ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ರೆಡ್ ರೂಸ್ಟರ್ ಪರ್ಫಾರ್ಮೆನ್ಸ್, ಜಾವಾ ಬೈಕುಗಳಿಗಾಗಿ ಎರಡು ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ಬಿಡುಗಡೆಗೊಳಿಸಿದೆ. ರೆಡ್ ರೂಸ್ಟರ್ ಪರ್ಫಾಮೆನ್ಸ್ ಎಕ್ಸಾಸ್ಟ್ ಗಳನ್ನು 304 ದರ್ಜೆಯ ಸ್ಟೇನ್‌ಲೆಸ್ ಸ್ಟೀಲ್‍‍ನಿಂದ ತಯಾರಿಸಲಾಗಿದೆ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ರೆಡ್ ರೂಸ್ಟರ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಹಾಗೂ ಕೆಟಿಎಂ ಬೈಕುಗಳಿಗೂ ಸಹ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ತಯಾರಿಸುತ್ತದೆ. ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳು ಜಾವಾ ಬೈಕುಗಳ ಪರ್ಫಾಮೆನ್ಸ್ ಅನ್ನು 20%ನಷ್ಟು ಹೆಚ್ಚಿಸುತ್ತವೆ ಎಂದು ವದಂತಿಗಳು ಹಬ್ಬಿವೆ. ಆದರೆ ಈ ಸುದ್ದಿ ನಿಜವಲ್ಲ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ರೆಡ್ ರೂಸ್ಟರ್ ಪರ್ಫಾಮೆನ್ಸ್ ಕಂಪನಿಯ ಪ್ರಕಾರ ಎರಡೂ ಎಕ್ಸಾಸ್ಟ್ ಗಳು ಔಟ್‌ಪುಟ್ ಅಂಕಿ ಅಂಶಗಳನ್ನು ನಿಖರವಾಗಿ ಹೆಚ್ಚಿಸುತ್ತವೆ. ರೆಡ್ ರೂಸ್ಟರ್ ಪರ್ಫಾಮೆನ್ಸ್ ತಯಾರಿಸಿರುವ ಆಫ್ಟರ್ ಮಾರ್ಕೆಟ್ ಎಕ್ಸಾಸ್ಟ್ ಗಳನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಸೆಲೆಸ್ಟಾ ಮೊದಲನೆಯ ಮಾದರಿಯಾಗಿದೆ. ನಯವಾಗಿ, ಉದ್ದವಾಗಿರುವ ಈ ಎಕ್ಸಾಸ್ಟ್ ಬೆಲೆ ರೂ.16,490ಗಳಾಗಿದೆ. ಈ ಉದ್ದನೆಯ ಎಕ್ಸಾಸ್ಟ್ ಪವರ್ ಅನ್ನು 27 ಬಿ‍‍ಹೆಚ್‍‍ಪಿಯಿಂದ 27.7 ಬಿ‍‍ಹೆಚ್‍‍ಪಿಗಳಿಗೆ ಹೆಚ್ಚಿಸುತ್ತದೆ. ಅಂದರೆ .7ನಷ್ಟು ಬಿ‍‍ಹೆಚ್‍‍ಪಿ ಪವರ್ ಅನ್ನು ಹೆಚ್ಚಿಸುತ್ತದೆ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಸೆಲೆಸ್ಟಾ ಪ್ರೊ ಎರಡನೇ ಮಾದರಿಯಾಗಿದೆ. ಈ ಚಿಕ್ಕ ಎಕ್ಸಾಸ್ಟ್ ನ ಬೆಲೆ ರೂ.16,990ಗಳಾಗಿದೆ. ರೆಡ್ ರೂಸ್ಟರ್ ಕಂಪನಿಯ ಪ್ರಕಾರ, ಸೆಲೆಸ್ಟಾ ಎಕ್ಸಾಸ್ಟ್ ಗಿಂತ ಸೆಲೆಸ್ಟಾ ಪ್ರೊ ಹೆಚ್ಚು ಸದ್ದು ಮಾಡುತ್ತದೆ. ಬೈಕುಗಳಲ್ಲಿನ ಪವರ್ ಅನ್ನು 27 ಬಿ‍‍ಹೆಚ್‍‍ಪಿಯಿಂದ 27.6 ಬಿ‍‍ಹೆಚ್‍‍ಪಿಗೆ ಹೆಚ್ಚಿಸುತ್ತದೆ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ರೆಡ್ ರೂಸ್ಟರ್ ಪರ್ಫಾರ್ಮೆನ್ಸ್ ಶಿಪ್ಪಿಂಗ್ ಶುಲ್ಕವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಎಕ್ಸಾಸ್ಟ್ ಗಳನ್ನು ಖರೀದಿಸಲು ಬ್ಯಾಂಕ್ ಮೂಲಕ ಹಣ ಪಾವತಿಸಬೇಕಾಗಿದೆ. ಜಾವಾ ಹಾಗೂ ಜಾವಾ 42 ಬೈಕುಗಳು 293 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿವೆ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಆರು ಸ್ಪೀಡ್‍‍ನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ರೆಡ್ ರೂಸ್ಟರ್ ಪರ್ಫಾಮೆನ್ಸ್ ಎಕ್ಸಾಸ್ಟ್ ಗಳನ್ನು ಅಳವಡಿಸುವುದರಿಂದ ಈ ಬೈಕುಗಳ ಪರ್ಫಾಮೆನ್ಸ್ ನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಜಾವಾ ಕಂಪನಿಯು ಭಾರತದಲ್ಲಿ ತನ್ನ ಮೂರನೇ ಬೈಕ್ ಆದ ಪೆರಾಕ್ ಬಾಬರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಈ ಬೈಕ್ 334ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್, ಡಿ‍ಒ‍‍ಹೆಚ್‍‍ಸಿ, ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ 4 ವಾಲ್ವ್ ಎಂಜಿನ್ ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಈ ಎಂಜಿನ್ 30 ಬಿ‍‍ಹೆಚ್‍‍ಪಿ ಪವರ್ ಹಾಗೂ 31 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ರೆಡ್ ರೂಸ್ಟರ್ ಪರ್ಫಾಮೆನ್ಸ್ ಇಂಟರ್‍‍ನ್ಯಾಷನಲ್ ಪ್ರೈ ಲಿ. ಬೆಂಗಳೂರು ಮೂಲದ ಕಂಪನಿಯಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಈ ಕಂಪನಿಯು ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್, ಥಂಡರ್ ಬರ್ಡ್, ಹಿಮಾಲಯನ್, ಕಾಂಟಿನೆಂಟಲ್ ಜಿ‍ಟಿ 535, ರಾಯಲ್ ಎನ್‍‍ಫೀಲ್ಡ್ 650 ಬೈಕುಗಳಿಗೆ ಹಾಗೂ ಕೆ‍‍ಟಿ‍ಎಂ ಬೈಕುಗಳಿಗಾಗಿ ಎಕ್ಸಾಸ್ಟ್ ಸಿಸ್ಟಂ ಹಾಗೂ ಏರ್ ಫಿಲ್ಟರ್‍‍ಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಈ ಕಂಪನಿಯು ನಾಲ್ಕು ಚಕ್ರದ ವಾಹನಗಳಿಗಾಗಿ ಏರ್ ಫಿಲ್ಟರ್ ಹಾಗೂ ಪರ್ಫಾಮೆನ್ಸ್ ಸಸ್ಪೆಂಷನ್‍‍ಗಳನ್ನು ಸಹ ತಯಾರಿಸುತ್ತದೆ.

ಜಾವಾ ಬೈಕುಗಳಿಗಾಗಿ ಎಕ್ಸಾಸ್ಟ್ ಬಿಡುಗಡೆಗೊಳಿಸಿದ ರೆಡ್ ರೂಸ್ಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಕ್ಸಾಸ್ಟ್ ಸಿಸ್ಟಂಗಾಗಿ ರೂ.17,000 ಹೆಚ್ಚು ನೀಡಿ ಆ ಎಕ್ಸಾಸ್ಟ್ ಸಿಸ್ಟಂಗಳು ಕೇವಲ .6 ಅಥವಾ .7ನಷ್ಟು ಹಾರ್ಸ್ ಪವರ್ ಅನ್ನು ಹೆಚ್ಚಿಗೆ ಉತ್ಪಾದನೆಗೊಳಿಸುವುದು ಸರಿಯಾದ ಮಾರ್ಗವಲ್ಲ. ರೆಡ್ ರೂಸ್ಟರ್ ಕಂಪನಿಯು ಈ ಎಕ್ಸಾಸ್ಟ್ ಸಿಸ್ಟಂ ಅನ್ನು ಯಾವ ಕಾರಣಕ್ಕಾಗಿ ಮಾರಾಟ ಮಾಡುತ್ತಿದೆ ಎಂಬುದು ತಿಳಿದು ಬಂದಿಲ್ಲ. ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್‍‍ಗಳಿಗಾಗಿ ಅಪ್‍‍ಗ್ರೇಡ್ ಮಾಡಬಹುದಾದರೂ, ಎಕ್ಸಾಸ್ಟ್ ಸಿಸ್ಟಂಗಳನ್ನು ಹೆಚ್ಚುವರಿ ಹಣ ಪಡೆದು ಅಳವಡಿಸಿಕೊಳ್ಳುವುದು ಸಮಂಜಸವೆನಿಸುವುದಿಲ್ಲ.

Most Read Articles

Kannada
English summary
Red Rooster Launches Aftermarket Exhausts For Jawa Motorcycles: Details And Prices - Read in Kannnada
Story first published: Saturday, October 5, 2019, 10:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X