ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್155 ನವೀಕೃತ ಬೈಕ್..!

ಸುಜುಕಿ ಮೋಟಾರ್‌ಸೈಕಲ್ಸ್ ಇಂಡಿಯಾ ತನ್ನ ಹೊಸ 2019 ಜಿಕ್ಸರ್ 155 ನವೀಕೃತ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಹೊಸ 2019 ಸುಜುಕಿ ಜಿಕ್ಸರ್ 155 ನವೀಕೃತ ಬೈಕಿನಲ್ಲಿ ಕಾಸ್ಮೆಟಿಕ್ ಹಾಗೂ ಮೆಕಾನಿಕಲ್ ಅಂಶಗಳು ಅಪ್‍‍ಡೇಟ್ ಆಗಿರಲಿವೆ. ಅತಿ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್155 ನವೀಕೃತ ಬೈಕ್..!

ದೇಶಿಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ, 2019 ಜಿಕ್ಸರ್ 155 ನವೀಕೃತ ಬೈಕ್ ಅನ್ನು ವೇರ್‍‍ಹೌಸ್‍‍ನಲ್ಲಿ ರಹಸ್ಯವಾಗಿ ಚಿತ್ರಿಸಲಾಗಿದೆ. ಈ ರಹಸ್ಯ ಚಿತ್ರಗಳಲ್ಲಿ ಬೈಕ್ ಅನ್ನು ಪೂರ್ಣವಾಗಿ ಮರೆಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಹಾಲಿಯಿರುವ ಬೈಕುಗಳಿಗೆ ಹೋಲಿಸಿದರೆ ಈ ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿರುವುದನ್ನು ಕಾಣಬಹುದು.

ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್155 ನವೀಕೃತ ಬೈಕ್..!

ವಿನ್ಯಾಸದ ಮಟ್ಟಿಗೆ, ಹೊಸ ಜಿಕ್ಸರ್ 155 ನವೀಕೃತ ಬೈಕಿನಲ್ಲಿ ಹೊಚ್ಚಹೊಸ ಒವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್, ಹೊಸ ವಿನ್ಯಾಸದ ಫ್ಯೂಯಲ್ ಟ್ಯಾಂಕ್ ಹಾಗೂ ಇತರ ಅಂಶಗಳಿವೆ. ಹೊಸ ಜಿಕ್ಸರ್ 155 ನವೀಕೃತ ಬೈಕ್ ತನ್ನಲ್ಲಿರುವ ಹಲವಾರು ಅಂಶಗಳನ್ನು ಜಿಕ್ಸರ್ 155 ಎಸ್‌ಎಫ್‌ ಬೈಕಿನಿಂದ ಪಡೆದಿದೆ. ಈ ರಹಸ್ಯ ಚಿತ್ರಗಳಲ್ಲಿ ನವೀಕರಿಸಿದ ಜಿಕ್ಸರ್ 155 ಬೈಕಿನಲ್ಲಿ ಡ್ಯುಯಲ್-ಟೋನ್ ಕಪ್ಪು ಹಾಗೂ ನೀಲಿ ಬಣ್ಣವನ್ನು ಕಾಣಬಹುದು.

ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್155 ನವೀಕೃತ ಬೈಕ್..!

