ಹರಿಯುವ ನದಿಯಲ್ಲಿ ಮಾಡಿಫೈಡ್ ಆರ್‍ಇ ಬೈಕಿನ ಚಮತ್ಕಾರ

ಮಾಡಿಫೈ ಮಾಡಲಾದ ರಾಯಲ್ ಎನ್‍‍ಫೀಲ್ಡ್ ಬೈಕುಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಶೋರೂಂನಿಂದ ಖರೀದಿಸಲಾಗುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಪರಿಪೂರ್ಣವಾದ ಕ್ಲಾಸಿ ಲುಕಿಂಗ್ ಬೇಸ್ ಅನ್ನು ಒದಗಿಸುವುದರಿಂದ, ಬಹುತೇಕ ಮಂದಿ ಅವುಗಳನ್ನು ಮಾಡಿಫೈ ಮಾಡಲು ಬಯಸುತ್ತಾರೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮೇಲಿರುವ ಐಕಾನಿಕ್ ಥಂಪ್, ಮಾಡಿಫೈಗೊಂಡ ಬೈಕುಗಳಿಗೆ ಹೊಸ ಲುಕ್ ನೀಡುತ್ತದೆ.

ಹರಿಯುವ ನದಿಯಲ್ಲಿ ಮಾಡಿಫೈಡ್ ಆರ್‍ಇ ಬೈಕಿನ ಚಮತ್ಕಾರ

ಮಾಡಿಫೈ ಮಾಡಲಾದ ಹೆಚ್ಚಿನ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ರಸ್ತೆ ಆಧಾರಿತವಾಗಿರುತ್ತವೆ. ಮಾಡಿಫೈಗೊಂಡ ಭಾಗಗಳು ಸುಲಭವಾಗಿ ಹಾಳಾಗುವ ಕಾರಣ, ಈ ಬೈಕುಗಳ ಮಾಲೀಕರು ಇವುಗಳ ಸಾಮರ್ಥ್ಯವನ್ನು ಪರೀಕ್ಷಿಸುವುದಿಲ್ಲ. ಏಕೆಂದರೆ ಹಾಳಾದ ಬೈಕುಗಳ ಬಿಡಿಭಾಗಗಳನ್ನು ಬದಲಿಸುವುದು ಬಲು ದುಬಾರಿ. ಆದರೆ, ಭಾರೀ ಪ್ರಮಾಣದಲ್ಲಿ ಮಾರ್ಪಡಾದ ರಾಯಲ್ ಎನ್‌ಫೀಲ್ಡ್ ಬೈಕು ಮೊಣಕಾಲಿನವರೆಗೂ ನೀರಿರುವ ನದಿಯನ್ನು ದಾಟುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಈ ವೀಡಿಯೊವನ್ನು ಬಿ‍ಎಲ್‍ಸಿ ಬೈಕರ್ ಅಪ್‍‍ಲೋಡ್ ಮಾಡಿದ್ದು, ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ನದಿ ದಾಟುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಹೇಳಿರುವ ಪ್ರಕಾರ, ನದಿಯ ಮೇಲೆ ಕಟ್ಟಿದ್ದ ಸೇತುವೆಯು ಕುಸಿದು ಬಿದ್ದಿದ್ದ ಕಾರಣ ಅವರು ನದಿಯನ್ನು ದಾಟಲೇ ಬೇಕಿತ್ತು. ಈ ನದಿಯನ್ನು ದಾಟಲು ಬೇರೆ ದಾರಿಗಳು ಇದ್ದವೇ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಕೆಲವೊಮ್ಮೆ ಬೇರೆ ದಾರಿಗಳಿದ್ದರೂ ಅವುಗಳ ದೂರವು ಜಾಸ್ತಿಯಾಗಿರುತ್ತದೆ.

ಹರಿಯುವ ನದಿಯಲ್ಲಿ ಮಾಡಿಫೈಡ್ ಆರ್‍ಇ ಬೈಕಿನ ಚಮತ್ಕಾರ

ಈ ವೀಡಿಯೊದಲ್ಲಿ ಮಾಡಿಫೈ ಆದ ರಾಯಲ್ ಎನ್‌ಫೀಲ್ಡ್ ಬೈಕ್ ನದಿಯ ದಡದಿಂದ ನೀರಿಗೆ ಪ್ರವೇಶಿಸುವುದನ್ನು ಕಾಣಬಹುದು. ಮಳೆಗಾಲವಾದ ಕಾರಣ, ನೀರಿನ ಹರಿವು ವೇಗವಾಗಿರುತ್ತದೆ. ಬೈಕು ನದಿಯ ಒಳಗೆ ಹೋದರೂ ಬೈಕ್ ಹೆಚ್ಚಿನ ತೂಕವಿರುವ ಕಾರಣ, ಸವಾರ ಅದನ್ನು ನೇರವಾಗಿ ಚಲಾಯಿಸಲು ಪರದಾಡುತ್ತಾನೆ. ಈ ನದಿಯ ದಡವು ಸ್ಲಿಪರಿ ಪೆಬಲ್‍‍ಗಳನ್ನು ಹೊಂದಿರುವ ಕಾರಣ ಸರಿಯಾದ ಗ್ರಿಪ್ ಸಿಗಲು ಸಾಧ್ಯವಾಗುತ್ತಿಲ್ಲ.

