ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಇಟಲಿಯ ಆಟೋಮೊಬೈಲ್ ದೈತ್ಯ ಕಂಪನಿಯಾದ ಪಿಯಾಜಿಯೊ ದೇಶಿಯ ಮಾರುಕಟ್ಟೆಯಲ್ಲಿನ ಮಿಡ್ಲ್ ವೇಟ್ ಬೈಕ್ ಸೆಗ್‍‍ಮೆಂಟ್ ಅನ್ನು ಪ್ರವೇಶಿಸಲು ಬಯಸಿದೆ. ಈ ಮೂಲಕ ಈ ಸೆಗ್‍‍ಮೆಂಟ್‍ನಲ್ಲಿ ಪ್ರಾಬಲ್ಯ ಹೊಂದಿರುವ ರಾಯಲ್ ಎನ್‍‍ಫೀಲ್ಡ್ ಗೆ ಸಡ್ಡು ಹೊಡೆಯಲು ಮುಂದಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಈ ಮೊದಲು ಎಪ್ರಿಲಿಯಾ ಬೈಕ್‍‍ಗಳನ್ನು 150 ಸಿಸಿ ಸೆಗ್‍‍ಮೆಂಟ್‍‍ನಲ್ಲಿ ಬಿಡುಗಡೆಗೊಳಿಸಲು ಬಯಸಿತ್ತು. ಆದರೆ ಗ್ರಾಹಕರು ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕುಗಳತ್ತ ವಾಲುತ್ತಿರುವುದನ್ನು ಮನಗೊಂಡ ಕಂಪನಿಯು ಮಿಡ್ಲ್ ವೇಟ್ ಸೆಗ್‍‍ಮೆಂಟ್‍‍ನಲ್ಲಿ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಎಕನಾಮಿಕ್ ಟೈಮ್ಸ್ ಆಟೋ ವರದಿಗಳ ಪ್ರಕಾರ, ಪಿಯಾಜಿಯೊ ಕಂಪನಿಯು 250 ಸಿಸಿ ಹಾಗೂ 350 ಸಿಸಿ ಸಾಮರ್ಥ್ಯದ ಬೈಕ್‍‍ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಬಗ್ಗೆ ಪಿಯಾಜಿಯೊ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಗ್ರಾಫಿರವರು ಮಾತನಾಡಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ನಾವು ಭಾರತದಲ್ಲಿರುವ ಬೈಕ್ ಸೆಗ್‍‍ಮೆಂಟಿಗೆ ಕಾಲಿಡುವತ್ತ ಗಮನ ಹರಿಸುತ್ತಿದ್ದೇವೆ. ಪ್ರಪಂಚದ್ಯಾಂತ ನಡೆದ ಸ್ಪರ್ಧೆಗಳಲ್ಲಿ ಗೆದ್ದಿರುವ ಎಪ್ರಿಲಿಯಾದಂತಹ ಬೈಕ್ ಅನ್ನು ಬಿಡುಗಡೆಗೊಳಿಸುವುದು ಸಹಜವಾಗಿದೆ ಎಂದು ಗ್ರಾಫಿರವರು ಹೇಳಿದ್ದಾರೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಕಳೆದ ಹಣಕಾಸು ವರ್ಷದಲ್ಲಿ ದೇಶಿಯ ಮಾರುಕಟ್ಟೆಯ 250 ಸಿಸಿ - 350 ಸಿಸಿ ಸೆಗ್‍‍ಮೆಂಟಿನಲ್ಲಿ 7,73,855 ಬೈಕ್‍‍ಗಳನ್ನು ಮಾರಾಟ ಮಾಡಲಾಗಿದೆ. ಈ ಪೈಕಿ ರಾಯಲ್ ಎನ್‍‍ಫೀಲ್ಡ್ ಬೈಕಿನ 7,64,012 ಯುನಿಟ್‍ಗಳನ್ನು ಮಾರಾಟ ಮಾಡಲಾಗಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಈ ಮೂಲಕ ಮಾರುಕಟ್ಟೆಯಲ್ಲಿ ಬಹುತೇಕ 99%ನಷ್ಟು ಶೇರುಗಳನ್ನು ಹೊಂದಿದೆ. ಪಿಯಾಜಿಯೊ ಮಾರುಕಟ್ಟೆಯನ್ನು ಅಧ್ಯಯನ ಮಾಡಿ, 250 ಸಿಸಿ - 350 ಸಿಸಿ ಸರಣಿಯ ಬೈಕ್‍‍ಗಳನ್ನು ಬಿಡುಗಡೆಗೊಳಿಸಲಿದೆ. ಈ ಸೆಗ್‍‍ಮೆಂಟಿನಲ್ಲಿ ಬೈಕ್‍‍ಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿರುವುದಾಗಿ ಪಿಯಾಜಿಯೊ ತಿಳಿಸಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಇದರ ಜೊತೆಗೆ ಪಿಯಾಜಿಯೊ ಭಾರತಕ್ಕಾಗಿಯೇ ನಿರ್ದಿಷ್ಟ ಮಾದರಿಯ ಸ್ಕೂಟರ್ ಅನ್ನು ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ಪಿಯಾಜಿಯೊ ವೆಸ್ಪಾ ಸ್ಕೂಟರ್ ಅನ್ನು ಸಹ ಅಪ್‍‍ಗ್ರೇಡ್‍‍ಗೊಳಿಸುತ್ತಿದೆ.