ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಜೈಪುರ ಮೂಲದ ರಜಪುತನಾ ಕಸ್ಟಮ್ಸ್, ಬೈಕುಗಳನ್ನು ಮಾಡಿಫೈ ಮಾಡುವುದರಲ್ಲಿ ಹೆಸರುವಾಸಿಯಾಗಿದೆ. ವಿಜಯ್ ಸಿಂಗ್ ನೇತೃತ್ವದಲ್ಲಿರುವ ಈ ಕಸ್ಟಮ್ಸ್ ಕಂಪನಿಯು, ಸೆಲೆಬ್ರಿಟಿಗಳಿಗಾಗಿ ಹಾಗೂ ಬೈಕ್ ತಯಾರಕರಿಗಾಗಿ ಬೈಕುಗಳನ್ನು ಮಾಡಿಫೈಗೊಳಿಸುತ್ತದೆ. ಇತ್ತೀಚಿಗೆ ಈ ಕಂಪನಿಯು, ರಾಯಲ್ ಎನ್‌ಫೀಲ್ಡ್ ಕಂಪನಿಯ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಮಾಢಿಫೈಗೊಳಿಸಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯು ರಜಪೂತನಾ ಕಸ್ಟಮ್ಸ್ ಅನ್ನು ಪ್ರಪಂಚದ ಮೊದಲ ಸ್ಟ್ರೀಟ್ 750 ಬೈಕ್ ಅನ್ನು ಮಾಡಿಫೈಗೊಳಿಸಲು ಕೇಳಿಕೊಂಡಿತ್ತು.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಆದರೆ ವಿಜಯ್‍‍ರವರ ಕನಸು ರಾಯಲ್ ಎನ್‍‍ಫೀಲ್ಡ್ ಅನ್ನು ಮಾಡಿಫೈಗೊಳಿಸುವುದಾಗಿತ್ತು. ಈ ಬಗ್ಗೆ ಮಾತನಾಡಿರುವ ವಿಜಯ್‍‍ರವರು ರಾಯಲ್ ಎನ್‍‍ಫೀಲ್ಡ್ ಕಂಪನಿಯು ಈ ಕುರಿತು ನಮ್ಮನ್ನು ಸಂಪರ್ಕಿಸಿದಾಗ, ನಮಗೆ ಹೆಮ್ಮೆಯಾಯಿತು, ನಾವು ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆವು ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಬೈಕಿನ ಮಾಡಿಫೈಗೊಳಿಸುವ ಅವಕಾಶ ದೊರೆಯಿತು. ನಮಗೆ ಹೊಸ ಜಿಟಿ650 ಬೈಕ್ ಅನ್ನು ಮಾಡಿಫೈಗೊಳಿಸಲು ತಿಳಿಸಿದರು. ಆ ಸಮಯದಲ್ಲಿ ಈ ಬೈಕ್ ಅನ್ನು ಬಿಡುಗಡೆಗೊಳಿಸಿರಲಿಲ್ಲ ಎಂದು ಹೇಳಿದರು.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ರಜಪೂತನಾ ಕಸ್ಟಮ್ಸ್ ನಿರ್ಮಿಸಿರುವ ಬೈಕ್ ಅದ್ಭುತವಾಗಿದೆ. ಮಾಡಿಫೈಗೊಳಿಸಲಾದ ಜಿಟಿ650 ಬೈಕ್ ಅನ್ನು ವಿಜಿಲೆಂಟ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಸವಾರಿ ಮಾಡುವುದು ಬಹುತೇಕ ಬೈಕ್ ಪ್ರಿಯರ ಕನಸು. ಈ ಬೈಕ್ ಹೆಚ್ಚಿನ ಕಾರ್ಯದಕ್ಷತೆಯನ್ನು ನಿಭಾಯಿಸುತ್ತದೆ, ಎಂಜಿನ್ ಉತ್ಸಾಹಭರಿತವಾಗಿದ್ದು, ವಾರಾಂತ್ಯದ ಸವಾರಿಗೆ ಹೇಳಿ ಮಾಡಿಸಿದಂತಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

