ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದತ್ತ ಮುಖ ಮಾಡುತ್ತಿವೆ. ಕೇಂದ್ರ ಸರ್ಕಾರವು ಸಹ ಈ ನಿಟ್ಟಿನಲ್ಲಿ ಇವಿ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಫೇಮ್ 2 ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಭಾಗವಾಗಿ ಒಕಿನಾವ ಸಂಸ್ಥೆಯು ತನ್ನ ಉದ್ಯಮ ಕ್ಷೇತ್ರದ ವಿಸ್ತರಣೆಗೆ ಯೋಜನೆ ರೂಪಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಸದ್ಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಒಕಿನಾವ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗಾಗಿ ಸಿದ್ದವಾಗುತ್ತಿದೆ. ಹೀಗಾಗಿ ಪ್ರಸ್ತುತ ಕಾರ್ಯಚರಣೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಇದಕ್ಕಾಗಿ ಬರೋಬ್ಬರಿ ರೂ.200 ಬಂಡವಾಳ ಹೂಡಿಕೆ ಮಾಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಒಕಿನವಾ ಸಂಸ್ಥೆಯು ಸದ್ಯ ರಾಜಸ್ತಾನದ ಆಳ್ವಾರ್‌ನಲ್ಲಿ ಒಂದು ಸ್ಕೂಟರ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಈ ಘಟಕದಲ್ಲಿ ವಾರ್ಷಿಕವಾಗಿ 5 ಲಕ್ಷ ಸ್ಕೂಟರ್ ಉತ್ಪಾದನೆ ಮಾಡಿ ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ರಫ್ತು ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಇದೀಗ ಕೇಂದ್ರ ಸರ್ಕಾರವು ಫೇಮ್ 2 ಯೋಜನೆ ಮೂಲಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಭರ್ಜರಿ ಸಬ್ಸಡಿ ಘೋಷಣೆ ಮಾಡಿರುವ ಪರಿಣಾಮ ಎಲೆಕ್ಟ್ರಿಕ್ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಸುಗ್ಗಿಕಾಲ ಶುರುವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಹೀಗಾಗಿಯೇ ಒಕಿನವಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸಾಮಾನ್ಯ ಮಾದರಿಯ ವಾಹನ ಉತ್ಪಾದನೆಗಿಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಹೆಚ್ಚು ಗಮನಹರಿಸಿರುವುದಲ್ಲದೇ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಗ್ರಾಹಕರನ್ನ ಸೆಳೆಯಲು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಪ್ರೇರಿತ ವಾಹನಗಳನ್ನು ಬಿಡುಗಡೆಗಾಗಿ ಸಿದ್ದವಾಗುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಇದರಲ್ಲಿ ಒಕಿನವಾ ಈಗಾಗಲೇ ಎರಡು ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೇಂದ್ರ ಸರ್ಕಾರವು ಘೋಷಣೆ ಮಾಡಿದ ಫೇಮ್ 2 ಯೋಜನೆಗೆ ಅರ್ಹವಾಗಿರುವುದು ಒಕಿನವಾ ಸಂಸ್ಥೆಗೆ ಮತ್ತಷ್ಟು ಬಲಬಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಫೇಮ್ 2 ಯೋಜನೆಗೆ ಅರ್ಹವಾಗಲು ಎಲೆಕ್ಟ್ರಿಕ್ ವಾಹನಗಳು ಕಡ್ಡಾಯವಾಗಿ ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಹೊಂದಿರಬೇಕಿದ್ದು, ಹೊಸ ಯೋಜನೆಗೆ ಅರ್ಹವಾಗಲು ಬೇಕಿದ್ದ ಎಲ್ಲಾ ಅಂಶಗಳು ಪಡೆದುಕೊಂಡಿದ್ದ ಒಕಿನವಾ ಸಂಸ್ಥೆಯು ಫೇಮ್ 2 ಸಬ್ಸಡಿ ಯೋಜನೆಗೆ ಯಾವುದೇ ಅಡೆತಡೆಯಿಲ್ಲದೇ ಆಯ್ಕೆಗೊಂಡಿತು.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಫೇಮ್ 2 ಯೋಜನೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.26 ಸಾವಿರ ಸಬ್ಸಡಿ ದೊರೆಯಲಿದ್ದು, ಇದು ಸ್ಕೂಟರ್ ಮಾರಾಟವನ್ನು ಹೆಚ್ಚಿಸಲು ಸಾಕಷ್ಟು ಸಹಕಾರಿಯಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಇದರಿಂದ ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಯೋಜಿಸಿರುವ ಒಕಿನವಾ ಸಂಸ್ಥೆಯು 2020ರ ಮಾರ್ಚ್ ಅಂತ್ಯಕ್ಕೆ ಸ್ಕೂಟರ್ ಉತ್ಪಾದನಾ ಸಾಮರ್ಥ್ಯವನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಗುರಿಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉದ್ಯಮ ವಿಸ್ತರಣೆಗಾಗಿ ರೂ.200 ಕೋಟಿ ಹೂಡಿಕೆ ಮಾಡಿದ ಒಕಿನಾವ

ಇನ್ನು ಒಕಿನವಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ರಿಡ್ಜ್ ಪ್ಲಸ್, ಐ-ಪ್ರೈಸ್ ಎನ್ನುವ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಅಥೆರ್ ಎನರ್ಜಿ ಸಂಸ್ಥೆಯ ಎಸ್ 340 ಮತ್ತು ಎಸ್ 450 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಪ್ರತಿ ಚಾರ್ಜ್‌ಗೆ 120ರಿಂದ 180 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ಬ್ಯಾಟರಿಯನ್ನು ಒದಗಿಸಲಾಗುತ್ತಿದೆ.

Most Read Articles

Kannada
English summary
Okinawa Autotech Invests Rs 200 Crore to Set up New Plant. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X