ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುವುದೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿದ್ದು, ರಾಯಲ್ ಎನ್‌ಫೀಲ್ಡ್ ಸಹ ಶೀಘ್ರದಲ್ಲೇ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

2030ರ ವೇಳೆಗೆ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಯೊಂದಿಗೆ ಬೃಹತ್ ಯೋಜನೆ ರೂಪಿಸಿರುವ ನೀತಿ ಆಯೋಗವು ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಭರ್ಜರಿ ತೆರಿಗೆ ವಿನಾಯ್ತಿ ಮತ್ತು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, 2020ರ ಕೊನೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಇವಿ ವಾಹನ ಮಾರಾಟವನ್ನು ಆರಂಭಗೊಳಿಸಲಿವೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಈ ಹಿನ್ನಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಹ ಹೊಸ ಯೋಜನೆಗಾಗಿ ಭರ್ಜರಿ ಸಿದ್ದತೆ ನಡೆಸಿದ್ದು, ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಇಂಡಿಯಾ ವಿಭಾಗಕ್ಕೆ ಹೊಸದಾಗಿ ನೇಮಕಗೊಂಡಿರುವ ಸಿಇಒ ವಿನೋದ್ ದಾಸರಿ ಅವರು ಸಹ ಸಂಸ್ಥೆಯ ಬೆಳವಣಿಗೆ ಹಲವು ಹೊಸ ಯೋಜನೆಗಳನ್ನು ಸಿದ್ದಪಡಿಸಿದ್ದಾರೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಹೊಸ ಯೋಜನೆಗಳಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಉತ್ಪನ್ನಗಳ ಅಭಿವೃದ್ದಿಯು ಪ್ರಮುಖ ಆಕರ್ಷಣೆಯಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮಾದರಿಗಳ ಎಲೆಕ್ಟ್ರಿಕ್ ವರ್ಷನ್ ಜೊತೆ ಜೊತೆಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಇನ್ನು ಪ್ರೀಮಿಯಂ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರತಿಸ್ಪರ್ಧಿ ಸಂಸ್ಥೆಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಬೈಕ್ ಮಾರಾಟವನ್ನು ಹೆಚ್ಚಿಸುವ ಸಂಬಂಧ ಮಾರಾಟ ವಿಭಾಗದಲ್ಲಿ ಬದಲಾವಣೆಗೆ ನಿರ್ಧರಿಸಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಬೈಕ್ ಸಂಸ್ಥೆಗಳು ಗ್ರಾಹಕರನ್ನು ಸೆಳೆಯುವತ್ತ ವಿವಿಧ ಮಾದರಿಯ ಹೊಸ ಶೈಲಿಯ ಕ್ಲಾಸಿಕ್ ಬೈಕ್‌ಗಳನ್ನು ಪರಿಚಯಿಸಿದ್ದು, ಆರ್‌ಇ ಕೂಡಾ ಇದೇ ನಿಟ್ಟಿನಲ್ಲಿ ತನ್ನ ಬಹುನೀರಿಕ್ಷಿತ ಕಾಂಟಿನೆಂಟಲ್ ಜಿಟಿ ಮತ್ತು ಇಂಟರ್‌ಸೆಪ್ಟರ್ ಬೈಕ್‌ಗಳನ್ನು ಬಿಡುಗಡೆ ಮಾಡಿದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಆದರೆ, ಹೊಸ ಬೈಕ್ ಮಾರಾಟಕ್ಕಾಗಿ ಮಾರಾಟ ಮಳಿಗೆಗಳ ಕೊರತೆ ಎದುರಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮೆಟ್ರೋ ನಗರಗಳನ್ನು ಹೊರತುಪಡಿಸಿ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲೂ ಸಣ್ಣಗಾತ್ರದ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿದೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಜೊತೆಗೆ ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ನಿಯಮಾವಳಿಗಳಿಗೆ ಅನುಸಾರವಾಗಿ ಹೊಸ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವುದು ಒಂದು ಸವಾಲಾಗಿದ್ದು, ಹೊಸ ಯೋಜನೆಗಳಿಗಾಗಿ ಬರೋಬ್ಬರಿ ರೂ.700 ಕೋಟಿ ಬಂಡವಾಳ ಹೂಡಿಕೆಗೆ ಮುಂದಾಗಿದೆ.

MOST READ: ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಾಗಿ ಬೆಂಗಳೂರು ಪೊಲೀಸರಿಂದ ಹೊಸ ಐಡಿಯಾ..!

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಹೊಸ ಬಂಡವಾಳದಲ್ಲಿ ಮಾರಾಟ ಮಳಿಗೆಗಳ ಹೆಚ್ಚಳದ ಜೊತೆಗೆ ಹೊಸ ಬೈಕ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ನವೀಕರಣ ಮತ್ತು ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಗಾಗಿ ಹೊಸ ಬಂಡವಾಳವು ಸಾಕಷ್ಟು ಸಹಕಾರಿಯಾಗಲಿದೆ ಎನ್ನಬಹುದು.

MOST READ: ಕಲ್ಯಾಣ್ ಜ್ಯುವೆಲ್ಲರ್ಸ್ ಮಾಲೀಕನ ಬಳಿಯಿರುವ ಐಷಾರಾಮಿ ಕಾರು ಕಲೆಕ್ಷನ್ ಹೇಗಿದೆ ಗೊತ್ತಾ?

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು

ಈ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷದ ಅವಧಿಯಲ್ಲಿ 10 ಲಕ್ಷ ಬೈಕ್‌ಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವ ಗುರಿಹೊಂದಲಾಗಿದ್ದು, 2018-19 ರ ಅವಧಿಯಲ್ಲಿ ಒಟ್ಟು 8,26,098 ಬೈಕ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಹೊಸ ವಾಹನಗಳ ಮಾರಾಟವು ತೀವ್ರ ಹಿನ್ನಡೆ ಅನುಭವಿಸಿದ್ದು, ಇದೀಗ ನಿಧಾನವಾಗಿ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ.

Most Read Articles

Kannada
English summary
Royal Enfield Electric Motorcycle Confirmed For India: Launch Expected In The Coming Years.
Story first published: Thursday, November 28, 2019, 17:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X