ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ನವೆಂಬರ್ 14, 2018ರಂದು ತಮ್ಮ ಅಧಿಕ ಸಾಮರ್ಥ್ಯದ 650 ಟ್ವಿನ್ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಬಿಡುಗಡೆಗೊಳಿಸಿದ 650 ಟ್ವಿನ್ ಬೈಕ್‍ಗಳಲ್ಲಿ ಒಂದಾದ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಮತ್ತು ಈ ಬೈಕಿನ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನೀಡಲಿದ್ದೇವೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ಮೈಲೇಜ್ ಬಗ್ಗೆ ತಿಳಿಯುವುದಕ್ಕು ಮುನ್ನ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಬೆಲೆ ಮತ್ತು ಎಂಜಿನ್ ಹಾಗು ಫ್ಯುಯಲ್ ಟ್ಯಾಂಕ್ ಗಾತ್ರದ ಬಗ್ಗೆ ತಿಳಿದುಕೊಳ್ಳೊಣ. ಈ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.78 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, 648ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47 ಬಿಹೆಚ್‍ಪಿ ಮತ್ತು 52 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹಾಗೆಯೆ ಈ ಬೈಕ್ 14 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಸಹ ಪಡೆದಿದೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ಮೈಲೇಜ್ ವಿಚಾರಕ್ಕೆ ಬಂದಲ್ಲಿ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್‍ಗಳು ಬುಲು ಪಟ್‍ನಾಯಕ್ ಎಂಬಾತ ತನ್ನ ಯೂಟ್ಯೂಬ್ ಚಾನಲ್‍ನಲ್ಲಿ ಒಂದು ವಿಡಿಯೋವನ್ನು ಮಾಡಿದ್ದಾರೆ. ಈ ವಿಡಿಯೋನಲ್ಲಿ ಈ ಬೈಕ್ ನಗರ ಪ್ರದೇಶದಲ್ಲಿ ಮತ್ತು ಹೆದ್ದಾರಿಗಳಲ್ಲಿ ಎಷ್ಟು ಮೈಲೇಜ್ ನೀಡಬಲ್ಲದು ಎಂದು ಪರೀಕ್ಷಿಸಲಾಗಿದೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ಬುಲು ಪಟ್ನಾಯಕ್‍‍ರವರು ಮಾಡಿದ ಪರಿಕ್ಷೆಯಲ್ಲಿ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ನಗರ ಪ್ರದೇಶದಲ್ಲಿ ಒಂದು ಲೀಟರ್‍ ಪೆಟ್ರೋಲ್‍ಗೆ ಸುಮಾರು 24.8 ಕಿಲೋಮೀಟರ್ ಮತ್ತು ಹೆದ್ದಾರಿಯಲ್ಲಿ ಸುಮಾರು 30 ರಿಂದ 31 ಕಿಲೋಮೀಟರ್‍‍ನ ಮೈಲೇಜ್ ನೀಡಿದೆ. ಈ ಕುರಿತಾದ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ಹಾಗೆಯೆ ಭಾರತದಲ್ಲಿ 2018ರಲ್ಲಿ ಬಿಡುಗಡೆಯಾದ 13 ಹೊಸ ಬೈಕ್‌ಗಳ ಪೈಕಿ ಇಂಟರ್‌ಸೆಪ್ಟರ್ 650 ಬೈಕಿಗೆ 2019ರ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿ ನೀಡಲಾಗಿದ್ದು, ಇದೇ ಪ್ರಶಸ್ತಿಗಾಗಿ ನಾಮಿನೆಟ್‌ಗೊಂಡಿದ್ದ ಟಿವಿಎಸ್ ಅಪಾಚೆ 160 ಆರ್‌ಟಿಆರ್ 4ವಿ, ಹೀರೋ ಎಕ್ಸ್‌ಟ್ರಿಮ್ 200ಆರ್, ಯಮಹಾ ಆರ್15 ವಿ3, ಟಿವಿಎಸ್ ಅಪಾಚೆ ಆರ್‌ಆರ್310, ಬಿಎಂಡಬ್ಲ್ಯು 310 ಟ್ವಿನ್ ಬೈಕ್, ಹೋಂಡಾ ಸಿಬಿಆರ್650ಎಫ್, ಸುಜುಕಿ ವಿ-ಸ್ಪೋರ್ಮ್ ಬೈಕ್‌‌ಗಳನ್ನು ಹಿಂದಿಕ್ಕಿ ಇಂಟರ್‌ಸೆಪ್ಟರ್ 650 ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ಬೈಕಿನಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಪೋಷಕರ ವಿವಾಹ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕಿನ ಮೈಲೇಜ್ ಚೆಕ್

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್‍ಗಳು ವಿವಿಧ ಮತ್ತು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, - ಮಾರ್ಕ್ ತ್ರೀ, ಗ್ಲಿಟ್ಟರ್ & ಡಸ್ಟ್, ಆರೆಂಜ್ ಕ್ರಶ್, ರ್‍ಯಾವಿಶಿಂಗ್ ರೆಡ್, ಸಿಲ್ವರ್ ಸ್ಪೆಕ್ಟ್ರಾ ಮತ್ತು ಬೇಕರ್ ಎಕ್ಸ್ಪ್ರೆಸ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Royal Enfield Interceptor 650 Bike Mileage Check In City And Highway. Read In Kannada
Story first published: Friday, May 31, 2019, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X