ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪರ್ಫಾರ್ಮೆನ್ಸ್ ಬೈಕ್‍ಗಳಲ್ಲಿ ಜನಪ್ರೀಯತೆಯನ್ನು ಪಡೆಯುತ್ತಿರುವ ಕೆಟಿಎಂ ಸಂಸ್ಥೆಯು ಇಂದು ತಮ್ಮ ಆರ್‍‍ಸಿ 125 ಎಬಿಎಸ್ ಬೈಕ್ ಅನ್ನು ಕೆಲವು ದಿನಗಳ ಹಿಂದಷ್ಟೆ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ಈ ಬೈಕಿನ ಬೆಲೆಯನ್ನು ರೂ. 1.47 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಈ ಬೈಕಿನ ಖರೀದಿಗಾಗಿ ಡೀಲರ್‍‍ಗಳು ಬುಕ್ಕಿಂಗ್ ಅನ್ನು ಸ್ವೀಕರಿಸಲಾಗುತ್ತಿದ್ದು, ರಶ್‍ಲೇನ್ ವರದಿಗಳ ಪ್ರಕಾರ ಕೆಲ ಡೀಲರ್‍‍ಗಳು ವಿತರಣೆಯನ್ನು ಸಹ ಪ್ರಾರಂಭಿಸಲಾಗಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಆಸಕ್ತ ಗ್ರಾಹಕರು ಈ ಬೈಕಿನ ಖರೀದಿಗಾಗಿ ನಿಮ್ಮ ಸಮೀಪದಲ್ಲಿರುವ ಕೆಟಿಎಂ ಡೀಲರ್‍ ಅನ್ನು ಸಂಪರ್ಕಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಬಿಡುಗಡೆಯಾದ ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ ಮಾದರಿಯು ತಮ್ಮ ಮೋಟೋಜಿಪಿ ಮಶೀನ್ ಬೈಕಿನಿಂದ ವಿನ್ಯಾಸವನ್ನು ಆಧರಿಸಲಾಗಿದ್ದು, ಈ ಬೈಕ್ ಫುಲ್ಲಿ ಫೈರ್ಡ್ ಮೋಟಾರ್‍‍ಸೈಕಲ್ ಆಗಿ ಆಕಾರವನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಟ್ರೆಲ್ಲಿಸ್ ಫ್ರೇಮ್ ಅನ್ನು ನೀಡಲಾಗಿದ್ದು, ಟ್ರಿಪಲ್ ಕ್ಲಾಂಪ್ ಹ್ಯಾಂಡಲ್‍‍ಬಾರ್ ಹಾಗು ಅಪ್‍ಸೈಡ್ ಡೌನ್ ಫೋರ್ಕ್ಸ್ ಅನ್ನು ಒದಗಿಸಲಾಗಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಎಂಜಿನ್ ಸಮಾರ್ಥ್ಯ

ಕಡಿಮೆ ಹಂತರ ಪರ್ಫಾರ್ಮೆನ್ಸ್ ಪ್ರಿಯರನ್ನು ಆಕಸಲು ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ 124ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14.3 ಬಿಹೆಚ್‍ಪಿ ಮತ್ತು 12 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಕೆಟಿಎಂ ಆರ್‍‍ಸಿ 125 ಎಬಿಎಸ್ ಬೈಕ್ ಒಟ್ಟಾರೆಯಾಗಿ 1,977 ಎಂಎಂ ಅಗಲವನ್ನು ಪಡೆದುಕೊಂಡಿದ್ದು, 835ಎಂಎಂ ಸೀಟ್ ಹೈಟ್ ಹಾಗು 157ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಈ ಬೈಕ್ 1,341 ಎಂಎಂನ ವ್ಹೀಲ್ ಬೆಸ್ ಅನ್ನು ಹೊಂದಿದ್ದು, 9.5 ಲೀಟರ್ ಫ್ಯುಯೆಲ್ ಟ್ಯಾಂಕ್ ಅನ್ನು ಹೊಂದಿರುವ ಈ ಬೈಕ್ 154.2 ಕಿಲೋಗ್ರಾಂನ ತೂಕವನ್ನು ಪಡೆದಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಹಾಗೆಯೇ ಆರ್‌ಸಿ 200 ಮಾದರಿಯಲ್ಲಿ ಚಾರ್ಸಿ, ಸಸ್ಪೆನ್ಷನ್, ಚಕ್ರಗಳು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಬಾಡಿ ಪ್ಯಾನೆಲ್ ಸಹ ಆರ್‌ಸಿ 125ನಲ್ಲಿದ್ದು, ಬೈಕಿನ ಸ್ಪೋಟಿ ಲುಕ್ ಹೆಚ್ಚಿಸುವುದರ ಜೊತೆಗೆ ಎಂಜಿನ್ ರಕ್ಷಣೆಗಾಗಿ ಸ್ವಿಂಗ್ ಆರ್ಮ್ ಸೌಲಭ್ಯವನ್ನು ಜೋಡಿಸಲಾಗಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಈ ಮೂಲಕ 3.5 ಸೇಕೆಂಡುಗಳಲ್ಲಿ ಸೊನ್ನೆಯಿಂದ 60 ಕಿ.ಮಿ ವೇಗ ಪಡೆದುಕೊಳ್ಳುವ ಗುಣಹೊಂದಿರುವ ಆರ್‌ಸಿ 125 ಬೈಕ್ ಮಾದರಿಯು ಗಂಟೆಗೆ 109ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಉತ್ತಮ ಪರ್ಫಾಮೆನ್ಸ್‌ ನೀಡಲಿದ್ದು, ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, 17-ಇಂಚಿನ ಅಲಾಯ್ ವೀಲ್ಹ್ ಸೇರಿದಂತೆ ಅಂಡರ್ ಬೆಲ್ಲಿ ಎಕ್ಸಾಸ್ಟ್ ಸೌಲಭ್ಯ ಹೊಂದಿರಲಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಸೇಫ್ಟಿ ಫೀಚರ್ಸ್

