Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್
ರಿವೋಲ್ಟ್ ಮೋಟಾರ್ಸ್ ಆರ್ವಿ ಎಲೆಕ್ಟ್ರಿಕ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಭಾರತದ ಬೈಕುಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೊಸ ಫೀಚರ್ಗಳನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ. ಈ ಬೈಕ್ ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ.

ಸದ್ಯಕ್ಕೆ ರಿವೋಲ್ಟ್ ಆರ್ವಿ 400 ಬೈಕಿನ ಬೆಲೆಗಳನ್ನು ಬಹಿರಂಗಗೊಳಿಸಿಲ್ಲ. ಬೆಲೆಯನ್ನು ಮುಂದಿನ ತಿಂಗಳು ಬೈಕಿನ ಬಿಡುಗಡೆಯ ಸಮಯದಲ್ಲಿ ಬಹಿರಂಗಗೊಳಿಸಲಾಗುವುದು. ಈ ಬೈಕ್ ನೇಕೆಡ್ ಸ್ಟ್ರೀಟ್ ಫೈಟರ್ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣಲಿದೆ. ಬೈಕಿನ ಮುಂಭಾಗದಲ್ಲಿ ಎಲ್ಇಡಿ ಹೆಡ್ಲ್ಯಾಂಪ್ಗಳ ಜೊತೆಗೆ ಎಲ್ಇಡಿ ಡಿಆರ್ಎಲ್ಗಳನ್ನು ಅಳವಡಿಸಲಾಗಿದೆ. ಈ ಬೈಕಿನ ಮುಂಭಾಗದಲ್ಲಿರುವ ಅಪ್ಸೈಡ್ ಡೌನ್ ಫೋರ್ಕ್ ಹೆಚ್ಚು ಗಮನಸೆಳೆಯುತ್ತದೆ.

ಈ ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್ ಅಳವಡಿಸಲಾಗಿಲ್ಲ. ರಿವೋಲ್ಟ್ ಕಂಪನಿಯು ಪೆಟ್ರೋಲ್ ಟ್ಯಾಂಕಿನಂತಹ ವಿನ್ಯಾಸವನ್ನು ರೂಪಿಸಿದೆ. ಪೆಟ್ರೋಲ್ ಬೈಕ್ಗಳನ್ನು ಚಲಾಯಿಸುತ್ತಿದ್ದ ಸವಾರರಿಗೆ ಈ ಬದಲಾವಣೆಯ ಅನುಭವವಾಗಲಿದೆ.

ಸಿಲ್ವರ್ ಬಣ್ಣವನ್ನು ಹೊಂದಿರುವ ಚಾಸೀಸ್ ಅನ್ನು ಸಹ ಕಾಣಬಹುದಾಗಿದೆ. 8 ಸ್ಪೋಕ್ನ ಅಲಾಯ್ ವ್ಹೀಲ್ಗಳನ್ನು ಈ ಬೈಕಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ಗಳವೆ.

ಸಸ್ಪೆಂಷನ್ ಕಾರ್ಯಗಳನ್ನು ಮುಂಭಾಗದಲ್ಲಿರುವ ಯುಎಸ್ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿರುವ ಮೊನೊಶಾಕ್ಗಳು ನಿಯಂತ್ರಿಸುತ್ತವೆ. ಈ ಬೈಕ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನಲ್ಲಿ ಎಲ್ಸಿಡಿ ಡಿಸ್ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಈ ಬೈಕ್ ಎಲೆಕ್ಟ್ರಿಕ್ ಆಗಿರುವ ಕಾರಣ ಕೀ-ಲೆಸ್ ಆಗಿದ್ದು, ಕೀ ಹಾಕುವ ಜಾಗದಲ್ಲಿ ಪವರ್ ಬಟನ್ ನೀಡಲಾಗಿದೆ. ಈ ಪವರ್ ಬಟನ್ ಅನ್ನು ರಿವೋಲ್ಟ್ ನ ಸ್ಮಾರ್ಟ್ ಫೋನ್ ಆಪ್ ನಿಯಂತ್ರಿಸುತ್ತದೆ.

ಸ್ಮಾರ್ಟ್ ಫೋನ್ ಆಪ್ ಈ ಬೈಕಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಆಪ್ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಳವಡಿಸಲಾಗಿದ್ದು, ಮ್ಯಾನ್-ಮಷಿನ್ ಇಂಟರ್ಫೇಸ್ ಸಹಾಯದಿಂದ ಬೈಕಿನ ಡೇಟಾ ಸಂಗ್ರಹಿಸುತ್ತದೆ. ಈ ಆಪ್ ಸವಾರನ ರೈಡಿಂಗ್ ಚಲನವಲನಕ್ಕೆ ತಕ್ಕಂತೆ ಅಡ್ಜಸ್ಟ್ ಆಗುತ್ತದೆ. ಈ ಬೈಕಿನಲ್ಲಿ 4ಜಿ ಟೆಕ್ನಾಲಜಿಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಿಸ್ಟಂ ಅಳವಡಿಸಲಾಗಿದೆ.

