ಟ್ರೊನೊ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದ ರೊವೆಟ್ ಮೊಬಿಲಿಟಿ

ಪುಣೆ ಮೂಲದ ರೊವೆಟ್ ಮೊಬಿಲಿಟಿ ಐದು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ಮೂಲಕ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಐದು ವಾಹನಗಳ ಪೈಕಿ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್‌ಗಳಾದರೆ, ಮತ್ತೊಂದು ಎಲೆಕ್ಟ್ರಿಕ್ ಬೈಕ್ ಆಗಿದ್ದು ರೊವೆಟ್ ಟ್ರೊನೊ ಎಂದು ಹೆಸರಿಡಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟ ರೊವೆಟ್ ಮೊಬಿಲಿಟಿ

ಕಂಪನಿಯ ನಿರ್ದೇಶಕರೊಬ್ಬರು ದೃಢಪಡಿಸಿದ ಪ್ರಕಾರ, ಈ ವಾಹನಗಳನ್ನು 2020ರ ಜನವರಿ 1ರಂದು ಬಿಡುಗಡೆಗೊಳಿಸಲಾಗುವುದು. ರೊವೆಟ್ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿರುವ ಬೇರೆ ಕಂಪನಿಯ ವಾಹನಗಳಿಗಿಂತ ವಿಶಿಷ್ಟವಾದ ಫೀಚರ್‍‍ಗಳನ್ನು ಹೊಂದಿರಲಿವೆ.

ಈ ಎಲ್ಲಾ ಐದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು - ಲೆಡ್ ಆಸಿಡ್, ಲಿಥಿಯಂ - ಅಯಾನ್, ಹಾಗೂ ಕಂಪನಿಯ ಪೇಟೆಂಟ್ ಪಡೆದ ಕ್ಲಿಕ್ ಬ್ಯಾಟರಿ ಎಂಬ ಮೂರು ವಿಭಿನ್ನ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿರುತ್ತವೆ.

ಈ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಎಕ್ಸ್ ಶೋರೂಂ ದರದಂತೆ ರೂ.51,000ದಿಂದ ರೂ.1.55 ಲಕ್ಷದವರೆಗೆ ಇರಲಿದ್ದು, ಬೆಲೆಗೆ ತಕ್ಕಂತೆ ಬ್ಯಾಟರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಲಿಥಿಯಂ-ಅಯಾನ್ ಬ್ಯಾಟರಿಗೆ ಹೆಚ್ಚುವರಿ ಹಣ ಪಾವತಿಸುವುದನ್ನು ತಡೆಗಟ್ಟಲು ಈ ರೀತಿ ಬೆಲೆ ನಿಗದಿಪಡಿಸಲಾಗಿದೆ. ಲಿಥಿಯಂ-ಅಯಾನ್ ಬ್ಯಾಟರಿ ಸದ್ಯಕ್ಕೆ ಹೆಚ್ಚು ಪ್ರಚಲಿತದಲ್ಲಿರುವ, ಆದರೆ ಅತ್ಯಂತ ದುಬಾರಿಯಾದ ಬ್ಯಾಟರಿ ತಂತ್ರಜ್ಞಾನವಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟ ರೊವೆಟ್ ಮೊಬಿಲಿಟಿ

ಕಂಪನಿಯು ಪೇಟೆಂಟ್ ಪಡೆದಿರುವ ಕ್ಲಿಕ್ ಬ್ಯಾಟರಿಯನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯು ಹೇಳುವಂತೆ ಈ ಬ್ಯಾಟರಿಯನ್ನು ಕೇವಲ 12 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ಇದನ್ನು ನಂಬುವುದು ಕಷ್ಟವಾದರೂ, ಈ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿ ಪರೀಕ್ಷಿಸುವವರೆಗೆ, ಕಂಪನಿ ಹೇಳಿದ್ದನ್ನು ನಂಬಬೇಕಾಗುತ್ತದೆ. ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಬಗೆಗಿನ ಮಾಹಿತಿಯನ್ನು ನೋಡೋಣ.