80%ನಷ್ಟು ಟಾರ್ಕ್ 2500 ಆರ್‌ಪಿಎಂ ಮಾರ್ಕ್‌ಗೆ ಮುಂಚೆಯೇ ಉತ್ಪಾದನೆಯಾಗುತ್ತದೆ. ಅದಕ್ಕಾಗಿ ಮೋಟರ್ ಅನ್ನು ಹೆಚ್ಚು ಪರಿಷ್ಕರಿಸಬೇಕಾಗಿಲ್ಲ. ವಿಜಯ್ ಹಾಗೂ ಅವರ ಸಿಬ್ಬಂದಿ ಬೈಕಿನಲ್ಲಿರುವ ಮೋಜಿನ ಅಂಶಗಳನ್ನು ಹೆಚ್ಚಿಸಲು ನಿರ್ಧರಿಸಿದರು. ಅವರ ಪ್ರಕಾರ ಹೊಸ ಬೈಕ್‌ನ ಫ್ರೇಮ್ ಹಾಗೂ ಜಿಯೊಮಿಟ್ರಿಯನ್ನು ಗಮನಿಸಿದರೆ ಅಕಾಫ್ ರೇಸರ್ ನಿರ್ಮಿಸುವುದು ಸೂಕ್ತವೆಂದು ಭಾವಿಸಿದೆವು. ಆದ್ದರಿಂದ ನಾವು ಹಿಂಭಾಗದ ಸಬ್‌ಫ್ರೇಮ್ ಅನ್ನು ಪುನರ್ ನಿರ್ಮಿಸಿದ್ದೇವೆ ಹಾಗೂ ಸಿಂಗಲ್ ಸೈಡಿನ ಟ್ರೆಲ್ಲಿಸ್ ಸ್ವಿಂಗಾರ್ಮ್ ಅನ್ನು ಸೇರಿಸಿದೆವು ಎಂದು ಹೇಳಿದರು.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಹ್ಯಾಂಡ್ಲಿಂಗ್ ಇಂಪ್ರೂವ್ ಮಾಡಲು ರಜಪೂತನಾ ಕಸ್ಟಮ್ಸ್ ಮುಂಭಾಗದಲ್ಲಿನ ಟ್ರೇಲ್ ಕಡಿಮೆ ಮಾಡಿದೆ. ಡುಕಾಟಿ 848 ಇವಿಒದಿಂದ ಪಡೆದ ಶೋವಾ ಫೋರ್ಕ್‌ಗಳನ್ನು ಮೌಂಟ್ ಮಾಡುವ ಸಲುವಾಗಿ ಟ್ರಿಪಲ್ ಆಗಿ ಜೋಡಿಸಲಾಗಿದೆ. ಇವುಗಳು ಬೈಕ್‌ಗೆ ಆಕ್ರಮಣಕಾರಿ ನಿಲುವು, ಹೆಚ್ಚು ಚುರುಕುತನ ಹಾಗೂ ಉತ್ತಮ ಫ್ರಂಟ್ ಎಂಡ್ ಫೀಲ್ ನೀಡುತ್ತವೆ ಎಂದು ವಿಜಯ್ ಹೇಳಿದರು. ಹಿಂಭಾಗದ ಸಸ್ಪೆಂಷನ್ ಅನ್ನು ಓಹ್ಲಿನ್ಸ್ ಟಿಟಿಎಕ್ಸ್ ಜಿಪಿ ಶಾಕ್‍‍‍ನೊಂದಿಗೆ ಅಪ್‍‍ಗ್ರೇಡ್ ಮಾಡಲಾಗಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇತರ ಮಾಡಿಫಿಕೇಶನ್‍‍ಗಳೆಂದರೆ 17 ಇಂಚಿನ ಮಾರ್ಚೆಸಿನಿ ರಿಮ್ಸ್ ಹಾಗೂ ಪಿರೆಲ್ಲಿ ಡಯಾಬ್ಲೊ ಸೂಪರ್‌ಬೈಕ್ ಸ್ಲಿಕ್‌ಗಳು. ರೇಡಿಯಲ್ ಮಾಸ್ಟರ್ ಸಿಲಿಂಡರ್‌ಗಳು ಸೇರಿದಂತೆ ಬ್ರೆಂಬೊ ಬ್ರೇಕ್‌ಗಳಿಗಾಗಿ ರಜಪೂತಾನ ಕಸ್ಟಮ್ಸ್, ಹೊಸ ಬೈಕುಗಳಲ್ಲಿರುವ ಬೈಬ್ರೆ ಬ್ರೇಕ್‌ಗಳನ್ನು ಬದಲಾಯಿಸಿದೆ. ಮೋಟಾರ್‌ಸೈಕಲ್‌ನ ಮೆಕ್ಯಾನಿಕಲ್ ಅಂಶಗಳು ಹಾಗೆಯೇ ಮುಂದುವರೆಯಲಿವೆ. ಆದರೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್, ಇನ್‍‍ಟೇಕ್‍‍ಗಾಗಿ ಕೆ ಅಂಡ್ ಎನ್ ಪಾಡ್ ಫಿಲ್ಟರ್‌ಗಳನ್ನು ಒಳಗೊಂಡಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಮೋಟರ್‍‍ನಲ್ಲಿ ಗಾಳಿಯಾಡಲು ಹಾಗೂ ಹೆಚ್ಚಿನ ಸೌಂಡ್ ಮಾಡಲು ಬ್ರಾಸ್ ಟಿಪ್‍‍ಗಳನ್ನು ಹೊಂದಿರುವ ಕಸ್ಟಮ್ ಮೋಟೋ ಜಿಪಿ ಶೈಲಿಯ ಎಕ್ಸಾಸ್ಟ್ ಸಿಸ್ಟಂ ಹೊಂದಿದೆ. ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕಿನಲ್ಲಿ ಹೊಸ ಫೇರಿಂಗ್‍‍ಯಿದ್ದು ಮೈಲ್ಡ್ ಸ್ಟೀಲ್‍‍ನಿಂದ ತಯಾರಿಸಲಾಗಿದೆ. ಈ ಬೈಕ್ ಅಸಿಮೆಟ್ರಿಕ್ ಸೈಡ್ ಪ್ಯಾನೆಲ್‍‍ಗಳನ್ನು ಹೊಂದಿದೆ, ಅದು ಎಂಜಿನ್ ಅನ್ನು ಭಾಗಶಃ ಆವರಿಸುತ್ತದೆ. ಬೈಕಿನ ಟ್ಯಾಂಕ್ ಮೇಲೆ ಪಾಪ್ ಅಪ್ ಫ್ಯೂಯಲ್ ಕ್ಯಾಪ್ ಅಳವಡಿಸಲಾಗಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಹೊಸ ಸಬ್‌ಫ್ರೇಮ್‌ನಲ್ಲಿ ಕಡಿಮೆ ಪ್ರಮಾಣದ ಲೆದರ್ ಸೀಟ್, ಹೊಸ ಎಲ್‌ಇಡಿ ಲೈಟಿಂಗ್ ಹಾಗೂ ಕೆಲವು ಪ್ರಮಾಣದ ಬ್ರಾಸ್ ಡೀಟೆಲ್‍‍ಗಳನ್ನು ಅಳವಡಿಸಲಾಗಿದೆ. ಈ ಮಾಡಿಫೈ ಬೈಕ್ ಅನ್ನು ನೋಡಿದ ನಂತರ ರಾಯಲ್ ಎನ್‌ಫೀಲ್ಡ್ ಖುಷಿಯಾಗಿದೆ. ಈ ಬೈಕ್ ಅನ್ನು ಪರೀಕ್ಷಿಸಲು ರಜಪೂತಾನ ಕಸ್ಟಮ್ಸ್ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್‌ಗೆ ಕೊಂಡೊಯ್ದಿದೆ. ವಿಜಯ್‍‍ರವರು ಮಾತನಾಡಿ, ನಾವು ಬೈಕ್‌ನ್ನು ಅದರ ಗತಿಯ ಮೂಲಕ ಅತ್ಯಾಧುನಿಕ ಟ್ರ್ಯಾಕ್‌ನಲ್ಲಿ ಇರಿಸಲು ಸಾಧ್ಯವಾಯಿತು.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಮಿಡ್ ರೇಂಜ್‍‍ನ ಎಸ್‌ಬಿಕೆ ಸಸ್ಪೆಂಷನ್ ಸೆಟಪ್‌ನೊಂದಿಗೆ ಸ್ಲಿಕ್‌ಗಳನ್ನು ನಂಬಲಾಗದಷ್ಟು ಪ್ರಮಾಣದಲ್ಲಿ ಅಳವಡಿಸಲಾಗಿದೆ. ಬ್ರೇಕ್‌ಗಳಲ್ಲಿದ್ದಾಗ ಟನ್‌ಗಳಷ್ಟು ಗ್ರಿಪ್ ನೀಡಲಾಗಿದೆ. ಒಂದು ಮೂಲೆಯಲ್ಲಿ ಪ್ರವೇಶಿಸುವುದು ಅಥವಾ ಅನಿಲದ ಮೇಲೆ ಬ್ಯಾರೆಲಿಂಗ್ ಮಾಡುವುದು. ಇದು ತುಂಬಾ ಮೋಜಿನ ಸಂಗತಿಯಾಗಿದೆ. ಆಕರ್ಷಕ ವಿನ್ಯಾಸದಿಂದ ತಯಾರಿಸಲಾಗಿರುವುದರಿಂದ, ಇದನ್ನು ಸ್ವಲ್ಪಮಟ್ಟಿಗೆ ಬಳಸಿಕೊಳ್ಳಬೇಕಾಯಿತು ಎಂದು ಹೇಳಿದರು.