ಹೊಸ ಸುಜುಕಿ ಜಿಕ್ಸರ್ 155 ನವೀಕೃತ ಬೈಕಿನಲ್ಲಿ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದ್ದು, ಇದನ್ನು ಜಿಕ್ಸರ್ 155 ಎಸ್‍ಎಫ್‍‍ನಿಂದ ಪಡೆಯಲಾಗಿದೆ. ನವೀಕೃತ ಆವೃತ್ತಿಯಲ್ಲಿನ ಇತರ ಫೀಚರ್‍‍ಗಳೆಂದರೆ ಸ್ಪ್ಲಿಟ್-ಸೀಟ್‌ಗಳು, ಡ್ಯುಯಲ್-ಪಿಲಿಯನ್ ಗ್ರಾಬ್ ಹ್ಯಾಂಡಲ್‌ಗಳು, ಎಲ್‌ಇಡಿ ಟೇಲ್ ಲೈಟ್‌ಗಳು ಮತ್ತು ಉತ್ತಮ ಸವಾರಿ ಗಾಗಿ ಹೆಚ್ಚಿನ ಎತ್ತರದ ಹ್ಯಾಂಡಲ್‌ಬಾರ್‌ಗಳನ್ನು ಅಳವಡಿಸಲಾಗಿದೆ. ಮೆಕ್ಯಾನಿಕಲ್‌ ಅಂಶಗಳ ಬಗ್ಗೆ ಹೇಳುವುದಾದರೆ, ಜಿಕ್ಸರ್ 155 ಬೈಕಿನಲ್ಲಿಯೂ ಸಹ ಜಿಕ್ಸರ್ 155 ಎಸ್‍ಎಫ್ ಬೈಕಿನಲ್ಲಿದ್ದಂತಹ 155.5 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್155 ನವೀಕೃತ ಬೈಕ್..!

ಈ ಎಂಜಿನ್ 14.1 ಬಿಹೆಚ್‌ಪಿ ಹಾಗೂ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. 2019 ರ ಜಿಕ್ಸರ್ 155 ಎಸ್‌ಎಫ್ ಬೈಕ್ ಅನ್ನು, ಕ್ವಾರ್ಟರ್-ಲೀಟರ್ ಸಾಮರ್ಥ್ಯದ ಜಿಕ್ಸರ್ 250 ಎಸ್‌ಎಫ್ ಬೈಕಿನ ಜೊತೆ, ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಸುಜುಕಿ ಕಂಪನಿಯು 250 ಎಸ್‌ಎಫ್‌ನ ನೇಕೆಡ್ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೊಸ ಸುಜುಕಿ ಜಿಕ್ಸರ್ 250 ಬೈಕ್ ಸಹ 2019 ಜಿಕ್ಸರ್155 ಬೈಕಿನಲ್ಲಿರುವ ವಿನ್ಯಾಸವನ್ನು ಹೊಂದಲಿದೆ. ಆದರೆ, ಇದು ಕೆಲವು ಬದಲಾವಣೆಗಳನ್ನು ಹೊಂದಲಿದ್ದು, ಬೇರೆ ಬೈಕಿಗಿಂತ ವಿಭಿನ್ನವಾಗಿ ಕಾಣಲಿದೆ. ಜಿಕ್ಸರ್ 250 ಬೈಕ್, ಜಿಕ್ಸರ್ 250 ಎಸ್‌ಎಫ್‌ ಬೈಕಿನಲ್ಲಿರುವ ಎಂಜಿನ್ ಅನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಸುಜುಕಿ ಜಿಕ್ಸರ್155 ನವೀಕೃತ ಬೈಕ್..!

ಮಾರುಕಟ್ಟೆಯಲ್ಲಿರುವ ಬೈಕಿಗೆ ಹೋಲಿಸಿದರೆ ಸುಜುಕಿ ಜಿಕ್ಸರ್ 155 ನವೀಕೃತ ಬೈಕ್ ಹಲವಾರು ನವೀಕರಣಗಳು ಹಾಗೂ ಬದಲಾವಣೆಗಳೊಂದಿಗೆ ಬರಲಿದೆ. 2019 ರ ಸುಜುಕಿ ಜಿಕ್ಸರ್ 155 ನವೀಕೃತ ಬೈಕ್ ಬಿಡುಗಡೆಯಾದ ನಂತರ ಯಮಹಾ ಎಂಟಿ15, ಕೆಟಿಎಂ ಡ್ಯೂಕ್ 125 ಹಾಗೂ ಹೋಂಡಾ ಸಿಬಿ ಹಾರ್ನೆಟ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Image Courtesy: Ariel M. Belli/Instagram

Most Read Articles

Kannada
English summary
2019 Suzuki Gixxer 155 Facelift Spied — India-Launch Expected Soon; To Rival The Yamaha MT-15 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X