ಮೊದಲೇ ಹೇಳಿರುವ ಹಾಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 10 ವಿಧಗಳಲ್ಲಿ ಅಡ್ಜಸ್ಟ್ ಮಾದಿಕೊಳ್ಳಬಹುದಾದ ಮೊನೊಶಾಕ್ ರಿಯರ್ ಅಬ್ಸಾರ್ಬರ್ ಅನ್ನು ಈ ಬೈಕ್ ಹೊಂದಿದ್ದು, ಮುಂಭಾಗದಲ್ಲಿ 300ಎಂಎಂ ಹಾಗು ಹಿಂಭಾಗದಲ್ಲಿ 230ಎಂಎಂನ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಹಾಗೆಯೆ ಬಾಷ್‍ನಿಂದ ಪದೆದ ಸಿಂಗಲ್ ಚಾನಲ್ ಎಬಿಎಸ್ ಅನ್ನು ಸಹ ಈ ಬೈಕ್‍ನಲ್ಲಿ ಅಳವಡಿಸಲಾಗಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಕೆಟಿಎಂ ಆರ್‍‍ಸಿ 125 ಬೈಕ್ ಸಾಧಾರಣ ಕೆಟಿಎಂ 125 ಬೈಕ್‍ಗಿಂತಲೂ ಬೆಲೆಯಲ್ಲಿ ಸುಮಾರು 17,000 ಅಧಿಕವಿದ್ದು, ಆರ್‍‍ಸಿ 200 ಬೈಕಿಗಿಂತಲೂ ಕಡಿಮೆ ಬೆಲೆಯಲ್ಲಿ ಈ ಬೈಕ್ ಲಭ್ಯವಿದೆ ಅಂತಾನೇ ಹೇಳ್ಬೋದು. ಈ ಬೆಲೆಯನ್ನು ಪಡೆದ ಕೆಟಿಎಂ ಆರ್‍‍ಸಿ 125 ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಯಮಹಾ ಆರ್‍15 ವಿ 3.0 ಬೈಕ್‍ಗೆ ಪೈಪೋಟಿ ನೀಡಲಿದೆ.

ಹೊಸ ಕೆಟಿಎಂ ಆರ್‍‍ಸಿ 125 ಬೈಕ್ ವಿತರಣೆ ಶುರು

ಕೆಟಿಎಂ ಸಂಸ್ಥೆಯಲ್ಲಿನ ಬೈಕ್‍ಗಳಲ್ಲಿ ಸಧ್ಯಕ್ಕೆ ಡ್ಯೂಕ್ 125 ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದುಮ್ ಪ್ರತೀ ತಿಂಗಳಿನಲ್ಲಿ ಸುಮಾರು 2000ಕ್ಕು ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆಯುತ್ತಿದೆ. ಕೆಟಿಎಂ ಡ್ಯೂಕ್ 125 ಬೈಕ್ ಎಕ್ಸ್ ಶೋರುಂ ಪ್ರಕಾರ ರೂ. 1.30 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿರುವ ಯಮಹಾ ಎಂಟಿ15 ಬೈಕ್‍ಗಳಿಗೆ ಪೋಪೋಟಿಯನ್ನು ನೀಡುತ್ತಿದೆ.

2018ರ ನವೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿದ್ದ ಡ್ಯೂಕ್ 125 ಮಾದರಿಯು ಆರಂಭದಲ್ಲಿ ರೂ. 1.18 ಲಕ್ಷದಿಂದ ಸದ್ಯ ರೂ.1.30 ಲಕ್ಷಕ್ಕೆ ಏರಿಕೆಯಾಗಿದ್ದು, 124.7-ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 14.3-ಬಿಎಚ್‌ಪಿ ಮತ್ತು 12-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಪಡೆದುಕೊಂಡಿದೆ.

Most Read Articles

Kannada
Read more on ಕೆಟಿಎಂ ktm
English summary
New KTM RC 125 Bike Deliveries Started. Read In Kannada
Story first published: Tuesday, June 25, 2019, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X