ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ದೇಶದ ಜನಪ್ರಿಯ ಬೈಕ್ ಉತ್ಪಾದನಾ ಸಂಸ್ಥೆಯಾದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬೈಕ್ ಉತ್ಪನ್ನಗಳ ಬೆಲೆ ಏರಿಕೆ ಮಾಡಿದ್ದು, ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ.

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ಕ್ರೂಸರ್ ಬೈಕ್‌ಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ 10ಕ್ಕೂ ಹೆಚ್ಚು ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಆದ್ರೆ ಬಹುತೇಕ ಬೈಕ್ ಮಾದರಿಗಳಲ್ಲಿ ಎಬಿಎಸ್ ಇಲ್ಲದಿರುವುದು ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಬೈಕ್ ಮಾದರಿಗಳಲ್ಲೂ ಬೆಲೆಗಳಿಗೆ ಅನುಗುಣವಾಗಿ ಸಿಂಗಲ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯ ಒದಗಿಸಿ ಬೆಲೆ ಏರಿಕೆ ಮಾಡಿದೆ.

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಹೊಸ ಬೈಕ್‌ಗಳನ್ನು ಪರಿಚಯಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರೆಟ್ರೋ ಲುಕ್ ಮೋಟಾರ್‌ಸೈಕಲ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಗ್ರಾಹಕರು ತಮ್ಮ ಅಭಿರುಚಿ ತಕ್ಕಂತೆ ವಿವಿಧ ಮಾದರಿಯ ಬೈಕ್ ಆವೃತ್ತಿಗಳನ್ನು ಖರೀದಿ ಮಾಡಬಹುದಾಗಿದೆ.

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ಕಳೆದ ಕೆಲದಿನಗಳ ಹಿಂದಷ್ಟೇ ಕ್ಲಾಸಿಕ್ 350 ಸಿಗ್ನಲ್ಸ್ , ಟ್ರಯಲ್ಸ್ 350, ಟ್ರಯಲ್ಸ್ 500, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಎನ್ನುವ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಮಾಡಿದ್ದು, ಹಳೆಯ ಆವೃತ್ತಿಗಳನ್ನು ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ನವೀಕರಣ ಮಾಡಿದೆ.

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ಎಬಿಎಸ್ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಬೈಕ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿರುವ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳ ಬೆಲೆಯನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಕ್‌ಗಳ ಬೆಲೆಯು ಏರಿಕೆಯಾಗಿದೆ.

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಹೊಸ ದರ ಪಟ್ಟಿ..!

ಬೈಕ್ ಮಾದರಿಗಳು ಹೊಸ ದರ ಪಟ್ಟಿ(ಏ.1ರಿಂದ ಅನ್ವಯ)
350 ರಾಯಲ್ ಎನ್‌ಫೀಲ್ಡ್ ಬುಲೆಲ್ 350 ರೂ. 1.21 ಲಕ್ಷ

ರಾಯಲ್ ಎನ್‌ಫೀಲ್ಡ್ 350 ಇಎಸ್

ರೂ. 1.35 ಲಕ್ಷ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರೂ. 1.53 ಲಕ್ಷ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಎಸ್

ರೂ. 1.63 ಲಕ್ಷ

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350

ರೂ. 1.56 ಲಕ್ಷ

ರಾಯಲ್ ಎನ್‌ಫೀಲ್ಡ್ ಬುಲೆಟ್ ಟ್ರಯಲ್ಸ್ 350

ರೂ. 1.62 ಲಕ್ಷ

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಎಕ್ಸ್ 350

ರೂ. 1.63 ಲಕ್ಷ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್

ರೂ. 1.82 ಲಕ್ಷ

ರಾಯಲ್ ಎನ್‌ಫೀಲ್ಡ್ ಬುಲೆಟ್ 500

ರೂ. 1.88 ಲಕ್ಷ

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500

ರೂ. 2.01 ಲಕ್ಷ

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಎಕ್ಸ್ 500

ರೂ. 2.06 ಲಕ್ಷ

ರಾಯಲ್ ಎನ್‌ಫೀಲ್ಡ್ ಬುಲೆಟ್ ಟ್ರಯಲ್ಸ್ 500

ರೂ. 2.07 ಲಕ್ಷ

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿದ್ದು, ಇದಕ್ಕಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೈಕ್ ಉತ್ಪಾದನೆಗಾಗಿ ಬರೋಬ್ಬರಿ ರೂ.700 ಕೋಟಿ ಹೂಡಿಕೆ ಮಾಡುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

MOST READ: ರಾಂಗ್ ಸೈಡ್‌ನಲ್ಲಿ ಬಂದ ಕಾರು ಚಾಲಕನಿಗೆ ಬೆವರಿಳಿಸಿದ ಬೈಕ್ ರೈಡರ್..!

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಹೊಸ ಬೈಕ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಹೊರತರುವ ಇರಾದೆಯಲ್ಲಿದೆ.

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ಇದಕ್ಕಾಗಿಯೇ ಚೆನ್ನೈ ಬಳಿಯ ವಲ್ಲಂ ವಡಗಾಲ್‌ನಲ್ಲಿರುವ ತನ್ನ ಬೈಕ್ ಉತ್ಪಾದನಾ ಘಟಕವನ್ನು ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಬೈಕ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬೈಕ್ ಖರೀದಿಯ ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಇದು ಮಹತ್ವದ ಯೋಜನೆಯಾಗಿದೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ಎಬಿಎಸ್‌ನೊಂದಿಗೆ ನವೀಕರಣ- ಹೊಸ ದರ ಪಟ್ಟಿ ಪ್ರಕಟಿಸಿದ ರಾಯಲ್ ಎನ್‌ಫೀಲ್ಡ್

ಹಾಗೆಯೇ ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ನಿಯಮಾವಳಿಗಳಿಗೆ ಅನುಸಾರವಾಗಿ ಹೊಸ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವುದು ಒಂದು ಸವಾಲಾಗಿದ್ದು, ಹೊಸ ಬಂಡವಾಳ ಹೂಡಿಕೆ ಮಾಡಿರುವುದು ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಯೋಜನೆಗಳಿಗೆ ಸಾಕಷ್ಟು ಸಹಕಾರಿಯಾಗಿಯಾಗಿದೆ ಎನ್ನಬಹುದು.

Most Read Articles

Kannada
English summary
Updated Price List of Royal Enfield Bikes with ABS: Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X