ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಜನಪ್ರಿಯ ಕ್ಲಾಸಿಕ್ 350 ಆವೃತ್ತಿಯಲ್ಲಿ ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಎನ್ನುವ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.45 ಲಕ್ಷ ನಿಗದಿಪಡಿಸಲಾಗಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸ್ಟ್ಯಾಂಡರ್ಡ್ ಕ್ಲಾಸಿಕ್ 350 ಬೈಕಿಗಿಂತಲೂ ಅಗ್ಗದ ಬೆಲೆ ಹೊಂದಿರುವ ಕ್ಲಾಸಿಕ್ 350 ಎಸ್ ಮಾದರಿಯು ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಳೆದುಕೊಂಡಿದ್ದು, ಗ್ರಾಹಕರ ಆಕರ್ಷಣೆಗಾಗಿ ಆಕರ್ಷಕ ಬೆಲೆಗಳಲ್ಲಿ ಹೊಸ ಬೈಕ್ ಬಿಡುಗಡೆ ಮಾಡಲಾಗಿದೆ. ಬೆಲೆ ಹೆಚ್ಚಳದಿಂದಾಗಿ ಮಾರಾಟ ಪ್ರಮಾಣವು ಸತತ ಕುಸಿತ ಕಾಣುತ್ತಿದ್ದು, ಕ್ಲಾಸಿಕ್ 350 ಇಷ್ಟಪಡುವ ಗ್ರಾಹಕರಿಗಾಗಿ ಕೆಲವು ಬದಲಾವಣೆಗಳೊಂದಿಗೆ ಈ ಹೊಸ ಬೈಕ್ ಅನ್ನು ಅಭಿವೃದ್ದಿಪಡಿಸಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸ್ಟ್ಯಾಂಡರ್ಡ್ ಕ್ಲಾಸಿಕ್ 350 ಮತ್ತು ಕ್ಲಾಸಿಕ್ 350 ಎಸ್ ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದರೂ ಬೆಲೆ ಕಡಿತ ಮಾಡಲು ಹೊರಭಾಗದ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತ ಕ್ಲಾಸಿಕ್ 350 ಎಸ್ ಬೈಕ್ ರೂ.9 ಸಾವಿರ ಅಗ್ಗವಾಗಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸದ್ಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಕ್ಲಾಸಿಕ್ 350 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.54 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಿರುವ ಕ್ಲಾಸಿಕ್ 350 ಎಸ್ ಮಾದರಿಯು ಎಕ್ಸ್‌ಶೋರೂಂ ಬೆಲೆಗೆ ಅನುಗುಣವಾಗಿ ರೂ.1.45 ಲಕ್ಷ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಬೆಲೆ ಕಡಿತದಿಂದಾಗಿ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಟ್ಟಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಬದಲಾಗಿ ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಸ್ಟ್ಯಾಂಡರ್ಡ್ ಮಾದರಿಯಲ್ಲಿ ಫ್ಯೂಲ್ ಟ್ಯಾಂಡ್ ಗ್ರಿಫ್ ಸೌಲಭ್ಯಗಳನ್ನು ಹೊಸ ಬೈಕಿನಲ್ಲಿ ತೆಗೆದುಹಾಕಿದೆ. ಹೀಗಾಗಿ ಹೊಸ ಬೈಕ್ ಸಾಮಾನ್ಯ ಮಾದರಿಯಲ್ಲೇ ಕಂಡರೂ ತಾಂತ್ರಿಕವಾಗಿ ಒಂದೇ ರೀತಿಯ ಪರ್ಫಾಮೆನ್ಸ್ ಹೊಂದಿದ್ದು, ಕ್ಲಾಸಿಕ್ ಬೈಕ್ ಖರೀದಿದಾದರ ಆಯ್ಕೆಯನ್ನು ಹೆಚ್ಚಿಸಲಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಕ್ಲಾಸಿಕ್ 350 ಎಸ್ ಮಾದರಿಯು ಸ್ಟ್ಯಾಂಡರ್ಡ್ ಬೈಕ್‌ನಂತಯೇ 346ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 19.8-ಬಿಎಚ್‌ಪಿ, 28-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸದ್ಯಕ್ಕೆ ಹೊಸ ಕ್ಲಾಸಿಕ್ 350 ಎಸ್ ಬೈಕ್ ಆವೃತ್ತಿಯನ್ನು ತಮಿಳುನಾಡುವ ಮತ್ತು ಕೇರಳದಲ್ಲಿ ಮಾತ್ರವೇ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲಿ ಖರೀದಿಗೆ ಲಭ್ಯವಾಗುವ ಹೊಸ ಬೈಕ್ ಕಪ್ಪು ಮತ್ತು ಮೆರ್ಕ್ಯೂರಿ ಸಿಲ್ವರ್ ಬಣ್ಣದ ಆಯ್ಕೆ ಹೊಂದಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕ್ಲಾಸಿಕ್ 350 ಎಸ್ ಬಿಡುಗಡೆಗೂ ಮುನ್ನ ಅಗ್ಗದ ಬೆಲೆಯ ಬುಲೆಟ್ 350 ಎಕ್ಸ್ ಮಾದರಿಯನ್ನು ಬಿಡುಗಡೆ ಮಾಡಿತ್ತು.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ದೆಹಲಿ ಎಕ್ಸ್‌ಷೋರೂಂ ಪ್ರಕಾರ ರೂ.1.12 ಲಕ್ಷ ಬೆಲೆ ಹೊಂದಿರುವ ಬುಲೆಟ್ 350 ಎಕ್ಸ್ ಬೈಕ್ ಮಾದರಿಯು ಸ್ಟ್ಯಾಂಡರ್ಡ್ ಬುಲೆಟ್ 350 ಬೈಕಿಗಿಂತ ರೂ. 9 ಸಾವಿರ ಅಗ್ಗವಾಗಿದ್ದು, ಸಿಂಗಲ್ ಚಾನೆಲ್ ಎಬಿಎಸ್‌ನೊಂದಿಗೆ 346 ಸಿಸಿ ಎಂಜಿನ್ ಪಡೆದುಕೊಂಡಿದೆ.

ಅಗ್ಗದ ಬೆಲೆಯ ಕ್ಲಾಸಿಕ್ 350 ಎಸ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಸತತ ಇಳಿಕೆಯಾಗುತ್ತಿರುವ ಬೈಕ್ ಮಾರಾಟ ಮತ್ತು ಪ್ರತಿಸ್ಪರ್ಧಿ ಜಾವಾ ಬೈಕ್‌ಗಳಿಗೆ ಪೈಪೋಟಿಯಾಗಿ ಅಗ್ಗದ ಬೆಲೆಯ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅಗ್ಗದ ಬೆಲೆಯ ಬೈಕ್‌ಗಳ ಮಾರಾಟವು ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುವ ನೀರಿಕ್ಷೆಯಿದೆ.

Source: Autocarindia

Most Read Articles

Kannada
English summary
Royal Enfield Classic 350 S Launched In India: Priced At Rs 1.45 Lakh.
Story first published: Friday, September 13, 2019, 15:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X