Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯಿತು ಸುಜುಕಿ ಜಿಕ್ಸರ್155 ನವೀಕೃತ ಬೈಕ್
ಸುಜುಕಿ ಕಂಪನಿಯು 2019ರ ಹೊಸ ಜಿಕ್ಸರ್ 155 ಫೇಸ್ಲಿಫ್ಟ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1 ಲಕ್ಷಗಳಾಗಲಿದೆ. ಹೊಸ ಸುಜುಕಿ ಜಿಕ್ಸರ್ 155 ಫೇಸ್ಲಿಫ್ಟ್ ಬೈಕಿನಲ್ಲಿ ನವೀಕರಿಸಿದ ಸ್ಟೈಲಿಂಗ್, ಸುಧಾರಿತ ಪರ್ಫಾಮೆನ್ಸ್ ಹಾಗೂ ಈಗಿರುವ ಬೈಕಿನಲ್ಲಿರುವುದಕ್ಕಿಂತ ಹೊಸದಾದ ಹಾಗೂ ಹೆಚ್ಚುವರಿಯಾದ ಫೀಚರ್ಗಳಿರಲಿವೆ.

ಹೊಸ ಸುಜುಕಿ ಜಿಕ್ಸರ್ 155 ಬೈಕಿನ ಬೆಲೆ ಹಿಂದಿನ ಬೈಕಿಗೆ ಹೋಲಿಸಿದರೆ ಸುಮಾರು ರೂ.13,000 ಜಾಸ್ತಿಯಾಗಿರಲಿದೆ. ಹಿಂದಿನ ಬೈಕಿನ ಸ್ಟ್ಯಾಂಡರ್ಡ್ ಆವೃತ್ತಿಯ ಬೆಲೆ ರೂ.88,390ಗಳಾಗಿದ್ದರೆ, ಎಸ್ಪಿ ಮಾದರಿಯ ಬೆಲೆ ರೂ.88,941ಗಳಾಗಿತ್ತು. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತಿವೆ. ವಿನ್ಯಾಸದ ಫೀಚರ್ಗಳ ಬಗ್ಗೆ ಹೇಳುವುದಾದರೆ, ಹೊಸ ಸುಜುಕಿ ಜಿಕ್ಸರ್ 155 ಬೈಕ್ ಕೆಲವು ವಿನ್ಯಾಸಗಳನ್ನು ಸುಜುಕಿ ಕಂಪನಿಯ ಎಸ್ಎಫ್ 250 ಬೈಕಿನಿಂದ ಪಡೆದುಕೊಂಡಿದೆ.

ಆ ವಿನ್ಯಾಸಗಳೆಂದರೆ ಓವಲ್ ಶೇಪಿನ ಎಲ್ಇಡಿ ಹೆಡ್ಲ್ಯಾಂಪ್, ಸೊಗಸಾಗಿ ವಿನ್ಯಾಸಗೊಳಿಸಲಾದ ಟ್ಯಾಂಕ್ ಶ್ರೌಡ್, ನವೀಕರಿಸಿದ ಬಾಡಿ ಗ್ರಾಫಿಕ್ಸ್, ಸ್ಪ್ಲಿಟ್ ಸೀಟುಗಳು, ಬ್ಲ್ಯಾಕ್ಡ್ ಔಟ್ ಅಲಾಯ್ ವೀಲ್ಸ್ ಹಾಗೂ ಎಲ್ಇಡಿ ಟೈಲ್ಲೈಟ್ಗಳು. ಹೊಸ ಸುಜುಕಿ ಜಿಕ್ಸರ್ 155 ನವೀಕೃತ ಬೈಕ್ ತನ್ನ ಕಂಪನಿಯ ಇತರ ಬೈಕುಗಳಿಂದ ಪೂರ್ಣ ಪ್ರಮಾಣದ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಪಡೆದಿದೆ. ಆದರೆ, ಹೊಸ ಎಸ್ಎಫ್ ಮಾದರಿಯ ಬೈಕಿನಲ್ಲಿದ್ದ ಹ್ಯಾಂಡಲ್ಬಾರ್ಗಳ ಮೇಲಿನ ಕ್ಲಿಪ್ ಅನ್ ಈ ಬೈಕಿನಲ್ಲಿರುವುದಿಲ್ಲ.

