ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಹೊಸ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್ ಅನ್ನು ಇತ್ತೀಚೆಗೆ ಬಿಡಿಭಾಗಳೊಂದಿಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದರು. ಹೊಸ ಬಿಡಿಭಾಗಗಳೊಂದಿಗೆ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಎಂಜಿನ್ ಹೊಂದಿರುವ ಸಾಧ್ಯತೆ ಇದೆ.

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ರಶ್ಲೇನ್ ಸ್ಪಾಟ್ ಟೆಸ್ಟ್ ಸ್ಪೈ ಚಿತ್ರ ಚಿತ್ರದಲ್ಲಿ ಕಾಣುವಂತೆ ಬೈಕಿನ ವಿಂಡ್ ಸ್ಕ್ರೀನ್, ಕ್ರ್ಯಾಶ್ ಗಾರ್ಡ್, ಹ್ಯಾಂಡಲ್‍‍ಬಾರ್ ಬಿಡಿಭಾಗಗಳನ್ನು ಕಂಪನಿ ಆಫರ್ ಆಗಿ ಬೈಕಿಗೆ ನೀಡಲಿದೆ ಎಂದು ನಿರೀಕ್ಷಿಸುತ್ತೇವೆ. ಥಂಡರ್‍‍ಬರ್ಡ್ 350 ಎಕ್ಸ್ ನಲ್ಲಿ ಸಿಂಗಲ್-ಪಾಡ್ ಇನ್‍‍ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಕ್ಲಸ್ಟರ್ ಮಧ್ಯದಲ್ಲಿ ಸಣ್ಣ ಡಿಜಿಟಲ್ ಡಿಸ್‍ಪ್ಲೇ ಡುಯಲ್-ಪಾಡ್ ಸೆಟ್‍ಆಪ್ ಅನ್ನು ಅಳವಡಿಸಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಇರುವ ಥಂಟರ್‍‍ಬರ್ಡ್ ಮಾದರಿಗಿಂತಲೂ ಫೀಚರ್ಸ್ ಅನ್ನು ಹೆಚ್ಚಿಸಿದೆ.

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಈ ಬೈಕು ಪ್ರಸ್ತುತ-ಪೀಳಿಗೆಯ ಶೈಲಿ ಹೊಂದದೆ ರೆಟ್ರೋ-ಬಾಬರ್ ಲುಕ್ ಅನ್ನು ಹೊಂದಿದ್ದು, ರೇರ್ ಫೆಂಡರ್, ಲೋ ಮೌಂಡಡ್ ಇಂಡಿಕೇಟರ್ ಇದು ಬಾಬರ್ ಲುಕ್ ಹೊಂದಿದೆ. ಪ್ರಸ್ತುತ ರಾಯಲ್ ಎನ್‍ಫೀಲ್ಡ್ ಥಂಡರ್‍‍ಬರ್ಡ್ 350ಎಕ್ಸ್ ಗಂಟೆಗೆ 110 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಪಡೆದಿದ್ದು, 5.6 ಸೆಕೆಂಡುಗಳಿಗೆ 0 ರಿಂದ 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಬೈಕಿನ ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ರೆಟ್ರೊ-ಬಾಬರ್ ಲುಕ್ ಸೇರಿದಂತೆ ಎಂಜಿನ್ ಅನ್ನು ಬಿಎಸ್-6 ನಿಯಮಾವಳಿಗೆ ಅನುಗುಣವಾಗಿ ಮಾರ್ಪಾಡು ಮಾಡಿದ್ದಾರೆ. ಹಿಂದಿನ ಮಾದರಿಗಳಿಗೆ ಹೋಲಿಸಿದಾಗ ಡಿಸ್ಕ್ ಬ್ರೇಕ್‍‍ಗಳ ಸ್ಥಳ ಬದಲಾಯಿಸಿದ್ದು, ಅದರೊಂದಿಗೆ ಪವರ್‍‍ಟ್ರೇನ್ ಅನ್ನು ಮಾರ್ಪಾಡು ಮಾಡಿದ್ದಾರೆ.

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಇದರಲ್ಲಿ ಸ್ಪ್ಲಿಟ್-ಸೀಟ್ ಮತ್ತು ಸ್ಪ್ಲಿಟ್ ಗ್ರ್ಯಾಬ್ ರೈಲ್ ಮಾರ್ಪಡು ಮಾಡಿದ್ದಾರೆ. ಫ್ಯೂಲ್ ಟ್ಯಾಂಕ್ ಸ್ಪೋರ್ಟಿ ಲುಕ್‍‍ನೊಂದಿಗೆ ಕೂಡಿದೆ. ಇನ್ನೂ ರೇರ್ ಫೆಂಡರ್, ರೆಟ್ರೋ ಲುಕ್‍‍ನಲ್ಲಿ ಸೇರಿದಂತೆ ಬಿಎಸ್-6 ಎಂಜಿನ್ ಸೇರಿದಂತೆ ಮೆಕಾನಿಕಲ್ ಬದಲಾವಣೆಯನ್ನು ಮಾಡಿದ್ದಾರೆ.