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 648 ಸಿಸಿ ಪ್ಯಾರಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, 47 ಬಿಹೆಚ್‌ಪಿ ಹಾಗೂ 52 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್‍‍ನಲ್ಲಿ 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಬೈಕ್ ಅನ್ನು ಬ್ಲ್ಯಾಕ್ ಮ್ಯಾಜಿಕ್, ಐಸ್ ಕ್ವೀನ್, ವೆಂಚುರಾ ಬ್ಲೂ, ಮಿಸ್ಟರ್ ಕ್ಲೀನ್ ಹಾಗೂ ಡಾ ಮೇಹೆಮ್ ಎಂಬ ಐದು ವಿಭಿನ್ನ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಜಿಟಿ 650 ಬೈಕಿನ ಬೆಲೆಯು ಭಾರತದಲ್ಲಿನ ಎಕ್ಸ್ ಶೋರೂಂ ದರದಂತೆ ರೂ. 2.65 ಲಕ್ಷದಿಂದ ರೂ.2.85 ಲಕ್ಷಗಳವರೆಗೆ ಇರಲಿದೆ.

ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಕಾಂಟಿನೆಂಟಲ್ ಜಿಟಿ650

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರಜಪೂತನಾ ಕಸ್ಟಮ್ಸ್ ಬೈಕ್ ಮಾಡಿಫಿಕೇಷನ್‍‍ನಲ್ಲಿ ಮತ್ತೊಮ್ಮೆ ತನ್ನನ್ನು ಮೀರಿಸಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು, ಈ ಮಾಡಿಫೈ ಬೈಕಿನಿಂದ ರೋಮಾಂಚನಗೊಳ್ಳಲಿದೆ. ಕಂಪನಿಯು 650 ಟ್ವಿನ್ ಬೈಕುಗಳಿಗಾಗಿ ಅವಕಾಶ ಸಿಕ್ಕಿದಾಗೆಲ್ಲಾ ಮಾಡಿಫೈ ಬಗ್ಗೆ ಹೇಳುತ್ತಲೇ ಇತ್ತು. ಈ ರೀತಿಯ ಬೈಕ್ ಅನ್ನು ಅದ್ಭುತವಾಗಿ ಮಾಡಿಫೈಗೊಳಿಸಿದ ವಿಜಯ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು.

Most Read Articles

Kannada
English summary
Royal Enfield Continental GT 650 Modified: Rajputana Customs Have Outdone Themselves! - Read in kannada
Story first published: Monday, July 22, 2019, 14:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more