ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ವಿಭಾಗವು ಯಶಸ್ವಿಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಟಿವಿಎಸ್ ಸಂಸ್ಥೆಯು ತಮ್ಮ ರೇಡಿಯಾನ್ ಬೈಕ್‍ಗಳನ್ನು ಕಳೆದ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಬೈಕಿನ ಮೈಲೇಜ್ ಮತ್ತು ವಿನ್ಯಾಸಕ್ಕೆ ತಲೆಬಾಗಿದ ಗ್ರಾಹಕರು, ಇದನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಮಾರಾಟದಲ್ಲಿ ಹೊಸ ಮೈಲಿಗಲ್ಲು

ಕಮ್ಯೂಟರ್ ಬೈಕ್‍ಗಳಲ್ಲಿ ಪ್ರಸ್ತುತ ಹೀರೋ ಸಂಸ್ಥೆಯು ಪ್ರಥಮ ಸ್ಥಾನದಲಿದ್ದೂ, ಸ್ಪ್ಲೆಂಡರ್ ಮತ್ತು ಹೆಚ್ಎಫ್ ಡೀಲಕ್ಸ್ ಮಾರಾಟದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆಯುತ್ತಿದೆ. ಆದರೆ ಟಿವಿಎಸ್ ರೆಡಿಯಾನ್ ಬೈಕ್ ಮಾತ್ರ ಬಿಡುಗಡೆಗೊಂಡು ಸುಮಾರು 8 ತಿಂಗಳಿನಲ್ಲಿ ಸುಮಾರು 1 ಲಕ್ಷಕ್ಕು ಅಧಿಕವಾದ ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಎದುರಾಳಿಗಳಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿದೆ. ಹಾಗಾದರೆ ಈ ಬೈಕಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

110ಸಿಸಿ ವಿಭಾಗದ ಬೈಕ್ ಮಾರಾಟದಲ್ಲಿ ಹೊಸ ಬದಲಾವಣೆ ತರಲು ಹೊರಟಿರುವ ಟಿವಿಎಸ್ ಸಂಸ್ಥೆಯು ರೆಡಿಯನ್ ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕಿನ ಬೆಲೆಯನ್ನ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 48,400 ಕ್ಕೆ ನಿಗದಿಗೊಳಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಬೈಕಿನ ವಿನ್ಯಾಸದಲ್ಲಿ ಸ್ಟೈಲಿಷ್ ಕ್ರೋಮ್ ಅಸೆಂಟ್ಸ್, ಪವರ್ ಫುಲ್ ಹೆಡ್‌ಲ್ಯಾಂಪ್, ಕ್ರೋಮ್ ಬೆಜೆಲ್, ಡೇ ಟೈಮ್ ರನ್ನಿಂಗ್ ಲೈಟ್, ಫ್ಯೂಲ್ ಟ್ಯಾಂಕ್ ಮೇಲ್ಭಾಗದಲ್ಲಿ ಪಾಡ್ ಸೌಲಭ್ಯ, ಕ್ರೋಮ್ ಪ್ರೇರಿತ ಇನ್‌ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯಗಳು ಬೈಕಿಗೆ ಕ್ಲಾಸಿಕ್ ಟಚ್ ನೀಡಿವೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಎಂಜಿನ್ ಸಾಮರ್ಥ್ಯ

109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಟಿವಿಎಸ್ ರೆಡಿಯನ್ ಬೈಕ್‌ಗಳು 8.2-ಬಿಎಚ್‌ಪಿ ಮತ್ತು 8.7-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 10-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಮೈಲೇಜ್

ಕಮ್ಯೂಟರ್ ಬೈಕ್ ವಿಭಾಗದಲ್ಲೇ ಅತ್ಯುತ್ತಮ ಎನ್ನಿಸುವಷ್ಟು ಮೈಲೇಜ್ ಸಾಮರ್ಥ್ಯ ಹೊಂದಿರುವ ರೆಡಿಯಾನ್ ಬೈಕ್‌ಗಳು ಪ್ರತಿ ಲೀಟರ್‌ಗೆ 69.3 ಕಿ.ಮೀ ಮೈಲೇಜ್ ನೀಡಲಿವೆ ಎಂದು ಟಿವಿಎಸ್ ಸಂಸ್ಥೆಯು ಹೇಳಿಕೊಂಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಬ್ರೇಕಿಂಗ್ ಸಿಸ್ಟಂ

ಹೆಚ್ಚುತ್ತಿರುವ ಸ್ಕಿಡಿಂಗ್ ತೊಂದರೆಯನ್ನ ತಪ್ಪಿಸಲು ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫ್ರೋಕ್ಸ್ ಮತ್ತು ಹಿಂಭಾಗದಲ್ಲಿ ಐದು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಷೆನ್ ನೀಡಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಬೈಕಿನಲ್ಲಿರುವ ಇತರೆ ಸೌಲಭ್ಯಗಳು

1,265ಎಂಎಂ ಎತ್ತರ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು 180ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಲೆಕ್ಟ್ರಿಕ್ ಸ್ಟಾರ್ಟ್, 18-ಇಂಚಿನ ಅಲಾಯ್ ಚಕ್ರಗಳು, ಡ್ಯುರಾ ಗ್ರಿಪ್ ಟೈರ್‌ಗಳು, ಯುಎಸ್‌ಬಿ ಚಾರ್ಚಿಂಗ್ ಸ್ಲಾಟ್ ಸೇರಿದಂತೆ ಆಕರ್ಷಕ ಸೀಟಿನ ವ್ಯವಸ್ಥೆ ಹೊಂದಿದೆ.

ಲಭ್ಯವಿರುವ ಬಣ್ಣ ಮತ್ತು ವಾರಂಟಿ

ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ವೈಟ್, ಬೀಜ್, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೈಕ್ ಮೇಲೆ ಗರಿಷ್ಠ 5 ವರ್ಷಗಳ ವಾರಂಟಿ ದೊರೆಯಲಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ತಲುಪಿದ ಟಿವಿಎಸ್ ರೆಡಿಯಾನ್ ಬೈಕ್

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೈಲ್‌ನಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದು, ಮೈಲೇಜ್ ವಿಚಾರವಾಗಿ ಉತ್ತಮ ಎನ್ನಿಸಲಿರುವ ಈ ಹೊಸ ಬೈಕ್ ಹೀರೋ ಸ್ಪ್ಲೈಂಡರ್, ಹೆಚ್ಎಫ್ ಡಿಲಕ್ಸ್, ಬಜಾಜ್ ಸಿಟಿ 100, ಹೋಂಡಾ ಡ್ರೀಮ್ ಯುಗಾ ಸೇರಿದಂತೆ ಹಲವು ಕಮ್ಯೂಟರ್ ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದೆ ಎನ್ನಬಹುದು.

Most Read Articles

Kannada
English summary
TVS Motor Company’s new 110cc motorcycle, TVS Radeon crosses 1 lakh sales milestone. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X