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಈ ಬೈಕ್ ವಿಭಿನ್ನವಾದ ಪವರ್ ಟ್ರಾನ್ಸ್ ಮಿಷನ್ ಸೆಟ್‍ಅಪ್ ಅನ್ನು ಹೊಂದಿದ್ದು, ಎಡಭಾಗದ ಚೈನ್ ಸೆಟ್ಅಪ್‍ಗೆ ಸಹಕಾರಿಯಾಗಲೂ ಡಿಸ್ಕ್ ರೋಟರಿ ಮತ್ತು ಸ್ಟ್ರಾಕೆಟ್‍ಗಳ ಸ್ಥಳ ಬದಲಾವಣೆ ಮಾಡಲಾಗಿದೆ. ಹೊಸ ಥಂಟರ್‍‍ಬರ್ಡ್‍‍ನಲ್ಲಿ ಸರಾಗವಾಗಿ ಪವರ್ ಡೆಲಿವರಿಯಾಗಲು ಎಲೆಕ್ಟಿಕ್ ಫ್ಯೂಲ್ ಇಂಜೆಕ್ಷನ್ ಸಿಸ್ಟಮ್ ಅನ್ನು ಅಳವಡಿಸಿದ್ದಾರೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಪ್ರಸ್ತುತ ಜನರೇಷನ್ 350 ಎಕ್ಸ್ ಮಾದರಿ ಸಿಂಗಲ್ ಸಿಲಿಂಡರ್ 346ಸಿಸಿ ಎಂಜಿನ್ ಹೊಂದಿದ್ದು, 19.8 ಬಿಎಚ್‍‍ಪಿ ಪವರ್ ಮತ್ತು 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ರಾಯಲ್ ಎನ್‍‍ಫೀಲ್ಡ್ 500 ಎಕ್ಸ್ ಮಾದರಿಯು 499 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 27.2 ಬಿಎಚ್‍‍ಪಿ ಪವರ್ ಮತ್ತು 41.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಈ ಎರಡು ಎಂಜಿನ್‍‍ಗಳಿಗೆ 5-ಸ್ಪೀಡ್ ಟ್ರಾನ್ ಮಿಷನ್ ಅನ್ನು ಜೋಡಿಸಲಾಗಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಬೈಕಿನ ವಿನ್ಯಾಸ ಮತ್ತು ಪವರ್‍‍ಟ್ರೇನ್‍‍ನಲ್ಲಿರುವ ಹೊಸ ಪರಿಷ್ಕರಣೆಗಳು ರಾಯಲ್ ಎನ್‍‍ಫೀಲ್ಡ್ ಅಭಿಮಾನಿಗಳು ಬಯಸುವ ರೀತಿ ಸಿದ್ದಪಡಿಸಿದ್ದು, ಪ್ರಸ್ತುತ ಆಟೋ‍‍ಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ವೇಳೆಯಲ್ಲಿ ಗ್ರಾಹಕರ ಗಮನಸೆಳೆಯಲು ಹೊಸ ಪರಿಷ್ಕರಣೆ ಮತ್ತು ಹೊಸ ತಂತ್ರದ ಮೂಲಕ ರಾಯಲ್ ಎನ್‍‍ಫೀಲ್ಡ್ ಸಜ್ಜಾಗುತ್ತಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಬಿಡಿಭಾಗಗಳೊಂದಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಆರ್‍ಇ ಥಂಡರ್‍‍ಬರ್ಡ್ 350 ಎಕ್ಸ್

ಯುವಜನತೆಯ ಕನಸಿನ ಬೈಕ್ ರಾಯಲ್ ಎನ್‍‍ಫೀಲ್ಡ್ ತನ್ನ ಹೊಸ ಆವೃತ್ತಿ ಥಂಡರ್‍‍ಬರ್ಡ್ 350 ಎಕ್ಸ್ ರೈಡ್ ಮಾಡಲು ಆರಾಮದಾಯಕವಾಗಿದ್ದು, ಹೊಸ ವಿನ್ಯಾಸ ಹೆಚ್ಚಿನ ಜನರನ್ನು ಆಕರ್ಷಿಸಲು ಹೆಚ್ಚು ಸಹಕಾರಿಯಾಗಿದೆ. ಹೊಸ ಥಂಡರ್‍‍ಬರ್ಡ್ ಜಾವ ಟ್ವಿನ್ಸ್ ಬೈಕಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
English summary
New Royal Enfield Thunderbird 350X Spied Testing With Accessories: Specs, Features & Other Details - Read in Kannada
Story first published: Friday, September 6, 2019, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X