ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಪುಣೆ ಮೂಲದ ಟಾರ್ಕ್ ಮೋಟಾರ್ಸ್ ತನ್ನ ಮೊದಲ ವಾಹನವಾದ ಟಿ6 ಎಕ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಟಾರ್ಕ್ ಮೋಟಾರ್ಸ್ ಕಂಪನಿಯಲ್ಲಿ ಈ ಹಿಂದೆ ಭಾರತ್ ಫೋರ್ಜ್ ಕಂಪನಿಯು ಬಂಡವಾಳ ಹೂಡಿಕೆ ಮಾಡಿತ್ತು. ಈಗ ಟಾಟಾ ಸನ್ಸ್ ಅಧ್ಯಕ್ಷರಾದ ರತನ್ ಟಾಟಾರವರು ಬಂಡವಾಳ ಹೂಡಿಕೆ ಮಾಡಲಿದ್ದಾರೆ.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಟಾರ್ಕ್ ಮೋಟಾರ್ಸ್ ದೇಶಿಯವಾಗಿ ನಿರ್ಮಿಸಲಾಗಿರುವ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಹಲವಾರು ವರ್ಷಗಳ ಕಾಲ ನಡೆಸಿದ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಲಾಗಿದೆ. ಪೂರ್ತಿಯಾಗಿ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಹೊಂದಲಿರುವ ಟಿ6 ಎಕ್ಸ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 100 ಕಿ.ಮೀ ಆಗಿರಲಿದೆ.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಒಂದು ಬಾರಿ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 100 ಕಿ.ಮೀ ದೂರ ಚಲಿಸಬಹುದು. ಈ ಎಲೆಕ್ಟ್ರಿಕ್ ಬೈಕಿನಲ್ಲಿರುವ ಫಾಸ್ಟ್ ಚಾರ್ಜರ್ ಬ್ಯಾಟರಿಯಿಂದ ಈ ಬೈಕ್ ಅನ್ನು ಒಂದು ಗಂಟೆಯಲ್ಲಿ 80%ನಷ್ಟು ಚಾರ್ಜ್ ಮಾಡಬಹುದು.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಈ ಬೈಕಿನಲ್ಲಿ ಟಾರ್ಕ್ ಕಂಪನಿಯ ಟಾರ್ಕ್ ಇನ್‍‍ಶುಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ (ಟಿ‍ಐ‍ಆರ್‍ಒ‍ಎಸ್) ಎಂಬ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಅಳವಡಿಸಲಾಗಿದೆ. ಈ ಸಿಸ್ಟಂ ಬೈಕಿನಲ್ಲಿರುವ ರೈಡಿಂಗ್ ಟೆಕ್ನಾಲಜಿಯನ್ನು ನೋಡಿಕೊಳ್ಳಲಿದೆ.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಅನ್ನು ಪ್ರತಿ ಬಾರಿಯ ಸವಾರಿಯ ನಂತರದ ವಿಶ್ಲೇಷಣೆ ಹಾಗೂ ಡೇಟಾ ಸಂಗ್ರಹಿಸಲು, ಪವರ್ ಮ್ಯಾನೇಜ್‍‍ಮೆಂಟ್ ಒದಗಿಸಲು, ನೈಜ ಸಮಯದ ವಿದ್ಯುತ್ ಬಳಕೆ ಹಾಗೂ ವ್ಯಾಪ್ತಿಯ ಮುನ್ಸೂಚನೆಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಟಿ‍ಐ‍ಆರ್‍ಒ‍ಎಸ್ ಮುಖ್ಯವಾಗಿ ಬೈಕ್ ಅನ್ನು ಹೇಗೆ ಸವಾರಿ ಮಾಡಲಾಗುತ್ತದೆ ಎಂಬುದನ್ನು ಅಧ್ಯಯನ ಮಾಡುತ್ತದೆ. ರತನ್ ಟಾಟಾರವರು ಮಾತನಾಡಿ, ಕಳೆದ ಕೆಲವು ವರ್ಷಗಳಲ್ಲಿ, ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಮನೋಭಾವದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಎಲೆಕ್ಟ್ರಿಕ್ ವಾಹನಗಳ ಉದ್ಯಮವು ವೇಗವಾಗಿ ಬದಲಾಗುತ್ತಿದೆ. ಟಾರ್ಕ್ ಮೋಟಾರ್ಸ್‌ ಹೊಂದಿರುವ ವಿಧಾನಕ್ಕೆ ನಾನು ಉತ್ತಮ ಮೌಲ್ಯವನ್ನು ನೀಡುತ್ತೇನೆ. ಇದರಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಪ್ರತಿಯೊಬ್ಬ ಭಾರತೀಯ ಉದ್ಯಮಿಯು ಈ ಮನೋಭಾವವನ್ನು ಹೊಂದಿರಬೇಕೆಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಟಿ6 ಎಕ್ಸ್ ಬೈಕ್ ಅನ್ನು 2016ರಲ್ಲಿ ಅನಾವರಣಗೊಳಿಸಲಾಗಿತ್ತು. ಅನಾವರಣಗೊಂಡಾಗ ಈ ಬೈಕ್ ಭಾರತದ ಮೊದಲ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಬೈಕ್ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಹಲವಾರು ಸವಾಲುಗಳು ಎದುರಾದ ಹಿನ್ನೆಲೆಯಲ್ಲಿ ಟಾರ್ಕ್ ಕಂಪನಿಯು ಈ ಬೈಕ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲು ನಿರ್ಧರಿಸಿತು.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಟಿ6 ಎಕ್ಸ್ ಬೈಕ್ ಅನ್ನು 90%ನಷ್ಟು ದೇಶಿಯವಾಗಿ ತಯಾರಿಸಲಾಗಿದೆ. ಈ ಬೈಕಿನಲ್ಲಿ ಅಳವಡಿಸುವ ಲಿಥಿಯಂ ಐಯಾನ್ ಬ್ಯಾಟರಿಯನ್ನು ಮಾತ್ರ ಆಮದು ಮಾಡಿಕೊಳ್ಳಲಾಗುವುದು. ಟಾರ್ಕ್ ಕಂಪನಿಯು ಟಿ6 ಎಕ್ಸ್ ಬೈಕಿನ ಬೆಲೆಯನ್ನು ಬಹಿರಂಗಪಡಿಸಿಲ್ಲ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಆದರೆ ಈ ಬೈಕಿನ ಬೆಲೆಯು ರಿವೋಲ್ಟ್ ಬೈಕಿನ ದರದಷ್ಟೇ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.99,000ಗಳಾಗುವ ಸಾಧ್ಯತೆಗಳಿವೆ. ಟಾರ್ಕ್ ಕಂಪನಿಯು ಟಿ6 ಎಕ್ಸ್ ಬೈಕ್ ಅನ್ನು ಇ‍ಎಂ‍ಐ ಯೋಜನೆಯಲ್ಲಿಯೂ ಮಾರಾಟ ಮಾಡುವ ಸಾಧ್ಯತೆಗಳಿವೆ.

ಟಾರ್ಕ್ ಮೋಟಾರ್ಸ್‍‍ನಲ್ಲಿ ಹೂಡಿಕೆ ಮಾಡಲಿರುವ ರತನ್ ಟಾಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರತನ್ ಟಾಟಾರವರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆಂದರೆ ಆ ವಾಹನದಿಂದ ದೇಶಕ್ಕೆ ಹಾಗೂ ಗ್ರಾಹಕರಿಗೆ ಲಾಭವಾಗಲಿದೆ ಎಂದರ್ಥ. ಇದರಿಂದಾಗಿ ಟಾರ್ಕ್ ಮೋಟಾರ್ಸ್ ಅದ್ಭುತವಾದ ಉತ್ಪನ್ನವನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Ratan Tata Invests In Electric Two Wheeler Start Up Tork Motors - Read in Kannada
Story first published: Tuesday, October 15, 2019, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X