ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ರಿವೋಲ್ಟ್ ಇಂಟೆಲಿಕಾರ್ಪ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ರಿವೋಲ್ಟ್ ಆರ್‍‍ವಿ400ನ ಬುಕ್ಕಿಂಗ್ ಅನ್ನು ಅಮೇಜಾನ್ ಮೂಲಕ ಆರಂಭಿಸಿದೆ. ಬೈಕ್ ತಯಾರಕ ಕಂಪನಿಯೊಂದು ಇ-ಕಾಮರ್ಸ್ ವೆಬ್‍‍ಸೈಟ್ ಮೂಲಕ ಈ ರೀತಿಯಾಗಿ ಬುಕ್ಕಿಂಗ್ ಆರಂಭಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಅಮೇಜಾನ್ ವೆಬ್‍‍ಸೈಟಿನಲ್ಲಿ ರೂ.1,000 ಪಾವತಿಸುವ ಮೂಲಕ, ಈ ಎಲೆಕ್ಟ್ರಿಕ್ ಆರ್‍‍ವಿ 400 ಬೈಕ್ ಅನ್ನು ಬುಕ್ಕಿಂಗ್ ಮಾಡಬಹುದು.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ರಿವೋಲ್ಟ್ ಆರ್‍‍ವಿ400 ಬೈಕ್ ಅನ್ನು 2018ರ ಜೂನ್‍‍ನಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿತ್ತು. ಕಂಪನಿಯು ಈ ಬೈಕ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಹೊಂದಿರುವ ಭಾರತದ ಮೊದಲ ಬೈಕ್ ಎಂದು ತಿಳಿಸಿದೆ. ಕಂಪನಿಯು ತನ್ನ ಅಧಿಕೃತ ವೆಬ್‍‍‍ಸೈಟ್ ರಿವೋಲ್ಟ್ ಮೋಟಾರ್ಸ್.ಕಾಂ ನಲ್ಲಿಯೂ ಬುಕ್ಕಿಂಗ್‍‍ಗಳನ್ನು ಶುರು ಮಾಡಿದೆ. ಬುಕ್ಕಿಂಗ್‍‍ಗಳನ್ನು ದೆಹಲಿ ಹಾಗೂ ಪುಣೆ ನಗರಗಳಿಗಾಗಿ ಶುರು ಮಾಡಲಾಗಿದೆ. ಜುಲೈ 5ರಿಂದ ಈ ಬೈಕ್ ಅಮೇಜಾನ್ ಬುಕ್ಕಿಂಗ್‍‍ನ ಪಟ್ಟಿಯಲ್ಲಿ ಸ್ಥಾನ ಪಡಿದಿದೆ.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ರಿವೋಲ್ಟ್ ಇಂಟೆಲಿಕಾರ್ಪ್ ಕಂಪನಿಯ ಪ್ರಕಾರ, ಕಂಪನಿಯು ಈಗಾಗಲೇ ರಿವೋಲ್ಟ್ ಆರ್‍‍ವಿ400 ಬೈಕಿಗಾಗಿ ಸುಮಾರು 2,000 ಆರ್ಡರ್‍‍ಗಳನ್ನು ಪಡೆದಿದೆ. ರಿವಾಲ್ಟ್ ಇಂಟೆಲಿಕಾರ್ಪ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಮಾರ್ಕೆಟಿಂಗ್ ಹಾಗೂ ಬಿಸಿನೆಸ್ ಡೆವಲಪ್‌ಮೆಂಟ್ ಆಫೀಸರ್ ಶುಭೋದೀಪ್ ಪಾಲ್‍‍ರವರು ಮಾತನಾಡಿ, ಆನ್‌ಲೈನ್ ಮಾರಾಟದಲ್ಲಿ ಸಾಕಷ್ಟು ಅವಕಾಶಗಳಿದ್ದು, ಇದುವರೆಗೂ ಬೇರೆ ಯಾವುದೇ ಕಂಪನಿಯು ಈ ರೀತಿಯ ಸಾಹಸಕ್ಕೆ ಕೈ ಹಾಕಿಲ್ಲ.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ಇ-ಕ್ರಾಂತಿಯ ನಂತರ, ನಾವು ಹೊಸ ಸಾಹಸಕ್ಕೆ ಕೈ ಹಾಕಿದ್ದು, ಸಾಂಪ್ರಾದಾಯಿಕ ಮಾರಾಟದ ಹೊರತಾಗಿ ನಮ್ಮ ಮಾರಾಟವನ್ನು ಬೇರೆ ರೀತಿಯಲ್ಲಿ ವಿಸ್ತರಿಸಲು ಬಯಸಿದ್ದೇವೆ ಎಂದು ತಿಳಿಸಿದರು. ಬೈಕಿನ ನೋಟವು ವಿಭಿನ್ನವಾಗಿದ್ದು, ಗ್ರಾಹಕರಿಗೆ ಉತ್ಸಾಹವನ್ನು ನೀಡುತ್ತದೆ. ನಮ್ಮ ಗ್ರಾಹಕರನ್ನು ತಲುಪಲು ಸುಲಭವಾದ ವೇದಿಕೆಯಾದ ಅಮೆಜಾನ್ ಇಂಡಿಯಾದೊಂದಿಗೆ ಪಾಲುದಾರರಾಗಲು ರಿವೋಲ್ಟ್ ಇಂಟೆಲಿಕಾರ್ಪ್ ಸಂತೋಷವಾಗಿದೆ. ಯಾವುದೇ ವಾಹನದ ಡೆಲಿವರಿಯನ್ನು ಪಡೆಯುವ ದಿನವು ಭಾರತದಲ್ಲಿ ಸಂಪ್ರದಾಯವಾಗಿದೆ.