ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ರಾಯಲ್ ಎನ್‍‍ಫೀಲ್ಡ್ ಕಂಪನಿಯು 2009ರಲ್ಲಿ ಕ್ಲಾಸಿಕ್ ಮೋಟಾರ್‍‍ಸೈಕಲ್ ಸರಣಿಯ ಬೈಕುಗಳನ್ನು ಬಿಡುಗಡೆಗೊಳಿಸಿತ್ತು. ಆ ವೇಳೆಯಲ್ಲಿಯೇ ಈ ಬೈಕುಗಳಲ್ಲಿ ಯೂನಿಟ್ ಕನ್‍‍ಸ್ಟ್ರಕ್ಷನ್ ಎಂಜಿನ್ (ಯು‍‍ಸಿ‍ಇ) ಹಾಗೂ ಫ್ಯೂಯಲ್ ಇಂಜಕ್ಷನ್‍‍ಗಳನ್ನು ಅಳವಡಿಸಲಾಗಿತ್ತು.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಇದಾದ ನಂತರ ರೆಟ್ರೊ ಥೀಮ್‍‍ನ ಕ್ಲಾಸಿಕ್ ಸರಣಿಯ ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದವು. ಗ್ರಾಹಕರು ಈ ಬೈಕುಗಳ ಕಡೆಗೆ ವಿಶೇಷವಾದ ಒಲವನ್ನು ಹೊಂದಿದರು. ಈ ಜನಪ್ರಿಯತೆಯನ್ನು ಹೊಂದಿದ್ದ ಬೈಕಿನಲ್ಲಿ ಕೆಲವು ಅಂಶಗಳನ್ನು ಮಾಡಿಫೈ ಮಾಡಲಾಗಿದೆ. ಹೊಸದಾಗಿ ಈ ಬೈಕಿನಲ್ಲಿ ಕಾರ್ಬನ್ ಎಸ್‍ಎಸ್ 180 ಅಳವಡಿಸಲಾಗಿದೆ. ಕಾರ್ಬನ್ ಎಸ್‍ಎಸ್ 180 ನೋಡಲು ಎಲ್ಲಾ ಕೋನಗಳಿಂದ ಆಕರ್ಷಕವಾಗಿ ಕಾಣುತ್ತದೆ. ಹೊಸದಾಗಿ ಮಾಡಿಫೈ ಮಾಡಲಾದ ಈ ಬೈಕಿನ ಹಿಂಬದಿಯ ವಿನ್ಯಾಸವು ನಮ್ಮನ್ನು ಬೆರಗುಗೊಳಿಸುತ್ತದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಈ ಕಾರ್ಬನ್ ಎಸ್‍ಎಸ್ 180 ಅನ್ನು ಮೊದಲ ಬಾರಿಗೆ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಡಸರ್ಟ್ ಸ್ಟಾರ್ಮ್‍‍ನಲ್ಲಿ ಅಳವಡಿಸಲಾಯಿತು. ನಂತರ ಅದರ ಎಲ್ಲಾ ಸರಣಿಗಳಲ್ಲೂ ಅಳವಡಿಸಲಾಯಿತು. ಈ ಬೈಕುಗಳನ್ನು ಬುಲೆಟಿರ್ ಕಸ್ಟಮ್ಸ್ ಸಂಸ್ಥೆಯು ಮಾಡಿಫೈ ಮಾಡಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಬೈಕುಗಳನ್ನು ಮಾಡಿಫೈ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಬೆಂಗಳೂರು ಮೂಲದ ಈ ಸಂಸ್ಥೆಯು ಈಗಾಗಲೇ ಸಾವಿರಾರು ಬೈಕುಗಳನ್ನು ಮಾಡಿಫೈ ಮಾಡಿ ಆಕರ್ಷಕವಾದ ವಿನ್ಯಾಸಗಳನ್ನು ನೀಡಿದೆ. ಈಗ ಈ ಬೈಕಿನಲ್ಲಿ ಏನೇನು ಅಂಶಗಳನ್ನು ಮಾಡಿಫೈ ಮಾಡಲಾಗಿದೆ ಎಂಬುದನ್ನು ನೋಡೋಣ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಈ ರೀತಿಯ ಮಾಡಿಫೈಗೆ ಬಾಬರ್ ಥೀಮ್ ಎಂದು ಕರೆಯಲಾಗುವುದು. ಈ ಥೀಮಿನಲ್ಲಿ ಬೈಕಿನ ಹಿಂಭಾಗದಲ್ಲಿ 180 ಎಂಎಂ ನ ಟಯರ್ ಅಳವಡಿಸಿದರೆ, ಮುಂಭಾಗದಲ್ಲಿ 130 ಎಂಎಂನ ಟಯರ್ ಅಳವಡಿಸಲಾಗುವುದು. ಈ ಟಯರ್‍‍ಗಳ ಮೇಲೆ ಎರಡೂ ಕಡೆಯಲ್ಲಿ ಕಸ್ಟಮ್ ಚಾಪ್‍‍ನ ಫೆಂಡರ್‍‍ಗಳನ್ನು ಅಳವಡಿಸಲಾಗುವುದು. ಇದರಲ್ಲಿರುವ ಅಲಾಯ್ ವ್ಹೀಲ್‍‍ಗಳನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದ್ದು, ಸುತ್ತಲೂ ಕಪ್ಪು ಬಣ್ಣವನ್ನು ಬಳಿಯಲಾಗಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಬೇರೆ ಬೈಕುಗಳಲ್ಲಿಯೂ ಇದೇ ಮಾದರಿಯನ್ನು ಅಳವಡಿಸಲಾಗಿದೆ. ಹತ್ತಿರದಿಂದ ಗಮನಿಸಿದರೆ, ಈ ಬೈಕಿನಲ್ಲಿ ಮಾಡಿಫೈ ಮಾಡಲಾಗಿರುವ ಟ್ಯಾಂಕ್, ಇದರ ಜೊತೆಗಿರುವ ಹ್ಯಾಂಡಲ್‍‍ಬಾರ್ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳನ್ನು ಕಾಣಬಹುದು. ಈ ಎಲ್ಲಾ ಅಂಶಗಳೂ ಈ ಬೈಕ್ ಅನ್ನು ಅತ್ಯದ್ಭುತವಾಗಿ ಕಾಣುವಂತೆ ಮಾಡುತ್ತವೆ. ಈ ಬೈಕಿನ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಇದರಲ್ಲಿ ಅಳವಡಿಸಲಾಗಿದ್ದ ಎಲ್ಲಾ ಬೋಲ್ಟ್ ಗಳನ್ನು ತೆಗೆದು ಹಾಕಿ, ಕ್ರೋಮ್ ಬಣ್ಣವನ್ನು ಬಳಿಯಲಾಗಿದೆ.

