ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ಬೈಕ್‍ನಲ್ಲಿ ದೇಶ, ವಿದೇಶಗಳನ್ನು ಸುತ್ತುವ ಕನಸಿರುವವರಿಗೆ ಮತ್ತು ಬೈಕ್ ರೈಡಿಂಗ್ ಆಸಕ್ತಿ ಇರುವವರಿಗಾಗಿಯೇ ಬೈಕ್ ರೈಡರ್ ಆದ ಕನ್ನಡಿಗ ಸಿ.ಎಸ್ ಸಂತೋಷ್ ಹೊಸ ರೆಕಿ ಮೊಬೈಲ್ ಆ್ಯಪ್ ಅನ್ನು ಹೊರತಂದಿದ್ದಾರೆ. ವಿಶ್ವದ್ಯಾಂತ ಇರುವ ಬೈಕ್ ರೈಡರ್‍‍ಗಳ ನಡುವೆ ಸಂಪರ್ಕ ಸಾಧಿಸಲು ಈ ಆ್ಯಪ್ ಸಹಕಾರಿಯಾಗಲಿದೆ.

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ಬೈಕ್ ರೈಡಿಂಗ್‍‍ನಲ್ಲಿ ಆಸಕ್ತಿಯನ್ನು ಹೊಂದಿದ್ದವರಿಗೆ ಈ ಆಪ್ ಹೆಚ್ಚು ಉಪಯುಕ್ತವಾಗಲಿದೆ. ಬೈಕ್ ರೈಡರ್‍‍ಗಳಿಗೆ ಯಾವುದಾದರು ಪ್ರದೇಶಕ್ಕೆ ತೆರಳಬೇಕೆಂಬ ಬಯಕ್ಕೆ ಹೊಂದಿದ್ದರೆ ಆ ಪ್ರದೇಶದ ಮಾಹಿತಿಯನ್ನು ಹಾಗೂ ಸಾಗುವ ದಾರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ರೆಕಿ ಆ್ಯಪ್ ಬಳಕೆದಾರರಿಗೆ ಸ್ನೇಹಿಯಾಗಿದ್ದು, ನೀವು ಕ್ರಮಿಸುವ ಮಾರ್ಗವನ್ನು ಲೈವ್ ರೆಕಾರ್ಡ್ ಕೂಡ ಮಾಡಿಕೊಳ್ಳಬಹುದಾದ ಸೌಲಭ್ಯವಿದೆ.

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ನಿಮಗೆ ಇಷ್ಟವಾದ ಸ್ಥಳಗಳಲ್ಲಿ ಪೋಟೋಗಳನ್ನು ತೆಗೆದು ಅಪ್‍‍ಲೋಡ್ ಮಾಡಬಹುದು. ಈ ಆ್ಯಪ್ ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ಸುಲಭವಾಗಿ ಸೃಷ್ಟಿಸಬಹುದಾಗಿದೆ. ಈ ಮುಖಾಂತರ ಮಾರ್ಗಗಳು, ಪ್ರವಾಸಿ ಸ್ಥಳಗಳ ವಿವರ, ಚಿತ್ರಗಳು ಎಲ್ಲವನ್ನೂ ಅಪ್ಲೋಡ್ ಮಾಡಬಹುದು.

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ನೀವು ಕೈಗೊಂಡ ಬೈಕ್ ಪ್ರವಾಸ, ಆಯ್ಕೆ ಮಾಡಿಕೊಂಡ ಮಾರ್ಗ, ಪೋಟೋಗಳನ್ನು ಎಲ್ಲಾವನ್ನು ನಿಮ್ಮ ಖಾತೆಯ ಮೂಲಕ ಇತರ ಬಳಕೆದಾರರು ನೋಡಬಹುದು. ಇದರಿಂದ ಅವರಿಗೂ ಪ್ರವಾಸ ಕೈಗೊಳ್ಳಲು ಅನುಕೂಲವಾಗಲಿದೆ. ನಿಮಗೆ ಎಲ್ಲರಿಗೂ ಅಥವಾ ನಿಮ್ಮನ್ನು ಹಿಂಬಾಲಿಸುವವರಿಗೆ ಮಾತ್ರ ನಿಮ್ಮ ರೈಡ್‍ನ ಎಲ್ಲಾ ಮಾಹಿತಿ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ.

