ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ಕವಾಸಕಿ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ ಎಂ‍‍ವೈ ನಿಂಜಾ ಝ‍ಎಕ್ಸ್ 10ಆರ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.13.99 ಲಕ್ಷಗಳಾಗಿದೆ. ವಿನ್ಯಾಸದಲ್ಲಿ ಹಾಗೂ ಫೀಚರ್‍‍ಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ದೇಶಿಯವಾಗಿ ನಿರ್ಮಿಸಿರುವ ಹೊಸ ಕವಾಸಕಿ ನಿಂಜಾ ಝಡ್‍ಎಕ್ಸ್ 10 ಆರ್ ಬೈಕಿನ ಬೆಲೆಯು, ಮೊದಲಿದ್ದ ಇದೇ ಮಾದರಿಯ ಬೈಕಿಗಿಂತ ರೂ.31,000ಗಳಷ್ಟು ಕಡಿಮೆಯಾಗಲಿದೆ. ಝಡ್‍ಎಕ್ಸ್ 10ಆರ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ದೊರೆಯುವ ಸೂಪರ್ ಬೈಕುಗಳಲ್ಲಿಯೇ ಕಡಿಮೆ ಬೆಲೆಯನ್ನು ಹೊಂದಿದೆ. ಆದರೆ ಹೆಚ್ಚು ಫೀಚರ್‍‍ಗಳನ್ನು ಹೊಂದಿದೆ. ಈ ಬೈಕಿಗಾಗಿ ಏಪ್ರಿಲ್ ತಿಂಗಳಿನಿಂದಲೇ ಬುಕ್ಕಿಂಗ್ ಆರಂಭವಾಗಿದೆ. ಮುಂಗಡ ಹಣವಾಗಿ ರೂ.1.5 ಲಕ್ಷಗಳನ್ನು ಪಡೆಯಲಾಗುತ್ತಿದೆ. ಮೊದಲ ಹಂತದ ಬುಕ್ಕಿಂಗ್ ಏಪ್ರಿಲ್ 26 ರಂದು ಆರಂಭವಾಗಿ ಮೇ 30 ರಂದು ಮುಕ್ತಾಯಗೊಳ್ಳಲಿದೆ.

ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ಜೂನ್ ಮಧ್ಯ ಭಾಗದಿಂದ ಈ ಬೈಕನ್ನು ಗ್ರಾಹಕರಿಗೆ ವಿತರಿಸಲಾಗುವುದು. ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್ ಬೈಕಿನಲ್ಲಿ ಹಲವಾರು ಅಂಶಗಳನ್ನು ಅಪ್ ಗ್ರೇಡ್ ಮಾಡಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಮೆಕಾನಿಕಲ್ ಅಂಶಗಳು ಸೇರಿವೆ.

ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್ ಬೈಕಿನಲ್ಲೂ ಸಹ 998 ಸಿಸಿಯ ಲಿಕ್ವಿಡ್ ಕೂಲ್ ನ ಇನ್-ಲೈನ್ 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಆದರೆ ಈಗ ಮೊದಲಿಗಿಂತ ಹೆಚ್ಚಿನ ಪವರ್ ಆದ 203 ಬಿಹೆಚ್‍‍ಪಿಯನ್ನು 13,500 ಆರ್‍‍ಪಿ‍ಎಂನಲ್ಲಿ ಉತ್ಪಾದಿಸಿದರೆ, 115 ಎನ್‍ಎಂ ಟಾರ್ಕ್ ಅನ್ನು 11,200 ಆರ್‍‍ಪಿ‍ಎಂನಲ್ಲಿ ಉತ್ಪಾದಿಸುತ್ತದೆ.

ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ಈ ಎಂಜಿನ್‍‍ಗೆ ಹೊಂದಿಕೊಂಡಂತೆ 6 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್ ಬೈಕಿನ ಮುಂಭಾಗದಲ್ಲಿ 43 ಎಂಎಂ ನ ಇನ್ವರ್ಟೆಡ್ ಫೋರ್ಕ್‍‍ಗಳಿದ್ದರೆ, ಹಿಂಭಾಗದಲ್ಲಿ ಮೊನೊಶಾಕ್‍‍ಗಳಿದ್ದು, ಎರಡರಲ್ಲೂ ಪ್ರಿ ಲೋಡ್ ಅಡ್ಜಸ್ಟಾಬಿಲಿಟಿ ಹಾಗೂ ಡ್ಯಾಂಪಿಂಗ್‍‍ಗಳಿವೆ. ಈ ಬೈಕಿನ ಮುಂಭಾಗದಲ್ಲಿ 330 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‍‍ಗಳಿದ್ದರೆ, ಹಿಂಭಾಗದಲ್ಲಿ 220 ಎಂಎಂ ಸಿಂಗಲ್ ಬ್ರೆಂಬೊ ಡಿಸ್ಕ್ ಬ್ರೇಕ್‍‍ಗಳಿವೆ.

MOST READ: ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್ ಬೈಕಿನಲ್ಲಿ ವಾಲ್ವ್ ಆಕ್ಚುಯೇಷನ್ ಇದ್ದು, ಇದನ್ನು ಕವಾಸಕಿ ವರ್ಲ್ಡ್ ಸೂಪರ್ ಬೈಕಿನ ಎಂಜಿನಿಯರ್‍‍ಗಳ ತಂಡ ಅಭಿವೃದ್ಧಿಪಡಿಸಿದೆ. ಈ ಬೈಕಿನಲ್ಲಿರುವ ಇತರ ಫೀಚರ್‍‍ಗಳೆಂದರೆ ಸ್ಪೋರ್ಟ್ ಕವಾಸಕಿ ಟ್ರಾಕ್ಷನ್ ಕಂಟ್ರೋಲ್ (ಎಸ್-ಕೆಟಿಸಿ), ಕವಾಸಕಿ ಲಾಂಚ್ ಕಂಟ್ರೋಲ್ ಮೋಡ್ (ಕೆ‍ಎಲ್‍‍ಸಿ‍ಎಂ), ಕವಾಸಕಿ ಕಾರ್ನರಿಂಗ್ ಮ್ಯಾನೇಜ್‍‍ಮೆಂಟ್ ಫಂಕ್ಷನ್ (ಕೆಸಿ‍ಎಂಎಫ್), ಕವಾಸಕಿ ಎಂಜಿನ್ ಬ್ರೇಕ್ ಕಂಟ್ರೋಲ್ (ಕೆ‍ಇ‍‍ಬಿ‍‍ಸಿ), ಎಲೆಕ್ಟ್ರಾನಿಕ್ ಥ್ರಾಟಲ್ ವಾಲ್ವ್, ಒಹ್ಲಿನ್ಸ್ ಎಲೆಕ್ಟ್ರಾನಿಕ್ ಸ್ಟೀಯರಿಂಗ್ ಡ್ಯಾಂಪರ್, 3 ಮೋಡ್ ಪವರ್ ಸೆಲೆಕ್ಷನ್ ಮತ್ತು ಎ‍‍ಬಿ‍ಎಸ್.

ಬಿಡುಗಡೆಯಾದ ಮೇಡ್ ಇನ್ ಇಂಡಿಯಾ ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕವಾಸಕಿ ನಿಂಜಾ ಝಡ್‍ಎಕ್ಸ್ 10 ಆರ್ ದೇಶಿಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುತ್ತಿರುವ ಲೀಟರ್ ಕ್ಲಾಸ್ ಬೈಕ್ ಆಗಿದೆ. ಕವಾಸಕಿ ನಿಂಜಾ ಝಡ್‍ಎಕ್ಸ್ 10ಆರ್, ಯಮಹಾದ ವೈ‍‍ಝಡ್‍ಎಫ್ - ಆರ್1, ಬಿ‍ಎಂ‍‍ಡಬ್ಲ್ಯು ವಿನ ಎಸ್ 1000 ಆರ್‍ಆರ್ ಮತ್ತು ಡುಕಾಟಿಯ ಪ್ಯಾನಿಗಲ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2020 ‘Locally-Assembled’ Kawasaki Ninja ZX-10R Launched In India — Priced At Rs 13.99 Lakh - Read in kannada
Story first published: Saturday, May 18, 2019, 18:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X