Just In
Don't Miss!
- News
ಶೀಘ್ರವೇ 2 ಸಾವಿರ ಪೊಲೀಸರ ನೇಮಕಾತಿ: ಬೊಮ್ಮಾಯಿ
- Technology
ಬಿಎಸ್ಎನ್ಎಲ್ನ ಹೊಸ ನಡೆಗೆ ಖಾಸಗಿ ಟೆಲಿಕಾಂಗಳು ಗಪ್ಚುಪ್!
- Movies
ಈ ವರ್ಷ ಟ್ವಿಟ್ಟರ್ ನಲ್ಲಿ ಅತಿ ಹೆಚ್ಚು ಬಳಿಕೆಯಾದ ಹ್ಯಾಂಡಲ್ ಈ ನಟಿಯದ್ದು
- Lifestyle
ಬುಧವಾರದ ದಿನ ಭವಿಷ್ಯ 11-12-2019
- Sports
ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್
- Finance
ಶೈಕ್ಷಣಿಕ ಸಾಲ ಮನ್ನಾ ಆಗುತ್ತಾ? ಏನಂತಾರೆ FM ನಿರ್ಮಲಾ ಸೀತಾರಾಮನ್
- Education
ಎಸ್ಎಸ್ಎಲ್ಸಿ ಪಾಸ್...ಚಾಲಕ ವೃತ್ತಿ ಅಂದ್ರೆ ನಂಗಿಷ್ಟ… ಹಾಗಿದ್ರೆ ಈ ಸಾರಿಗೆ ಸಂಸ್ಥೆ ನೇಮಕಾತಿಗೆ ಅರ್ಜಿ ಹಾಕ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
ಎಲೆಕ್ಟ್ರಿಕ್ ಬೈಕ್ಗಳಲ್ಲಿ 4ಜಿ ಇಂಟರ್ನೆಟ್ ಸೌಲಭ್ಯ ನೀಡಲಿದೆ ರಿವೋಲ್ಟ್
ಆಕರ್ಷಕ ಬೆಲೆಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಬೈಕ್ಗಳನ್ನು ಬಿಡುಗಡೆಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿರುವ ರಿವೋಲ್ಟ್ ಸಂಸ್ಥೆಯು ಹೊಸ ಬೈಕ್ಗಳ ಮೂಲಕ ಗ್ರಾಹಕರಿಗೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡುತ್ತಿದ್ದು, ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರುಗಳಲ್ಲಿ 4ಜಿ ಇಂಟರ್ನೆಟ್ ಒದಗಿಸಲು ಮುಂದಾಗಿದೆ.

ಇನ್ಬಿಲ್ಟ್ ಇಂಟರ್ನೆಟ್ ಸೌಲಭ್ಯದ ಮೂಲಕ ಗ್ರಾಹಕರಿಗೆ ವಿವಿಧ ಸೇವೆಗಳನ್ನು ನೀಡಲಿರುವ ರಿವೋಲ್ಟ್ ಸಂಸ್ಥೆಯು ಜಿಪಿಎಸ್ ಮತ್ತು ಆನ್ಲೈನ್ ಮೂಲಕ ಗ್ರಾಹಕರ ಸೇವೆ ಮತ್ತು ದೂರುಗಳನ್ನು ಸ್ವಿಕರಿಸಲು ಅನುಕೂಲಕರವಾಗುವಂತೆ ಹೊಸ ಆ್ಯಪ್ ಸಿದ್ದಪಡಿಸಿದ್ದು, ಇದಕ್ಕೆ ವೋಡಾಫೋನ್-ಐಡಿಯಾ ಸಂಸ್ಥೆಯು 4ಜಿ ಇಂಟರ್ನೆಟ್ ಸೌಲಭ್ಯವನ್ನು ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಇದು ಗ್ರಾಹಕರನ್ನು ಮತ್ತಷ್ಟು ಸೆಳೆಯಲಿದ್ದು, ಬೈಕ್ ಮಾರಾಟ ನಂತರದ ಸೇವೆಗಳನ್ನು ಸರಳಗೊಳಿಸಲು ಇದೊಂದು ಅತ್ಯುತ್ತಮ ಮಾರ್ಗವಾಗಿದೆ.