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ದುರ್ಗಮ ಹಾದಿಯಲಿ ತಿಳಿಯದ ನಾಡಿನಲ್ಲಿ ಬೈಕ್ ರೋಡ್ ಹೋದಾಗ ಪೆಟ್ರೋಲ್ ಎಲ್ಲಿ ಸಿಗುತ್ತೆ ಎನ್ನುವ ಮಾಹಿತಿ ಜೊತೆಯಲ್ಲಿ ಬಾಡಿಗೆಗೆ ಬೈಕ್‍‍ಗಳು ಎಲ್ಲಿ ಸಿಗುತ್ತೆ ಎನ್ನುವ ಮಾಹಿತಿಯು ರೆಕಿ ಆ್ಯಪ್‍‍ನಲ್ಲಿ ಲಭ್ಯವಿರಲಿದೆ.

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ರೆಕಿ ಮೂಲಕ ನಿಮಗೆ ಸಾಗಬೇಕೆದ ಮಾರ್ಗ, ದೂರ, ವೇಗ ಮತ್ತು ಪ್ರಯಾಣದ ಸಮಯದ ಮಾಹಿತಿಯನ್ನು ತಿಳಿಸುತ್ತದೆ. ಇದು ಸಧ್ಯ ಲಿಸ್ಟ್ ಮಾದರಿಯಲ್ಲದ್ದು, ಮುಂದೆ ಟರ್ನ್-ಬೈ-ಟರ್ನ್ ನ್ಯಾವಿಗೇಷನ್‍‍ನೊಂದಿಗೆ ಈ ಅ್ಯಪ್ ಅನ್ನು ಅಪ್ಡೇಡ್ ಮಾಡಬಹುದು. ನೀವು ಇತರ ರೈಡರ್‍‍ಗಳನ್ನು ಫಾಲೋ ಮಾಡಬಹುದು, ಅವರು ನಿಮ್ಮನ್ನು ಫಾಲೋ ಮಾಡಬಹುದು ಇದರೊಂದಿಗೆ ಅವರ ರೈಡ್‍‍ನ ಮಾಹಿತಿಯನ್ನು ನೀವು ವಿಕ್ಷಿಸಬಹುದು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ಸಿ.ಎಸ್.ಸಂತೋಷ್ ಬಗ್ಗೆ

ಬೆಂಗಳೂರು ನಿವಾಸಿಯಾದ ಇವರು ವಿಶ್ವದ ಅತ್ಯಂತ ಅಪಾಯಕಾರಿ ಮೋಟಾರ್ ರ್‍ಯಾಲಿಯಾದ ಡಾಕರ್ ರ್‍ಯಾಲಿಯಲ್ಲಿ ಪಾಲ್ಗೋಂಡು, ಮೂರು ಬಾರಿ ರ್‍ಯಾಲಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ದಾಖಲೆ ಇವರ ಹೆಸರಿನಲ್ಲಿದೆ. ಹಲವು ಬಾರಿ ರಾಷ್ಟ್ರೀಯ ಮೋಟಾರ್ ರ್‍ಯಾಲಿ ಚಾಂಪಿಯನ್ ಆದವರು. ಭಾರತದ ಕಿರ್ತಿ ಪಾತಕೆಯನ್ನು ಹಾರಿಸಿದ ಹಿರಿಮೆ ಈ ಕನ್ನಡಿಗನದು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬೈಕ್ ರೈಡರ್‍‍ಗಳಿಗಾಗಿ ರೆಕಿ ಆ್ಯಪ್ ಬಿಡುಗಡೆ

ರೆಕಿ ಆ್ಯಪ್ ಬೈಕ್ ರೈಡರ್‍‍‍ಗಳಿಗೆ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ತಮ್ಮ ರೈಡ್ ಅನ್ನು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚು ಸಹಕಾರಿಯಾಗಲಿದೆ. ಬೈಕ್ ರೈಡ್ ಹೋಗುವವರಿಗೆ ಈ ಆ್ಯಪ್ ಮೂಲಕ ಎಲ್ಲಾ ಮಾಹಿತಿಯೂ ಒಂದೇ ಕಡೇ ಸಿಗುವಂತಾಗಿದೆ.

Most Read Articles

Kannada
English summary
Recky App For World Motorcyclists Launched By CS Santosh-Read in kannada
Story first published: Saturday, August 24, 2019, 18:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X