ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಭಾರತದಲ್ಲಿ ಹಲವಾರು ಕಂಪನಿಗಳ ಬೈಕ್‍‍ಗಳಿದ್ದರೂ, ರಾಯಲ್ ಎನ್‍‍ಫೀಲ್ಡ್ ಬೈಕ್ ಭಾರತೀಯರ ನೆಚ್ಚಿನ ಬೈಕ್ ಆಗಿದೆ. ತಮ್ಮ ನೆಚ್ಚಿನ ರಾಯಲ್ ಎನ್‍‍ಫೀಲ್ಡ್ ಬೈಕ್ ಅನ್ನು ಮಾಡಿಫೈಗೊಳಿಸಲು ಭಾರತೀಯರು ಹಿಂದೆ ಬಿದ್ದಿಲ್ಲ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳನ್ನು ಮಾಡಿಫೈಗೊಳಿಸಲೆಂದೇ ಭಾರತದಲ್ಲಿ ಹಲವಾರು ಕಂಪನಿಗಳಿವೆ. ಈ ಹಿಂದೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳನ್ನು ವಿವಿಧ ರೀತಿಯಲ್ಲಿ ಮಾಡಿಫೈಗೊಳಿಸಿದ್ದ ಬಗ್ಗೆ ವರದಿಗಳಾಗಿದ್ದವು.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳನ್ನು ಮಾಡಿಫೈಗೊಳಿಸುವ ಕಂಪನಿಗಳಲ್ಲಿ ದೆಹಲಿ ಮೂಲದ ಟಿ‍ಎನ್‍‍ಟಿ ಮೋಟಾರ್‍‍ಸೈಕಲ್ಸ್ ಸಹ ಒಂದು. ಟಿ‍ಎನ್‍‍ಟಿ ಮೋಟಾರ್‍‍ಸೈಕಲ್ಸ್ ಮಾಡಿಫೈಗೊಳಿಸಿರುವ ಬೈಕ್‍‍ವೊಂದನ್ನು ಇತ್ತೀಚಿಗೆ ಗೋವಾದಲ್ಲಿ ನಡೆದ 2019ರ ರಾಯಲ್ ಎನ್‍‍ಫೀಲ್ಡ್ ರೈಡರ್ ಮೇನಿಯಾದಲ್ಲಿ ಪ್ರದರ್ಶಿಸಲಾಗಿತ್ತು.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ನೀಲ್‍‍ಕಂಠ ಎಂಬ ಹೆಸರಿನ ಈ ಬೈಕ್ ಅನ್ನು ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ಮಾಡಿಫೈಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಈ ಬೈಕ್ ಅನ್ನು ಮಾಡಿಫೈಗೊಳಿಸಲು ರೂ.16 ಲಕ್ಷ ಖರ್ಚಾಗಿದೆ. ನೀಲ್‍‍ಕಂಠ ಬೈಕ್ ಅನ್ನು ಬ್ಯಾಗರ್ ಬೈಕಿನ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಬ್ಯಾಗರ್‍ ಬೈಕ್‍‍ಗಳು ಕ್ರೂಸರ್ ಬೈಕ್‍‍ಗಳ ರೀತಿಯಲ್ಲಿರುತ್ತವೆ. ಇವುಗಳು ಸ್ಯಾಡಲ್ ಬ್ಯಾಗ್ ಹೊಂದಿರುತ್ತವೆ. ಕಸ್ಟಮೈಸ್ ಮಾಡಲಾದ ಬ್ಯಾಗರ್ ಬೈಕ್‍‍ಗಳು ದೊಡ್ಡದಾಗಿ ಕಾಣುವುದು ಮಾತ್ರವಲ್ಲದೇ ಕ್ಲಾಸಿಕ್ ಬ್ಯಾಗರ್ ಬೈಕ್‍‍ಗಳಲ್ಲಿರುವಂತಹ ದೊಡ್ಡ ಮುಂಭಾಗದ ವ್ಹೀಲ್, ದೊಡ್ಡ ಸ್ಯಾಡಲ್ ಬ್ಯಾಗ್‍‍ಗಳನ್ನು ಹೊಂದಿರುತ್ತವೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ನೀಲ್‍‍ಕಂಠ ಬೈಕ್ ಅನ್ನು ಪೂರ್ತಿಯಾಗಿ ಮಾಡಿಫೈಗೊಳಿಸಲಾಗಿದೆ. ಈ ಬೈಕ್ ಅನ್ನು ನೋಡಿದರೆ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್ ಬೈಕಿನಂತೆ ಕಾಣುವುದೇ ಇಲ್ಲ. ಈ ಬೈಕ್ ಅನ್ನು ನೋಡಿದ ತಕ್ಷಣ ಮೊದಲು ಗಮನ ಸೆಳೆಯುವುದು ಬೈಕಿನಲ್ಲಿರುವ ನೀಲಿ ಬಣ್ಣ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಈ ಬೈಕಿನ ಮುಂಭಾಗದಲ್ಲಿ ರೆಕ್ಟಂಗ್ಯುಲರ್ ಶೇಪಿನ ಹೆಡ್‍‍ಲ್ಯಾಂಪ್‍‍ಗಳಿವೆ. ಈ ಹೆಡ್‍‍ಲ್ಯಾಂಪ್ ಟಾಪ್ ಎಂಡ್ ಮಾದರಿಯ ಹಾರ್ಲೆ ಡೇವಿಡ್‍‍ಸನ್ ಬೈಕಿನಲ್ಲಿರುವಂತಿದೆ. ಇವುಗಳ ಜೊತೆಗೆ ಮುಂಭಾಗದಲ್ಲಿ ಅಲ್ಯುಮಿನಿಯಂ ಗಿರ್ಡರ್ ಫೋರ್ಕ್‍ ಅಳವಡಿಸಲಾಗಿದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಈ ಬೈಕಿನಲ್ಲಿ 23 ಇಂಚಿನ ಅಲಾಯ್ ವ್ಹೀಲ್‍‍ಗಳಿವೆ. ಬೈಕಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಇಂಟರ್‍‍ಸೆಪ್ಟರ್‍‍ನಲ್ಲಿದ್ದಂತಹ ಫ್ಯೂಯಲ್ ಟ್ಯಾಂಕ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಹೆಚ್ಚುವರಿಯಾಗಿ ಕ್ರೋಮ್ ಬಣ್ಣವನ್ನು ಅಳವಡಿಸಲಾಗಿದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಈ ಬೈಕಿನ ಸೈಡಿನಲ್ಲಿರುವ ಕವರ್‍‍ಗಳ ಮೇಲೆ ನೀಲ್‍‍ಕಂಠ ಎಂದು ಬರೆಯಲಾಗಿದೆ. ಹಿಂಭಾಗದಲ್ಲಿರುವ ಫುಟ್ ರೆಸ್ಟ್ ಗಳನ್ನು ಬಳಸದಿದ್ದಾಗ ಬೈಕಿನ ಒಳಗೆ ಮಡಚುವಂತೆ ವಿನ್ಯಾಸಗೊಳಿಸಲಾಗಿದೆ. ಮುಂಭಾಗದಲ್ಲಿರುವ ಫುಟ್ ಬೋರ್ಡ್‍‍ನ ಮೇಲೆ ಆರ್‍ಇ 650 ಟ್ವಿನ್ ಎಂದು ಬರೆಯಲಾಗಿದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಹ್ಯಾಂಡಲ್‍‍ಬಾರ್‍‍ಗಳನ್ನು ಸಹ ಮಾಡಿಫೈಗೊಳಿಸಲಾಗಿದೆ. ಅಲ್ಯುಮಿನಿಯಂ ಹ್ಯಾಂಡ್‍‍ಗ್ರಿಪ್ ಹೊಂದಿರುವ ಕಸ್ಟಮೈಸ್ ಮಾಡಲಾಗಿರುವ ಎಸ್‍ಎಸ್ ಏಪ್ ಹ್ಯಾಂಡಲ್‍‍ಬಾರ್‍‍ಗಳನ್ನು ಹೊಸದಾಗಿ ಅಳವಡಿಸಲಾಗಿದೆ. ಬೈಕಿನ ಹಿಂಭಾಗವು ಸಾಕಷ್ಟು ದೊಡ್ಡದಾಗಿದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಬೈಕಿನ ಎರಡೂ ಬದಿಯಲ್ಲಿ ದೊಡ್ಡ ಗಾತ್ರದ ಸ್ಟೋರೇಜ್ ಕಂಪಾರ್ಟ್‍‍ಮೆಂಟ್ /ಸ್ಯಾಡಲ್‍‍ಗಳನ್ನು ಅಳವಡಿಸಲಾಗಿದೆ. ಇದರ ಕೆಳಗೆ ಎಕ್ಸಾಸ್ಟ್ ಗ್ಯಾಸ್‍ ಹೊರ ಹೋಗಲು ಸಂಧಿಗಳಿವೆ. ಈ ಬೈಕಿನ ಬಹುಭಾಗವು ಕ್ರೋಮ್ ಬಣ್ಣವನ್ನು ಹೊಂದಿದ್ದು, ಈ ಬೈಕಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಈ ಬೈಕಿನಲ್ಲಿ ಬಟನ್ ಹೊತ್ತಿದ್ದರೆ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದಾದ ಫೀಚರ್ ಅನ್ನು ಅಳವಡಿಸಲಾಗಿದೆ. ಇಂಟರ್‍‍ಸೆಪ್ಟರ್ 650 ಬೈಕಿನಲ್ಲಿ 647 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್, ಆಯಿಲ್ ಹಾಗೂ ಏರ್ ಕೂಲ್ಡ್ ಪ್ಯಾರಾಲೆಲ್ ಟ್ವಿನ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ವಿಶೇಷವಾಗಿ ಮಾಡಿಫೈಗೊಂಡ ರಾಯಲ್ ಎನ್‍‍ಫೀಲ್ಡ್ ಇಂಟರ್‍‍ಸೆಪ್ಟರ್

ಈ ಎಂಜಿನ್ 47 ಬಿ‍‍ಹೆಚ್‍‍ಪಿ ಪವರ್ ಹಾಗೂ 52 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟಿ‍ಎನ್‍‍ಟಿ ಮೋಟಾರ್‍‍ಸೈಕಲ್ ಈ ಬೈಕಿನಲ್ಲಿರುವ ಎಂಜಿನ್‍‍ನಲ್ಲಿ ಬದಲಾವಣೆಗಳನ್ನು ಮಾಡಿರುವ ಸಾಧ್ಯತೆಗಳಿಲ್ಲ. ಈ ಬೈಕ್ ಅನ್ನು ಮಾಡಿಫೈಗೊಳಿಸಲು ಮೂರು ತಿಂಗಳು ತೆಗೆದುಕೊಳ್ಳಲಾಗಿದೆ.

Most Read Articles

Kannada
English summary
Royal Enfield Interceptor 650 modified into crazy low rider - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X