ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಜನಪ್ರಿಯ ಕ್ಲಾಸಿಕ್ 350 ಸಿಂಗಲ್ ಸೀಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕಿನ ಪ್ರಾರಂಭಿಕ ಬೆಲೆಯು ರೂ.1.45 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಕೇವಲ ಸಿಂಗಲ್ ಸೀಟ್ ಆಯ್ಕೆಗಳನ್ನು ಹೊಂದಿದೆ. ಹೊಸ ಕ್ಲಾಸಿಕ್ 350 ಬೈಕಿನಲ್ಲಿ ಗ್ರಾಹಕರಿಗೆ ಇತರ ಆಯ್ಕೆಯನ್ನು ಆರಿಸಿಕೊಳ್ಳವ ಆಯ್ಕೆಯನ್ನು ನೀಡಲಾಗುತ್ತದೆ. ಮರ್ಕ್ಯುರಿ ಸಿಲ್ವರ್ ಮತ್ತು ಪ್ಯೂರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ದೆಹಲಿ ಎನ್‍‍ಸಿ‍ಆರ್, ಬೆಂಗಳೂರು, ಚೆನ್ನೈ, ಹೈದರಬಾದ್, ಮುಂಬೈ ಮತ್ತು ಪುಣೆಯ 6 ನಗರಗಳಲ್ಲಿ ಮತ್ತು 141 ಡೀಲರ್‍‍ಗಳು ಹೊಸ ಕ್ಲಾಸಿಕ್ 350ನಲ್ಲಿ ಸಿಂಗಲ್ ಸೀಟ್ ಬೈಕ್ ಅನ್ನು ಮಾರಾಟ ಮಾಡಲಾಗುತ್ತದೆ. ಬೈಕ್ ಕಾಯ್ದಿರಿಸುವ ಸಮಯದಲ್ಲಿ ಬೈಕನ್ನು ಮಾರ್ಪಾಡು ಮಾಡುವ ಆಯ್ಕೆಯನ್ನು ನೀಡಿದ್ದಾರೆ. ನಂತರದ ಮಾರ್ಪಾಡು ಕಾನೂನು ಬಾಹಿರವಾಗಿರುತ್ತದೆ.

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಕಂಪನಿಯ ಘಟಕದಲ್ಲೇ ಸರ್ಕಾರ ಮತ್ತು ಆರ್‍‍ಟಿಒ ಮಾನದಂಡಗಳ ಪ್ರಕಾರವೇ ಈ ಬೈಕನ್ನು ಮಾರ್ಪಾಡು ಮಾಡಲಾಗುತ್ತದೆ. ಮಾರ್ಪಾಡು ಮಾಡುವುದರಿಂದ ದಂಡ ವಿಧಿಸುತ್ತಾರೆ ಎಂಬ ಭಯ ಪಡುವ ಅಗತ್ಯವಿರುವುದಿಲ್ಲ.

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಮಾರ್ಪಾಡು ಮಾಡಿದ ಬೈಕಿಗೆ ವಾರಂಟಿಯನ್ನು ಕಡಿತಗೊಳಿಸುವುದಿಲ್ಲ. ಕಂಪನಿಯ ಬುಕ್ಕಿಂಗ್ ಸಮಯದಿಂದ 2 ವರ್ಷಗಳ ವಾರಂಟಿಯನ್ನು ನೀಡುತ್ತದೆ.

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಅಲಾಯ್ ವ್ಹೀಲ್, ವಿಭಿನ್ನವಾದ ವಿನ್ಯಾಸದ ಸೀಟ್ ಲೇದರ್ ಆಯ್ಕೆಯನ್ನು ಹೊಂದಿದೆ. ಇಂಧನ ಟ್ಯಾಂಕ್ ಡೆಕಲ್ಸ್ ಅಥವಾ ಸ್ಟಿಕ್ಕರ್‍‍ಗಳು, ಕಮಾಂಡಿಂಗ್ ಏರ್‍‍ಫ್ಲೈ ಎಂಜಿನ್ ಗಾರ್ಡ್‍‍ನೊಂದಿಗೆ ಮಿಲಿಟರಿ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಪ್ಯಾನಿಯರ್‍‍ಗಳನ್ನು ಹೊಂದಿದೆ. ಈ ಬೈಕಿಗೆ ಬುಕಿಂಗ್ ಹಂತದಲ್ಲಿ 2 ವರ್ಷದ ವಾರಂಟಿಯನ್ನು ನೀಡಲಾಗುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕು 346 ಸಿಸಿ ಸಿಂಗಲ್ ಸಿಲಿಂಡರ್ ಏರ್‍‍ಕೂಲ್ಡ್ ಎಂಜಿನ್ 5,250 ಆರ್‌ಪಿಎಂನಲ್ಲಿ 19.80 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 28 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕ್ ಸುರಕ್ಷತಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಈ ಬೈಕಿನಲ್ಲಿ ಡ್ಯುಯಲ್ ಎಬಿಎಸ್‍‍ನೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಅನ್ನು ಅಳವಡಿಸಲಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಬಿಡುಗಡೆಯಾಯ್ತು ಒಂದೇ ಸೀಟಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಸಿಂಗಲ್ ಸೀಟ್ ಆಯ್ಕೆಯ ಜಾವಾ ಪೆರಾಕ್ ಅನ್ನು ನವೆಂಬರ್ 15ರಂದು ಬಿಡುಗಡೆಗೊಳಿಸಲಾಗಿದೆ. ಈ ಬೈಕಿಗೆ ಪೈಪೋಟಿಯಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಯುವಜನತೆಯನ್ನು ಹೆಚ್ಚು ಗುರಿಯಾಗಿಸಿಕೊಂಡು ಈ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

Most Read Articles

Kannada
English summary
Royal Enfield Classic 350 single seat launched - Read in Kannada
Story first published: Saturday, November 16, 2019, 15:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X