ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕುಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. ಈ ಕಂಪನಿಯ ಬೈಕುಗಳು ಪ್ರಪಂಚದಲ್ಲಿರುವ ಹಳೆಯ ಬೈಕುಗಳ ಪೈಕಿ ಒಂದಾಗಿವೆ. ಮೊತ್ತ ಮೊದಲ ಬೈಕಿನಿಂದ ಈಗ ಮಾರುಕಟ್ಟೆಯಲ್ಲಿರುವ ಬೈಕುಗಳವರೆಗೂ ಈ ಕಂಪನಿಯ ಬೈಕುಗಳು ಭಾರೀ ಜನಪ್ರಿಯತೆಯನ್ನು ಪಡೆದಿವೆ.

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ಬ್ರಿಟನ್ ಮೂಲದ ಕಂಪನಿಯಾಗಿದ್ದರೂ, ರಾಯಲ್ ಎನ್‍‍ಫೀಲ್ಡ್ ಭಾರತದಲ್ಲಿ 1955ರಲ್ಲಿ ತನ್ನ ಘಟಕವನ್ನು ತೆರೆದಿದೆ. ಅಂದಿನಿಂದ ಇಂದಿನವರೆಗೂ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಹಲವಾರು ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಕಂಪನಿಯ ಹಲವು ಬೈಕುಗಳು ಜನಪ್ರಿಯತೆಯನ್ನು ಪಡೆದರೆ, ಇನ್ನು ಕೆಲವು ಬೈಕುಗಳು ಇತಿಹಾಸದ ಪುಟ ಸೇರಿವೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯ ಯಾವ ಬೈಕುಗಳು ಭಾರತದಲ್ಲಿ ಬಿಡುಗಡೆಯಾಗಿ ಮರೆಯಾದವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಫ್ಯೂರಿ

ರಾಯಲ್ ಎನ್‍‍ಫೀಲ್ಡ್ ಫ್ಯೂರಿ 175 ಬೈಕ್ ಅನ್ನು 1959ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಜಂಡ್ಯಾಪ್ ಕೆ‍ಎಸ್175 ಬೈಕಿನ ರಿಬ್ಯಾಡ್ಜ್ ಬೈಕ್ ಆಗಿತ್ತು. ಜರ್ಮನ್ ಕಂಪನಿಯ ಜಂಡ್ಯಾಪ್ ಬೈಕ್ ಅನ್ನು 1984ರಲ್ಲಿ ಸ್ಥಗಿತಗೊಳಿಸಲಾಯಿತು. ಜರ್ಮನಿಯ ನಂಟನ್ನು ಹೊಂದಿದ್ದ ಫ್ಯೂರಿ 175 ಬೈಕ್ ಭಾರತದ ಬೈಕ್ ಪ್ರಿಯರ ನೆಚ್ಚಿನ ಬೈಕ್ ಆಗಿತ್ತು. ಈ ಬೈಕ್ 5 ಸ್ಪೀಡಿನ ಟ್ರಾನ್ಸ್ ಮಿಷನ್ ಹೊಂದಿತ್ತು. ಮುಂಭಾಗದಲ್ಲಿ ಬ್ರೆಂಬೊ ಡಿಸ್ಕ್ ಬ್ರೇಕ್ ಅಳವಡಿಸಲಾಗಿತ್ತು. ಈ ಬೈಕಿನಲ್ಲಿದ್ದ ಎಂಜಿನ್ ಸ್ಲೀವ್‍ಲೆಸ್ ಕ್ರೋಮಿನ ಸಿಲಿಂಡರ್ ಬ್ಯಾರೆಲ್ ಹೊಂದಿತ್ತು.

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಎಕ್ಸ್ ಪ್ಲೊರರ್ 50

ಬೇರೆ ರಾಯಲ್ ಎನ್‌ಫೀಲ್ಡ್ ಬೈಕುಗಳಿಗೆ ಹೋಲಿಸಿದರೆ, ಎಕ್ಸ್‌ಪ್ಲೋರರ್ 50 ಸಾಕಷ್ಟು ವಿಶಿಷ್ಟವಾಗಿತ್ತು. ಎಕ್ಸ್‌ಪ್ಲೋರರ್ 50 ಬೈಕ್ ಅನ್ನು ಸಹ ಜಂಡ್ಯಾಪ್ ಬೈಕಿನ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಈ ಬೈಕ್ ಅನ್ನು 1980ರವರೆಗೆ ಮಾರಾಟ ಮಾಡಲಾಯಿತು. ಜರ್ಮನಿಯಲ್ಲಿ ಈ ಬೈಕ್ ಅನ್ನು ಮೊಕಿಕ್ ಲೈಸೆನ್ಸ್ ಹೊಂದಿದ್ದ 16 ವರ್ಷದ ಮಕ್ಕಳಿಗೆ ಮಾರಾಟ ಮಾಡಲಾಯಿತು. ಈ ಬೈಕಿನಲ್ಲಿ 50 ಸಿಸಿ ಎಂಜಿನ್‌ ಅಳವಡಿಸಲಾಗಿತ್ತು. ಈ ಎಂಜಿನ್‍‍ನಲ್ಲಿ 3 ಸ್ಪೀಡಿನ ಟ್ರಾನ್ಸ್‌ಮಿಷನ್‌ ಅಳವಡಿಸಲಾಗಿತ್ತು.

