ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಇಟಾಲಿಯನ್ ಆಟೋ ಉತ್ಪಾದನಾ ಸಂಸ್ಥೆಯಾದ ಪಿಯಾಜಿಯೊ ತನ್ನ ಅಂಗಸಂಸ್ಥೆಗಳಾದ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಮಾದರಿಯನ್ನು ಬಿಎಸ್-6 ನಿಯಮ ಅನುಸಾರ ಉನ್ನತೀಕರಿಸಿ ಬಿಡುಗಡೆಗೊಳಿಸಿದ್ದು, ಹೊಸ ಸ್ಕೂಟರ್‌ಗಳು ಈ ಬಾರಿ ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಈಗಾಗಲೇ ಹೊಸ ವಾಹನ ಉತ್ಪನ್ನ ಮಾರಾಟಕ್ಕೆ ಚಾಲನೆ ಸಿಕ್ಕಿದ್ದು, ಪಿಯಾಜಿಯೊ ಸಹ ತನ್ನ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್‌ಗಳನ್ನು ಹೊಸ ನಿಯಮ ಅನುಸಾರ ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್‌ಗಳಲ್ಲಿ ಈ ಬಾರಿ ಫ್ಯೂಲ್ ಇಂಜೆಕ್ಷಡ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಮಾಲಿನ್ಯ ಹೊರಸೂಸುವಿಕೆಯಲ್ಲಿ ಮತ್ತಷ್ಟು ಸುಧಾರಣೆಗೊಂಡಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಫ್ಯೂಲ್ ಇಂಜೆಕ್ಷಡ್ ಎಂಜಿನ್‌ನಿಂದಾಗಿ ಹೊಸ ಸ್ಕೂಟರ್‌ಗಳ ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ಸುಧಾರಣೆಗೊಂಡಿದ್ದು, ಇಂಧನ ದಕ್ಷತೆ ಕೂಡಾ ಹೆಚ್ಚಳವಾಗಿರುವುದು ಸ್ಕೂಟರ್ ಖರೀದಿದಾರರನ್ನು ಸೆಳೆಯಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಜೊತೆಗೆ ಪಿಯಾಜಿಯೊ ಸಂಸ್ಥೆಯು ಎಪ್ರಿಲಿಯಾ ಮತ್ತು ವೆಸ್ಪಾ ಸ್ಕೂಟರ್ ವಿನ್ಯಾಸದಲ್ಲಿ ಮಹತ್ವದ ಬದಲಾವಣೆಗಾಗಿ ಡಿಸೈನ್ ಫಾರ್ ರೇಸರ್ ಮತ್ತು ಬಿಲ್ಟ್ ಫಾರ್ ರೈಡರ್ ಎನ್ನುವ ಡಿಸೈನ್ ಪಿಲೋಸಫಿ ಪರಿಚಿಯಿಸಿರುವುದು ಪ್ರೀಮಿಯಂ ಸ್ಕೂಟರ್‌ಗಳ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಇಂದಿನಿಂದಲೇ ಬುಕ್ಕಿಂಗ್ ಶುರು

ಹೌದು, ಹೊಸ ಬಿಎಸ್-6 ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿರುವ ಪಿಯಾಜಿಯೊ ಸಂಸ್ಥೆಯು ಇಂದಿನಿಂದಲೇ ಅಧಿಕೃತ ಬುಕ್ಕಿಂಗ್ ಆರಂಭಿಸಿದ್ದು, ವೆಸ್ಪಾ 125, ವೆಸ್ಪಾ 150, ಎಪ್ರಿಲಿಯಾ ಎಸ್ಆರ್ 160 ಮತ್ತು ಎಪ್ರಿಲಿಯಾ ಎಸ್ಆರ್ 125 ಮತ್ತು ಎಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್‌ ಮಾದರಿಗಳು 2020ರ ಜನವರಿ ಆರಂಭದಲ್ಲಿ ಹೊಸ ಸ್ಕೂಟರ್ ಗ್ರಾಹಕರ ಕೈಸೆರಲಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಸದ್ಯ ಬಿಡುಗಡೆಗೊಂಡಿರುವ ಹೊಸ ಸ್ಕೂಟರ್‌ಗಳ ಬೆಲೆ ಮಾಹಿತಿಯನ್ನು ಬಹಿರಂಗಪಡಿಸಿದ ಎಪ್ರಿಲಿಯಾ ಸಂಸ್ಥೆಯು ಮುಂದಿನ ವಾರವಷ್ಟೇ ಹೊಸ ಸ್ಕೂಟರ್‌ಗಳ ಬೆಲೆ ಬಹಿರಂಗಪಡಿಸಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್‌ನಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ತುಸು ದುಬಾರಿ ಎನ್ನಿಸಲಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಮಾಹಿತಿಗಳ ಪ್ರಕಾರ, ಎಪ್ರಿಲಿಯಾ ಮತ್ತು ವೆಸ್ಪಾ ಸ್ಕೂಟರ್‌ಗಳ ಬೆಲೆಯು ರೂ.5 ಸಾವಿರದಿಂದ ರೂ.12 ಸಾವಿರ ತನಕ ದುಬಾರಿಯಾಗಿರಲಿದ್ದು, ಬೆಲೆ ಏರಿಕೆ ತಕ್ಕಂತೆ ಕೆಲವು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಹೊಸ ಸ್ಕೂಟರ್ ಬಿಡುಗಡೆ ಕುರಿತಂತೆ ಮಾತನಾಡಿದ ಪಿಯಾಜಿಯೊ ಇಂಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿಗೂ ಗ್ರಾಫಿ ಅವರು, ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ಬಿಎಸ್-6 ನಿಯಮ ಅನುಸಾರ ವೆಸ್ಪಾ ಮತ್ತು ಎಪ್ರಿಲಿಯಾ ಬಿಡುಗಡೆ ಮಾಡಿದ್ದು, ಗ್ರಾಹಕರ ಆದ್ಯತೆ ಮತ್ತು ಪರಿಸರಕ್ಕೆ ಪೂರಕವಾಗಿ ಹೊಸ ವಾಹನಗಳ ಉತ್ಪಾದನೆಗೆ ಪಿಯಾಜಿಯೊ ಬದ್ದವಾಗಿದೆ ಎಂದಿದ್ದಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಇದೇ ವೇಳೆ ಸ್ಕೂಟರ್‌ಗಳ ಬಗೆಗೆ ಮಾತನಾಡಿದ ಪಿಯಾಜಿಯೊ ಇಂಡಿಯಾದ ದ್ವಿಚಕ್ರ ವಾಹನದ ವಿಭಾಗದ ಮುಖ್ಯಸ್ಥ ಅಶಿಸ್ ಯಾಕ್ಮಿ ಅವರು, 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಹೊಸ ಸ್ಕೂಟರ್‌ಗಳನ್ನು ಡೆಡ್‌ಲೈನ್ ಮುನ್ನವೇ ಪರಿಚಯಿಸುತ್ತಿರುವುದು ಮಹತ್ವದ ಬದಲಾವಣೆ ಕಾರಣವಾಗಿದ್ದು, ಗ್ರಾಹಕರು ಇಂದಿನಿಂದಲೇ ಹೊಸ ಸ್ಕೂಟರ್ ಖರೀದಿಗೆ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದಿದ್ದಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಸ್-6 ವರ್ಷನ್ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್

ಇನ್ನು ಎಪ್ರಿಲಿಯಾ ಮತ್ತು ವೆಸ್ಪಾ ಸೇರಿದಂತೆ ಕೆಲವು ಸ್ಕೂಟರ್ ಮತ್ತು ಬೈಕ್ ಆವೃತ್ತಿಗಳು ಹೊಸ ನಿಯಮದಂತೆ ಬಿಡುಗಡೆಗೊಂಡು ಖರೀದಿಗೆ ಲಭ್ಯವಿದ್ದು, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಬಹುತೇಕ ವಾಹನ ಮಾದರಿಗಳು ಬಿಎಸ್-6 ನಿಯಮ ಅನುಸಾರ ರಸ್ತೆಗಿಳಿಯಲು ಅಂತಿಮ ಹಂತದ ಸಿದ್ದತೆ ನಡೆಸಿವೆ.

Most Read Articles

Kannada
English summary
Piaggio India has introduced Fuel Injection technology in its entire Vespa and Aprilia scooter range to comply with Bharat Stage Emission Standard VI (BS-VI).
Story first published: Monday, December 23, 2019, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X