ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಜಾರಿಯಾಗುವ ಬಿಎಸ್-6 ಮಾಲಿನ್ಯ ನಿಯಮವನ್ನು ಅನುಸರಿಸಲು ಯಮಹಾ ತನ್ನ ಎಲ್ಲಾ ಪ್ರಸ್ತುತ ಮಾದರಿಗಳನ್ನು ನವೀಕರಿಸುತ್ತಿವೆ. ಹೊಸ ಬಿಎಸ್-6 ಮಾಲಿನ್ಯ ನಿಯಮದ ಏಪ್ರಿಲ್‍‍ವರೆಗೆ ಮಿತಿಯನ್ನು ಹೊಂದಿದ್ದು, ಇದಕ್ಕಾಗಿ ಹೊಸ ಯಮಹಾ ಫ್ಯಾಸಿನೊ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಯಮಹಾ ಫ್ಯಾಸಿನೊ ಸ್ಕೂಟರ್ ಸಂಪೂರ್ಣವಾಗಿ ಮರೆಮಾಚಿ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುವ ಚಿತ್ರವನ್ನು ಜಿಂಗ್‍‍ವ್ಹೀಲ್ಸ್ ಬಹಿರಂಗಪಡಿಸಿದೆ. ಹೊಸ ಸ್ಕೂಟರ್ ಅನ್ನು ನವೀಕರಿಸಿದ ವಿನ್ಯಾಸ, ಎಂಜಿನ್ ಮತ್ತು ಮೆಕಾನಿಕಲ್ ಸೇರಿದಂತೆ ಹಲವಾರು ನವೀಕರಣಗಳನ್ನು ಮಾಡಲಾಗಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಯಮಹಾ ಫ್ಯಾಸಿನೊ ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳಿಂದ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ಸ್ವೂಪಿಂಗ್ ವಿನ್ಯಾಸವು ಫು‍‍ಟ್‍ಬೋರ್ಡ್‍‍ನಿಂದ ಪ್ರಾರಂಭವಾಗುತ್ತದೆ ಮತ್ತು ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಸ್ವಲ್ಫ ಮಟ್ಟದ ನವೀಕರಣದ ಹೊರತಾಗಿ ಹೊಸ ಯಮಹಾ ಫ್ಯಾಸಿನೊ ಸಹ ಪ್ರಸ್ತುತ ಮಾದರಿಗೆ ಹೋಲಿಸಿದರೆ ದೊಡ್ಡ ಸೀಟ್ ಅನ್ನು ಹೊಂದಿದೆ. ಇದು ಸೀಟ್ ಒಳಗಡೆ ಲಗೇಜ್ ಇಡುವ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಹೊಸ ಸ್ಕೂಟರ್ ಹೊಸ ಅಲಾಯ್ ವ್ಹೀಲ್‍‍ಗಳನ್ನು ಹೊಂದಿರಲಿದೆ. ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 12 ಇಂಚಿನ ಮತ್ತು 10 ಇಂಚಿನ ಟಯರ್‍‍ಗಳನ್ನು ಹೊಂದಿದೆ. ಇತರ ಬದಲಾವಣೆಗಳು ಫ್ಯೂಲ್ ಫಿಲ್ಲರ್ ಕ್ಯಾಪ್, ಟೈಲ್‍‍ಲೈಟ್‍ ಮತ್ತು ಎಲ್‍ಇ‍ಡಿ ಡಿಆರ್‍ಎಲ್‍ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಸ್ಪಾಟ್ ಟೆಸ್ಟ್ ಚಿತ್ರಗಳಲ್ಲಿ ಸಿಬಿಎಸ್ ತಂತ್ರಜ್ಞಾನದ ಸಹಕಾರದಿಂದ ಎರಡೂ ತುದಿಯಲ್ಲಿ ಡ್ರಮ್ ಬ್ರೇಕ್‌ಗಳನ್ನು ಸಹ ಕಾಣಬಹುದು. ಯಮಹಾ ಫ್ಯಾಸಿನೊ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಸಸ್‍ಂಪೆಕ್ಷನ್ ಪ್ರಸ್ತುತ ಮಾದರಿಯ ರೀತಿಯಲ್ಲಿ ಇರಲಿದೆ. ಮುಂಭಾಗದಲ್ಲಿ ಟಿಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಅಬ್ಸಾರ್ಬರ್ ಅನ್ನು ಒಳಗೊಂಡಿದೆ.

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ವೈಶಿಷ್ಟ್ಯಗಳ ವಿಷಯದಲ್ಲಿ ಹೊಸ ಯಮಹಾ ಫ್ಯಾಸಿನೊ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಪ್ರಸ್ತುತ ಮಾದರಿಯಲ್ಲಿರುವ ಅನಲಾಗ್ ಕ್ಲಸ್ಟರ್ ಅನ್ನು ಬದಲಾಹಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಪ್ರಸ್ತುತ ಸ್ಕೂಟರ್ 113 ಸಿಸಿ ಸಿಂಗಲ್ ಸಿಲಿಂಡರ್ ಏರ್‍-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.2 ಬಿಎಚ್‍ಪಿ ಪವರ್ ಮತ್ತು 8.2 ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸಿವಿ‍ಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೊಸ ಫ್ಯಾಸಿನೊ ಸ್ಕೂಟರ್‍‍ನಲ್ಲಿರುವ ಎಂಜಿನ್ ಪ್ರಸ್ತುತ ಮಾದರಿಯ ಪ್ರಮಾಣದಲ್ಲಿ ಪವರ್ ಅನ್ನು ಉತ್ಪಾದಿಸುವ ನಿರೀಕ್ಷಿಯಿದೆ. ಆದರೆ ಹೊಸ ಎಂಜಿನ್ ಬಿಎಸ್-6 ಪ್ರೇರಿತವಾಗಿರುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸ್ಪಾಟ್ ಟೆಸ್ಟ್​​ನಲ್ಲಿ ಕಾಣಿಸಿಕೊಂಡ ಬಿಎಸ್-6 ಯಮಹಾ ಫ್ಯಾಸಿನೊ

ಹೊಸ ಜಿಂಗ್‍ವ್ಹೀಲ್ ಫ್ಯಾಸಿನೊ ಸ್ಪೈ ಚಿತ್ರದಿಂದ ಜಪಾನಿನ ಬ್ರ್ಯಾಂಡ್‍‍ನಿಂದ ಜನಪ್ರಿಯ ಸ್ಕೂಟರ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ಬಹಿರಂಗವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ಫ್ಯಾಸಿನೊ ಸ್ಕೂಟರ್, ಹೋಂಡಾ ಆಕ್ಟಿವಾ, ಹೀರೋ ಪ್ಲೆಷರ್ ಮತ್ತು ಟಿ‍ವಿಎಸ್ ಜೂಪಿಟರ್ ಸ್ಕೂಟರ್‍‍ಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on ಯಮಹಾ yamaha
English summary
New Yamaha Fascino BS6 Spied Testing In India Ahead Of Launch: Spy Pics & Other Details - Read in Kannada
Story first published: Tuesday, October 15, 2019, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X