ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಪಿಯಾಜಿಯೊ ಕಂಪನಿಯು 2020ರ ಏಪ್ರಿಲ್ 1ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವಂತಹ ವೆಸ್ಪಾ ಹಾಗೂ ಎಪ್ರಿಲಿಯಾ ಸರಣಿಯ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಕಂಪನಿಯು ತನ್ನ ಎಲ್ಲಾ ಮಾದರಿಯ ಸ್ಕೂಟರ್‍‍ಗಳಲ್ಲಿ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್ ಅಳವಡಿಸಿ, ಈ ಸ್ಕೂಟರ್‍‍ಗಳ ಉತ್ಪಾದನೆಯನ್ನು ಈ ವರ್ಷದ ಕೊನೆಯ ವೇಳೆಗೆ ಅಥವಾ ಮುಂದಿನ ವರ್ಷದ ಜನವರಿ ವೇಳೆಗೆ ಶುರು ಮಾಡಲಿದೆ. ಪಿಯಾಜಿಯೊ ಕಂಪನಿಯು ಬಿ‍ಎಸ್6 ಎಂಜಿನ್ ಹೊಂದಿರುವ ತನ್ನ ಮೊಟ್ಟ ಮೊದಲ ಸ್ಕೂಟರ್ ಅನ್ನು ಈ ವರ್ಷದ ಅಕ್ಟೋಬರ್‍‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಈ ವರ್ಷದಲ್ಲಿ ಬಿಡುಗಡೆಯಾಗಲಿರುವ ವೆಸ್ಪಾ ಸ್ಕೂಟರ್ ಅನ್ನು ಸಹ ಅಪ್‍‍ಡೇಟ್ ಮಾಡಲಾಗಿದೆ. ಇದರಲ್ಲಿ ಹೊಸ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳ ಜೊತೆಗೆ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‍ ಅಳವಡಿಸಲಾಗಿದೆ. ಬಿ‍ಎಸ್6 ಎಂಜಿನ್ ಹೊಂದಿರುವ ಎಪ್ರಿಲಿಯಾ ಸ್ಕೂಟರ್‍‍ನಲ್ಲಿ ಹೊಸ ವಿನ್ಯಾಸಗಳ ಜೊತೆಗೆ ಹೊಸ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಪಿಯಾಜಿಯೊ ಕಂಪನಿಯ ವೆಸ್ಪಾ ಸ್ಕೂಟರ್, ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯು ನಿರೀಕ್ಷಿಸಿದಕ್ಕಿಂತ ಹೆಚ್ಚು ಜನಪ್ರಿಯವಾಗಿದೆ. ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‍‍ನ ಸಿ‍ಇ‍ಒ ಹಾಗೂ ಎಂ‍‍ಡಿ ಡಿಯಾಗೋ ಗ್ರಾಫಿರವರು ಈ ಬಗ್ಗೆ ಮಾತನಾಡಿದ್ದಾರೆ.

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ವೆಸ್ಪಾ ಸ್ಕೂಟರ್ ಈಗಿರುವ ವಿನ್ಯಾಸದ ವಿನ್ಯಾಸದಲ್ಲಿಯೇ ಹೆಚ್ಚು ಜನಪ್ರಿಯವಾಗಿದೆ. ಕಂಪನಿಯು ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವೆಸ್ಪಾ ಸ್ಕೂಟರಿನ ಮೂಲ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೇ ಇರಲು ನಿರ್ಧರಿಸಿದೆ. ಆದರೆ ಆಗಾಗ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಿದೆ. ಈ ಕಾರಣಕ್ಕಾಗಿಯೇ ಈಗ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಸದಾಗಿ ಅಳವಡಿಸಲಾಗಿದೆ.

MOST READ: ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ದೇಶಿಯ ಮಾರುಕಟ್ಟೆಯಲ್ಲಿ 125ಸಿಸಿ ಹಾಗೂ 150 ಸಿಸಿಯ ವೆಸ್ಪಾ ಸ್ಕೂಟರ್‍‍ಗಳನ್ನು ಮಾರಾಟ ಮಾಡಲಾಗುತ್ತಿದೆ. ಇತ್ತೀಚಿಗಷ್ಟೇ ಬಿಡುಗಡೆಯಾದ ಅರ್ಬನ್ ಕ್ಲಬ್ ಸ್ಕೂಟರ್‍‍‍ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.73,733ಗಳಾಗಿದೆ.

MOST READ: ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಸ್ಟಾರ್ಮ್ 125 ಸ್ಕೂಟರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.65,000 ಗಳಾಗಿದೆ. ಹೆಚ್ಚುವರಿಯಾಗಿ ಫ್ಯೂಯಲ್ ಇಂಜೆಕ್ಷನ್ ಅಳವಡಿಸಿರುವುದರಿಂದ ಹಾಗೂ ಬಿ‍ಎಸ್6 ನಿಯಮಕ್ಕೆ ತಕ್ಕಂತಹ ಎಂಜಿನ್‍‍ಗಳನ್ನು ಅಭಿವೃದ್ಧಿಪಡಿಸಿರುವುದರಿಂದ ಈ ಸ್ಕೂಟರ್‍‍‍ಗಳ ಬೆಲೆ ಏರಿಕೆಯಾಗುವುದು ಖಚಿತ.

MOST READ: ಎರಡು ಹೊಸ ಮಾದರಿಗಳಲ್ಲಿ ಬಿಡುಗಡೆಯಾದ ಟಾಟಾ ಟಿಗೋರ್

ಬಿ‍ಎಸ್6 ಎಂಜಿನ್‍‍ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್‍‍ಗಳು

ಯಾವ ಯಾವ ಮಾದರಿಯ ಸ್ಕೂಟರ್‍‍ಗಳ ಬೆಲೆಯಲ್ಲಿ ಎಷ್ಟು ಪ್ರಮಾಣದ ಬೆಲೆ ಏರಿಕೆಯಾಗಲಿವೆ ಎಂಬುದು ಖಚಿತವಾಗಿಲ್ಲದಿದ್ದರೂ, ಬಿ‍ಎಸ್6 ಎಂಜಿನ್ ಹೊಂದಲಿರುವ ಆಕ್ಟಿವಾ 125 ಸ್ಕೂಟರಿನ ಬೆಲೆಯು ಬಿ‍ಎಸ್4 ಮಾದರಿಯ ಸ್ಕೂಟರ್‍‍ಗಿಂತ 10-15% ನಷ್ಟು ಹೆಚ್ಚಳವಾಗಲಿದೆ.

Most Read Articles

Kannada
English summary
Piaggio to launch fuel-injected Vespa with LED headlamp by year end - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X