ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ಇತ್ತೀಚಿಗೆ ಹಲವಾರು ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊಗಳನ್ನು ಬಿಡುಗಡೆಗೊಳಿಸಿತ್ತು. ಈ ವೀಡಿಯೊಗಳನ್ನು ಇಂಟರ್‍‍ಸೆಪ್ಟರ್ 650 ಬೈಕಿಗಾಗಿ ತನ್ನ ಅಧಿಕೃತ ಯೂಟ್ಯೂಬ್‍ ಚಾನೆಲ್‍‍ನಲ್ಲಿ ಪೋಸ್ಟ್ ಮಾಡಿದೆ.

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‍‍ಫೀಲ್ಡ್ ವೀಡಿಯೊ ಚಾನೆಲ್‍‍ನಲ್ಲಿ 11 ಹೊಸ ವೀಡಿಯೊಗಳಿದ್ದು, ಅವುಗಳಲ್ಲಿ ಇಂಟರ್‍‍ಸೆಪ್ಟರ್ 650 ಬೈಕಿನಲ್ಲಿ ಎದುರಾಗುವ ತೊಂದರೆಗಳನ್ನು ಹೇಗೆ ಸರಿಪಡಿಸಬಹುದೆಂಬುದನ್ನು ವಿವರವಾಗಿ ಹೇಳಲಾಗಿದೆ.

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ಈ ವೀಡಿಯೊದಲ್ಲಿ ಇಂಟರ್‍‍ಸೆಪ್ಟರ್ 650 ಬೈಕಿ ಮಾಲೀಕರು ಸ್ವತಃ ತಾವೇ ಸಮಸ್ಯೆಯನ್ನು ಪತ್ತೆ ಹಚ್ಚಿ, ಮೆಕಾನಿಕ್‍‍ಗೆ ಫೋನಿನಲ್ಲಿ ಸಮಸ್ಯೆಯ ಬಗ್ಗೆ ಹೇಳಿ ಅದಕ್ಕೆ ಪರಿಹಾರ ಪಡೆಯುವುದು ಹೇಗೆ ಎಂಬ ಬಗ್ಗೆ ವಿವರಿಸಲಾಗಿದೆ.

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ಕೆಲವು ವೀಡಿಯೊಗಳು ಸಣ್ಣ ಪುಟ್ಟ ಸಮಸ್ಯೆಗಳನ್ನು ತಾವಾಗಿಯೇ ಹೇಗೆ ಪರಿಹರಿಸ ಬಹುದೆಂದು ತಿಳಿಸಿದ್ದು, ರಾಯಲ್ ಎನ್‍‍ಫೀಲ್ಡ್ ಸರ್ವಿಸ್ ಸೆಂಟರ್‍‍ನಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದಿರುವುದು ಒಳ್ಳೆಯದು ಎಂಬುದನ್ನು ತೋರಿಸುತ್ತವೆ.

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

650 ಟ್ವಿನ್ ಮಾಲೀಕರು ಫ್ಯೂಸ್‌ಗಳು, ಬ್ಯಾಟರಿ ಅಥವಾ ಸ್ಪಾರ್ಕ್ ಪ್ಲಗ್‌ಗೆ ಯಾವುದೇ ಸಮಸ್ಯೆಗಳಿವೆಯೇ ಎಂಬುದನ್ನು ಹೇಗೆ ಪರಿಶೀಲಿಸಬಹುದು ಎಂಬುದನ್ನು ಈ ವೀಡಿಯೊಗಳು ವಿವರಿಸುತ್ತವೆ. ಚೈನ್‍‍ಗಳನ್ನು ಕ್ಲೀನ್ ಮಾಡುವುದು ಹೇಗೆ ಹಾಗೂ ಲ್ಯುಬ್ರಿಕೇಟ್ ಮಾಡುವುದು ಹೇಗೆಂಬ ಬಗ್ಗೆ ಪ್ರತ್ಯೇಕವಾದ ವೀಡಿಯೊಗಳಿವೆ.

