ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಸುಜುಕಿ ಮೋಟಾರ್‌ಸೈಕಲ್ಸ್ ಇಂಡಿಯಾ, ಕ್ವಾರ್ಟರ್ ಲೀಟರ್ ಎಸ್‌ಎಫ್ 250 ಬೈಕಿನ ನೇಕೆಡ್ ಆವೃತ್ತಿಯಾದ ಜಿಕ್ಸರ್ 250 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಸುಜುಕಿ ಜಿಕ್ಸರ್ 250 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.59 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

250 ಸಿಸಿ ಬೈಕಿನ ಹೊಸ ನೇಕೆಡ್ ಆವೃತ್ತಿಯ ಬೈಕ್, ಸುಜುಕಿ ಕಂಪನಿಯ ಜಿಕ್ಸರ್ 250 ಸಿಸಿ ಬೈಕಿಗಿಂತ ರೂ.11,000 ಕಡಿಮೆ ಬೆಲೆಯನ್ನು ಹೊಂದಿರಲಿದೆ. ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಜಿಕ್ಸರ್ ಸರಣಿಯ ಬೈಕುಗಳನ್ನು ಪೂರ್ತಿಯಾಗಿ ಬಿಡುಗಡೆಗೊಳಿಸಿದೆ. ಕಂಪನಿಯು ಇತ್ತೀಚೆಗಷ್ಟೇ ಜಿಕ್ಸರ್ 155 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಜಿಕ್ಸರ್ ಸರಣಿಯಲ್ಲಿ ಜಿಕ್ಸರ್ 155, ಜಿಕ್ಸರ್ ಎಸ್‌ಎಫ್ 155, ಜಿಕ್ಸರ್ 250 ಹಾಗೂ ಜಿಕ್ಸರ್ ಎಸ್‌ಎಫ್ 250 ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ. ಎರಡು ಫೇರ್ಡ್ ಮಾದರಿಯ ಬೈಕುಗಳನ್ನು ಮೋಟೋ ಜಿಪಿ ಸರಣಿಗಳಲ್ಲೂ ಬಿಡುಗಡೆ ಮಾಡಲಾಗಿದೆ.

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಹೊಸ ಸುಜುಕಿ ಜಿಕ್ಸರ್ 250 ಬೈಕಿನಲ್ಲಿ 249 ಸಿಸಿಯ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 26.5 ಬಿ‍‍ಹೆಚ್‍‍ಪಿ ಪವರ್ ಹಾಗೂ 22.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿ‍ನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಜಿಕ್ಸರ್ 250 ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹಾಗೂ ಹಿಂಭಾಗದಲ್ಲಿ ಸ್ವಿಂಗ್ ಆರ್ಮ್ ಮಾದರಿಯ ಮೊನೊ ಶಾಕ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್‍‍ಗಳನ್ನು ಬೈಕಿನ ಎರಡೂ ತುದಿಯಲ್ಲಿರುವ ಡಿಸ್ಕ್ ಗಳು ​​ನಿರ್ವಹಿಸುತ್ತವೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಸ್ಟೈಲಿಂಗ್‍‍ನ ಬಗ್ಗೆ ಹೇಳುವುದಾದರೆ, ಹೊಸ ಜಿಕ್ಸರ್ 250 ಬೈಕ್ ಬಹುತೇಕ ಬಿಡಿಭಾಗಗಳನ್ನು ತನ್ನ ಸಹವರ್ತಿ ಬೈಕಿನಿಂದ ಪಡೆಯುತ್ತದೆ. ಇವುಗಳಲ್ಲಿ ಟೇಲ್ ಸೆಕ್ಷನ್, ಎಲ್‌ಇಡಿ ಟೇಲ್ ಲೈಟ್ಸ್, ಎಲ್‌ಸಿಡಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸಸ್ಪೆಂಷನ್ ಸೆಟಪ್ ಹಾಗೂ ಬ್ರೇಕ್‌ಗಳು ಸೇರಿವೆ.

MOST READ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅಪಘಾತ..!

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ನೇಕೆಡ್ ಆವೃತ್ತಿಯ ಬೈಕಿನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಹೊಸ ಒವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

2019ರ ಹೊಸ ಸುಜುಕಿ ಜಿಕ್ಸರ್ 250 ಬೈಕ್ ಅನ್ನು ಸಿಂಗಲ್ ಟೋನ್ ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಹಾಗೂ ಡ್ಯುಯಲ್ ಟೋನ್ ಮೆಟಾಲಿಕ್ ಮ್ಯಾಟ್ ಸಿಲ್ವರ್ / ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಲೈಸೆನ್ಸ್ ನವೀಕರಣಕ್ಕೆ ಇನ್ಮುಂದೆ ಈ ಟೆಸ್ಟ್ ಕಡ್ಡಾಯವಂತೆ..!

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಸ್‌ಎಫ್ 250 ಬೈಕಿನ ಹೊಸ ನೇಕೆಡ್ ಆವೃತ್ತಿಯು, ಸುಜುಕಿ ಕಂಪನಿಯ ಜಿಕ್ಸರ್ ಸರಣಿಯಲ್ಲಿನ ಹೊಸ ಬೈಕ್ ಆಗಿದೆ. ಹೊಸ ಜಿಕ್ಸರ್ 250 ಬೈಕ್, ಸುಜುಕಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಮೊದಲ ಕ್ವಾರ್ಟರ್ ಲೀಟರ್ ನೇಕೆಡ್ ಬೈಕುಗಳಲ್ಲಿ ಒಂದಾಗಿದೆ.

ಬಿಡುಗಡೆಯಾಯ್ತು ಹೊಸ 2019 ಸುಜುಕಿ ಜಿಕ್ಸರ್ 250

ಹೊಸ ಸುಜುಕಿ ಜಿಕ್ಸರ್ 250 ಬೈಕ್, ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಎನ್‌ಎಸ್ 200, ಕೆಟಿಎಂ ಡ್ಯೂಕ್ 250, ಟಿವಿಎಸ್ ಅಪಾಚೆ ಆರ್‌ಟಿಆರ್ 200 4 ವಿ ಹಾಗೂ ಯಮಹಾ ಎಫ್‌ಜೆಡ್ 25ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
New (2019) Suzuki Gixxer 250 Launched In India At Rs 1.59 Lakh - Read in kannada
Story first published: Friday, August 9, 2019, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X