ತನ್ನ ಪ್ರಯತ್ನವನ್ನು ಮುಂದುವರೆಸುವ ಚಾಲಕನು ಬೈಕ್ ಅನ್ನು ನೇರವಾಗಿ ಚಲಾಯಿಸಲು ಪರದಾಡುತ್ತಾನೆ. ಒಂದು ಹಂತದಲ್ಲಿ, ಬೈಕ್ ಟ್ರಾಕ್ಷನ್‍ ಕಡಿಮೆಯಾದ ಕಾರಣ ನದಿಯಲ್ಲಿಯೇ ನಿಂತು ಹೋಗುತ್ತದೆ. ಹಿಂಭಾಗದ ಟಯರ್ ಆರಾಮವಾಗಿ ಚಲಿಸುತ್ತಿರುವುದನ್ನು ಸಹ ಕಾಣಬಹುದು. ಹಲವು ಬಾರಿ ಪ್ರಯತ್ನಿಸಿದ ನಂತರ ಚಾಲಕನು ಮುಂದೆ ಚಲಿಸುತ್ತಾನೆ. ಈ ವೀಡಿಯೊದಲ್ಲಿ ಬೈಕಿನ ಎಕ್ಸಾಸ್ಟ್ ಮುಳುಗುತ್ತಿರುವುದನ್ನು ಕಾಣಬಹುದು. ಆದರೆ ಚಾಲಕನು ಒಂದೇ ಸಮನೆ ಬೈಕಿನ ಆಕ್ಸಲೇಟರ್ ಹೆಚ್ಚು ಮಾಡುತ್ತಿರುವ ಕಾರಣ ಎಕ್ಸಾಸ್ಟ್ ನಲ್ಲಿದ್ದ ನೀರು ಹೊರ ಬಂದಿದೆ.

ಈ ವೀಡಿಯೊದಲ್ಲಿ ಬೈಕಿನ ಏರ್ ಇನ್‍‍ಟೇಕ್ ಅನ್ನು ಸಹ ಕಾಣಬಹುದು. ನೀರಿನ ಸಮೀಪದಲ್ಲಿಯೇ ಇದ್ದರೂ, ನೀರು ಒಳ ನುಗ್ಗಿಲ್ಲ. ಒಂದು ವೇಳೆ ನೀರು ಏರ್ ಇನ್‍‍ಟೇಕ್‍‍ನ ಒಳ ನುಗ್ಗಿದ್ದರೆ, ಬೈಕ್ ಹಾಳಾಗುವ ಸಾಧ್ಯತೆಗಳಿದ್ದವು. ಹಲವಾರು ಬಾರಿ ಪ್ರಯತ್ನಿಸಿದ ನಂತರ ಕೊನೆಗೂ ಬೈಕ್ ಸವಾರನು ಬೈಕ್ ಅನ್ನು ನದಿಯಿಂದ ಹೊರಗೆ ತರಲು ಯಶಸ್ವಿಯಾಗುತ್ತಾನೆ. ಬೈಕುಗಳಲ್ಲಿ ನದಿಯನ್ನು ದಾಟುವುದು ತಮಾಷೆಯಾಗಿ ಕಂಡು ಬಂದರೂ, ಈ ರೀತಿಯಾಗಿ ಚಾಲನೆ ಮಾಡುವಾಗ ಮಾಡುವ ಒಂದು ಸಣ್ಣ ತಪ್ಪು ಇಡೀ ಬೈಕ್ ಅನ್ನು ಹಾಳು ಮಾಡುವ ಸಾಧ್ಯತೆಗಳಿರುತ್ತವೆ.

ಹರಿಯುವ ನದಿಯಲ್ಲಿ ಮಾಡಿಫೈಡ್ ಆರ್‍ಇ ಬೈಕಿನ ಚಮತ್ಕಾರ

ಹರಿಯುವ ನದಿಗಳು ನಿಂತಿರುವ ನೀರಿಗಿಂತ ಭಿನ್ನವಾಗಿದ್ದು, ನದಿಗಳ ನೀರಿನ ಹರಿವು ವಾಹನಗಳ ಹಾದಿಯನ್ನು ಸುಲಭವಾಗಿ ಬದಲಿಸುತ್ತವೆ. ಆದ ಕಾರಣ ತೀರಾ ಅನಿವಾರ್ಯ ಪರಿಸ್ಥಿತಿಗಳ ಹೊರತು ಬೈಕ್‌ಗಳಲ್ಲಿ ನದಿ ದಾಟಲು ಮುಂದಾಗಬಾರದು. ಅಡ್ವೆಂಚರ್ ಬೈಕ್‌ಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಉತ್ತಮ ಟಯರ್ ಗ್ರಿಪ್, ಹೈ ಮೌಂಟೆಡ್ ಎಕ್ಸಾಸ್ಟ್ ಹಾಗೂ ಏರ್ ಇನ್‍‍‍ಟೇಕ್‍‍ಗಳನ್ನು ಹೊಂದಿರುವ ಕಾರಣ ಆಳದ ನದಿಗಳನ್ನು ಸುಲಭವಾಗಿ ದಾಟುತ್ತವೆ. ಆದರೆ ಕ್ರೂಸರ್ ಬೈಕ್‌ಗಳಿಗೆ ಇದು ಸಾಧ್ಯವಾಗುವುದಿಲ್ಲ.

Most Read Articles

Kannada
English summary
Modified Royal Enfield crosses the river. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X