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ಡೆಲಿವರಿ ಪಡೆಯುವ ದಿನ ನಮ್ಮ ಗ್ರಾಹಕರು ದೊಡ್ಡ ಆಶ್ಚರ್ಯಕ್ಕೆ ಒಳಗಾಗಲಿದ್ದಾರೆ ಎಂದು ಅವರು ಹೇಳಿದರು. ಅಮೆಜಾನ್ ಇಂಡಿಯಾದ ಕ್ಯಾಟಗರಿ ಮ್ಯಾನೇಜ್‌ಮೆಂಟ್‌ನ ನಿರ್ದೇಶಕಿ ಶಾಲಿನಿ ಪುಚಲಪಲ್ಲಿರವರು ಮಾತನಾಡಿ ನಾವು ರಿವೋಲ್ಟ್ ಇಂಟೆಲಿಕಾರ್ಪ್‍‍ನ ಜೊತೆ ಸಹಭಾಗಿತ್ವವನ್ನು ಹೊಂದಲು ಉಲ್ಲಾಸಿತರಾಗಿದ್ದು, ರಿವೋಲ್ಟ್ ಇಂಟೆಲಿಕಾರ್ಪ್ ಕಂಪನಿಯ ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಆರ್‍‍ವಿ400 ಬೈಕ್ ಅನ್ನು ನಮ್ಮ ಗ್ರಾಹಕರಿಗೆ ಅಮೆಜಾನ್ ವೆಬ್‍‍ಸೈಟಿನ ಮುಖಾಂತರ ಮಾರಾಟ ಮಾಡಲು ಉಲ್ಲಾಸಿತರಾಗಿದ್ದೇವೆ.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಸ್ಮಾರ್ಟ್ ಮೊಬಿಲಿಟಿ ಸೊಲ್ಯೂಷನ್ಸ್ ಆಟೋಮೋಟಿವ್ ಉದ್ಯಮದ ಭವಿಷ್ಯವಾಗಿದೆ. ಈ ಸಹಭಾಗಿತ್ವದಿಂದ ದೇಶಾದ್ಯಂತವಿರುವ ಗ್ರಾಹಕರನ್ನು ಹತ್ತಿರಕ್ಕೆ ತರಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಬೈಕಿನ ಯಾವುದೇ ನಿರ್ದಿಷ್ಟ ವಿವರಗಳು ನಮಗೆ ಲಭ್ಯವಿಲ್ಲದಿದ್ದರೂ ಬೈಕಿನಲ್ಲಿ ಆಂಡ್ರಾಯ್ಡ್ ಹಾಗೂ ಆಪಲ್ ಪ್ಲಾಟ್‍‍ಫಾರಂಗಳಿಗೆ ಹೊಂದಿಕೊಳ್ಳುವ ರಿವೋಲ್ಟ್ ಅಪ್ಲಿಕೇಶನ್ ಅಳವಡಿಸಲಾಗಿದೆ. ಸ್ಮಾರ್ಟ್‍‍ಫೋನ್ ಅಪ್ಲಿಕೇಶನ್‌ನಲ್ಲಿ ಬೈಕ್ ಲೊಕೇಟರ್, ಆಂಟಿ-ಥೆಫ್ಟ್ ಅಲಾರಂ, ಬೈಕ್ ಸೌಂಡ್ ಸೆಲೆಕ್ಷನ್ ಸೆಟ್ಟಿಂಗ್‌‍‍ಗಳಿವೆ.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ರಿಕ್ವೆಸ್ಟ್ ಫೀಲ್ಡ್ ಆಪ್ ಮೂಲಕ ಬೈಕಿನ ಮಾಲೀಕರು ಬ್ಯಾಟರಿಗಳಿಗಾಗಿ ಮನವಿ ಮಾಡಿಕೊಳ್ಳಬಹುದು. ಕಂಪನಿಯ ಪ್ರಕಾರ ರಿವೋಲ್ಟ್ ಆರ್‍‍ವಿ 400 ಬೈಕ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 156 ಕಿ.ಮೀವರೆಗೆ ಚಲಿಸುತ್ತದೆ. ಈ ಬೈಕ್ ಅನ್ನು ರೆಬೆಲ್ ರೆಡ್ ಹಾಗೂ ಕಾಸ್ಮಿಕ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಅಮೇಜಾನ್ ಮೂಲಕ ಬುಕ್ಕಿಂಗ್ ಆರಂಭಿಸಿದ ರಿವೋಲ್ಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮೊದಲನೆಯ ಬಾರಿಗೆ ಬೈಕ್ ತಯಾರಕ ಕಂಪನಿ ಹಾಗೂ ಅಮೆಜಾನ್‌ ಒಟ್ಟಿಗೆ ಸೇರಿ ಬೈಕ್ ಅನ್ನು ಆನ್‍‍ಲೈನ್‍‍ನಲ್ಲಿ ಮಾರಾಟ ಮಾಡುತ್ತಿವೆ. ಅಮೇಜಾನ್ ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಸುಮಾರು 150 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಜನಸಾಮಾನ್ಯರನ್ನು ತಲುಪಲು ಇದಕ್ಕಿಂತ ಉತ್ತಮವಾದ ಹಾದಿ ಮತ್ತೊಂದಿಲ್ಲ.

Most Read Articles

Kannada
English summary
Pre-Book Motorcycles Via Amazon — Revolt Lists The RV 400 On The E-Commerce Platform - Read in kannada
Story first published: Wednesday, July 10, 2019, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X