡಲ್ ಬಾರ್ ಬೋಲ್ಟ್‌, ಎಕ್ಸಾಸ್ಟ್ ಮುಂಭಾಗ, ಡಿಜಿಟಲ್ ಕಸ್ಟರ್ ಬಳಿಯಲ್ಲಿ ಹಾಗೂ ಸೈಡ್ ಸ್ಯಾಂಡ್ ಬಳಿಯ ವ್ಡೆಡಿಂಗ್ ಕೂಡಾ ತುಕ್ಕು ಹಿಡಿಯುತ್ತಿದ್ದು, ಹೊಸ ಬೈಕ್ ಈಗಾಗಲೇ ವರ್ಷದ ಹಿಂದೆ ಖರೀದಿ ಮಾಡಿದ ಹಾಗೆ ಕಾಣುತ್ತಿರುವುದು ಗ್ರಾಹಕರ ಆಕ್ರೋಶವನ್ನು ಹೆಚ್ಚಿಸುತ್ತಿದೆ. ಆದ್ರೆ ಬೈಕ್ ಎಲ್ಲಿ ಪಾರ್ಕ್ ಮಾಡಿದ್ದರು ಮತ್ತು ಮಳೆಗಾಲ ಸಂದರ್ಭದಲ್ಲಿ ಯಾವ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು ಎನ್ನುವುದರ ಬಗೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಆದರೂ ಹೊಸ ಬೈಕ್ ಇಷ್ಟು ಬೇಗ ತುಕ್ಕು ಹಿಡಿಯುತ್ತಿರುವುದು ಸಹಜವಾಗಿಯೇ ಕೆಲವು ಅನುಮಾನಗಳಿಗೆ ಕಾರಣವಾಗುತ್ತಿದ್ದು, ಬೈಕ್‌ಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಕಳಪೆ ಗುಣಮಟ್ಟದ ಬೀಡಿಭಾಗಗಳನ್ನು ಬಳಕೆ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡದೇ ಇರಲಾರದು.

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಇನ್ನು ಜಾವಾ ಬೈಕ್‌ಗಳು ದಶಕಗಳ ಹಿಂದೆ ಭಾರತದಲ್ಲಿ ಅಬ್ಬರಿಸಿ ಮರೆಯಾಗಿದ್ದಲ್ಲದೆ ಇದೀಗ ನವ ವಿನ್ಯಾಸ ಹಾಗೂ ನೂತನ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜಾವಾ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಬೈಕ್ ನಿರ್ಮಿಸುವಲ್ಲಿ ಮಹೀಂದ್ರಾ ಅಂಗಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಯಶಸ್ವಿಯಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ಒಟ್ಟು ಮೂರು ಹೊಸ ಬೈಕ್‌ಗಳನ್ನು ಹೊರತಂದಿದ್ದು, ಇದರಲ್ಲಿ ಜಾವಾ, ಜಾವಾ 42 ಬೈಕ್‌ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪೆರಾಕ್ ಎನ್ನುವ ಕಸ್ಟಮ್ ಮಾದರಿಯನ್ನು ಕೇವಲ ಅನಾವರಣಗೊಳಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

MOST READ: ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಹೊಸ ಬೈಕ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೆಟ್ರೋ ಜಾವಾ ಮಾದರಿಗೆ ರೂ. 1.64 ಲಕ್ಷ, ಜಾವಾ 42 ಮಾದರಿಗೆ ರೂ. 1.55 ಲಕ್ಷ ಮತ್ತು ಅನಾವರಣ ಮಾಡಲಾದ ಜಾವಾ ಪೆರಾಕ್ ಬೈಕಿಗೆ ರೂ. 1.89 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಇದರ ಹೊರತಲಾಗಿ ಗ್ರಾಹಕರು ತಮ್ಮ ಹೊಸ ಬೈಕ್‌ಗಳಿಗೆ ಹೆಚ್ಚುವರಿ ದರ ಪಾವತಿಸಿ ಬೇಡಿಕೆ ಅನ್ವಯ ಆಕ್ಸ್‌ಸರಿಸ್ ಪಡೆದುಕೊಳ್ಳಬಹುದಾಗಿದೆ.

MOST READ: ವ್ಯಾಟ್ ಪ್ರಮಾಣದಲ್ಲಿ ಹೆಚ್ಚಳ- ಒಂದೇ ಬಾರಿಗೆ ಗಗನಕ್ಕೇರಿದ ಪೆಟ್ರೋಲ್ ಬೆಲೆ

ಖರೀದಿ ಮಾಡಿ ಕೇವಲ 20 ದಿನಗಳಲ್ಲಿ ಬಯಲಾಯ್ತು ಜಾವಾ ಹೊಸ ಬೈಕ್‌ಗಳ ಬಂಡವಾಳ..!

ಇದರಲ್ಲಿ ಬಾಬ್ಬರ್ ವಿನ್ಯಾಸದ ಜಾವಾ ಪೆರಾಕ್ ಬೈಕ್ ಮಾದರಿಯು 334ಸಿಸಿ ಎಂಜಿನ್ ಪಡೆದುಕೊಂಡಿದ್ದು, ಬಿಎಸ್ 6 ಎಂಜಿನ್ ಪ್ರೇರಣೆಯೊಂದಿಗೆ 30-ಬಿಎಚ್‌ಪಿ ಮತ್ತು 31-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿರಲಿದೆ. ಇದು ಜಾವಾ ಸಂಸ್ಥೆಯಿಂದಲೇ ಮಾಡಿಫೈಗೊಂಡ ಮೊದಲ ಬೈಕ್ ಮಾದರಿಯಾಗಿದ್ದು, ಇದೇ ವರ್ಷ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

Source: Jawa owners & Lovers

Most Read Articles

Kannada
English summary
Jawa owner has compalined of his brand new bike is getting rust in less than 20 days, since delivery.
Story first published: Wednesday, August 21, 2019, 19:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X