ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ರಾಯಲ್ ಎನ್‍‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಬುಲೆಟ್ 350 ಎಬಿಎಸ್‍ ಮಾದರಿ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಬುಲೆಟ್ 350 ಎಬಿಎಸ್ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಇಎಸ್(ಎಲೆಕ್ಟ್ರಿಕ್ ಸ್ಟಾರ್ಟ್) ಎಂಬ ಎರಡು ರೂಪಾಂತರಗಳನ್ನು ಒಳಗೊಂಡಿದೆ. ಈ ಎರಡು ರೂಪಾಂತರಗಳ ಬೆಲೆಯನ್ನು ರೂ.4,000ದವರೆಗೆ ಹೆಚ್ಚಿಸಿದೆ.

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ರಾಯಲ್ ಎನ್‍‍ಫೀಲ್ಡ್ ಕಂಪನಿಯು ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ತನ್ನ ಬುಲೆಟ್ 350 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಬುಲೆಟ್ 350 ಮಾದರಿಯ ಸ್ಟಾಂಡರ್ಡ್ ರೂಪಾಂತರದ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.12 ಲಕ್ಷಗಳಾದರೆ ಇಎಸ್ ಬೈಕ್ ರೂ.1.26 ಲಕ್ಷ ಬೆಲೆಯನ್ನು ಹೊಂದಿದೆ.

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ರಾಯಲ್ ಎನ್‍‍ಫೀಲ್ಡ್ ಬೆಲೆಯನ್ನು ಹೆಚ್ಚಿಸಿದ ಬಳಿಕ ಬುಲೆಟ್ 350 ಎಬಿಎಸ್ ಸ್ಟ್ಯಾಂಡರ್ಡ್ ಹೊಸ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.14 ಲಕ್ಷಗಳಾದರೆ ಬುಲೆಟ್ 350 ಎಬಿಎಸ್ ಇಎಸ್ ರೂಪಾಂತರವು ರೂ.1.30 ಲಕ್ಷ ಬೆಲೆಯನ್ನು ಹೊಂದಿರಲಿದೆ.

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ಬೆಲೆಗಳ ಹೆಚ್ಚಳವನ್ನು ಹೊರತುಪಡಿಸಿ, ಬುಲೆಟ್ 350 ಎರಡೂ ರೂಪಾಂತರಗಳಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಬುಲೆಟ್ 350 ಬೈಕ್ ಅದೇ 349 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 5,250 ಆರ್‍‍ಪಿಎಂನಲ್ಲಿ 19.8 ಬಿ‍ಹೆಚ್‍‍ಪಿ ಪವರ್ ಮತ್ತು 4,000 ಆರ್‍‍ಪಿಎಂನಲ್ಲಿ 28 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ರಾಯಲ್ ಎನ್‍‍ಫೀಲ್ಡ್ ಶೀಘ್ರದಲ್ಲೇ ತನ್ನ ಸರಣಿಯ ಎಲ್ಲಾ ಬೈಕುಗಳನ್ನು ಬಿಎಸ್-6 ಎಂಜಿನ್‍‍ಗಳಾಗಿ ನವೀಕರಿಸಲಿದೆ ಎಂದು ನಿರೀಕ್ಷಿಸಬಹುದು. 2020ರ ಏಪ್ರಿಲ್ 1ರವರೆಗೆ ಬಿಎಸ್- ಮಾಲಿನ್ಯ ಗಡುವನ್ನು ಹೊಂದಿದ್ದು, ಇದಕ್ಕೂ ಮೊದಲು ರಾಯಲ್ ಎನ್‍ಫೀಲ್ಡ್ ತನ್ನ ಸರಣಿಯ ಬೈಕು‍‍ಗಳನ್ನು ಬಿಎಸ್-6 ಎಂಜಿನ್‍‍ನಲ್ಲಿ ನವೀಕರಿಸಬಹುದು.

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ಬಿಎಸ್-6 ಎಂಜಿನ್ ಆಗಿ ನವೀಕರಿಸಿದ ಬಳಿಕ ಬುಲೆಟ್ 350 ಸೇರಿದಂತೆ ದೇಶಿಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‍‍ಫೀಲ್ಡ್ ಎಲ್ಲಾ ಸರಣಿಗಳ ಬೆಲೆಯನ್ನು ಮತ್ತಷ್ಟು ಏರಿಸುವ ಸಾಧ್ಯತೆಗಳಿವೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ರಾಯಲ್ ಎನ್‍‍ಫೀಲ್ಡ್ ಯಾಂತ್ರಿಕ ನವೀಕರಣವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಬ್ರ್ಯಾಂಡ್‍‍ನ ಸರಣಿಯಲ್ಲಿ ಅತ್ಯಂತ ಉತ್ತಮ ಕ್ಷಮತೆ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಸಣ್ಣ ಮಟ್ಟದ ಬೆಲೆ ಏರಿಕೆಯ ಹೊರತಾಗಿ ಬುಲೆಟ್ 350 ಮಾದರಿಯು ರಾಯಲ್ ಎನ್‍‍ಫೀಲ್ಡ್ ಬೈಕು ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಬುಲೆಟ್ 350 ಬೈಕು ಆಕರ್ಷಕ ಲುಕ್‍ನೊಂದಿಗೆ ಹಲವು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ಸ್ಟ್ಯಾಂಡರ್ಡ್ ಬುಲೆಟ್ 350 ಬೈಕ್ ಓನಿಕ್ಸ್ ಬ್ಲಾಕ್, ಬ್ಲ್ಯಾಕ್, ಬುಲೆಟ್ ಸಿಲ್ವರ್ ಮತ್ತು ಸಫೈರ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನೂ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350 ಇಎಸ್ ಐದು ವಿಭಿನ್ನ ಬಣ್ಣಗಳನ್ನು ಹೊಂದಿದ್ದು, ಇದರಲ್ಲಿ ಮರೂನ್, ಸಿಲ್ವರ್, ಜೆಟ್ ಬ್ಲ್ಯಾಕ್, ರೀಗಲ್ ರೆಡ್ ಮತ್ತು ರಾಯಲ್ ಬ್ಲೂ ಬಣ್ಣಗಳು ಸೇರಿವೆ.

MOST READ: 35 ಸಾವಿರಕ್ಕೆ ಸಿಗಲಿದೆ ಮ್ಯಾಂಟಿಸ್ ಎಲೆಕ್ಟ್ರಿಕ್ ಬೈಕ್

ಮತ್ತಷ್ಟು ದುಬಾರಿಯಾದ ರಾಯಲ್ ಎನ್‍‍ಫೀಲ್ಡ್ ಬುಲೆಟ್ 350

ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‍‍ನ ಉತ್ತಮ ಬೈಕು‍ಗಳಲ್ಲಿ ಒಂದಾಗಿದೆ. ಹಲವು ಬಣ್ಣಗಳನ್ನು ಹೊಂದಿರುವ ಬುಲೆಟ್ 350 ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಬೈಕು ಕೇವಲ ಯುವಜನತೆಯನ್ನು ಮಾತ್ರವಲ್ಲದೇ ಹಿರಿಯರ ಗಮನವನ್ನೂ ಸೆಳೆಯುವಲ್ಲಿ ಯಶ್ವಸಿಯಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕು, ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಬೈಕುಗಳು ಮತ್ತು ಬಜಾಜ್ ಡೊಮಿನಾರ್ 400 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Royal Enfield Bullet 350 Prices Hiked By Up To Rs 4000: Prices Now Starting At Rs 1.14 Lakh - Read in Kannada
Story first published: Thursday, November 14, 2019, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X