0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯು ಜಿ310 ಟ್ವಿನ್ ಬೈಕ್‍

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ತಮ್ಮ 650 ಟ್ವಿನ್ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರೀಯೆತನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ 2 ರಿಂದ 4 ಲಕ್ಷದ ಬೆಲೆಯಲ್ಲಿ ಮಾರಾಟವಾಗುತ್ತಿರುವ ಬೈಕ್‍ಗಳನ್ನು ಡಿಸ್ಕೌಂಟ್‍ನಲ್ಲಿ ಮಾರಾಟ ಮಾಡುವ ಯೋಜನೆಯನ್ನು ವಾಹನ ತಯಾರಕ ಸಂಸ್ಥೆಗಳು ಮಾಡಿಕೊಂಡಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಆ ಸಂಸ್ಥೆಗಳಲ್ಲಿ ಒಂದಾದ ಬಿಎಂಡಬ್ಲ್ಯೂ ಸಹ ತಾವು ಹೊಸದಾಗಿ ಬಿಡುಗಡೆ ಮಾಡಿದ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‍ಗಳ ಮೇಲೆ ಶೇಕಡ 10ರಷ್ಟು ರಿಯಾಯಿತನ್ನು ನೀಡಲು ಮುಂದಾಗಿದೆ. ಇವುಗಳ ಜೊತೆಗೆ ಶೇಕಡ 0 ರಷ್ಟು ಬಡ್ದಿ ದರ, ಶೇಕಡ 0ರಷ್ಟು ಡೌನ್ ಪೇಮೆಂಟ್ ಆಫರ್ ಅನ್ನು ನೀಡಲಾಗಿದ್ದು, ಈ ಬೈಕ್‍ಗಳ ಆನ್ ರೋಡ್ ಬೆಲೆಯ ಮೇಲೆ ಗ್ರಾಹಕರು ಸುಮಾರು 40,000ವರೆಗು ಕಡಿತವನ್ನು ಪಡೆಯಬಹುದಾಗಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಗಾಡಿವಾಡಿವರದಿ ಪ್ರಕಾರ ಬಿಎಂಡಬ್ಲ್ಯು ಸಂಸ್ಥೆಯ ಬೈಕ್ ಉತ್ಪಾದನಾ ವಿಭಾಗವಾದ ಬಿಎಂಡಬ್ಲ್ಯು ಮೊಟೊರಾಡ್‌ನಿಂದ ಭಾರತೀಯ ಗ್ರಾಹಕರಿಗಾಗಿಯೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಜಿ 310 ಆರ್ ಬೈಕ್ ಮಾದರಿಯು ರೂ. 2.99 ಲಕ್ಷಕ್ಕೆ ಮತ್ತು ಜಿ 310 ಜಿಎಸ್ ಬೈಕ್ ಮಾದರಿಯು ರೂ.3.49 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದವು.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಇನ್ನು ಬಿಎಂಡಬ್ಯು ಸಂಸ್ಥೆಯು ಮೊದಲ ಬಾರಿಗೆ ಭಾರತದಲ್ಲೇ ತನ್ನ ಹೊಸ ಬೈಕ್ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಿದ್ದು, ಬೆಲೆಗಳನ್ನು ತಗ್ಗಿಸುವ ಉದ್ದೇಶದಿಂದ ಟಿವಿಎಸ್ ಜೊತೆ ಕೈಜೋಡಿಸಿದೆ. ತಮಿಳುನಾಡಿನ ಹೊಸೂರುನಲ್ಲಿರುವ ಟಿವಿಎಸ್ ಬೈಕ್ ಉತ್ಪಾದನಾ ಘಟಕದಲ್ಲೇ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳನ್ನ ಉತ್ಪಾದನೆ ಮಾಡಿರುವುದು ಮತ್ತೊಂದು ವಿಶೇಷ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಜಿ 310 ಆರ್ ಬೈಕ್ (ಸ್ಟ್ರೀಟ್ ಫೈಟರ್)

ಬಿಎಂಡಬ್ಲ್ಯು ಜಿ 310 ಆರ್ ಬೈಕ್ ಆವೃತ್ತಿಯು ಸಹ ನಕೆಡ್ ಮೋಟಾರ್ ಸೈಕಲ್ ವಿನ್ಯಾಸಗಳೊಂದಿಗೆ ಗ್ರಾಹಕರ ಕೈ ಸೇರಿದ್ದು, ಬಿಎಂಡಬ್ಲ್ಯು ಎಸ್ 1000 ಬೈಕ್ ಮಾದರಿಯಲ್ಲೇ 41ಎಂಎಂ ಯುಎಸ್‌ಡಿ ಗೋಲ್ಡನ್ ಫೋಕ್ಸ್, 17-ಇಂಚಿನ ಫೈವ್ ಸ್ಪೋಕ್ ಕಾಸ್ಟ್ ಅಲ್ಯುನಿಯಂ ವೀಲ್ಹ್‌ಗಳನ್ನು ಪಡೆದುಕೊಂಡಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಬರೋಬ್ಬರಿ 158.5 ಕೆ.ಜಿ ತೂಕ ಹೊಂದಿರುವ ಜಿ 310 ಆರ್ ಬೈಕ್‌ಗಳು ಡ್ಯುಯಲ್ ಚಾನೆಲ್ ಎಬಿಎಸ್, 140ಎಂಎಂ ಫ್ರಂಟ್ ಸಸ್ಷೆಷನ್, 131ಎಂಎಂ ರಿಯರ್ ಸಸ್ಷೆಷನ್, 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಹೊಂದಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಜಿ 310 ಜಿಎಸ್(ಅಡ್ವೆಂಚರ್)

ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆಗೊಳಿಸಿರುವ ಜಿ 310 ಜಿಎಸ್ ಬೈಕ್‌ಗಳು ಸಿಂಗಲ್ ಸಿಲಿಂಡರ್ ಅಡ್ವೆಂಚರ್ ಪ್ರಿಮಿಯಂ ಬೈಕ್ ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಬೈಕ್ ಆವೃತ್ತಿಯಾಗಿದ್ದು, ಆಪ್ ರೋಡ್ ಮೋಟಾರ್ ಸೈಕಲ್ ಪ್ರೇಮಿಗಳಿಗೆ ಇದೊಂದು ಹಬ್ಬ ಅಂದ್ರೆ ತಪ್ಪಾಗುವುದಿಲ್ಲ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಬಿಎಂಡಬ್ಲ್ಯು ಸಂಸ್ಥೆಯ ಆರ್ 1200 ಜಿಎಸ್ ಬೈಕ್‌ಗಳಲ್ಲಿ ಬಳಸಲಾಗಿರುವ 'ಬೆಬಿ ಜಿಸ್' ಡಿಸೈನ್‌ಗಳನ್ನು ಹೊಸ ಜಿ 310 ಜಿಎಸ್ ಬೈಕ್‌ಗಳಲ್ಲೂ ಬಳಸಲಾಗಿದ್ದು, ಬ್ರೇಕ್ ಫೆಂಡರ್ ಸೇರಿದಂತೆ ಆಪ್ ರೋಡ್ ಬೈಕ್‌ಗಳ ಪ್ರಮುಖ ಗುಣಲಕ್ಷಣವಾದ ಲಗ್ಗೆಜ್ ರಾಕ್ ಕೂಡಾ ಇದರಲ್ಲಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಸ್ಟ್ರೀಟ್ ಫೈಟರ್ ಖ್ಯಾತಿಯ ಜಿ 310 ಆರ್ ಬೈಕಿಗಿಂತಲೂ ಉದ್ದಳತೆಯಲ್ಲಿ ಹೆಚ್ಚಿರುವ ಜಿ 310 ಜಿಎಸ್ ಬೈಕ್‌ಗಳು 169.5 ಕೆ.ಜಿ ತೂಕ ಪಡೆದುಕೊಂಡಿದ್ದು, ಮುಂಭಾಗದಲ್ಲಿ 19 ಇಂಚಿನ ವೀಲ್ಹ್‌ಗಳನ್ನ ಬಳಕೆ ಮಾಡಿದ್ದಲ್ಲಿ ಹಿಂಭಾಗ ಚಕ್ರಗಳು 17 ಇಂಚು ಗಾತ್ರ ಹೊಂದಿವೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಸುರಕ್ಷತೆಯಲ್ಲೂ ಜಿ 310 ಜಿಎಸ್ ಬೈಕಿನಲ್ಲಿ ಹೆಚ್ಚಿನ ಗಮನಹರಿಸಲಾಗಿದ್ದು, ಜಿ 310 ಆರ್ ಬೈಕಿನಂತೆಯೇ ಡ್ಯುಯಲ್ ಚಾನೆಲ್ ಎಬಿಎಸ್ 300ಎಂಎಂ ಫ್ರಂಟ್ ಡಿಸ್ಕ್ ಮತ್ತು 200ಎಂಎಂ ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯವನ್ನ ಸೇರಿಸಲಾಗಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಎರಡು ಬೈಕ್‌ಗಳು ತಾಂತ್ರಿಕವಾಗಿ ಬೇರೆ ಬೇರೆ ವಿನ್ಯಾಸಗಳನ್ನು ಪಡೆದುಕೊಂಡಿದ್ದರೂ ಒಂದೇ ಮಾದರಿಯ ಎಂಜಿನ್ ಪಡೆದುಕೊಂಡಿವೆ. ಎರಡು ಬೈಕ್‌ಗಳಲ್ಲೂ 313 ಸಿಸಿ ಇನ್‌ಲೈನ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದೆ. ಇದೇ ಎಂಜಿನ್ ಅನ್ನು ಟಿವಿಎಸ್ ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ನೋಡಬಹುದಾಗಿದೆ.

0% ಡೌನ್‍ಪೇಮೆಂಟ್‍ನಲ್ಲಿ ಖರೀದಿಸಿ ಬಿಎಂಡಬ್ಲ್ಯೂ ಜಿ310 ಟ್ವಿನ್ ಬೈಕ್‍

313 ಸಿಸಿ ಇನ್‌ಲೈನ್ ಸಿಂಗಲ್ ಸಿಲಿಂಡರ್ ಎಂಜಿನ್‌ಗಳು 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಎರಡು ಬೈಕ್ ಮಾದರಿಗಳಲ್ಲೂ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಮೂಲಕ ಪ್ರತಿ ಗಂಟೆಗೆ 145 ಟಾಪ್ ಸ್ಪೀಡ್ ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಇಂಧನ ದಕ್ಷತೆಯಲ್ಲೂ ಉತ್ತಮವಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 30ರಿಂದ 35 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲವು.

Most Read Articles

Kannada
English summary
Now Buy BMW G310R And G310GS With 0% Interest And Downpayment. Read In Kannada
Story first published: Saturday, June 15, 2019, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X