ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ650 ಟ್ವಿನ್ ಬೈಕ್‍‍ಗಳು

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಕಾಂಟಿನೆಂಟಲ್ ಜಿಟಿ650 ಹಾಗೂ ಇಂಟರ್‍‍ಸೆಪ್ಟರ್ 650 ಬೈಕುಗಳಿಗಾಗಿ, ಓಹ್ಲಿನ್ ಸಸ್ಪೆಂಷನ್‍‍ಗಳು ಇನ್ನು ಮುಂದೆ ಭಾರತದಲ್ಲಿ ಮಾರಾಟವಾಗಲಿವೆ. ಪ್ರೀಮಿಯಂ ಸಸ್ಪೆಂಷನ್ ಬಿಡಿಭಾಗಗಳಿಗೆ ಹೆಸರುವಾಸಿಯಾದ ಓಹ್ಲಿನ್, ರಾಯಲ್ ಎನ್‍‍ಫೀಲ್ಡ್ 650ಯ ಜೋಡಿ ಬೈಕುಗಳಿಗಾಗಿ ಸ್ಪೋರ್ಟ್ ಸಸ್ಪೆಂಷನ್‍‍ಗಳನ್ನು ಮಾರಾಟ ಮಾಡಲಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಕಾಂಟಿನೆಂಟಲ್ ಜಿಟಿ 650 ಹಾಗೂ ಇಂಟರ್‍‍ಸೆಪ್ಟರ್ 650 ಬೈಕುಗಳನ್ನು 2018ರ ನವೆಂಬರ್ 14ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಈ ಬೈಕುಗಳು ಬಿಡುಗಡೆಯಾದ ಸ್ವಲ್ಪ ಕಾಲದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದವು. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಬೈಕುಗಳಿಗಾಗಿ ಸಾವಿರಾರು ಬುಕ್ಕಿಂಗ್‍‍ಗಳನ್ನು ಪಡೆಯಿತು. ಈ ಬೈಕುಗಳು ನಿರೀಕ್ಷೆಗೂ ಮೀರಿ ಮಾರಾಟವಾಗಿವೆ. ಬಿಡುಗಡೆಯಾದ ಹಲವು ತಿಂಗಳುಗಳ ನಂತರವೂ ಈ ಬೈಕುಗಳ ವೇಟಿಂಗ್ ಪಿರಿಯಡ್ ಐದು ತಿಂಗಳುಗಳವರೆಗೆ ಇದೆ.