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಈ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟವು 15.74%ನಷ್ಟು ಕುಸಿದಿದೆ ಎಂದು ಸಿಯಾಮ್‌ನ ಅಂಕಿ ಅಂಶಗಳು ಹೇಳಿವೆ. ಆಟೋ ಮೊಬೈಲ್ ಉದ್ಯಮದ ಒಟ್ಟಾರೆ ಮಾರಾಟವು 2019ರ ಏಪ್ರಿಲ್‌ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ 1.29 ಕೋಟಿ ಯುನಿಟ್‌ಗಳಷ್ಟಿದೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಪ್ರಸ್ತುತ ವೆಸ್ಪಾ ಮತ್ತು ಏಪ್ರಿಲಿಯಾಗಳನ್ನು ಮಾರಾಟ ಮಾಡುತ್ತಿರುವ ಪಿಯಾಜಿಯೊ ದ್ವಿಚಕ್ರ ವಾಹನಗಳ ಮಾರಾಟವು 16.86%ನಷ್ಟು ಕುಸಿದಿದ್ದು, 48,471 ಯುನಿಟ್‌ಗಳು ಮಾರಾಟವಾಗಿವೆ ಎಂದು ಸಿಯಾಮ್ ವರದಿಗಳು ತಿಳಿಸಿವೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು, 2020 ರ ಏಪ್ರಿಲ್ 1 ರಿಂದ ಜಾರಿಗೆ ಬರಲಿರುವ ಬಿಎಸ್ 6 ನಿಯಮಗಳಿಗೆ ತಕ್ಕಂತೆ ಡೀಸೆಲ್, ಪೆಟ್ರೋಲ್ ಹಾಗೂ ಎಲ್‌ಪಿಜಿ / ಸಿಎನ್‌ಜಿ ತ್ರಿಚಕ್ರ ವಾಹನಗಳನ್ನು ಅಪ್‍‍ಗ್ರೇಡ್‍‍ಗೊಳಿಸಲು ಬಯಸಿದೆ. ಪಿಯಾಜಿಯೊ ಭಾರತದಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಸಹ ಬಿಡುಗಡೆಗೊಳಿಸಲಿದೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ತನ್ನ ಆಪೆ ಎಲೆಕ್ಟ್ರಿಕ್ ಆಟೋಗಳಿಗೆ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶದಿಂದ ಸನ್ ಮೊಬಿಲಿಟಿ ಜೊತೆ ಪಾಲುದಾರಿಕೆಯನ್ನು ಹೊಂದಿದೆ. ಈ ಸಹಭಾಗಿತ್ವದಲ್ಲಿ ದೇಶದ 15 ನಗರಗಳಲ್ಲಿ ಈ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಕೆಲವು ತಿಂಗಳುಗಳ ಹಿಂದೆ, ಮಾಸ್ ಸೆಗ್‍‍ಮೆಂಟ್‍‍ಗಳಲ್ಲಿ ಬೈಕ್ ಮಾರಾಟವನ್ನು ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಲಾಗುತ್ತಿತ್ತು. ದೇಶಿಯ ಮಾರುಕಟ್ಟೆಯಲ್ಲಿ 250 ಸಿಸಿ - 350 ಸಿಸಿ ಸೆಗ್‍‍ಮೆಂಟ್‍‍ನಲ್ಲಿ ಹೆಚ್ಚಿನ ಪ್ರಮಾಣದ ಬೈಕ್‍‍ಗಳು ಮಾರಾಟವಾಗುತ್ತವೆ.

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಿಗೆ ಪೈಪೋಟಿ ನೀಡಲು ಸಜ್ಜಾದ ಪಿಯಾಜಿಯೊ

ರಾಯಲ್ ಎನ್‌ಫೀಲ್ಡ್ ತನ್ನ ಬೈಕ್‍‍ಗಳನ್ನು ಸಮಂಜಸವಾದ ಬೆಲೆಯಲ್ಲಿ ಮಾರಾಟ ಮಾಡುಸುತ್ತದೆ. ಪಿಯಾಜಿಯೊ ಕಂಪನಿಯು ಸಹ ತನ್ನ ಬೈಕ್‍‍ಗಳಿಗೆ ಸರಿಯಾದ ಬೆಲೆಯನ್ನು ನಿಗದಿಪಡಿಸಿದರೆ ಹೆಚ್ಚು ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Piaggio Plans To Enter Middleweight Motorcycle Segment: Wants Piece Of RE’s Market Share - Read in Kannada
Story first published: Saturday, December 21, 2019, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X