MOST READ: ಐ‍ಎಂ‍ಎ ಹಗರಣದ ಆರೋಪಿಯ ಕಾರು ವಶಪಡಿಸಿಕೊಂಡ ಪೊಲೀಸರು

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಈ ಬೈಕಿನ ಮುಂಭಾಗದಲ್ಲಿ ಡೇ ಮೇಕರ್ ಹೆಡ್ ಲೈ‍‍ಟ್‍‍ಗಳನ್ನು ಅಳವಡಿಸಲಾಗಿದೆ, ಇದರಿಂದಾಗಿ ಕತ್ತಲೆಯಲ್ಲಿ ಹೆಚ್ಚಿನ ಬೆಳಕನ್ನು ಪಡೆಯಲು ಸಾಧ್ಯವಾಗಲಿದೆ. ಹ್ಯಾಂಡಲ್‍‍ಬಾರ್‍‍ನಲ್ಲಿ ಅಳವಡಿಸಿರುವ ಇಂಡಿಕೇಟರ್‍‍ಗಳಿಂದಾಗಿ ರಾತ್ರಿ ವೇಳೆಯಲ್ಲಿ ತಿರುವುಗಳ ತೆಗೆದುಕೊಳ್ಳುವಾಗ ಅನುಕೂಲವಾಗಲಿದೆ.

MOST READ: ಲೇ ಮನ್ಸ್ ಸೀರಿಸ್‍‍‍ಗೆ ಲಗ್ಗೆಯಿಟ್ಟ ರೇಸರ್ ಅರ್ಜುನ್ ಮೈನಿ

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಇದರಲ್ಲಿದ್ದ ಸೈಲೆಂನ್ಸರ್ ಅನ್ನು ತೆಗೆದು ಹೊಸ ಬಗೆಯ ಡ್ಯೂಯಲ್ ಸೈಲೆಂನ್ಸರ್‍‍ಗಳನ್ನು ಒಂದೇ ಕಡೆಯಲ್ಲಿ ಬರುವಂತೆ ಅಳವಡಿಸಲಾಗಿದೆ. ಈ ಸೈಲೆಂನ್ಸರ್‍‍ಗಳು ಬಾಬರ್ ಥೀಮ್‍‍ಗೆ ಹೊಸ ಲುಕ್ ಅನ್ನು ನೀಡುವುದು ಮಾತ್ರವಲ್ಲದೇ ಹೆಚ್ಚಿನ ಶಬ್ದವನ್ನುಂಟು ಮಾಡುತ್ತವೆ.

MOST READ: ಎಲೆಕ್ಟ್ರಿಕರಣದ ವಿರುದ್ಧ ಧ್ವನಿಯೆತ್ತಿದ ದ್ವಿಚಕ್ರ ವಾಹನ ಉದ್ಯಮ

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಕಪ್ಪು ಬಣ್ಣದಲ್ಲಿರುವ ಸೀಟುಗಳಿಗೆ ಡೈಮಂಡ್ ಲೈನಿಂಗ್ ಸ್ಟಿಚ್ ಮಾಡಲಾಗಿದೆ. ಈ ಸೀಟುಗಳಿಗೆ ಎಲ್‍ಇ‍‍ಡಿ ಸ್ಟ್ರಿಪ್ ಟೇಲ್ ಲೈಟ್‍‍ಗಳನ್ನು ಅಳವಡಿಸಲಾಗಿರುವುದರಿಂದ ಬೈಕಿಗೆ ಹೊಸ ಲುಕ್ ನೀಡುತ್ತವೆ. ಈ ಬೈಕುಗಳಿಗೆ ಕಪ್ಪು ಮಿಶ್ರಿತ ಸೆರಾಮಿಕ್ ಬಣ್ಣವನ್ನು ಬಳಿಯಲಾಗಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕ್

ಈ ಬೈಕುಗಳಲ್ಲಿರುವ ಭಂಗಿಯು ಆರಾಮದಾಯಕವಾಗಿರಲಿದ್ದು, ಬೆನ್ನು ನೋವು ಬರದಂತೆ ತಡೆಯಲಿದೆ. ಈ ಎಲ್ಲಾ ಅಂಶಗಳನ್ನು ಹೊಂದಿ ಹೊಸ ವಿನ್ಯಾಸವನ್ನು ಪಡೆದಿರುವ ಕಾರ್ಬನ್ ಎಸ್‍ಎಸ್ 180ಗೆ ನಮ್ಮ ಕಡೆಯಿಂದ ಬಹುಪರಾಕ್ ಹೇಳಲೇಬೇಕು.

Source: Bulleteer Customs

Most Read Articles

Kannada
English summary
Royal Enfield Classic 500 modified into a low slung Bobber - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X