ಬಿಡುಗಡೆಯಾದ ಈ 8 ತಿಂಗಳ ಅವಧಿಯಲ್ಲಿ ಆರ್‌ಇ 650 ಟ್ವಿನ್ ಬೈಕುಗಳು ಹಲವಾರು ಟ್ಯೂನರ್‌ಗಳು ಈ ಬೈಕುಗಳನ್ನು ಪ್ರವೇಶಿಸಿವೆ.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಈ ಬೈಕುಗಳು ಹಲವಾರು ರೀತಿಯಲ್ಲಿ ಮಾಡಿಫೈಗೊಂಡಿವೆ. ಇತ್ತೀಚಿಗಷ್ಟೇ ರಜಪೂತಾನ ಕಸ್ಟಮ್ಸ್ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಮಾಡಿಫೈಗೊಳಿಸಿತ್ತು. ಬೈಕುಗಳನ್ನು ಮಾಡಿಫೈಗೊಳಿಸಲು ಬಯಸದೇ ಇರುವವರು ಹಲವಾರು ಮಂದಿ ಇರುತ್ತಾರೆ. ಅವರು ತಮ್ಮ ಬೈಕ್ ಸರಿಯಾಗಿ ನಿರ್ವಹಿಸಿದರೆ ಸಾಕು ಎಂದು ಬಯಸುತ್ತಾರೆ. ಅಂತಹವರಿಗಾಗಿ ಓಹ್ಲಿನ್ಸ್ ಕೆಲವು ಅಪ್‍‍ಡೇಟ್‍‍ಗಳನ್ನು ನೀಡಲಿದೆ. ಓಹ್ಲಿನ್ ಕಂಪನಿಯು 1976ರಲ್ಲಿ ಸ್ಥಾಪನೆಯಾದ ಸ್ವೀಡಿಷ್ ಕಂಪನಿಯಾಗಿದೆ.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಈ ಕಂಪನಿಯ ಸ್ಥಾಪಕರಾದ ಕೆಂತ್ ಓಹ್ಲಿನ್ ಆರಂಭದಲ್ಲಿ ಎಕ್ಸಾಸ್ಟ್ ಪೈಪ್, ಎಂಜಿನ್ ಹಾಗೂ ಸಸ್ಪೆಂಷನ್ ಸಿಸ್ಟಂಗಳನ್ನು ತಯಾರಿಸಿದರು. ಕೆಲವು ವರ್ಷಗಳ ನಂತರ, ಕಂಪನಿಯು ಸಸ್ಪೆಂಷನ್ ಸಿಸ್ಟಂಗಳನ್ನು ಮಾತ್ರ ತಯಾರಿಸಲು ಆರಂಭಿಸಿತು. ಅವುಗಳನ್ನು ಉತ್ತಮವಾಗಿ ತಯಾರಿಸುವಲ್ಲಿ ಹೆಸರುವಾಸಿಯಾಯಿತು. ವರ್ಷದಿಂದ ವರ್ಷಕ್ಕೆ ಓಹ್ಲಿನ್ಸ್ ಟಾಪ್ ಬೈಕ್ ತಯಾರಕ ಕಂಪನಿಗಳಿಗೆ ಒಇ‍ಎಂ ಪೂರೈಸುವ ಕಂಪನಿಯಾಯಿತು.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಓಹ್ಲಿನ್ ಸಸ್ಪೆಂಷನ್‍‍ಗಳನ್ನು ಹೊಂದಿದ್ದ ರೇಸ್ ಟೀಂಗಳು ವಿವಿಧ ವಿಭಾಗದ ಮೋಟಾರ್‍‍‍ಸ್ಪೋರ್ಟ್‍‍ನಲ್ಲಿ ಚಾಂಪಿಯನ್‍‍ಶಿಪ್‍‍ಗಳನ್ನು ಗೆದ್ದವು. ಓಹ್ಲಿನ್ಸ್ ಕಂಪನಿಯು, ರೇಸಿಂಗ್ ಹಾಗೂ ರಸ್ತೆಗಳಲ್ಲಿ ಚಲಿಸುವ ಬೈಕುಗಳಿಗಾಗಿ ಅತ್ಯುತ್ತಮ ಸಸ್ಪೆಂಷನ್ ಸಿಸ್ಟಂಗಳನ್ನು ತಯಾರಿಸುತ್ತಿದೆ. ಇತ್ತೀಚೆಗೆ ಅನಾವರಣಗೊಂಡ 2020ರ ಯಮಹಾ ವೈಝಡ್‍ಎಫ್-ಆರ್1ಎಂ, ಬೈಕ್ ಸಹ ಓಹ್ಲಿನ್ ಸಸ್ಪೆಂಷನ್ ಸಿಸ್ಟಂಗಳನ್ನು ಹೊಂದಿದೆ.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಜನಪ್ರಿಯವಾಗಿರುವ ಓಹ್ಲಿನ್ ಕಂಪನಿಯು, ಆರ್‌ಇ 650 ಟ್ವಿನ್ ಬೈಕುಗಳಿಗೆ ಸಸ್ಪೆಂಷನ್ ಸಿಸ್ಟಂಗಳನ್ನು ಅಳವಡಿಸುತ್ತಿದೆಯೆಂದರೆ, ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕುಗಳು ಸಾಕಷ್ಟು ಪ್ರಭಾವ ಬೀರಿವೆ. ಮುಂಭಾಗದ ಸಸ್ಪೆಂಷನ್‍‍ಗಾಗಿ ಎಫ್‌ಎಸ್‍‍ಕೆ 145 ಫೋರ್ಕ್ ಸ್ಪ್ರಿಂಗ್ ಕಿಟ್ ಅನ್ನು ಓಹ್ಲಿನ್ ಬಿಡುಗಡೆಗೊಳಿಸಿದೆ. ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650 ಬೈಕುಗಳಿಗಾಗಿ ಹಿಂಭಾಗದಲ್ಲಿ ಆರ್‌ಇ 911 ಅಥವಾ ಆರ್‌ಇ 912 ಅಡ್ಜಸ್ಟಬಲ್ ಟ್ವಿನ್ ಶಾಕ್‍‍ಗಳನ್ನು ಬಿಡುಗಡೆಗೊಳಿಸಿದೆ.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಸಸ್ಪೆಂಷನ್ ಸಿಸ್ಟಂ ಹಲವಾರು ಡ್ಯಾಂಪಿಂಗ್ ಹಾಗೂ ಹೈಟ್ ಅಡ್ಜಸ್ಟ್ ಮೆಂಟ್ ಆಯ್ಕೆಗಳನ್ನು ಹೊಂದಿರಲಿದೆ. ಇದರಿಂದಾಗಿ ಸವಾರನು ಬೈಕ್ ಅನ್ನು ಸರಿಯಾಗಿ ಸೆಟ್ ಅಪ್ ಮಾಡಿಕೊಳ್ಳಬಹುದಾಗಿದೆ. ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ 650, ಇಂಟರ್ ಸೆಪ್ಟರ್ 650 ಎರಡೂ ಬೈಕುಗಳನ್ನು ಸರಿಯಾಗಿ ಹ್ಯಾಂಡಲ್‍ ಮಾಡಬಹುದಾಗಿದೆ. ಕೆಫೆ ರೇಸರ್ ವಿನ್ಯಾಸವನ್ನು ಹೊಂದಿರುವ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹ್ಯಾಂಡಲ್‍ ಮಾಡಬಹುದಾಗಿದೆ.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಹಾಗೂ ಕಾಂಟಿನೆಂಟಲ್ ಜಿಟಿ 650 ಬೈಕುಗಳನ್ನು ವೇಗದಲ್ಲಿ ಚಲಾಯಿಸಿದಾಗ ಅವುಗಳ ಸಸ್ಪೆಂಷನ್‍ ಮೃದುವಾಗಿರುವುದು, ಅವುಗಳನ್ನು ವಿಮರ್ಶೆ ಮಾಡಿದ ನಂತರ ಕಂಡು ಬಂದಿದೆ. ಬೈಕ್ ನಿರ್ವಹಣೆಯ ಬಗ್ಗೆ ಕಾಳಜಿ ವಹಿಸುವ ಹೆಚ್ಚು ಉತ್ಸಾಹಭರಿತ ಸವಾರರಿಗೆ, ಇದರಿಂದ ನಿರಾಶೆಯಾಗಬಹುದು. ಓಹ್ಲಿನ್ಸ್ ಈಗ ನಿಮ್ಮ ಆರ್‌ಇ 650 ಗಾಗಿ ಪೂರ್ಣವಾದ ಸಸ್ಪೆಂಷನ್‍ ಸೆಟಪ್ ಅನ್ನು ಹೊಂದಿದೆ.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಎಫ್‌ಎಸ್‌ಕೆ 145 ಫೋರ್ಕ್ ಸ್ಪ್ರಿಂಗ್ ಕಿಟ್‌ನ ಬೆಲೆಯು ರೂ.19,000ಗಳಾಗಿದ್ದರೆ, ಹಿಂಭಾಗದ ಟ್ವಿನ್ ಶಾಕ್ ಸಸ್ಪೆಂಷನ್ ಸೆಟಪ್‌‍‍ನ ಬೆಲೆ ರೂ.75,000ಗಳಾಗಿದೆ. ಈ ಬೆಲೆಯು ಶಿಪ್ಪಿಂಗ್ ಹಾಗೂ ಆಮದು ಸುಂಕಗಳನ್ನು ಒಳಗೊಂಡಿದೆ. ಎಫ್ಎಸ್‍‍ಕೆ 145 ಫೋರ್ಕ್ ಸ್ಪ್ರಿಂಗ್ ಕಿಟ್‍‍ಗಳನ್ನು ಯಮಹಾ ವೈಜೆಡ್ಎಫ್ ಆರ್3, ಕವಾಸಕಿ ನಿಂಜಾ 300 ಆರ್, ಹೋಂಡಾ ಸಿಬಿಆರ್ 250 ಆರ್, ಹೋಂಡಾ ಸಿಬಿ 300 ಆರ್, ಹೋಂಡಾ ಸಿಬಿ 650ಎಫ್ ಹಾಗೂ ಕವಾಸಕಿ ಇಆರ್6ಎನ್ ಬೈಕುಗಳಲ್ಲಿಯೂ ಬಳಸಬಹುದು.

