ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ರಿವೋಲ್ಟ್ ಮೋಟಾರ್ಸ್ ನಾಳೆ ಬಿಡುಗಡೆಯಾಗಲಿರುವ ತನ್ನ ಇ-ಬೈಕಿನಲ್ಲಿ ಎಕ್ಸಾಸ್ಟ್ ನೋಟ್ ಅಳವಡಿಸಿರುವುದಾಗಿ ತಿಳಿಸಿದೆ. ಎಲೆಕ್ಟ್ರಿಕ್ ಬೈಕ್‍‍ಗಳಲ್ಲಿ ಮೊದಲಬಾರಿಗೆ ಈ ಫೀಚರ್ ಅಳವಡಿಸಲಾಗಿದೆ. ಈ ಎಕ್ಸಾಸ್ಟ್ ನೋಟ್ ನಾಲ್ಕು ಸಿಲಿಂಡರ್ ಎಂಜಿನ್‍‍ನಂತಹ ಶಬ್ದವನ್ನುಂಟು ಮಾಡಲಿದೆ.

ಪರಿಸರ ಸ್ನೇಹಿ ಹಾಗೂ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯು ಏರುಗತಿಯಲ್ಲಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸದ್ದು ಮಾಡಲಿದ್ದು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲಿವೆ. ಎಲೆಕ್ಟ್ರಿಕ್ ಬೈಕುಗಳ ಎಕ್ಸಾಸ್ಟ್ ಯಾವುದೇ ಶಬ್ದವನ್ನು ಮಾಡದ ಕಾರಣ ಬಹುತೇಕ ಬೈಕ್ ಪ್ರಿಯರು ಎಲೆಕ್ಟ್ರಿಕ್ ಬೈಕುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ಬೈಕ್ ಪ್ರಿಯರು ಇಷ್ಟ ಪಡುವುದೇ ದ್ವಿಚಕ್ರವಾಹನಗಳ ಎಕ್ಸಾಸ್ಟ್ ಶಬ್ದವನ್ನು. ಸಂಶೋಧನೆಗಳ ಪ್ರಕಾರ ಎಂಜಿನ್‍‍ಗಳ ಶಬ್ದವು ಬೈಕ್ ಚಾಲನೆ ಮಾಡುವವರನ್ನು ಚಾಲನೆ ಸಮಯದಲ್ಲಿ ಅಲರ್ಟ್ ಆಗಿ ಇಡುತ್ತದೆ.

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಎಲೆಕ್ಟ್ರಿಕ್ ವಾಹನಗಳು ಶಬ್ದವನ್ನುಂಟು ಮಾಡುವುದಿಲ್ಲ. ಶಬ್ದವಿದ್ದರೂ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ ಬೈಕ್ ಪ್ರಿಯರಿಗೆ, ಬೈಕ್ ಖರೀದಿಯಲ್ಲಿ ಎಕ್ಸಾಸ್ಟ್ ಶಬ್ದವೇ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಈಗ ಎಲೆಕ್ಟ್ರಿಕ್ ಬೈಕುಗಳ ಎಂಜಿನ್ ಶಬ್ದವನ್ನು ನವೀಕರಿಸಲಾಗುತ್ತಿದೆ.

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಈಗ ರಿವೋಲ್ಟ್ ಕಂಪನಿಯು ಜೂನ್ 19ರಂದು ಬಿಡುಗಡೆಯಾಗಲಿರುವ ತನ್ನ ಹೊಸ ಎಲೆಕ್ಟ್ರಿಕ್ ಬೈಕಿನ ಎಕ್ಸಾಸ್ಟ್ ನಲ್ಲಿ ಬದಲಾವಣೆ ಮಾಡಿದೆ. ರಿವೋಲ್ಟ್ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಹೊಸ ಬೈಕ್ ಒಂದು ಟಚ್ ಸ್ಕ್ರೀನ್ ಮಾಡುವುದರಿಂದ ಎಕ್ಸಾಸ್ಟ್ ಶಬ್ದವನ್ನುಂಟುಮಾಡಲಿದೆ.

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಈ ವೀಡಿಯೊದಲ್ಲಿ ಬೈಕಿನ ಸ್ಮಾರ್ಟ್ ಫೋನ್ ಆಪ್‍ ಜೊತೆಗೆ, ಸ್ವೀಚೆಬಲ್ ಎಕ್ಸಾಸ್ಟ್ ನೋಟ್‍‍ಗಳನ್ನು ಕಾಣಬಹುದಾಗಿದೆ. ಈ ಆಪ್‍‍ನಿಂದಾಗಿ ಬೈಕಿನ ಫಂಕ್ಷನ್‍‍ಗಳನ್ನು ನಿಯಂತ್ರಿಸಬಹುದು. ಸ್ಮಾರ್ಟ್‍‍ಫೋನ್ ಸ್ಕ್ರೀನ್‍‍ನಲ್ಲಿ ಇನ್ನೂ ಎರಡು ನೋಟ್‍‍ಗಳನ್ನು ಕಾಣಬಹುದು. ಈ ಬೈಕಿನಲ್ಲಿ ವಿ-ಟ್ವಿನ್ ಎಂಜಿನ್ ಅಳವಡಿಸಲಾಗಿದೆಯೇ ಅಥವಾ ಪ್ಯಾರಲೆಲ್ ಟ್ವಿನ್ ಎಂಜಿನ್ ಅಳವಡಿಸಲಾಗಿದೆಯೇ ಎಂಬುದು ನಾಳೆ ಬೈಕ್ ಬಿಡುಗಡೆಯಾದ ನಂತರ ಸ್ಪಷ್ಟವಾಗಲಿದೆ.

