ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಮೋಟಾರ್ಸ್ ಸಂಸ್ಥೆಯು ಕಳೆದ ವಾರವಷ್ಟೇ ದೇಶದ ಮೊದಲ ಹೈ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕ್ ಆವೃತ್ತಿಯಾದ ಆರ್‌ವಿ 400 ಬೈಕ್ ಮಾದರಿಯನ್ನು ಅನಾವರಣಗೊಳಿಸಿತ್ತು. ಇದೀಗ ಹೊಸ ಬೈಕ್ ಖರೀದಿಯ ಬುಕ್ಕಿಂಗ್ ಪ್ರಕ್ರಿಯನ್ನು ಆರಂಭಿಸಿದ್ದು, ಮುಂದಿನ ತಿಂಗಳು ಹೊಸ ಬೈಕ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಭಾರತದ ಮೊದಲ ಹೈ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕ್ ಎಂಬ ಖ್ಯಾತಿಗೆ ಕಾರಣವಾಗಿರುವ ರಿವೋಲ್ಟ್ ಆರ್‌ವಿ400 ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದೆ. ರಿವೋಲ್ಟ್ ಹೊಸ ಬೈಕ್ ಸದ್ಯಕ್ಕೆ ದೆಹಲಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗುತ್ತಿದ್ದು, ಅಧಿಕೃತವಾಗಿ ಬಿಡುಗಡೆಯಾದ ಕೆಲವು ದಿನಗಳ ನಂತರವಷ್ಟೇ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ತನ್ನ ಎಲೆಕ್ಟ್ರಿಕ್ ಬೈಕ್ ಮಾರಾಟಕ್ಕೆ ಚಾಲನೆ ಸಿಗಲಿದೆ. ಸದ್ಯಕ್ಕೆ ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿ ಬಯಸುವ ಗ್ರಾಹಕರು ರಿವೋಲ್ಟ್ ಅಧಿಕೃತ ವೆಬ್‌ಸೈಟ್ ಅಥವಾ ಅಮೆಜಾನ್ ಡಾಟ್ ಕಾಮ್‌ನಲ್ಲಿ ರೂ.1 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಸದ್ಯಕ್ಕೆ ರಿವೋಲ್ಟ್ ಆರ್‍‍ವಿ 400 ಬೈಕಿನ ಬೆಲೆಗಳನ್ನು ಬಹಿರಂಗಗೊಳಿಸಿವಾದರೂ ಬುಕ್ಕಿಂಗ್ ಆರಂಭಿಸಲಾಗಿದ್ದು, ಅಧಿಕೃತ ಬೆಲೆ ಮಾಹಿತಿಯು ಮುಂದಿನ ತಿಂಗಳು ಬೈಕ್ ಬಿಡುಗಡೆಯ ಸಮಯದಲ್ಲಿ ಬಹಿರಂಗಗೊಳ್ಳಲಿದೆ. ಇನ್ನು ಈ ಬೈಕ್ ನೇಕೆಡ್ ಸ್ಟ್ರೀಟ್ ಫೈಟರ್ ವಿನ್ಯಾಸವನ್ನು ಹೊಂದಿದ್ದು, ಬೈಕಿನ ಮುಂಭಾಗದಲ್ಲಿ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್‍‍ಗಳ ಜೊತೆಗೆ ಎಲ್‍ಇ‍‍ಡಿ ಡಿ‍ಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹಾಗೆಯೇ ಬೈಕಿನ ಮುಂಭಾಗದಲ್ಲಿರುವ ಅಪ್‍‍ಸೈಡ್ ಡೌನ್ ಫೋರ್ಕ್ ಹೆಚ್ಚು ಗಮನಸೆಳೆಯುಲಿದ್ದು, ಈ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್ ವಿನ್ಯಾಸ ಅಗತ್ಯವಿಲ್ಲದ್ದಿದ್ದರೂ ರಿವೋಲ್ಟ್ ಸಂಸ್ಥೆಯು ಪೆಟ್ರೋಲ್ ಟ್ಯಾಂಕಿನಂತಹ ವಿನ್ಯಾಸವನ್ನು ರೂಪಿಸಿದೆ. ಇದು ಪೆಟ್ರೋಲ್ ಬೈಕ್‍‍ಗಳನ್ನು ಚಲಾಯಿಸುತ್ತಿದ್ದ ಸವಾರರಿಗೆ ಈ ಹಿಂದಿನ ಚಾಲನಾ ಅನುಭವವನ್ನೇ ನೀಡಲು ಈ ಬದಲಾವಣೆಯನ್ನು ನೀಡಲಾಗಿದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇದರಲ್ಲಿ ಸಿಲ್ವರ್ ಬಣ್ಣವನ್ನು ಹೊಂದಿರುವ ಚಾಸೀಸ್ ಅನ್ನು ಸಹ ಕಾಣಬಹುದಾಗಿದ್ದು, 8 ಸ್ಪೋಕ್‍‍ನ ಅಲಾಯ್ ವ್ಹೀಲ್‍‍ಗಳನ್ನು ಈ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಇದಲ್ಲದೇ ಮುಂಭಾಗ ಹಾಗೂ ಹಿಂಭಾಗದ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್‍‍ಗಳಿದ್ದು, ಸಸ್ಷೆನ್ ಕಾರ್ಯಗಳನ್ನು ಮುಂಭಾಗದಲ್ಲಿರುವ ಯು‍ಎಸ್‍‍ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿರುವ ಮೊನೊಶಾಕ್‍‍ಗಳು ನಿಯಂತ್ರಿಸುತ್ತವೆ. ಜೊತೆಗೆ ಈ ಬೈಕ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದ್ದು, ಎಲ್‍‍ಸಿ‍‍ಡಿ ಡಿಸ್‍‍ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಬೈಕ್ ಎಲೆಕ್ಟ್ರಿಕ್ ಆಗಿರುವ ಕಾರಣ ಕೀ-ಲೆಸ್ ಆಗಿದ್ದು, ಕೀ ಹಾಕುವ ಜಾಗದಲ್ಲಿ ಪವರ್ ಬಟನ್ ನೀಡಲಾಗಿದೆ. ಈ ಪವರ್ ಬಟನ್ ಅನ್ನು ರಿವೋಲ್ಟ್ ನ ಸ್ಮಾರ್ಟ್ ಫೋನ್ ಆಪ್ ನಿಯಂತ್ರಿಸಲಿದ್ದು,ಸ್ಮಾರ್ಟ್ ಫೋನ್ ಆಪ್ ಈ ಬೈಕಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಆಪ್‍‍ನಲ್ಲಿ 4ಜಿ ಟೆಕ್ನಾಲಜಿಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಳವಡಿಸಲಾಗಿದ್ದು, ಮ್ಯಾನ್-ಮಷಿನ್ ಇಂಟರ್‍‍ಫೇಸ್ ಸಹಾಯದಿಂದ ಬೈಕಿನ ಡೇಟಾ ಸಂಗ್ರಹಿಸುತ್ತದೆ. ಈ ಆಪ್ ಸವಾರನ ರೈಡಿಂಗ್ ಚಲನವಲನಕ್ಕೆ ತಕ್ಕಂತೆ ಅಡ್ಜಸ್ಟ್ ಆಗುತ್ತದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಈ ಆಪ್‍ ಬೈಕ್ ಅನ್ನು ಸ್ಟಾರ್ಟ್ ಮಾಡುವುದರ ಜೊತೆಗೆ ಹತ್ತಿರದಲ್ಲಿರುವ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‍ ಹಾಗೂ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಪತ್ತೆ ಹಚ್ಚುತ್ತದೆ. ಈ ಆಪ್ ಬೈಕಿನಲ್ಲಿರುವ ಬಹುತೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಜೊತೆಗೆ ಈ ಆಪ್‍‍ನಿಂದಲೇ ಮೊದಲೇ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಆರ್ಡರ್ ಮಾಡಬಹುದ್ದು, ನಂತರ ಆ ಬ್ಯಾಟರಿಗಳನ್ನು ಬೇಕಾಗಿರುವವರಿಗೆ ತಲುಪಿಸುತ್ತದೆ. ಈ ಆಪ್ ಬೈಕಿನಲ್ಲಿರುವ ಟೆಕ್ನಿಕಲ್ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಅಪ್‍‍ಡೇಟ್‍‍ಗಳನ್ನು ಪಡೆಯುತ್ತದೆ.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಸಂಸ್ಥೆಯು ಹೊಸ ಬೈಕಿನಲ್ಲಿ ಜಿಯೊ ಫೆನ್ಸಿಂಗ್, ಮ್ಯಾಪ್ ಹಾಗೂ ನ್ಯಾವಿಗೇಷನ್ ಫೀಚರ್‍‍ಗಳನ್ನು ಸೇರಿಸಿದ್ದು, ಬೈಕಿನ ವೇಗ, ಬೈಕ್ ಸಾಗಿರುವ ದೂರ, ಬೈಕ್ ಎಷ್ಟು ಗಂಟೆಗಳ ಚಲಿಸಿದೆ ಮೊದಲಾದ ಅಂಶಗಳನ್ನು ತೋರಿಸುತ್ತದೆ. ಇದರಲ್ಲಿರುವ ಸೌಂಡ್ ಕಂಟ್ರೋಲ್‍‍ನಿಂದ ಸವಾರನು ಎಷ್ಟು ಅಗತ್ಯವೊ ಅಷ್ಟು ಪ್ರಮಾಣದ ಶಬ್ದವನ್ನು ಆಯ್ಕೆ ಮಾಡಿಕೊಳ್ಳಬಹುದು.

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ರಿವೋಲ್ಟ್ ಆರ್‍‍ವಿ 400 ತಂತ್ರಜ್ಞಾನದಲ್ಲಿ ಹೆಚ್ಚು ಅಡ್ವಾನ್ಸ್ಡ್ ಆಗಿರುವ ಬೈಕ್ ಆಗಿದೆ. ಇದು ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇದರಲ್ಲಿರುವ ಬ್ಯಾಟರಿಯ ಸಾಮರ್ಥ್ಯ ಹಾಗೂ ಪರ್ಫಾಮೆನ್ಸ್ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

MOST READ: ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ದೇಶದ ಮೊದಲ ಹೈ ಪರ್ಫಾಮೆನ್ಸ್ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ವರದಿಗಳ ಪ್ರಕಾರ, ಈ ಬೈಕಿನ ಬ್ಯಾಟರಿಯನ್ನು ಪೂರ್ತಿಯಾಗಿ ಒಂದು ಬಾರಿ ಚಾರ್ಜ್ ಮಾಡಲು ಸರಾಸರಿ 4 ಗಂಟೆಗಳು ಬೇಕಿದ್ದು, ಪೂರ್ತಿಯಾಗಿ ಚಾರ್ಜ್ ಆಗಿರುವ ಬ್ಯಾಟರಿಯಿಂದ 156 ಕಿ.ಮೀ ದೂರದವರೆಗೆ ಚಲಿಸಬಹುದು ಎಂದು ತಿಳಿಸಲಾಗಿದೆ. ಮತ್ತಷ್ಟು ಮಾಹಿತಿಗಳನ್ನು ಬೈಕ್ ಬಿಡುಗಡೆಯಾಗ ಸಮಯದಲ್ಲಿ ಬಹಿರಂಗಪಡಿಸಲಾಗುವುದು.

Most Read Articles

Kannada
English summary
Revolt RV 400 Pre-Bookings Open — India’s First All-Electric Motorcycle.
Story first published: Tuesday, June 25, 2019, 18:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X