ಈ ಆಪ್ ಬೈಕ್ ಅನ್ನು ಸ್ಟಾರ್ಟ್ ಮಾಡುವುದರ ಜೊತೆಗೆ ಹತ್ತಿರದಲ್ಲಿರುವ ಬ್ಯಾಟರಿ ಸ್ವಾಪಿಂಗ್ ಸ್ಟೇಷನ್ ಹಾಗೂ ಚಾರ್ಜಿಂಗ್ ಸ್ಟೇಷನ್ಗಳನ್ನು ಪತ್ತೆ ಹಚ್ಚುತ್ತದೆ. ಈ ಆಪ್ ಬೈಕಿನಲ್ಲಿರುವ ಬಹುತೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ.
MOST READ: ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಈ ಆಪ್ನಿಂದ ಮೊದಲೇ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಆರ್ಡರ್ ಮಾಡಬಹುದು, ನಂತರ ಆ ಬ್ಯಾಟರಿಗಳನ್ನು ಬೇಕಾಗಿರುವವರಿಗೆ ತಲುಪಿಸುತ್ತದೆ. ಈ ಆಪ್ ಬೈಕಿನಲ್ಲಿರುವ ಟೆಕ್ನಿಕಲ್ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಅಪ್ಡೇಟ್ಗಳನ್ನು ಪಡೆಯುತ್ತದೆ.

ಈ ಬೈಕಿನಲ್ಲಿ ಜಿಯೊ ಫೆನ್ಸಿಂಗ್, ಮ್ಯಾಪ್ ಹಾಗೂ ನ್ಯಾವಿಗೇಷನ್ ಫೀಚರ್ಗಳಿವೆ. ಬೈಕಿನ ವೇಗ, ಬೈಕ್ ಸಾಗಿರುವ ದೂರ, ಬೈಕ್ ಎಷ್ಟು ಗಂಟೆಗಳ ಚಲಿಸಿದೆ ಮೊದಲಾದ ಅಂಶಗಳನ್ನು ತೋರಿಸುತ್ತದೆ. ಇದರಲ್ಲಿರುವ ಸೌಂಡ್ ಕಂಟ್ರೋಲ್ನಿಂದ ಸವಾರನು ಎಷ್ಟು ಅಗತ್ಯವೊ ಅಷ್ಟು ಪ್ರಮಾಣದ ಶಬ್ದವನ್ನು ಆಯ್ಕೆ ಮಾಡಿಕೊಳ್ಳಬಹುದು.
MOST READ: ಅಪಘಾತಕ್ಕೂ ಮುನ್ನ ಸವಾರನಿಗೆ ಎಚ್ಚರಿಕೆ ನೀಡುತ್ತೆ ಈ ಐಷಾರಾಮಿ ಬೈಕ್..!

ರಿವೋಲ್ಟ್ ಆರ್ವಿ 400 ತಂತ್ರಜ್ಞಾನದಲ್ಲಿ ಹೆಚ್ಚು ಅಡ್ವಾನ್ಸ್ಡ್ ಆಗಿರುವ ಬೈಕ್ ಆಗಿದೆ. ಇದು ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇದರಲ್ಲಿರುವ ಬ್ಯಾಟರಿಯ ಸಾಮರ್ಥ್ಯ ಹಾಗೂ ಔಟ್ಪುಟ್ನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಈ ಬೈಕ್ ಆನ್ ಬೋರ್ಡ್ ಚಾರ್ಜಿಂಗ್ ಹಾಗೂ ಪೊರ್ಟೆಬಲ್ ಚಾರ್ಜಿಂಗ್ ಫೀಚರ್ಗಳೆರಡನ್ನೂ ಹೊಂದಿದೆ. ಪೊರ್ಟೆಬರ್ಲ್ ಚಾರ್ಜಿಂಗ್ ಫೀಚರ್ಯಿರುವುದರಿಂದ ಈ ಬೈಕಿನಲ್ಲಿರುವ ಬ್ಯಾಟರಿಯನ್ನು ಹೊರತೆಗೆದು, ಮನೆಗಳಲ್ಲಿರುವ ಮಾಮೂಲಿಯಾದ 15 ಆಂಪ್ ಸಾಕೆಟ್ನಲ್ಲಿಯೇ ಚಾರ್ಜ್ ಮಾಡಬಹುದು.
MOST READ: ಬಿಎಸ್6 ಎಂಜಿನ್ನೊಂದಿಗೆ ಬರಲಿವೆ ಪಿಯಾಜಿಯೊ ಸ್ಕೂಟರ್ಗಳು

ಕಂಪನಿಯ ಪ್ರಕಾರ, ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 4 ಗಂಟೆಗಳು ಬೇಕು. ಸ್ವಾಪ್ ಬ್ಯಾಟರಿ ಡೀಲರ್ಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದರ ಜೊತೆಗೆ, ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಮನೆ ಬಾಗಿಲಿಗೆ ಡೆಲಿವರಿ ಮಾಡಲಾಗುವುದು.