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಲೈಟ್‍‍ನಿಂಗ್

ಈಗ ರಾಯಲ್ ಎನ್‍‍ಫೀಲ್ಡ್ ಕಂಪನಿಯ ಥಂಡರ್‍‍‍ಬರ್ಡ್ ಜನಪ್ರಿಯ ಬೈಕ್ ಆಗಿದೆ. ಇದೇ ರೀತಿಯ ಬೈಕ್ ಅನ್ನು ರಾಯಲ್ ಎನ್‍‍ಫೀಲ್ಡ್ ಕಂಪನಿಯು ಹಲವಾರು ವರ್ಷಗಳ ಹಿಂದೆಯೇ ಲೈಟ್‍‍‍ನಿಂಗ್ ಹೆಸರಿನಲ್ಲಿ ಬಿಡುಗಡೆಗೊಳಿಸಿತ್ತು. ಈ ಬೈಕ್ ಅನ್ನು ಥಂಡರ್‍‍ಬರ್ಡ್ ಬೈಕಿನ ಮೂಲ ಬೈಕ್ ಎಂದು ಪರಿಗಣಿಸಲಾಗುತ್ತದೆ. ಲೈಟ್‍‍ನಿಂಗ್ ಬೈಕ್ ಹೆಚ್ಚು ಜನಪ್ರಿಯವಾಗದ ಕಾರಣಕ್ಕೆ 2003ರಲ್ಲಿ ಸ್ಥಗಿತಗೊಳಿಸಲಾಯಿತು. ಈ ಬೈಕಿನಲ್ಲಿ ಅಳವಡಿಸಲಾಗಿದ್ದ 535 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ 26 ಬಿ‍‍ಹೆಚ್‍‍ಪಿ ಪವರ್ ಹಾಗೂ 38 ಎನ್‍ಎಂ ಟಾರ್ಕ್ ಉತ್ಪಾದಿಸುತ್ತಿತ್ತು. 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದ್ದ ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 125 ಕಿ.ಮೀಗಳಾಗಿತ್ತು.

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಸಿಲ್ವರ್ ಪ್ಲಸ್

ಸ್ಟೆಪ್ ಥ್ರೂ ಮಾದರಿಯ ಬೈಕ್ ಅನ್ನು 1980ರ ದಶಕದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಸ್ಟೆಪ್ ಥ್ರೂ ಕಾನ್ಸೆಪ್ಟ್ ಜನಪ್ರಿಯವಾಗುತ್ತಿದ್ದ ಸಮಯದಲ್ಲಿ ಈ ಸಿಲ್ವರ್ ಪ್ಲಸ್ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಸಿಲ್ವರ್ ಪ್ಲಸ್ ಭಾರತದಲ್ಲಿ ಬಿಡುಗಡೆಯಾದ ಮೊದಲ ಸ್ಟೆಪ್ ಥ್ರೂ ಬೈಕ್ ಆಗಿದೆ. ಈ ಬೈಕ್ ಕೈನಲ್ಲಿ ಆಪರೇಟ್ ಮಾಡಬಹುದಾದ ಕೇಬಲ್ ಲಿಂಕ್ ಗೇರ್ ಶಿಫ್ಟ್ ಹೊಂದಿತ್ತು. ಈ ಬೈಕ್ 65 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ ಎಂಜಿನ್ ಹೊಂದಿತ್ತು. ಮೊದಲು 2 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದ್ದ ಈ ಬೈಕ್ ಅನ್ನು 3 ಸ್ಪೀಡ್ ಟ್ರಾನ್ಸ್ ಮಿಷನ್‍‍ಗೆ ಅಪ್‍‍ಡೇಟ್‍‍ಗೊಳಿಸಲಾಯಿತು. ಸ್ಟೆಪ್ ಥ್ರೂ ಬೈಕ್ ಅನ್ನು ಜಂಡ್ಯಾಪ್‍‍ನ ಸಹಾಯದಿಂದ ಉತ್ಪಾದಿಸಲಾಯಿತು.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಫಂಟ್ಯಾಬುಲಸ್