2019ರ ಹೊಸ ಸುಜುಕಿ ಜಿಕ್ಸರ್155 ಬೈಕಿನಲ್ಲಿಯೂ ಸಹ ನವೀಕರಿಸಿದ 155 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಈಗ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಬರುತ್ತದೆ. ಈ ಸಿಸ್ಟಂ ಅನ್ನು ಹಿಂದಿನ ಮಾದರಿಯಲ್ಲಿದ್ದ ಕಾರ್ಬ್ಯುರೇಟರ್ನ ಬದಲಿಗೆ ಅಳವಡಿಸಲಾಗಿದೆ. ಈ ಎಂಜಿನ್ 14ಬಿಹೆಚ್ಪಿ ಪವರ್ ಹಾಗೂ 14ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ನಲ್ಲಿ 5 ಸ್ಪೀಡ್ನ ಗೇರ್ಬಾಕ್ಸ್ ಅಳವಡಿಸಲಾಗಿದೆ.

ಹೊಸ ಸುಜುಕಿ ಜಿಕ್ಸರ್155 ಬೈಕಿನ ಸಸ್ಪೆಂಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಗಳಿದ್ದು, ಹಿಂಭಾಗದಲ್ಲಿ ಮೊನೊ ಶಾಕ್ ಸೆಟ್ ಅಪ್ಗಳಿವೆ. ಬ್ರೇಕಿಂಗ್ ನಿಯಂತ್ರಣಕ್ಕಾಗಿ ಎರಡೂ ಬದಿಯಲ್ಲಿ ಡಿಸ್ಕ್ ಗಳಿದ್ದು, ಸಿಂಗಲ್ ಚಾನಲ್ ಎಬಿಎಸ್ ಇರಲಿದೆ. ಈ ಬೈಕ್ 17 ಇಂಚಿನ ಟ್ಯೂಬ್ಲೆಸ್ ಟಯರ್ ಹೊಂದಿರಲಿದ್ದು, ಬೈಕಿನ ಮುಂಭಾಗದಲ್ಲಿ 100/80 ಹಾಗೂ ಹಿಂಭಾಗದಲ್ಲಿ 140/60 ಅಳತೆಯ ಟಯರ್ಗಳಿವೆ.

2019ರ ಸುಜುಕಿ ಜಿಕ್ಸರ್155 ನವೀಕೃತ ಬೈಕ್ ಅನ್ನು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್ ಹಾಗೂ ಮೆಟಾಲಿಕ್ ಟೈಟಾನ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿದ್ದ ಸುಜುಕಿ ಜಿಕ್ಸರ್155 ಬೈಕ್ ಅನ್ನು ಕೊನೆಗೂ ನವೀಕರಿಸಲಾಗಿದೆ. 2019ರ ಸುಜುಕಿ ಜಿಕ್ಸರ್155 ಹಲವಾರು ಅಪ್ಡೇಟ್ಗಳೊಂದಿಗೆ ಬರುತ್ತಿದ್ದು, ಮೊದಲಿಗಿಂತಲೂ ಹೆಚ್ಚಿನ ಆಕರ್ಷಕ ಪ್ಯಾಕೇಜ್ ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ, ಹೊಸ ಸುಜುಕಿ ಜಿಕ್ಸರ್155 ಬೈಕ್, ಟಿವಿಎಸ್ ಅಪಾಚೆ ಆರ್ಟಿಆರ್ 160 4ವಿ, ಕೆಟಿಎಂ ಡ್ಯೂಕ್ 125 ಹಾಗೂ ಯಮಹಾ ಎಫ್ಝಡ್-ಎಸ್ ಬೈಕುಗಳಿಗೆ ಪೈಪೋಟಿ ನೀಡಲಿದೆ.