ರಿವೋಲ್ಟ್ ಆರ್ವಿ 400 ಬೈಕ್ ಅನ್ನು ಕಂಪನಿಯ ಹರಿಯಾಣದಲ್ಲಿರುವ ಮಾನೆಸರ್ ಘಟಕದಲ್ಲಿ ತಯಾರಿಸಲಾಗುವುದು. ಈ ಘಟಕವು ಫೇಸ್1ರಲ್ಲಿ 1,20,000ರಷ್ಟು ಬೈಕುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇಡಿಕೆ ಹೆಚ್ಚಿದಲ್ಲಿ ಘಟಕವನ್ನು ವಿಸ್ತರಿಸಲಾಗುವುದು.

ರಿವೋಲ್ಟ್ ಕಂಪನಿಯ ಪ್ರಕಾರ ಎಆರ್ಎಐ ನೀಡಿರುವ ಪ್ರಮಾಣಪತ್ರದಲ್ಲಿ, ಪೂರ್ತಿಯಾಗಿ ಚಾರ್ಜ್ ಆಗಿರುವ ಬ್ಯಾಟರಿಯಿಂದ 156 ಕಿ.ಮೀ ದೂರದವರೆಗೆ ಚಲಿಸಬಹುದು ಎಂದು ತಿಳಿಸಲಾಗಿದೆ. ಮತ್ತಷ್ಟು ಮಾಹಿತಿಗಳನ್ನು ಬೈಕ್ ಬಿಡುಗಡೆಯಾಗ ಸಮಯದಲ್ಲಿ ಬಹಿರಂಗಪಡಿಸಲಾಗುವುದು.

ಸದ್ಯಕ್ಕೆ ಬುಕ್ಕಿಂಗ್ಗಳನ್ನು ದೆಹಲಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ಜೂನ್ 25ರಿಂದ ಬುಕ್ಕಿಂಗ್ ಆರಂಭಿಸಲಾಗುವುದು. ಬೇರೆ ನಗರಗಳ ಜನರು ಇನ್ನಷ್ಟು ದಿನ ಕಾಯಬೇಕಾಗುತ್ತದೆ. ಈ ಬೈಕುಗಳನ್ನು ಕಂಪನಿಯ ವೆಬ್ಸೈಟ್ www.revoltmotors.com ಅಥವಾ Amazon.inನಲ್ಲಿ ಬುಕ್ ಮಾಡಬಹುದು.

ರಿವೋಲ್ಟ್ ಇಂಟೆಲಿಕಾರ್ಪ್ನ ಸಂಸ್ಥಾಪಕ ಹಾಗೂ ಚೀಫ್ ರೆವೊಲ್ಯೂಷನರಿ ಆಫೀಸರ್ ಆದ ರಾಹುಲ್ ಶರ್ಮಾರವರು ಈ ಬಗ್ಗೆ ಮಾತನಾಡಿ, ಆರ್ವಿ 400 ಬೈಕ್ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬೈಕುಗಳ ಕಡೆಗೆ ಕಂಪನಿಯಿಡುತ್ತಿರುವ ಮೊದಲ ಹೆಜ್ಜೆಯಾಗಿದೆ. ಈ ಬೈಕಿನಲ್ಲಿ ಪವರ್, ಸ್ಟೈಲ್, ದೂರ, ಬ್ಯಾಟರಿ ಚಾರ್ಜಿಂಗ್ ಸೌಲಭ್ಯ, ಸೆಕ್ಯೂರಿಟಿ, ಸೌಂಡ್ ಹಾಗೂ ಸರ್ವಿಸ್ಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಆರ್ವಿ400 ಬೈಕ್ ಭಾರತದ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ. ಈ ಬೈಕ್ ಆರ್ಟಿಫಿಷಿಯಲ್ ಹಾಗೂ ಆಪ್ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಇವುಗಳ ಜೊತೆಗೆ ಬೈಕ್ ಆಕರ್ಷಕವಾಗಿಯೂ ಕಾಣಿಸುತ್ತದೆ. ಈಗ ಎಲ್ಲರ ಗಮನವು ಈ ಬೈಕಿನ ಬೆಲೆ ಎಷ್ಟಿರಲಿದೆ ಎಂಬುದರತ್ತ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಮುಂದಿನ ತಿಂಗಳಿನವರೆಗೂ ಕಾದು ನೋಡೋಣ.