ಸ್ಕೂಟರ್ ಸೆಗ್‍‍ಮೆಂಟಿನಲ್ಲಿ ಜನಪ್ರಿಯವಾಗುವ ಕಾರಣಕ್ಕೆ ರಾಯಲ್ ಎನ್‍‍ಫೀಲ್ಡ್ ಕಂಪನಿಯು ಫಂಟ್ಯಾಬುಲಸ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಈ ಸ್ಕೂಟರ್ ಜನಪ್ರಿಯವಾಗಲೇ ಇಲ್ಲ. ಈ ಸ್ಕೂಟರಿನಲ್ಲಿ ಅಳವಡಿಸಲಾಗಿದ್ದ 2 ಸ್ಟ್ರೋಕ್ ಎಂಜಿನ್ 7.5 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತಿತ್ತು. ಈ ಸ್ಕೂಟರ್ ಆ ಸಮಯದಲ್ಲಿ ಅಪರೂಪವಾಗಿದ್ದ ಸೆಲ್ಫ್ ಸ್ಟಾರ್ಟರ್ ಅನ್ನು ಹೊಂದಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಟಾರಸ್

ಟಾರಸ್, ರಾಯಲ್ ಎನ್‍‍ಫೀಲ್ಡ್ ಕಂಪನಿಯ ಡೀಸೆಲ್ ಎಂಜಿನ್ ಹೊಂದಿದ್ದ ಬೈಕ್ ಆಗಿತ್ತು. ಈ ಬೈಕಿನಲ್ಲಿ 325 ಸಿಸಿಯ ಲೊಂಬರ್ದಿನಿ ಇನ್‍‍ಡೈರೆಕ್ಟ್ ಇಂಜಕ್ಷನ್‍‍ನ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿತ್ತು. ಈ ಎಂಜಿನ್ 6.5 ಬಿ‍‍ಹೆಚ್‍‍ಪಿ ಪವರ್ ಹಾಗೂ 15 ಎನ್‍ಎಂ ಟಾರ್ಕ್ ಉತ್ಪಾದಿಸುತ್ತಿತ್ತು. 196 ಕೆ.ಜಿ ತೂಕವನ್ನು ಹೊಂದಿದ್ದ ಈ ಬೈಕಿನ ಟಾಪ್ ಸ್ಪೀಡ್ 65 ಕಿ.ಮೀಗಳಾಗಿತ್ತು. ಈ ಬೈಕಿನಲ್ಲಿ ಗ್ರೀವ್ಸ್ ಲೊಂಬರ್ದಿನಿಯ ಎಂಜಿನ್ ಅಳವಡಿಸಲಾಗಿತ್ತು. ಈ ಬೈಕ್ ಡೀಸೆಲ್ ಬುಲೆಟ್ ಎಂದು ಜನಪ್ರಿಯವಾಗಿತ್ತು.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಭಾರತದಿಂದ ಮರೆಯಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳಿವು..!

ರಾಯಲ್ ಎನ್‍‍ಫೀಲ್ಡ್ ಮೋಫಾ

ರಾಯಲ್ ಎನ್‍‍ಫೀಲ್ಡ್ ಭಾರತದಲ್ಲಿ ಬಿಡುಗಡೆಗೊಳಿಸಿದ್ದ ಮತ್ತೊಂದು ದ್ವಿಚಕ್ರವಾಹನವೆಂದರೆ ಮೋಫಾ. ಈ ವಾಹನವು ಸಸ್ಪೆಂಷನ್ ಹೊಂದಿಲ್ಲದ 25 ಸಿಸಿಯ ಮೋಪೆಡ್ ಆಗಿತ್ತು. ಮೋಫಾವನ್ನು ಬಿಡುಗಡೆಗೊಳಿಸಿ ರಾಯಲ್ ಎನ್‍‍ಫೀಲ್ಡ್ ಮೋಪೆಡ್ ಸೆಗ್‍‍ಮೆಂಟಿಗೆ ಕಾಲಿಟ್ಟಿತ್ತು. ಈ ಮೋಪೆಡ್ ಅನ್ನು ಮೊರ್ಬಿಡೆಲ್ಲಿ ಕಂಪನಿಯು ಇಟಲಿಯಲ್ಲಿ ವಿನ್ಯಾಸಗೊಳಿಸಿತ್ತು. ರಾಯಲ್ ಎನ್‍‍ಫೀಲ್ಡ್ ಇದುವರೆಗೂ ತಯಾರಿಸಿರುವ ಸಣ್ಣ ಸಾಮರ್ಥ್ಯದ ದ್ವಿಚಕ್ರ ವಾಹನವಿದು. ಮೋಫಾ ಸಿಂಗಲ್ ಟ್ಯೂಬ್ ಡಿಸೈನ್ ಹೊಂದಿತ್ತು. ಇದರಿಂದಾಗಿ ಈ ಮೋಪೆಡ್ ಸೈಕಲ್‍‍ನಂತೆ ಕಾಣುತ್ತಿತ್ತು.

Source: Cartoq

Most Read Articles

Kannada
English summary
Royal enfield bikes disappeared from indian market - Read in kannada
Story first published: Monday, September 16, 2019, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X