ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್‍‍ಸೈಕಲ್ ಕಳೆದ ಏಪ್ರಿಲ್‍‍ನಲ್ಲಿ ತಮ್ಮ ಹೊಸ ನಮೂನೆಯ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಇದೀಗ ಅದೇ ಬೈಕಿನ ಖರೀದಿಯಲ್ಲಿ ಮತ್ತೆರಡು ಬಣ್ಣಗಳ ಆಯ್ಕೆಯನ್ನು ಜೋಡಣೆ ಮಾಡಲಾಗಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.46 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಬಿಡುಗಡೆಗೊಂಡ ಸಮಯದಲಿ ಕೇವಲ ನೆಕೆಡ್ ಸ್ಟ್ರೀಟ್ ಫೈಟರ್ ಗ್ರೇ ಮತ್ತು ಬ್ಲೂ ಹಾಗು ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ಲಭ್ಯವಿತ್ತು. ಆದರೆ ಇದೀಗ ಸುಜುಕಿ ಸಂಸ್ಥೆಯು ಮೆಟಾಲಿಕ್ ಮೇಟ್ ಬ್ಲಾಕ್ ಮತ್ತು ಪರ್ಲ್ ಗ್ಲಾಶಿಯರ್ ವೈಟ್ ಎಂಬ ಮತ್ತೆರಡು ಬಣ್ಣಗಳಲ್ಲಿ ಖರೀದಿಸಬಹುದಾದ ಆಯ್ಕೆಯನ್ನು ನೀಡಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಹೊಸ ಜಿಎಸ್ಎಕ್ಸ್-ಎಸ್750 ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಂಡಿದ್ದು, ಭಾರತಕ್ಕೆ ಕಂಪ್ಲೀಟ್ಲಿ ಕ್ನೋಕ್ಡ್ ಡೌನ್ ಯುನಿಟ್ ಪ್ಲಾಟ್‍‍ಫಾರ್ಮ್ ರೂಪದಲ್ಲಿ ಪರಿಚಯಿಸುವ ಬಗ್ಗೆ ಸುಳಿವು ನೀಡಿದ್ದು, 2018ರ ಏಪ್ರಿಲ್ ತಿಂಗಳಿನಲ್ಲಿಯೆ ಬಿಡುಗಡೆಗೊಳಿಸಲಾಗಿತ್ತು.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಎಂಜಿನ್ ಸಾಮರ್ಥ್ಯ

ಜಿಎಸ್ಎಕ್ಸ್-ಎಸ್750 ಬೈಕ್ 749ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 110-ಬಿಹೆಚ್‍ಪಿ ಮತ್ತು 81-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಬೈಕಿನ ವೈಶಿಷ್ಟ್ಯತೆಗಳು

ಬಿಡುಗಡೆಗೊಂಡ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಸಂಪೂರ್ಣ ಡಿಜಿಟಲ್ ಎಲ್‍ಸಿಡಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಕಡಿಮೆ ಆರ್‍‍‍ಪಿಎಮ್ ಅಸಿಸ್ಟ್, ಈಝಿ ಸ್ಟಾರ್ಟ್ ಸಿಸ್ಟಂ ಮತ್ತು 3 ಲೆವೆಲ್ ಟ್ರಾಕ್ಷನ್ ಕಂಟ್ರೋಲ್ ಅನ್ನು ಪಡೆದುಕೊಂಡಿದೆ. ಮತ್ತು ಹೊಸ ಬಣ್ಣಗಳ ಅಯ್ಕೆಯನ್ನು ಪಡೆದುಕೊಂಡ ಈ ಬೈಕಿನ ಖರೀದಿಗಾಗಿ ಡೀಲರ್‍‍ಗಳು ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದ್ದಾರೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಬೈಕ್ ಸವಾರರ ಸುರಕ್ಷತೆಗಾಗಿ ಮುಂಭಾಗದಲ್ಲಿ 310ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕಿಂಗ್ ಸಿಸ್ಟಂಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಆಯ್ಕೆಯಾಗಿ ಪಡೆದುಕೊಂಡಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಸುಜುಕಿಯ ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಈ ಹಿಂದಿನ ಜಿಎಸ್ಎಕ್ಸ್-ಎಸ್1000 ಬೈಕಿನ ವಿನ್ಯಾಸಗಳ ಹೋಲಿಕೆ ಇದ್ದು, ಸಿಂಗಲ್ ಹೆಡ್ ಲ್ಯಾಂಪ್ ನೊಂದಿಗೆ ಶಾರ್ಪ್ ಫ್ರಂಟ್ ಎಂಡ್, ಶಕ್ತಿಶಾಲಿ ಫ್ಯುಯಲ್ ಟ್ಯಾಂಕ್ ಮತ್ತು ವಿಭಜಿತ ಆಸನ (split seat)ಸೆಟಪ್ ಬೈಕಿಗೆ ಸ್ಪೋರ್ಟಿ ನೋಟವನ್ನು ನೀಡಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಇನ್ನು ಈ ಬೈಕ್ ಸುಜುಕಿಯ ವಿಶೇಷವಾದ ಅಡ್ವಾನ್ಸ್ಡ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದ್ದರು ಈ ಬೈಕಿನಲ್ಲಿ ಯಾವುದೇ ಎಲೆಕ್ಟ್ರಿಕ್ ಸಹಾಯಕಗಳನ್ನು ಹೊಂದಿಲ್ಲ ಎಂಬುವುದು ಖಚಿತವಾಗಿದೆ.

ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್ ಇದೀಗ ಮತ್ತೆರಡು ಹೊಸ ಬಣ್ಣಗಳಲ್ಲಿ ಲಭ್ಯ..

ಬಿಡುಗಡೆಗೊಂಡ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್750 ಬೈಕ್‌ಗಳು ಮಾರಕಟ್ಟೆಯಲ್ಲಿ ಈಗಾಗಲೆ ಲಭ್ಯವಿರುವ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್‍‍ಎಸ್, ಯಮಹ ಎಂಟಿ-09, ಕವಾಸಕಿ ಜೆಡ್900 ಮತ್ತು ಬರಲಿರುವ ಡುಕಾಟಿ ಮಾನ್ಸ್ಟರ್ 821 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡಲಿದೆ.

Source: auto.ndtv

Most Read Articles

Kannada
Read more on ಸುಜುಕಿ suzuki
English summary
2019 Suzuki GSX-S750 Launched In India; Priced At ₹ 7.46 Lakh. Read In Kannada
Story first published: Thursday, April 18, 2019, 10:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X