ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕಥೆ ಏನಾಯ್ತು ಗೊತ್ತಾ?

ಓಲಾ, ಊಬರ್‌ನಂತಹ ಟ್ಯಾಕ್ಸಿ ಸೇವೆಗಳು ನಮ್ಮ ದೇಶಗಳಲ್ಲಿ ಮಾತ್ರವಲ್ಲದೆಯೇ ಬೇರೆ ದೇಶಗಳಲ್ಲಿಯೂ ಸಹ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಾ ಜನಪ್ರಿಯತೆಯನ್ನು ಪಡೆಯುತ್ತಿದೆ. ಇವುಗಳಲ್ಲದೆಯೇ ಈ ಸಂಸ್ಥೆಗಳು ದೇಶದ ಕೆಲ ಭಾಗಗಳಲ್ಲಿ ಬೋಟ್ ಟ್ಯಾಕ್ಸಿ ಹಾಗು ಭವಿಷ್ಯದಲ್ಲಿ ಹೆಲಿ ಟ್ಯಾಕ್ಸಿಯನ್ನು ಸಹ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಆದ್ರೆ ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ಓಲಾ ಸಂಸ್ಥೆಯು ಬೈಕ್ ಟ್ಯಾಕ್ಸಿ ಸೇವೆ ಪ್ರಾರಂಭಿಸುವುದಕ್ಕೆ ಯಾವುದೇ ನೋಂದಣಿ ಮಾಡಿಕೊಂಡಿಲ್ಲವೆಂದು ಆರ್‌ಟಿಒ ಅಧಿಕಾರಿಗಳು ಬಹಿರಂಗಪಡಿಸಿದ್ದು, ಓಲಾ ಸಂಸ್ಥೆಯು ರೂ.15 ಲಕ್ಷ ದಂಡವನ್ನು ತೆರಬೇಕಾದ ಪರಿಸ್ಥಿತಿ ಎದುರಾಯಿತು. ಇದೀಗ ಓಲಾ ನಂತರ ಇತ್ತೀಚೆಗೆ ಆರ್‍‍ಟಿಒ ಸುಮಾರು 270ಕ್ಕು ಹೆಚ್ಚಿನ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಸೀಸ್ ಮಾಡಲಾಗಿದ್ದು, ಸೇವೆಯನ್ನು ಸಹ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ.

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ನಿರುದ್ಯೋಗಿ ಯುವ ಸಮುದಾಯಕ್ಕೆ ರ್‍ಯಾಪಿಡೋ ಸಂಸ್ಥೆಯು ನಿಮ್ಮಲ್ಲಿ ವಾಹನವಿದ್ದರೆ ಸಾಕು ಯಾವ ಬಂಡವಾಳ ಸಹ ನಮಗೆ ಬೇಡವೆಂದು ನಂಬಿಸಿ ಅವರಿಗೆ ಉದ್ಯೊಗಾವಕಾಶ ಕಲ್ಪಿಸಿತ್ತು. ಇದನ್ನು ನಂಬಿ ಸಾವಿರಾರು ನಿರುದ್ಯೋಗಿ ಯುವಕರು ರ್‍ಯಾಪಿಡೋ ಬೈಕ್‍ ಟ್ಯಾಕ್ಸಿ ಸೇವೆಗಳಿಗೆ ತಮ್ಮ ವಾಹನಗಳನ್ನು ಅಟ್ಯಾಚ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಸದ್ಯಕ್ಕೆ ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ನಂಬಿಕೊಂಡು ತಮ್ಮ ವಾಹನವನ್ನು ಅಟ್ಯಾಚ್ ಮಾಡಿ ಆರ್‍‍ಟಿಒ ಇಂದ ಸೇವೆ ಸ್ಥಗಿತಗೊಳಿಸಿದ ನಂತರ ತಮ್ಮ ವಾಹನಗಳನ್ನು ಕಳೆದುಕೊಂಡವರಲ್ಲಿ ಹಲವರಿದ್ದು, ದಂಡ ಪಾವತಿಸಿ ಸೀಜ್ ಆದ ಬೈಕ್ ಹಿಂಪಡೆಯಲು ಪರದಾಡುತ್ತಿದ್ದಾರೆ.

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಪಿ. ಮಂಜುನಾಥ್ ಎಂಬಾತ ಏಪ್ರಿಲ್ 5, 2019ರಂದು ಕೆ.ಆರ್‍.ಪುರಂ ರಸ್ತೆಗಳಲ್ಲಿ ರೈಡ್ ಬುಕ್ಕಿಂಗ್ ಮಾಡಲಾದ ಕಸ್ಟಮರ್‍‍ಗಾಗಿ ಪಿಕ್-ಅಪ್ ಪಾಯಿಂಟ್‍ನಲ್ಲಿ ಕಾಯುತ್ತಿದ್ದರು. ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರು ಬಂದಾಗ ಮಂಜುನಾಥ್‍‍ರವರಿಗೆ ನಿಮ್ಮ ರ್‍ಯಾಪಿಡೋ ಸೇವೆಗಳನ್ನು ಆರ್‍‍ಟಿಒ ಸ್ಥಗಿತಗೊಳಿಸಿದೆ ಎಂದು ಕೇಳಿ ಅಚ್ಚರಿಗೊಂಡರು.

