ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಭಾರತ ಸರ್ಕಾರವು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜನಗೊಳಿಸಲು ನಿಯಮಗಳನ್ನು ಜಾರಿಗೊಳಿಸುತ್ತಿದೆ. ರಿವೋಲ್ಟ್ ಇಂಟೆಲಿಕಾರ್ಪ್, ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಎಲೆಕ್ಟ್ರಿಕ್ ಬೈಕುಗಳ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಗುರಿಯನ್ನಿಟ್ಟು ಕೊಂಡಿದೆ. ಆದ ಕಾರಣ ಆರ್‌ವಿ 400 ಎಲೆಕ್ಟ್ರಿಕ್ ಬೈಕ್ ಅನ್ನು ಅನಾವರಣಗೊಳಿಸಿದೆ.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ರಿವೋಲ್ಟ್ ಇಂಟೆಲಿಕಾರ್ಪ್ ಈ ವರ್ಷದ ಜೂನ್‍‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್‍‍ವಿ 400, ಎಲೆಕ್ಟ್ರಿಕ್ ಬೈಕ್ ಅನ್ನು ಪ್ರದರ್ಶಿಸಿತ್ತು. ಈ ಬೈಕುಗಳ ಉತ್ಪಾದನೆಯನ್ನು ಶುರು ಮಾಡಿರುವುದಾಗಿ ಕಂಪನಿಯು ಇಂದು ಘೋಷಿಸಿದೆ. ಮೊದಲ ರಿವೋಲ್ಟ್ ಆರ್‌ವಿ 400 ಇ-ಬೈಕ್ ಅನ್ನು ಇಂದು ಮನೇಸಾರ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ. ರಿವೋಲ್ಟ್ ಆರ್‌ವಿ 400, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ಭಾರತದ ಮೊದಲ ಸ್ಪೋರ್ಟ್ಸ್ ಬೈಕ್ ಆಗಿದೆ.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಈ ಬೈಕ್ ಅನ್ನು ರೆಬೆಲ್ ರೆಡ್ ಹಾಗೂ ಕಾಸ್ಮಿಕ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಬೈಕಿನಲ್ಲಿ ಎಲ್ಇಡಿ ಹೆಡ್‍‍ಲ್ಯಾಂಪ್, ಟೇಲ್‍‍ಲ್ಯಾಂಪ್ ಹಾಗೂ ಹಿಂಭಾಗದ ಸೀಟ್‍‍ನ ಗ್ರಾಬ್ ರೇಲ್‍‍ಗಳು ಸೇರಿದಂತೆ ಹಲವು ಹೊಸ ಬಗೆಯ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿಯು, ಮೊಬೈಲ್ ಫೋನ್ ಕನೆಕ್ಟಿವಿಟಿ, ಲೈವ್ ರೇಂಜ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್ ಹಾಗೂ ಲೈವ್ ವೆಹಿಕಲ್ ಟ್ರ್ಯಾಕರ್ ನಂತಹ ಫೀಚರ್‍‍ಗಳನ್ನು ಹೊಂದಿದೆ. ದೂರದಲ್ಲಿರುವ, ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಪತ್ತೆಹಚ್ಚುತ್ತದೆ.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಈ ಬೈಕ್ ಇಕೊ, ಸಿಟಿ ಹಾಗೂ ಸ್ಪೋರ್ಟ್ ಎಂಬ ಮೂರು ಬಗೆಯ ರೈಡಿಂಗ್ ಮೋಡ್‍‍ಗಳನ್ನು ಹೊಂದಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟರ್ ಒಂದು ಬಾರಿಯ ಚಾರ್ಜ್‌ನಿಂದ 156 ಕಿ.ಮೀ ದೂರದವರೆಗೂ ಚಲಿಸುತ್ತದೆ. ಈ ಬೈಕ್ ಪ್ರತಿ ಗಂಟೆಗೆ 85 ಕಿ.ಮೀ ವೇಗವನ್ನು ಹೊಂದಿದೆ. ತೆಗೆದು ಹಾಕಬಹುದಾದ ಬ್ಯಾಟರಿಗಳನ್ನು ಹೊಂದಿದೆ. ಗ್ರಾಹಕರ ತೃಪ್ತಿ ಹಾಗೂ ಸರ್ವಿಸ್‍‍ಗಾಗಿ ಸ್ವಾಪೆಬಲ್ ಬ್ಯಾಟರಿಗಳನ್ನು ನೀಡಲಾಗುತ್ತದೆ.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಯಾವುದೇ 15 ಆಂಪಿಯರ್ ಸಾಕೆಟ್ ಬಳಸಿ ಮನೆ ಅಥವಾ ಕಚೇರಿಗಳಲ್ಲಿ 4 ಗಂಟೆಗಳ ಅವಧಿಯಲ್ಲಿ ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ. ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳಿವೆ.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳಿವೆ. ಈ ಬೈಕಿನಲ್ಲಿ ಎಬಿಎಸ್ ನೀಡಲಾಗುತ್ತಿಲ್ಲ. ಈ ಬೈಕಿನಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸವಾರನ ಶೈಲಿಯನ್ನು ಅರ್ಥಮಾಡಿಕೊಂಡು, ಬೈಕ್‌ನ ಶ್ರೇಣಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