ರೊವೆಟ್ ಜೆಪಾಪ್

ಜೆಪಾಪ್ ರೊವೆಟ್ ಕಂಪನಿಯ ಎಂಟ್ರಿ ಲೆವೆಲ್‍‍ನ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜೆಪಾಪ್ ತನ್ನ 250ವ್ಯಾ ಎಲೆಕ್ಟ್ರಿಕ್ ಮೋಟರ್ ಮೂಲಕ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಸ್ಕೂಟರಿನಲ್ಲಿ 48 ವೋಲ್ಟ್, 24 ಎ‍‍ಹೆಚ್ ಬ್ಯಾಟರಿಯಿದ್ದು, ಒಂದು ಬಾರಿ ಚಾರ್ಜ್‌ ಮಾಡಿದರೆ 90 ಕಿ.ಮೀವರೆಗೆ ಚಲಿಸುತ್ತದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟ ರೊವೆಟ್ ಮೊಬಿಲಿಟಿ

ಈ ಸ್ಕೂಟರ್ ಡ್ಯುಯಲ್ ಸಸ್ಪೆಂಷನ್, ಸುಲಭ ಬಟನ್ ಪ್ರೆಸ್ ಫುಟ್‌ರೆಸ್ಟ್, ಯುಎಸ್‌ಬಿ ಚಾರ್ಜಿಂಗ್ ಹಾಗೂ ಮೊಬೈಲ್ ಹೋಲ್ಡರ್ ಮತ್ತು ಇಂಟಿಗ್ರೇಟೆಡ್ ಟೇಲ್ ಲ್ಯಾಂಪ್‍‍ಗಂತಹ ಹೆಚ್ಚುವರಿ ಫೀಚರ್‍‍ಗಳನ್ನು ಒಳಗೊಂಡಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರೊವೆಟ್ ರೇಮ್

ರೇಮ್ ಜೆಪಾಪ್‌ ಸ್ಕೂಟರ್‍‍ಗಿಂತ ಒಂದು ಹೆಜ್ಜೆ ಮುಂದಿದೆ. 2,000ವ್ಯಾ ದೊಡ್ಡ ಎಲೆಕ್ಟ್ರಿಕ್ ಮೋಟರ್ ಹಾಗೂ 60V, 30 ಎ‍‍ಹೆಚ್‍ ಬ್ಯಾಟರಿಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಟಾಪ್ ಸ್ಪೀಡ್ 55 ಕಿ.ಮೀಗಳಾಗಿದೆ. ಈ ಸ್ಕೂಟರ್ 45 ಕಿ.ಮೀ ವೇಗದಲ್ಲಿ 120 ಕಿ.ಮೀ ದೂರದವರೆಗೆ ಚಲಿಸುತ್ತದೆ. ಈ ಸ್ಕೂಟರ್ ರೆಟ್ರೊ ವಿನ್ಯಾಸ ಹಾಗೂ ಕಂಪನಿಯು ಹೇಳಿಕೊಂಡಂತೆ ವಿಶಾಲವಾದ ಬೂಟ್ ಅನ್ನು ಹೊಂದಿದೆ.

MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್‍ ಬಗ್ಗೆ ನಿಮಗೆಷ್ಟು ಗೊತ್ತು?

ರೊವೆಟ್ ಎಲೆಕ್ ಎಲೆಕ್ಟ್ರಿಕ್ ಸ್ಕೂಟರ್

ಮೇಲೆ ಹೇಳಿದ ಎರಡು ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಜೊತೆಗೆ ರೊವೆಟ್ ಎಲೆಕ್ ಹಾಗೂ ವೆಗಾಟ್ರಾನ್ ಎಂಬ ಮತ್ತೆರಡು ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದೆ. ಇವೆರಡೂ ಸ್ಕೂಟರ್‍‍ಗಳ ನಡುವೆ ಕೇವಲ ವಿನ್ಯಾಸವು ವಿಭಿನ್ನವಾಗಿದ್ದು, ಕ್ರಮಿಸುವ ದೂರ ಹಾಗೂ ಟಾಪ್ ಸ್ಪೀಡ್‍‍ಗಳು ಒಂದೇ ಆಗಿವೆ. ಎಲೆಕ್ ರೆಟ್ರೊ ವಿನ್ಯಾಸವನ್ನು ಹೊಂದಿದ್ದರೆ, ವೆಗಾಟ್ರಾನ್ ಮಾಡರ್ನ್ ಲುಕ್ ಹೊಂದಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟ ರೊವೆಟ್ ಮೊಬಿಲಿಟಿ