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹೊಂದಿರುವ ಭಾರತದ ಮೊದಲ ಕನೆಕ್ಟೆಡ್ ಬೈಕ್ ಆದ, ರಿವೋಲ್ಟ್ ಇ-ಬೈಕಿನಲ್ಲಿ ಇ-ಸಿಮ್ ಅಳವಡಿಸಲಾಗಿದ್ದು, ಸಿಮ್ ಅನ್ನು ಕ್ಲೌಡ್ ಸರ್ವರ್‍‍ಗೆ ಕನೆಕ್ಟ್ ಮಾಡಲಾಗಿದೆ. ಈ ಬೈಕಿನಲ್ಲಿರುವ ಸ್ಮಾರ್ಟ್ ಫೋನ್ ಆಪ್ ಬೈಕಿನ ಕಾರ್ಯಗಳನ್ನು ನಿಯಂತ್ರಿಸುವುದರ ಜೊತೆಗೆ, ಡೇಟಾವನ್ನು ಟ್ರಾಕ್ ಮಾಡುತ್ತದೆ.

MOST READ: ಆಕ್ಟಿವಾದೊಳಗೆ ಸೇರಿದ ಹಾವು, ಮುಂದೇನಾಯ್ತು ನೋಡಿ..!

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ರಿವೋಲ್ಟ್ ಕಂಪನಿಯ ಪ್ರಕಾರ ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 85 ಕಿ.ಮೀ ಆಗಿರಲಿದೆ. ಎ‍‍ಆರ್‍ಎ‍ಐ ಪ್ರಮಾಣಪತ್ರದ ಪ್ರಕಾರ ಒಂದು ಬಾರಿ ಚಾರ್ಜ್ ಮಾಡಿದರೆ 156 ಕಿ.ಮೀವರೆಗೆ ಚಲಿಸಲಿದೆ. ಈ ಬೈಕಿನಲ್ಲಿರುವ ಬ್ಯಾಟರಿ ಹಾಗೂ ಇ‍‍ಸಿ‍‍ಯುಗಳನ್ನು ರಿವೋಲ್ಟ್ ಕಂಪನಿಯು ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿಯೇ ತಯಾರಿಸಲಾಗಿದೆ. ಸ್ವಾಪೇಬಲ್ ಬ್ಯಾಟರಿ ಹಾಗೂ ಎಲೆಕ್ಟ್ರಿಕ್‍‍ಗಳನ್ನು ಆಮದು ಮಾಡಿಕೊಳ್ಳಲಾಗಿದೆ.

MOST READ: ಬಿಡುಗಡೆಯಾಗಲಿದೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಈ ಬೈಕಿನಲ್ಲಿ ಆಧುನಿಕ ಬೈಕಿನಲ್ಲಿರುವ ಎಲ್ಲಾ ಅಂಶಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಮುಂಭಾಗದಲ್ಲಿರುವ ಯು‍ಎಸ್‍‍ಡಿ ಫೋರ್ಕ್, ಹಿಂಭಾಗದಲ್ಲಿರುವ ಮೊನೊಶಾಕ್, ಎಲ್‍ಇ‍‍ಡಿ ಲೈಟಿಂಗ್ ಹಾಗೂ ಸ್ಲೀಕ್ ಹಾಗೂ ಸ್ಲೆಂಡರ್ ಡಿಸೈನ್‍‍ಗಳು ಸೇರಿವೆ.

MOST READ: ಮಾರಾಟದಲ್ಲಿ ಹಾರ್ಲೆ ಡೇವಿಡ್‍‍ಸನ್ ಹಿಂದಿಕ್ಕಿದ ಕೆ‍‍ಟಿ‍ಎಂ

ನಾಳೆ ಅನಾವರಣಗೊಳ್ಳಲಿದೆ ರಿವೋಲ್ಟ್ ಇ-ಬೈಕ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸದಾಗಿ ಎಕ್ಸಾಸ್ಟ್ ನೋಟ್‍‍ಗಳನ್ನು ಅಳವಡಿಸುವುದರಿಂದ ಬೈಕುಗಳ ಕಾರ್ಯದಕ್ಷತೆ ಹೆಚ್ಚುವುದಿಲ್ಲವಾದರೂ, ಚಾಲಕರು ಬೈಕಿನ ಶಬ್ದವನ್ನು ಆನಂದಿಸಲಿದ್ದಾರೆ. ಆದರೆ ಹೆಚ್ಚು ವೇಗದಲ್ಲಿ ಪ್ರಯಾಣಿಸ ಬಯಸುವವರಿಗೆ 85 ಕಿ.ಮೀ ವೇಗವು ಏನೇನೂ ಸಾಲದು.

Most Read Articles

Kannada
English summary
Revolt e-Bike Features Multiple Switchable Exhaust Sounds; Unveiling Tomorrow - Read in kannada
Story first published: Monday, June 17, 2019, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X