ಇನ್ನು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಮಾರಾಟದ ಮೇಲೆ ಹೆಚ್ಚಿನ ಒತ್ತು ನೀಡುತ್ತಿದ್ದು, ಜಿಎಸ್ಟಿಯಲ್ಲಿ ಇಳಿಕೆ, ತೆರಿಗೆ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಈ ಹಿನ್ನಲೆಯಲ್ಲಿ ಆಕರ್ಷಕ ಎಲೆಕ್ಟ್ರಿಕ್ ಬೈಕ್ ಉತ್ಪನ್ನಗಳೊಂದಿಗೆ ಅದೃಷ್ಟ ಪರೀಕ್ಷೆಗಿಳಿದಿರುವ ಪುಣೆ ಮೂಲದ ರಿವೋಲ್ಟ್ ಸಂಸ್ಥೆಯು ಮೊದಲ ಪ್ರಯತ್ನದಲ್ಲೇ ವಿನೂತನ ಮಾದರಿಯ ಆರ್ವಿ300 ಮತ್ತು ಆರ್ವಿ400 ಎನ್ನುವ ಎರಡು ಎಲೆಕ್ಟ್ರಿಕ್ ಬೈಕ್ಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.

ವಿಶೇಷ ಅಂದರೆ ರಿವೋಲ್ಟ್ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ಬೈಕ್ಗಳನ್ನು ತಿಂಗಳು ಇಎಂಐ ಆಧಾರದ ಮೇಲೆ ಬಿಡುಗಡೆ ಮಾಡಿದ್ದು, 37 ತಿಂಗಳ ಅವಧಿಗೆ ಆರಂಭಿಕವಾಗಿ ರೂ.2999(ಆರ್ವಿ300), ರೂ.3499(ಆರ್ವಿ400 ಬೆಸ್) ಮತ್ತು ರೂ.3999(ಆರ್ವಿ400 ಪ್ರೀಮಿಯಂ) ದರ ನಿಗದಿ ಮಾಡಿದೆ. ಇದರೊಂದಿಗೆ ಇಎಂಐ ಬೇಡ ಎನ್ನುವ ಗ್ರಾಹಕರಿಗೆ ಒಂದೇ ಹಂತದಲ್ಲಿ ದರ ಪಾವತಿಸುವ ಅನುಕೂಲ ಕೂಡಾ ಇದ್ದು, ಎಕ್ಸ್ಶೋರೂಂ ಪ್ರಕಾರ ಆರ್ವಿ 300 ಬೈಕಿಗೆ ರೂ.84,999 ಹಾಗೂ ಆರ್ವಿ 400 ಪ್ರೀಮಿಯಂ ಬೈಕಿಗೆ ರೂ.98,999 ದರ ನಿಗದಿಪಡಿಸಿದೆ.

ಬ್ಯಾಟರಿ ವೈಶಿಷ್ಟ್ಯತೆ ಮತ್ತು ಮೈಲೇಜ್
ಆರ್ವಿ300 ಬೈಕಿನಲ್ಲಿ 2.7kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 1.5kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 65 ಕಿ.ಮಿ ಟಾಪ್ ಸ್ಪೀಡ್ನೊಂದಿಗೆ ಸಿಂಗಲ್ ಚಾರ್ಜ್ನಲ್ಲಿ ಗರಿಷ್ಠ 180 ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ಹಾಗೆಯೇ ಆರ್ವಿ400 ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಿದ್ದು, ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್ನೊಂದಿಗೆ ಸಿಂಗಲ್ ಚಾರ್ಜ್ನಲ್ಲಿ 156ಕಿ.ಮಿ ಮೈಲೇಜ್ ನೀಡುತ್ತವೆ ಎಂದು ರಿವೋಲ್ಟ್ ಸಂಸ್ಥೆಯು ಅಧಿಕೃತವಾಗಿ ಹೇಳಿಕೊಂಡಿದೆ.

ಬೈಕ್ ತಾಂತ್ರಿಕ ಸೌಲಭ್ಯಗಳು ಇದರೊಂದಿಗೆ ಹೊಸ ಬೈಕ್ಗಳಲ್ಲಿ ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್ಗಳನ್ನು ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ರಿವೋಲ್ಟ್ ಹೊಸ ಬೈಕಿನಲ್ಲಿವೆ.

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ಆರ್ವಿ300 ಹಾಗೂ ಆರ್ವಿ400 ಬೈಕ್ಗಳನ್ನು ಖರೀದಿಸುವ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಲಭ್ಯ ನೀಡಿರುವ ರಿವೋಲ್ಟ್ ಸಂಸ್ಥೆಯು, ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳಲು ಮಾತ್ರವಲ್ಲದೇ, ತೆಗೆದು ಹಾಕಬಹುದಾದ ಬ್ಯಾಟರಿ ಜೊತೆಗೆ ಬ್ಯಾಟರಿ ಸ್ಟೆಷನ್ ಮೂಲಕ ನಿಮ್ಮ ಅಗತ್ಯ ಸ್ಥಳಗಳಿಗೆ ಬ್ಯಾಟರಿ ಸೇವೆಗಳನ್ನು ನೀಡಲಿದೆ.