ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಕ್ಲಾಸಿಕ್ ಶೈಲಿಯ ಬೈಕ್‍ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ದ್ ನವೆಂಬರ್ 14, 2018 ರಂದು ತಮ್ಮ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ಗಳನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡಾಗಿನಿಂದಲೂ ಮಾರುಕಟ್ಟೆಯಲ್ಲಿ ಉತ್ತಮವಾದ ಮಾರಾಟವನ್ನು ಕಾಣುತ್ತಿದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಪ್ರೀಮಿಯಂ ಮೋಟಾರ್‍‍ಬೈಕ್‍ಗಳ ಸರಣಿಯಲ್ಲಿ ರಾಯಲ್ ಎನ್‍ಫೀಲ್ಡ್ 650 ಟಿನ್ ಬೈಕ್‍ಗಳು ಬಿಡುಗಡೆಗೊಂಡ ಐದು ತಿಂಗಳಿನಲ್ಲಿ ಸುಮಾರು 5,168ಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಮರುಕಟ್ಟೆಯಲ್ಲಿರುವ ಇನ್ನಿತರೆ ಪ್ರೀಮಿಯಂ ಬೈಕ್‍ಗಳಿಗೆ ತೀವ್ರವಾಗಿ ಪೈಪೋಟಿ ನೀಡುತ್ತಿದೆ. ಸಧ್ಯಕ್ಕೆ ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿ 650 ಟ್ವಿನ್ ಬೈಕ್‍ಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಗ್ರಾಹಕರು ಇದರ ವಿನ್ಯಾಸಕ್ಕೆ ಮತ್ತು ಸಾಮರ್ಥ್ಯಕ್ಕೆ ಮನಸ್ಸೋತಿದ್ದಾರೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.65 ಲಕ್ಷ ಮತ್ತು ಇಂಟರ್‍‍ಸೆಪ್ಟರ್ 650 ಬೈಕ್ ರೂ. 2.57 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಬುಕ್ಕಿಂಗ್ ಮಾಡಿಕೊಂಡ ಬೈಕ್ ನಿಮ್ಮ ಕೈ ತಲುಪ ಬೇಕಾದರೆ ಸುಮಾರು 4 ರಿಂದ 5 ತಿಂಗಳ ಸಮಯ ಬೇಕಾಗುತ್ತದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ನೋಟವನ್ನು ಪಡೆದುಕೊಂಡಿದೆ. ಕಾಂಟಿನೆಂಟಲ್ ಜಿಟಿ 650 ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಬೈಕ್‍ಗಳ ವಿನ್ಯಾಸ

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಬಣ್ಣಗಳು

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ವಿವಿಧ ಮತ್ತು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇಂಟರ್‍‍ಸೆಪ್ಟರ್ 650 - ಮಾರ್ಕ್ ತ್ರೀ, ಗ್ಲಿಟ್ಟರ್ & ಡಸ್ಟ್, ಆರೆಂಜ್ ಕ್ರಶ್, ರ್‍ಯಾವಿಶಿಂಗ್ ರೆಡ್, ಸಿಲ್ವರ್ ಸ್ಪೆಕ್ಟ್ರಾ ಮತ್ತು ಬೇಕರ್ ಎಕ್ಸ್ಪ್ರೆಸ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಇನ್ನು ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ - ಬ್ಲಾಕ್ ಮ್ಯಾಜಿಕ್, ವೆಂಚುರ ಬ್ಲೂ, ಮಿಸ್ಟರ್ ಕ್ಲೀನ್, ಡಾ.ಮೈಹೆಂ ಮತ್ತು ಐಸ್ ಕ್ವೀನ್ ಎಂಬ 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

MOST READ: ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಾಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಆರ್‍ಇ 650 ಟ್ವಿನ್ ಬೈಕ್‍ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಡಿಮ್ಯಾಂಡ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍ಗಳು ದೇಶಿಯ ಮಾರುಕ್ಲಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಇದೀಗ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡು ಹೆಚ್ಚು ಜನಪ್ರಿಯತೆಯನ್ನು ಪಡೆಯುವ ತವಕದಲ್ಲಿದೆ. ಇನ್ನು ಈ ಎರಡೂ ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಹಾರ್ಲೆ-ಡೇವಿಡ್‍ಸನ್ ಸ್ಟ್ರೀಟ್ 750 ಮತ್ತು ಟ್ರಯಂಫ್ ಬೋನೆವಿಲ್ಲೆ ಸ್ಟ್ರೀಟ್ ಟ್ವಿನ್ ಬೈಕ್‍ಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
English summary
Royal Enfield 650 Twin Bikes Sales Crosses 5000 Units In 5 Months. Read In Kannada
Story first published: Monday, April 22, 2019, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X