ರೋವೆಟ್ ವೆಗಾಟ್ರಾನ್ ಎಲೆಕ್ಟ್ರಿಕ್ ಸ್ಕೂಟರ್

ಎಲೆಕ್ ಹಾಗೂ ವೆಗಾಟ್ರಾನ್ ವಿನ್ಯಾಸಗಳು ವಿಭಿನ್ನವಾಗಿದ್ದರೂ, ಈ ಎರಡೂ ಇ-ಸ್ಕೂಟರ್‌ಗಳಲ್ಲಿರುವ ಸ್ಪೆಸಿಫಿಕೇಶನ್‍‍ಗಳು ಒಂದೇ ಆಗಿವೆ. ಇವುಗಳಲ್ಲಿ 65 ಕಿ.ಮೀ ಟಾಪ್ ಸ್ಪೀಡ್ ಹಾಗೂ ಒಂದೇ ಚಾರ್ಜ್‌ನಲ್ಲಿ 120 ಕಿ.ಮೀವರೆಗೂ ಚಲಿಸುವುದು ಸೇರಿವೆ.

ಈ ಎರಡೂ ಸ್ಕೂಟರ್‍‍ಗಳು 2000 ವ್ಯಾ ಎಲೆಕ್ಟ್ರಿಕ್ ಮೋಟರ್‌ ಹಾಗೂ 72 ವಿ 30 ಎ‍‍ಹೆಚ್ ಬ್ಯಾಟರಿಗಳಿಂದ ಪವರ್ ಪಡೆಯುತ್ತವೆ. ಎಲ್ಇಡಿ ಲೈಟ್, ಯುಎಸ್‍‍ಬಿ ಚಾರ್ಜಿಂಗ್, ಅಲಾಯ್ ವ್ಹೀಲ್ಸ್ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ನಂತಹ ಫೀಚರ್‍‍ಗಳು ಎರಡೂ ಸ್ಕೂಟರ್‍‍ಗಳಲ್ಲಿವೆ.

ರೋವೆಟ್ ಟ್ರೊನೊ

ರೋವೆಟ್ ತನ್ನ ಎಲೆಕ್ಟ್ರಿಕ್ ಬೈಕಿಗೆ ಟ್ರೊನೊ ಎಂಬ ಹೆಸರನ್ನಿಟ್ಟಿದೆ. ತನ್ನ 3000 ಡಬ್ಲ್ಯೂ ಮೋಟರ್ ಮೂಲಕ ಈ ಬೈಕ್ 100 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಇತರ ವಿಶೇಷಣಗಳು ಮೇಲೆ ತಿಳಿಸಲಾದ ಎಲ್ಲಾ ಮೂರು ಬ್ಯಾಟರಿ ಆಯ್ಕೆಗಳಲ್ಲಿ 72 ವಿ 40 ಎ‍‍ಹೆಚ್ ಬ್ಯಾಟರಿಯನ್ನು ಒಳಗೊಂಡಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟ ರೊವೆಟ್ ಮೊಬಿಲಿಟಿ

ಈ ಎಲೆಕ್ಟ್ರಿಕ್ ಬೈಕ್ 45 ಕಿ.ಮೀ ವೇಗದಲ್ಲಿ 100 ಕಿ.ಮೀವರೆಗೂ ಚಲಿಸುತ್ತದೆ. ಟ್ರೊನೊದಲ್ಲಿ ಡಿಆರ್‌ಎಲ್‌ ಹೊಂದಿರುವ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಟೆಲಿಸ್ಕೋಪಿಕ್ ಸಸ್ಪೆಂಷನ್, ಅಲಾಯ್ ವ್ಹೀಲ್ ಹಾಗೂ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳಿವೆ.

ತನ್ನ ಐದು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದ ನಂತರ, ಕಂಪನಿಯು ಮೊದಲಿಗೆ ಪುಣೆಯಲ್ಲಿ ತಮ್ಮ ಮಾರಾಟವನ್ನು ಆರಂಭಿಸಲಿದೆ. ನಂತರ ಅಹ್ಮದ್‌ನಗರ, ಸತಾರಾ, ಕೊಲ್ಹಾಪುರ, ಸಾಂಗ್ಲಿ ಹಾಗೂ ಔ‍‍ರಂಗಾಬಾದ್‌ನಂತಹ ನಗರಗಳಿಗೆ ವಿಸ್ತರಿಸಲಿದೆ.

Most Read Articles

Kannada
English summary
Rowwet trono electric motorcycle India launch specifications details - Read in Kannada
Story first published: Wednesday, November 6, 2019, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X