MOST READ: ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ರಿವೋಲ್ಟ್ ಕಂಪನಿಯು ಆರ್‍‍ವಿ 400 ಬೈಕಿನಲ್ಲಿ ಸ್ಪೀಕರ್‌ಗಳನ್ನು ಅಳವಡಿಸಿದೆ. ಈ ಬೈಕಿನಲ್ಲಿ ರಿವೋಲ್ಟ್, ರೋರ್, ರೇಜ್ ಹಾಗೂ ರೆಬೆಲ್ ಎಂಬ ನಾಲ್ಕು ಡೀಫಾಲ್ಟ್ ಎಕ್ಸಾಸ್ಟ್ ನೋಟ್‍‍ಗಳಿವೆ. ರಿವೋಲ್ಟ್ ಆರ್‌ವಿ 400 ಬೈಕಿನ ಬೆಲೆಗಳನ್ನು ಇದುವರೆಗೂ ಬಹಿರಂಗಪಡಿಸಿಲ್ಲ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಈ ಬೈಕಿನ ಬೆಲೆಯು ರೂ.1 ಲಕ್ಷದಿಂದ - ರೂ.1.3 ಲಕ್ಷಗಳ ನಡುವೆ ಇರುವ ಸಾಧ್ಯತೆಗಳಿವೆ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಎಲೆಕ್ಟ್ರಿಕ್ ವಾಹನಗಳಿಗೆ ರಿಜಿಸ್ಟ್ರೇಷನ್ ಶುಲ್ಕದಿಂದ ವಿನಾಯಿತಿ ನೀಡುವ ಉದ್ದೇಶ ಹೊಂದಿರುವ ಕಾರಣ ಈ ಬೈಕ್ ಕೈಗೆಟುಕುವ ಬೆಲೆಯನ್ನು ಹೊಂದಿರಲಿದೆ.

MOST READ: ಉಚಿತ ತರಬೇತಿಯೊಂದಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ ಟೊಯೊಟಾ

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಈ ತಿಂಗಳ ಕೊನೆಯಲ್ಲಿ ಬೈಕಿನ ಬಿಡುಗಡೆಯ ವೇಳೆಯಲ್ಲಿ ಬೆಲೆಗಳ ವಿವರಗಳನ್ನು ಪ್ರಕಟಿಸಲಾಗುವುದು. ಈ ಬೈಕುಗಳನ್ನು ರಿವೋಲ್ಟ್ ಮೋಟಾರ್ಸ್.ಕಾಂ ಹಾಗೂ ಅಮೆಜಾನ್.ಇನ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದು. ಸದ್ಯಕ್ಕೆ ದೆಹಲಿ ಹಾಗೂ ಪುಣೆಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು.

ಶುರುವಾಯ್ತು ರಿವೋಲ್ಟ್ ಇ ಬೈಕ್ ಉತ್ಪಾದನೆ

ಎರಡು ವಾರಗಳಲ್ಲಿ 2,500 ಬೈಕುಗಳನ್ನು ಬುಕ್ಕಿಂಗ್ ಮಾಡಲಾಗಿದೆ. ರೂ.1,000 ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ. ಆಗಸ್ಟ್ 28 ರಂದು ರಿವೋಲ್ಟ್ ಇಂಟೆಲಿಕಾರ್ಪ್ ಆರ್‍‍ವಿ 400 ಬೈಕಿನ ಬೆಲೆಯನ್ನು ಪ್ರಕಟಿಸಲಿದೆ. ಮನೇಸಾರ್‍‍ನಲ್ಲಿರುವ 1ನೇ ಹಂತದ ಉತ್ಪಾದನಾ ಘಟಕದಲ್ಲಿ 1,20,000 ವಾಹನಗಳನ್ನು ಉತ್ಪಾದಿಸಬಹುದಾಗಿದೆ.

Most Read Articles

Kannada
English summary
Revolt RV400 electric motorcycle production starts - Read in kannada
Story first published: Thursday, August 8, 2019, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X