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ಸ್ಪ್ಯಾನರ್ ಹಾಗೂ ಸ್ಕ್ರೂಡ್ರೈವರ್ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲದವರಿಗೂ ಸಹ ಸಮಸ್ಯೆಗಳನ್ನು ಪರಿಹರಿಸಲು ಯಾವ ಸಾಧನಗಳು ಬೇಕಾಗುತ್ತವೆ ಎಂಬುದರ ಬಗ್ಗೆ ಸಹ ಈ ವೀಡಿಯೊಗಳು ತಿಳಿಸುತ್ತವೆ. ಹನ್ನೊಂದು ವೀಡಿಯೊಗಳ ಪಟ್ಟಿಯಲ್ಲಿ ಸ್ಪಾರ್ಕ್ ಪ್ಲಗ್ ಕ್ಲೀನಿಂಗ್, ಅಡ್ಜಸ್ಟಿಂಗ್, ಬದಲಿಸುವುದು. ಥ್ರಾಟಲ್ ಕೇಬಲ್ ಅಡ್ಜಸ್ಟ್ ಮೆಂಟ್, ಟ್ರಬಲ್ ಶೂಟಿಂಗ್, ಸ್ಟಾರ್ಟಿಂಗ್ ಟ್ರಬಲ್ ಬಗ್ಗೆ ಹೇಳಲಾಗಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ಇದರ ಜೊತೆಗೆ ನಿಮ್ಮ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ತಿಳಿದುಕೊಳ್ಳಿ, ಚೈನ್ ಕ್ಲೀನಿಂಗ್ ಹಾಗೂ ಲ್ಯುಬ್ರಿಕೇಟಿಂಗ್, ಮುಂಭಾಗದ ಹಾಗೂ ಹಿಂಭಾಗದ ವ್ಹೀಲ್ ತೆಗೆಯುವಿಕೆ, ಬ್ಯಾಟರಿ ತೆಗೆಯುವುದು, ಕ್ಲಚ್ ಕೇಬಲ್ ಅಡ್ಜಸ್ಟ್ ಮೆಂಟ್, ಹೆಡ್‌ಲ್ಯಾಂಪ್, ಟೇಲ್ ಲ್ಯಾಂಪ್ ಹಾಗೂ ಸೈಡ್ ಟರ್ನ್ ಸಿಗ್ನಲ್ ಬಲ್ಬ್ ರಿಪ್ಲೇಸ್ಮೆಂಟ್ ಹಾಗೂ ಆಯಿಲ್ ಲೆವೆಲ್ ಇನ್ಸ್ ಪೆಕ್ಷನ್‍‍ಗಳು ಸೇರಿವೆ.

MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗೆ ಇಂಟರ್‍‍ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ 650 ಎರಡೂ ಬೈಕುಗಳಲ್ಲಿ ಕೆಲ ಹೊಸ ನವೀಕರಣಗಳನ್ನು ಕ್ಲಿಯರ್ ಲೆನ್ಸ್ ಹೆಡ್‌ಲ್ಯಾಂಪ್‌ ಹಾಗೂ ಮುಂಭಾಗದ ಫೋರ್ಕ್‌ಗಳಿಗೆ ರಿಫ್ಲೆಕ್ಟರ್‍‍ಗಳೊಂದಿಗೆ ಹೊರತಂದಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಅಕ್ಟೋಬರ್ 1ರ ನಂತರ ತಯಾರಾದ ಎಲ್ಲಾ 650 ಟ್ವಿನ್ ಬೈಕುಗಳಲ್ಲಿ ಈ ಫೀಚರ್‍‍ಗಳು ದೊರೆಯುತ್ತವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕಳೆದ ವರ್ಷ 650 ಟ್ವಿನ್ ಬೈಕುಗಳನ್ನು ಬಿಡುಗಡೆಗೊಳಿಸಿತು. ಅಗ್ರೆಸಿವ್ ಬೆಲೆಯಿಂದಾಗಿ ಈ ಬೈಕುಗಳು ಸಾಕಷ್ಟು ಜನಪ್ರಿಯವಾದವು.

ಡೂ ಇಟ್ ಯುವರ್‍‍ಸೆಲ್ಫ್ ವೀಡಿಯೊ ಹೊರತಂದ ರಾಯಲ್ ಎನ್‍‍ಫೀಲ್ಡ್

ಇಂಟರ್‍‍ಸೆಪ್ಟರ್ ಹಾಗೂ ಕಾಂಟಿನೆಂಟಲ್ ಜಿಟಿ 650 ಎರಡೂ ಬೈಕುಗಳು ಒಂದೇ ಫ್ರೇಂ, ಬ್ರೇಕಿಂಗ್ ಹಾಗೂ ಸಸ್ಪೆಂಷನ್ ಹಾರ್ಡ್‍‍ವೇರ್‍‍ಗಳನ್ನು ಹೊಂದಿವೆ. ಈ ಬೈಕುಗಳಲ್ಲಿ 648 ಸಿಸಿಯ, ಪ್ಯಾರೆಲೆಲ್ ಟ್ವಿನ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ ಅಳವಡಿಸಲಾಗಿದೆ. 6 ಸ್ಪೀಡಿನ ಗೇರ್‌ಬಾಕ್ಸ್‌ ಹೊಂದಿರುವ ಈ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Royal Enfield’s DIY Basic Video Instructions For 650 Twins: Covers Starting Trouble & More - Read in Kannada
Story first published: Friday, November 15, 2019, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X