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಸೀಜ್ ಮಾಡಲಾದ ಬೈಕ್‍ಗಳಲ್ಲಿ ಪಿ.ಮಂಜುನಾಥ್‍ರವರದ್ದು ಸಹ ಬೈಕ್ ಇದ್ದು, ಬೈ‍ಕ್ ಅನ್ನು ಬಿಡಿಸಿಕೊಳ್ಳಲು ರೂ. 5000 ದಂಡವನ್ನು ಪಾವತಿಸಿದ್ದಾರೆ. ಬೈಕ್ ಅಟ್ಯಾಚ್ ಮಾಡಿಸುವಾಗ ರ್‍ಯಾಪೊಡೋ ಸಂಸ್ಥೆಯವರು ನಮ್ಮ ಸಂಸ್ಥೆಯು ಅಧಿಕೃತವಾಗಿದೆ ಮತ್ತು ಬೈಕ್ ಟ್ಯಾಕ್ಸಿ ಸೇವೆ ನೀಡಲು ಲೈಸೆನ್ಸ್ ಪಡೆದಿದೆ ಎಂದು ಹೇಳಿದ್ದರಂತೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಇದು ಪಿ.ಮಂಜುನಾಥ್ ಕಥೆಯಾದ್ರೆ ವೆಂಕಟೇಶ್ ರೆಡ್ಡಿಯವರು ಸಹ ತಮ್ಮ ಅಳಲು ತೊಡಿಕೊಂಡಿದ್ದಾರೆ. ಯಾವುದೇ ಬಂಡವಾಳವಿಲ್ಲದೆಯೇ ಕೇವಲ ನಾನು ದ್ವಿಚಕ್ರ ವಾಹನ ಹೊಂದಿರುವ ಏಕೈಕ ಕಾರಣದಿಂದ ನನಗೆ ರ್‍ಯಾಪಿಡೋ ನಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಆದ್ರೆ ಇದೀಗ ನನ್ನ ಬೈಕ್ ಸೀಜ್ ಆಗಿದ್ದು, ಮತ್ತೆ ನಾನು ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿವೆ ಎಂದು ಅವಲತ್ತುಕೊಂಡಿದ್ದಾರೆ.

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಆದ್ರೆ ಲೆಸೆನ್ಸ್ ಪಡೆಯದ ರ‌್ಯಾಪಿಡೋ ಸಂಸ್ಥೆಯು 2016ರಿಂದಲೇ ಬೆಂಗಳೂರು ಸೇರಿದಂತೆ ಇನ್ನಿತರೆ ಪ್ರಮುಖ ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುತ್ತಿದ್ದು, ಇದೀಗ ಆರ್‍‍ಟಿಒ ರ್‍ಯಾಪಿಡೋ ಸೇವೆಯನ್ನು ಸ್ಥಗಿತಗೊಳಿಸಿ ಸುಮಾರು 300ಕ್ಕು ಹೆಚ್ಚಿನ ವಾಹನಗಳನ್ನು ಸೀಜ್ ಮಾಡಿದ್ದಾರೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

ಮಂಜುನಾಥ್ ಮತ್ತು ವೆಂಕಟೇಶ್ ಅವರಂತೆಯೇ ಇನ್ನು ಹಲವರು ರ್‍ಯಾಪಿಡೋ ಸಂಸ್ಥೆಯಲ್ಲಿ ತಮ್ಮ ವಾಹನಗಳನ್ನು ಅಟ್ಯಾಚ್ ಮಾಡಿಸಿಕೊಂಡು, ಬೈಕ್‍ಗಳು ಸೀಜ್ ಆದ ನಂತರ ಇದೀಗ ಮತ್ತೆ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಆರ್‍‍ಟಿಒ ಅಧಿಕಾರಿಗಳು ರ್‍ಯಾಪಿಡೋ ಸಂಸ್ಥೆಯ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪ್ರಾರಂಭಿಸಲು ಲೈಸೆನ್ಸ್ ನೀಡುವ ಬಗ್ಗೆ ಯಾವುದೇ ಮಾಹಿತಿ ಇನ್ನು ಲಭ್ಯವಾಗಿಲ್ಲ.

Source: ETAuto

Most Read Articles

Kannada
English summary
Bike taxi riders left in the lurch after RTO crackdown on vehicles. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X