ಓಹ್ಲಿನ್ ಸಸ್ಪೆಂಷನ್ ಹೊಂದಲಿವೆ ಆರ್‍ಇ ಟ್ವಿನ್ ಬೈಕ್‍‍ಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸಸ್ಪೆಂಷನ್ ಸಿಸ್ಟಂಗಳ ವಿಷಯಕ್ಕೆ ಬಂದಾಗ ಓಹ್ಲಿನ್ ಸದಾ ಮುಂಚೂಣಿಯಲ್ಲಿರುತ್ತದೆ. ಆರ್‌ಇ 650 ಟ್ವಿನ್ ಬೈಕುಗಳಿಗೆ ಸಸ್ಪೆಂಷನ್ ಸಿಸ್ಟಂಗಳನ್ನು ಅಳವಡಿಸುತ್ತಿರುವುದು ಈ ಬೈಕುಗಳ ಮಾಲೀಕರಲ್ಲಿ ಸಂತಸ ತಂದಿದೆ. ಆದರೆ ನಿರೀಕ್ಷೆಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ. ಸಸ್ಪೆಂಷನ್ ಸಿಸ್ಟಂಗಳನ್ನು ಖರೀದಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವುದಿಲ್ಲ.

Most Read Articles

Kannada
English summary
Öhlins Launches Aftermarket Suspension System For Royal Enfield 650 Twins - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X